ಮಹಾನಗರ ಪಾಲಿಕೆ ಕಚೇರಿಯಲ್ಲಿ ದಸರಾ ಆಚರಣೆ ಪೂರ್ವಭಾವಿ ಸಭೆ       
                                                        ಜಯಧ್ವಜ ನ್ಯೂಸ್  , ರಾಯಚೂರು, ಸೆ.24- ನಗರದ ಮಹಾನಗರಪಾಲಿಕೆಯ (ಹಳೆಯ ನಗರಸಭೆ) ಸಭಾಂಗಣದಲ್ಲಿ ದಸರಾ ಪೂರ್ವಾಭಾವಿ ಸಿದ್ದತೆ ಸಭೆಯು  ಮಹಾಪೌರರಾದ ನರಸಮ್ಮ ನರಸಿಂಹಲು ಮಾಡಿಗಿರಿ ರವರ ಅಧ್ಯಕ್ಷತೆಯಲ್ಲಿ ಜರುಗಿತು. ಸಭೆಯಲ್ಲಿ ಹಿರಿಯ ಸದಸ್ಯರಾದ  ಜಯಣ್ಣ ಮತ್ತು ಈ.ಶಶಿರಾಜ ರವರು ಮಾತನಾಡಿ ಸ್ಥಳೀಯ,ಜಿಲ್ಲಾ,ರಾಜ್ಯ ಹಾಗೂ


ಅಂತರಾಷ್ಟ್ರೀಯ ಮಟ್ಟದ ಅಕರ್ಷಣಿಯ ಕಲಾ ತಂಡಗಳನ್ನು ಆಹ್ವಾನಿಸುವಂತೆ ಸಲಹೆ ಹಿನ್ನಲೆ ಕಲಾತಂಡಗಳನ್ನು ಕರೆಸಲು ತೀರ್ಮಾನಿಸಲಾಯಿತು. ಮೆಕ್ಕಾ ದರವಾಜದಲ್ಲಿ ಕವಿಗೋಷ್ಠಿಯ ಅಂಗವಾಗಿ ಹೆಸರಾಂತ ಕವಿಗಳನ್ನು ಸಾಹಿತಿಗಳನ್ನು ಕರೆಸಿ ವಿಜೃಂಭಣೆಯಿಂದ ಜರುಗಿಸಲು ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು.ಸಭೆಯಲ್ಲಿ  ಮಹಾನಗರಪಾಲಿಕೆಯ ಉಪ-ಮಹಾಪೌರರಾದ  ಸಾಜೀದ ಸಮೀರ ರವರು, ಆಡಳಿತ ಉಪ-ಆಯುಕ್ತರಾದ  ಸಂತೋಷ ರಾಣಿ ಕೆ.ಎ.ಎಸ್ ರವರು, ಹಿರಿಯ ಸದಸ್ಯರಾದ ದರೂರು ಬಸವರಾಜ ಪಾಟೀಲ, ವಿ.ನಾಗರಾಜ ನಾಮ ನಿರ್ದೇಶಿತ ಸದಸ್ಯರಾದ ಮುನಿಯಪ್ಪ, ಮಹ್ಮದ್ ಫಿರೋಜ್,ವೆಂಕಟೇಶ,ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ  ನರಸಿಂಹಲು ಮಾಡಿಗಿರಿ, ಮುಖಂಡರಾದ  ಎಸ್.ಹಾಜಿ  ನೂರ ಪಾಷ, ವಲಯ ಆಯುಕ್ತರುಗಳಾದ  ಬಸವರಾಜ ಹೆಬ್ಬಾಳ,ಮಲ್ಲಿಕಾರ್ಜುನ ಎಂ ಬಿ,ವಲಯ ಆಯುಕ್ತರು-೦೨   ಜಯಪಾಲ ರೆಡ್ಡಿ,ಸಮುದಾಯ ಸಂಘಟನಾಧಿಕಾರಿಗಳಾದ   ಕೃಷ್ಣ ಕಟ್ಟಿಮನಿ,ಕಂದಾಯ  ಅಧಿಕಾರಿಗಳಾದ ನರಸಿಂಹರೆಡ್ಡಿ,ಕಲಾವಿದರಾದ ವಿ,ಎಚ್ ಮಾಸ್ಟರ್,ಶಿಕ್ಷಣ ಮತ್ತು ವಿವಿಧ ಇಲಾಖೆಗಳ ಹಾಗೂ ನಗರದ ಸಾರ್ವಜನಿಕರು,ಮಹಾನಗರಪಾಲಿಕೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.



 


Comments

Popular posts from this blog