ಮತ ಕಳ್ಳತನದ ಬಗ್ಗೆ ಕೇಂದ್ರ ಚುನಾವಣಾ ಆಯೋಗ ಮೌನ:               ಬಿಜೆಪಿಯಿಂದ ಕಡಿಮೆ ಕೆಲಸ ಅಧಿಕ ಪ್ರಚಾರ- ಸೊರಕೆ.                                                  ಜಯ ಧ್ವಜ ನ್ಯೂಸ್ ರಾಯಚೂರು, ಸೆ.19-  ಬಿಜೆಪಿಯವರು ಕಡಿಮೆ ಕೆಲಸ ಮಾಡಿ ಅಧಿಕ ಪ್ರಚಾರ ಪಡೆಯುತ್ತಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ ಹೇಳಿದರು. ಅವರಿಂದು ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ ಬಿಜೆಪಿಯವರು ಶೇ.5 ರಷ್ಟು ಮಾತ್ರ ಅಭಿವೃದ್ಧಿ ಕೆಲಸ ಮಾಡಿ ಶೇ.95ರಷ್ಟು ಪ್ರಚಾರ ಪಡೆಯುತ್ತಾರೆ ಆದರೆ ಕಾಂಗ್ರೆಸ್ ಪಕ್ಷ ಅದರ ತದ್ವಿರುದ್ಧ ನಾವು ನೂರರಷ್ಟು ಅಭಿವೃದ್ಧಿ ಮಾಡಿದರೂ ಪ್ರಚಾರ ಪಡೆಯುವಲ್ಲಿ ಹಿಂದೆ ಬಿದ್ದಿರುವ ಕಾರಣ ಜನರಿಗೆ ನಮ್ಮ ಅಭಿವೃದ್ಧಿ ಕಾಣಿಸುವುದು ವಿಳಂಬವಾಗುತ್ತಿದೆ ಎಂದರು. ಎಐಸಿಸಿ ಆದೇಶದಂತೆ ಪ್ರಚಾರ ಸಮಿತಿ ರಚಿಸಲಾಗಿದ್ದು ನಾನು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷನಾಗಿ ಜವಾಬ್ದಾರಿ ತೆಗೆದುಕೊಂಡು ನಂತರ ಇದುವರೆಗೆ ಸುಮಾರು 29 ಜಿಲ್ಲೆಗಳ ಪ್ರವಾಸ ಕೈಗೊಂಡಿದ್ದೇನೆಂದರು. ಸರ್ಕಾರದ ಪಂಚ ಗ್ಯಾರಂಟಿ ಸೇರಿದಂತೆ ಪ್ರಣಾಳಿಕೆಯಲ್ಲಿ ನೀಡಿದ ಭರವಸೆ ಈಡೇರಿಸುವಲ್ಲಿ ಸರ್ಕಾರದ ಬದ್ಧತೆ ಮುಂತಾದವುಗಳ ಬಗ್ಗೆ ಜನರಿಗೆ ತಲುಪಿಸಲು ಜಿಲ್ಲಾ ಮಟ್ಟದಲ್ಲಿ ಪದಾಧಿಕಾರಿಗಳ ನೇಮಕ ಹಾಗೂ ಬೂತ್ ಗಳಲ್ಲಿ  ಡಿಜಿಟಲ್ ನಿರ್ವಹಣೆ ಮಾಡಲು ಇಬ್ಬರು ಕಾರ್ಯಕರ್ತರನ್ನು ನೇಮಿಸಲಾಗಿದೆ ಎಂದರು. ಪ್ರಾಚಾರ ಸಮಿತಿ ಕೇವಲ ಚುನಾವಣೆ ವೇಳೆಯಲ್ಲಿ ಮಾತ್ರ ಸಕ್ರೀಯರಾಗಿರದೇ ಸದಾಕಾಲ ಪಕ್ಷದ  ಆಗು ಹೋಗುಗಳ ಹಾಗೂ ಸರ್ಕಾರದ ನೀತಿ ನಿರೂಪಣೆ ಬಗ್ಗೆ ಜನರಿಗೆ ಮಾಹಿತಿ ನೀಡುತ್ತದೆ ಎಂದರು. ಕಾಂಗ್ರೆಸ್ ಸಿದ್ಧಾಂತ ಜನ ಕಲ್ಯಾಣ ವೆಂದ ಅವರು ಬಿಜೆಪಿ ಸಿದ್ದಾಂತ ಜನರನ್ನು ದಿಕ್ಕು ತಪ್ಪಿಸುವುದು ಆಗಿದೆ ನಮ್ಮ ಸರ್ಕಾರ ಗ್ಯಾರಂಟಿ ಯೋಜನೆ ಅನುಷ್ಠಾನ ಮಾಡಿದರೆ ದಿವಾಳಿಯಾಗುತ್ತದೆ ಎಂದು ಅಪ ಪ್ರಚಾರ ಮಾಡಿದರು ಇದೀಗ ಅವರಿಗೆ ಸರ್ಕಾರದ ದಿಟ್ಟ ಹೆಜ್ಜೆ ಅರಿವಿಗೆ ಬಂದಿದೆ ಎಂದರು.