ಜಿಂದಪ್ಪ ಮೇಲಿನ ಹಲ್ಲೆ ಖಂಡಿಸಿ ಜಿಲ್ಲಾ ಗಂಗಾಮತಸ್ಥ ಸಮಾಜ ಎಸ್ಪಿಗೆ ದೂರು. ಜಯ ಧ್ವಜ ನ್ಯೂಸ್ , ರಾಯಚೂರು, ಸೆ.24- ಮಹಾನಗರ ಪಾಲಿಕೆ ಸದಸ್ಯ ಜಿಂದಪ್ಪರವರ ಮೇಲಿನ ಹಲ್ಲೆ ಖಂಡಿಸಿ ಜಿಲ್ಲಾ ಗಂಗಾಮತಸ್ಥ ಸಮಾಜ ಸೇವಾ ಸಂಘ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿತು.
ಸೆ.23 ರಂದು ಪಾಲಿಕೆ ಕಚೇರಿಯಲ್ಲಿ ಏಕಾಏಕಿ ಜಿ.ತಿಮ್ಮಾರೆಡ್ಡಿ ತಮ್ಮ ಸಹಚರರೊಂದಿಗೆ ಆಗಮಿಸಿ ಗುಂಡಾಗಿರಿ ಮಾಡಿ ಮಾರಣಾಂತಿಕ ಹಲ್ಲೆ ಮಾಡಿದ್ದಾರೆಂದು ಎಸ್ಪಿ ಗೆ ದೂರು ಸಲ್ಲಿಸಿ ಹಲ್ಲೇಕೋರರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ವಿನಂತಿಸಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಗಂಗಾಮತಸ್ಥ ಸೇವಾ ಸಂಘದ ಜಿಲ್ಲಾಧ್ಯಕ್ಷ ಕೆ.ಶಾಂತಪ್ಪ ಸಮಾಜದ ಮುಖಂಡರಾದ ಕಲ್ಮಲಾ ಶರಣಪ್ಪ, ಕಡುಗೋಲ ಆಂಜಿನೇಯ, ಕಡುಗೋಲು ಶರಣಪ್ಪ ಸೇರಿದಂತೆ ಮಹಿಳೆಯರು,ಮತ್ತಿತರರು ಇದ್ದರು.
Comments
Post a Comment