ನಗರದ ವಾರ್ಡ್ ನಂಬರ್ 17ರ ಗಾಜಗಾರ ಪೇಟೆಯ ಬಾಪನಯ್ಯ ದೊಡ್ಡಿಯಲ್ಲಿ ಅವೈಜ್ಞಾನಿಕವಾಗಿ ನಿರ್ಮಾಣವಾಗುತ್ತಿರುವ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಬ್ರಾಹ್ಮಣ ಸಮಾಜ ತೀರ್ವ ವಿರೋಧ
ಜಯ ಧ್ವಜ ನ್ಯೂಸ್ ರಾಯಚೂರು, ಅ.13- ನಗರದ ವಾರ್ಡ್ ನಂಬರ್ 17ರ ಗಾಜಗಾರಪೇಟೆಯ ಬಾಪನಯ್ಯ ದೊಡ್ಡಿ ಎನ್ನುವ ಸ್ಥಳದಲ್ಲಿ ಮುಖ್ಯ ರಸ್ತೆಗೆ ಹೊಂದಿಕೊಂಡು ಮಹಾನಗರ ಪಾಲಿಕೆ ವತಿಯಿಂದ ಸಾರ್ವಜನಿಕ ಶೌಚಾಲಯವನ್ನು ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ನಿರ್ಮಾಣ ಮಾಡಲು ತಯಾರಿ ನಡೆಸಿದ್ದು ಅದನ್ನು ತಡೆಯಬೇಕೆಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿಗಳಿಗೆ ಹಾಗೂ ಮಹಾನಗರ ಪಾಲಿಕೆ ಮಹಾಪೌರರಿಗೆ, ಆಯುಕ್ತರಿಗೆ, ಭೂ ಪಾಪನ ಇಲಾಖೆ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಬೆಳಿಗ್ಗೆ ಬ್ರಾಹ್ಮಣ ಸಮಾಜ ಬಾಂಧವರು ಮನವಿ ಪತ್ರ ಸಲ್ಲಿಸಿ, ಅತ್ಯಂತ ಅವೈಜ್ಞಾನಿಕವಾಗಿ ಶೌಚಾಲಯ ನಿರ್ಮಾಣಕ್ಕೆ ಸಿದ್ಧತೆ ನಡೆದಿದ್ದು ಕೂಡಲೆ ಕಾಮಗಾರಿಗೆ ಒಪ್ಪಿಗೆ ನೀಡದಂತೆ ಆಗ್ರಹಿಸಲಾಯಿತು. ಸಾರ್ವಜನಿಕರಿಗೆ ತೊಂದರೆ ಆಗುತ್ತದೆ, ಸದರಿ ಶೌಚಾಲಯ ನಿರ್ಮಾಣ ಮಾಡುತ್ತಿರುವ ಸ್ಥಳದ ಸುತ್ತಮುತ್ತಲು ಪುರಾತನವಾದ ದೇವಸ್ಥಾನ ಹಾಗೂ ಉತ್ತರಾದಿ ಮಠ, ಪಂಚ ಯತಿಗಳ ಬೃಂದಾವನ ಹಾಗೂ ಸಾರ್ವಜನಿಕರಿಗೆ ಉಪಯೋಗವಾಗುತ್ತಿರುವಂತಹ ನೀರಿನ ಬಾವಿ ಜೊತೆಗೆ ಶೃಂಗೇರಿ ಶಾರದಾ ದೇವಿ ದೇವಸ್ಥಾನ, ಹಾಗೂ ಆನಂದೇಶ್ವರ ದೇವಸ್ಥಾನ ಪಕ್ಕದಲ್ಲಿ ಬಯಲು
ಆಂಜನೇಯ ದೇವರ ದೇವಸ್ಥಾನ ಇರುತ್ತವೆ ಸದರಿ ಉತ್ತರಾದಿ ಮಠ ಹಾಗೂ ದೇವಸ್ಥಾನದಲ್ಲಿ ಉತ್ಸವಗಳು ಹಾಗೂ ವಿವಿಧ ಯತಿಗಳ ಆರಾಧನೆಗಳು ಪೂಜೆ ಪುನಸ್ಕಾರಗಳು ರಥೋತ್ಸವಗಳು ಪಲ್ಲಕ್ಕಿ ಉತ್ಸವಗಳು ನಿರಂತರವಾಗಿ ನಡೆಯುತ್ತಿರುತ್ತವೆ ಈ ಒಂದು ಕಾರ್ಯಕ್ರಮಗಳಲ್ಲಿ ಸುತ್ತಮುತ್ತಲಿನ ಹಲವಾರು ಬಡಾವಣೆಯ ಹಾಗೂ ನಗರದ ವಿವಿಧ ಪ್ರದೇಶಗಳಿಂದ ಜನರು ಮಕ್ಕಳು ಮಹಿಳೆಯರು ಸಾವಿರಾರು ಸಂಖ್ಯೆಯಲ್ಲಿ ಸೇರುತ್ತಾರೆ, ಉತ್ಸವಗಳು ನಡೆದ ಸಂದರ್ಭದಲ್ಲಿ ಸಾರ್ವಜನಿಕರಿಗೆಲ್ಲ ಪ್ರಸಾದ ಸೇವೆ ನಡೆಯುತ್ತಿರುತ್ತದೆ, ಇಂತಹ ಪವಿತ್ರ ಸ್ಥಳದ ಪಕ್ಕದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡುವುದರಿಂದ ಎಲ್ಲರಿಗೂ ತೊಂದರೆಯಾಗುತ್ತದೆ ಕಾರಣ ದಯಾಳುಗಳಾದ ತಾವುಗಳು ಈ ತಕರಾರು ಅರ್ಜಿಯನ್ನು ಮನ್ನಿಸಿ ಸಂಬಂಧ ಪಟ್ಟ ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಸೂಚಿಸಿ ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಸಾರ್ವಜನಿಕ ಶೌಚಾಲಯ ಕಾರ್ಯವನ್ನು ಕೂಡಲೇ ರದ್ದುಗೊಳಿಸ ಬೇಕೆಂದು ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಪ್ರತಿನಿಧಿ ರಮೇಶ್ ಕುಲಕರ್ಣಿ, ಮಹಾನಗರ ಪಾಲಿಕೆ ಸದಸ್ಯ ಇ.ಶಶಿರಾಜ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಬ್ರಾಹ್ಮಣ ಸಮಾಜದ ಹಿರಿಯರು, ಯುವಕರು, ಬಡಾವಣೆ ನಿವಾಸಿಗಳು ಉಪಸ್ಥಿತರಿದ್ದರು.
Comments
Post a Comment