ನಮ್ಮ ರಾಜ್ಯದ ತಲಾ ಆದಾಯದಲ್ಲಿ ನಂ.1 ಆಗಿದೆ ,ಜಿಡಿಪಿ ಹೆಚ್ಚಳದಲ್ಲಿದೆ,  ಆದಾಯದಲ್ಲಿ ದೇಶದಲ್ಲಿ ಮೂರನೆ ಸ್ಥಾನದಲ್ಲಿದೆ ಇದಕ್ಕೆಲ್ಲ ಕಾರಣ ಸಿದ್ದರಾಮಯ್ಯ ಸರ್ಕಾರ ವೆಂದರು. ದೇಶದಲ್ಲಿ ಮತಗಳ್ಳತನ ನಡೆಯುತ್ತಿದ್ದು ಇದರ ಬಗ್ಗೆ ಲೋಕಸಭೆ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಚುನಾವಣಾ ಆಯೋಗಕ್ಕೆ ದೂರು ನೀಡಿದರೂ ಯಾವುದೆ ಕ್ರಮ ಕೈಗೊಳ್ಳದೆ  ಅವರ ವಿರುದ್ಧವೆ ಧಮಕಿ ಹಾಕಲಾಗುತ್ತಿದೆ ಚುನಾವಣೆ ಆಯೋಗ ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದೆ ಎಂದು ಆರೋಪಿಸಿದ ಅವರು  ಮಹಾದೇವ ಪುರ ನಂತರ ಇದೀಗ ಅಳಂದದಲ್ಲಿ ಮತ ಕಳ್ಳತನದ ಬಗ್ಗೆ ಪ್ರಿಯಾಂಕ ಖರ್ಗೆ , ಬಿ ಆರ್. ಪಾಟೀಲ್ ದೂರು ನೀಡಿದರು ಚುನಾವಣಾ ಆಯೋಗ ಮೌನ ವಹಿಸಿದೆ ಬಿಹಾರದಲ್ಲಿ , ಮಹಾರಾಷ್ಟ್ರದಲ್ಲಿ ಮತ ಕಳ್ಳತನ ಆಗಿರುವ ಬಗ್ಗೆ ದಾಖಲೆಯಿದೆ ಅಮಿತ್ ಶಾ ಬಹಿರಂಗವಾಗಿ ಮತ ಸೇರಿಸುವ ಬಗ್ಗೆ ಚುನಾವಣಾ ಪ್ರಾಚಾರ ವೇಳೆ ಹೇಳಿಕೆ ನೀಡುತ್ತಾರೆ ಈ ಬಗ್ಗೆ ಚುನಾವಣಾ ಆಯೋಗ ಯಾವುದೆ ಪ್ರಕರಣ ದಾಖಲಿಸುವುದಿಲ್ಲ ಏಕೆ ಎಂದು ಪ್ರಶ್ನಿಸಿದರು. ಮುಂಬರುವ ಜಿ.ಪಂ, ತಾ.ಪಂ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ದುರಾಡಳಿತದ ಬಗ್ಗೆ ಜನರಿಗೆ ಮಾಹಿತಿ ತಲುಪಿಸುತ್ತೇವೆ ಜನರೇ ಬಿಜೆಪಿ ಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದರು. ಗ್ಯಾರಂಟಿ ಯೋಜನೆಗಳಲ್ಲಿ ಸಣ್ಣ ಪುಟ್ಟ ಲೋಪಗಳಿದ್ದರೆ ಸರಿಪಡಿಸಲು ಸಂಬಂಧ ಪಟ್ಟವರಿಗೆ ತಿಳಿಸುತ್ತೇನೆಂದ ಅವರು ಬಿಜೆಪಿ ಅಪ ಪ್ರಚಾರಕ್ಕೆ ಕಾಂಗ್ರೆಸ್ ಹೆದರುವುದಿಲ್ಲವೆಂದರು. ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಎ.ವಸಂತಕುಮಾರ, ಪ್ರಚಾರ ಸಮಿತಿಯ ಸಂಯೋಜಕ ಭೀಮಣ್ಣ ಮೇಟಿ, ಆದರ್ಶ ಯಲ್ಲಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಪಾಟೀಲ ಇಟಗಿ,ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಯದ್ದಲದಿನ್ನಿ ಮುಖಂಡರಾದ ಕೆ.ಶಾಂತಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್. ಶ್ರೀನಿವಾಸರೆಡ್ಡಿ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಪಾಮಯ್ಯ ಮುರಾರಿ, ಮಾಜಿ ಜಿ.ಪಂ ಸದಸ್ಯ ಅಸ್ಲಾಂ ಪಾಷಾ,ಪ್ರಚಾರ ಸಮಿತಿ ಸಂಯೋಜಕರಾದ ಸುಧೀಂದ್ರ ಜಾಗಿರದಾರ್ ಮಹಿಳಾ ಘಟಕ ಮುಖಂಡರಾದ ಶ್ರೀ ದೇವಿ  ನಾಯಕ, ಶಶಿಕಲಾ ಭೀಮರಾಯ ಸೇರಿದಂತೆ ಅನೇಕರಿದ್ದರು.

Comments

Popular posts from this blog