ಮುಂಬೈ ಹಾಗೂ ಬೆಂಗಳೂರು ನಡುವೆ ಸೂಪರ್ ಫಾಸ್ಟ್ ರೈಲು ರಾಯಚೂರು ಮೂಲಕ ಓಡಿಸಲು ಬಾಬುರಾವ್ ಮನವಿ                                                         ಜಯ ಧ್ವಜ ನ್ಯೂಸ್ , ರಾಯಚೂರು, ಸೆ.28-                                                   ಮುಂಬೈ ಹಾಗೂ ಬೆಂಗಳೂರು ನಡುವೆ ಸೂಪರ್ ಫಾಸ್ಟ್ ರೈಲು ಓಡಿಸಲು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಶನಿವಾರ  ಎಕ್ಸ್ ನಲ್ಲಿ ಪೋಸ್ಟ್ ಹಾಕಿ ಸಂತಸ ವ್ಯಕ್ತಪಡಿಸಿರುವುದು ಸ್ವಾಗತಾರ್ಹವಾಗಿದೆ ಎಂದು ರೈಲ್ವೆ ಸಲಹಾ ಸಮಿತಿ ಮಂಡಳಿ ಮಾಜಿ ಸದಸ್ಯ ಡಾ.ಬಾಬುರಾವ್ ಸಂತಸ ವ್ಯಕ್ತಪಡಿಸಿದ್ದಾರೆ. ಈ ಕುರಿತು  ಪತ್ರಿಕಾ ಹೇಳಿಕ ನೀಡಿದ್ದು, ಕಳೆದ  30 ವರ್ಷಗಳಿಂದ,  ‘ಬೆಂಗಳೂರು ಮತ್ತು ಮುಂಬೈ ಎರಡು ಮಹಾನಗರಗಳನ್ನು ಒಂದೇ ಒಂದು ಸೂಪರ್ ಫಾಸ್ಟ್ ರೈಲು-ಉದ್ಯಾನ್ ಎಕ್ಸ್ ಪ್ರೆಸ್ ಮೂಲಕ ಸಂಪರ್ಕಿಸಲಾಗುತ್ತಿತ್ತು. ಆ ರೈಲು ತಲುಪಲು 24 ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿತ್ತು. ಇದರಿಂದಾಗಿ ಹೆಚ್ಚಿನ ಜನರು ಅನಿವಾರ್ಯವಾಗಿ ಬಸ್ ಅಥವಾ ವಿಮಾನಗಳನ್ನು ಬಳಸಬೇಕಾಗುತ್ತಿತ್ತು. ರೈಲ್ವೇತರ ಪ್ರಯಾಣ ದುಬಾರಿಯೂ ಆಗಿದೆ. ಹೆಚ್ಚಿನ ರೈಲು ಸೇವೆಗಳನ್ನು ಪ್ರಾರಂಭಿಸಲು ಎರಡೂ ನಗರಗಳ ಜನರು ಮಾತ್ರವಲ್ಲ ರೈಲು ಸಂಚರಿಸುವ ಬಹುತೇಕ ಜಿಲ್ಲೆಗಳ ಜನರ ನಿರಂತರ ಬೇಡಿಕೆ ಇತ್ತು. ಇದನ್ನು ಮನಗಂಡು ನಾನು ರೈಲ್ವೆ ಸಲಹಾ ಸಮಿತಿ ಸದಸ್ಯರಾಗಿದ್ದಾಗ ಹಲವು ಸಲ  ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಿದ್ದೆ. ಆಗ ಸಂಸದರಾಗಿದ್ದ ರಾಜಾ ಅಮರೇಶ್ವರ ನಾಯಕ ಅವರು ಕೂಡಾ ಈ ವಿಚಾರದಲ್ಲಿ ಸಾಕಷ್ಟು ಪ್ರಯತ್ನಗಳನ್ನು ಮಾಡಿದ್ದರು. ಈಗ ನಮ್ಮ ಪ್ರುಯತ್ನಕ್ಕೆ ಫಲ ಸಿಕ್ಕಂತಾಗಿದೆ ಎಂದು ತಿಳಿಸಿದ್ದಾರೆ.

  ಬೆಂಗಳೂರು- ಮುಂಬೈ ಮಧ್ಯ ಸೂಪರ್ ಫಾಸ್ಟ್ ರೈಲ್ವೆ ಓಡಿಸುವುದು ಎಷ್ಟು ಮುಖ್ಯವೋ ಅಷ್ಟೆ ಯಾವ ಮಾರ್ಗವಾಗಿ ಸಂಚರಿಸುತ್ತದೆ ಎನ್ನುವುದು ಮುಖ್ಯವಾಗುತ್ತದೆ. ಬೆಂಗಳೂರು ಮುಂಬಯ ಸೂಪರ್ ಫಾಸ್ಟ್ ರೈಲ್ವೆ ಹುಬ್ಬಳ್ಳಿ ಮಾರ್ಗವಾಗಿ ಸಂಚರಿಸುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.

ಅಷ್ಟಕ್ಕೂ ಹುಬ್ಬಳ್ಳಿ ಮಾರ್ಗವಾಗಿ ಈಗಾಗಲೇ ಮೂರ್ಲಾಲ್ಕು ರೈಲುಗಳು ಇದೇ ಮಾರ್ಗವಾಗಿ ಚಲಿಸುತ್ತದೆ. ಆದ್ದರಿಂದ  ಈ ರೈಲನ್ನ ಹುಬ್ಬಳ್ಳಿ ಮಾರ್ಗವಾಗಿ ಓಡಿಸದೆ, ಬಹುದಿನ ಬೇಡಿಕೆಯಾಗಿರುವ ಕಲ್ಯಾಣ ಕರ್ನಾಟಕದ ರಾಯಚೂರು, ಯಾದಗಿರಿ ಕಲಬುರಗಿ ಮಾರ್ಗವಾಗಿ ಈ ರೈಲನ್ನು ಓಡಿಸಬೇಕು. ಈ ಮಾರ್ಗದಲ್ಲಿ ಆದಾಯವೂ ಹಾಗೂ ಜನಸಂದಣಿಯು ಹೆಚ್ಚಾಗಿದೆ ಇದನ್ನು ರೈಲ್ವೆ ಸಚಿವರು ಗಣನೆಗೆ ತೆಗೆದುಕೊಂಡು ಕೂಡಲೇ ಈ ರೈಲನ್ನು ರಾಯಚೂರು ಮಾರ್ಗವಾಗಿ ಓಡಿಸಬೇಕು. ರಾಜ್ಯದವರೇ ಆದ ರೈಲ್ವೇ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಅವರು  ಕಲ್ಯಾಣ ಕರ್ನಾಟಕ ಭಾಗಕ್ಕೆ ಆದ್ಯತೆ ನೀಡಿ ರಾಯಚೂರು ಮಾರ್ಗವಾಗಿ ಈ ಸೂಪರ್ ಫಾಸ್ಟ್ ರೈಲನ್ನು ಓಡಿಸಲು ಪ್ರಯತ್ನ ಮಾಡಬೇಕೆಂದು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments

Popular posts from this blog