ಗೊಂದಲ ನಿವಾರಿಸದಿದ್ದರೆ ರಾಜ್ಯೋತ್ಸವದಂದು ಕಸಾಪ ಜಿಲ್ಲಾಧ್ಯಕ್ಷರ ವಿರುದ್ಧ ಪ್ರತಿಭಟನೆ - ಮೇಟಿಗೌಡ
ಜಯಧ್ವಜ ನ್ಯೂಸ್ ,ರಾಯಚೂರು,ಅ.11-
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆಯುತ್ತಿರುವ ಗೊಂದಲ ಸರಿಪಡಿಸದಿದ್ದರೆ ಕನ್ನಡ ಭವನದ ಮುಂದೆ ಕನ್ನಡ ರಾಜ್ಯೋತ್ಸವದ ದಿನವಾದ ನ. 1 ರಂದು ವಿನೂತನವಾಗಿ ಜಿಲ್ಲಾಧ್ಯಕ್ಷರ ನಡೆ ವಿರುದ್ದ ಪ್ರತಿಭಟನೆ ಮಾಡಲಾಗುವುದು ಎಂದು ಬೆಳಕು ಟ್ರಸ್ಟ್ ಸಂಸ್ಥಾಪಕರಾದ ಅಣ್ಣಪ್ಪ ಮೇಟಿಗೌಡ ಎಚ್ಚರಿಕೆ ನೀಡಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ರಾಯಚೂರು ಜಿಲ್ಲೆಯ ಕಸಾಪದಲ್ಲಿ ಗೊಂದಲ ನಡೆಯುತ್ತಿರುವ ವಿಚಾರವಾಗಿ ರಾಜ್ಯಾಧ್ಯಕ್ಷರಾದ ನಾಡೋಜ ಮಹೇಶ್ ಜೋಶಿ ಅವರ ಹತ್ತಿರ ಹೋಗಿ ಇಲ್ಲಿನ ಬೆಳವಣಿಗೆಗಳನ್ನು ತಿಳಿಸಿ ಗೊಂದಲ ನಿವಾರಣೆಗಾಗಿ ದೂರು ಸಲ್ಲಿಸಿ ಬಂದಿದ್ದು ರಾಜ್ಯಾಧ್ಯಕ್ಷರು ತಿಳಿಸಿದ ವಿಚಾರ ಕಳೆದ ಮುರುವರೇ ವರ್ಷದಿಂದ ಇದ್ದಾ ತಾಲೂಕು ಅಧ್ಯಕ್ಷರೇ ಈಗಲೂ ಅವರೇ ಅಧ್ಯಕ್ಷರು ಕಾರಣ ಅವರಿಗೆ ಆದೇಶ ನೀಡುವಾಗ ಕ ಸಾ ಪ ಬೈಲಾ ಪ್ರಕಾರ ರಾಜ್ಯಾಧ್ಯಕ್ಷರಾದ ನನ್ನ ಅನುಮೋದನೆ ಇದೆ....ಈಗ ನೂತನವಾಗಿ ಜಿಲ್ಲಾಧ್ಯಕ್ಷರ ಆದೇಶದ ಪ್ರಕಾರ,ಕಸಾಪ ಬೈಲಾ ಉಲ್ಲಂಘನೆ ಮಾಡಿ ರಾಜ್ಯಾಧ್ಯಕ್ಷರ ಅನುಮೋದನೆ ಇಲ್ಲದೆ ಜಿಲ್ಲೆಯಲ್ಲಿ ಕಸಾಪ ತಾಲೂಕು ಘಟಕಗಳನ್ನು ರಚನೆ ಮಾಡಿಕೊಳ್ಳುತ್ತಿರುವುದು ನನ್ನ ಗಮನಕ್ಕೆ ಇರಲಿಲ್ಲ ಎರಡು ಮೂರು ತಾಲೂಕಿನ ಅಧ್ಯಕ್ಷರು ನನಗೆ ದೂರು ನೀಡಿದಾಗ ನನ್ನ ಗಮನಕ್ಕೆ ಬಂತೂ ಆಗ ನಾನು ಜಿಲ್ಲಾಧ್ಯಕ್ಷರಾದ ರಂಗಣ್ಣ ಪಾಟೀಲ್ ಅವರಿಗೆ ಸೆ. 22ರಂದು ಪತ್ರದ ಮೂಲಕ ನಿರ್ದೇಶನ ನೀಡಿದ್ದು ಈಗ ಹೊಸದಾಗಿ ಜಿಲ್ಲಾಧ್ಯಕ್ಷರ ಆದೇಶದ ಮೇಲೆ ಪದಗ್ರಹಣ ಮಾಡುವವರಿಗೆ ಯಾವುದೇ ರೀತಿಯ ಮಾನ್ಯತೆ ಇರುವುದಿಲ್ಲವೆಂದು ರಾಜ್ಯಾಧ್ಯಕ್ಷರು ತಿಳಿಸಿದ್ದಾರೆ ಎಂದರು.
ಹಾಗಾಗಿ ಜಿಲ್ಲೆಯ ಕಸಾಪ ಆಜೀವ ಸದಸ್ಯರೇ ಹಾಗೂ ಕನ್ನಡದ ಪ್ರೇಮಿಗಳೇ ಯಾವುದೇ ಗೊಂದಲಕ್ಕೆ ಒಳಗಗಾಬೇಡಿ ಈಗ ಪದಗ್ರಹಣ ಮಾಡಿದ ಹಾಗೂ ಪದಗ್ರಹಣ ಮಾಡುತ್ತಿರುವ ಕಸಾಪ ಪದಾಧಿಕಾರಿಗಳಿಗೆ ಯಾವುದೇ ಮಾನ್ಯತೆ ಇರುವುದಿಲ್ಲ ಇದು ಖುದ್ದು ಜಿಲ್ಲಾಧ್ಯಕ್ಷರಾದ ರಂಗಣ್ಣ ಪಾಟೀಲ್ ಅವರಿಗೂ ಗೊತ್ತಿದ್ದೂ ಈ ರೀತಿ ಗೊಂದಲ ಸೃಷ್ಟಿ ಮಾಡುತ್ತಿರುವುದು ಸರಿಯಲ್ಲ ಇದು ಕನ್ನಡ ಕೆಲಸ ಮಾಡುವವರಿಗೆ ಗೌರವ ಸಲ್ಲುವುದಿಲ್ಲವೆಂದು ತಿಳಿಸಿದರು .
ಒಳ್ಳೆಯ ರೀತಿಯಲ್ಲಿ ಕನ್ನಡ ಕಾರ್ಯಗಳು ಸಾಗಲಿ ಇನ್ನೊಂದು ವರ್ಷ ತಮ್ಮ ಅಧಿಕಾರವಿದೆ ಇನ್ನೊಂದು ಜಿಲ್ಲೆಯಲ್ಲಿ ಜಿಲ್ಲಾಸಮ್ಮೇಳನ ಆಗಲಿ, ಹಿಂದೆ ನಿಮ್ಮ ಜೊತೆಗಿದ್ದಂತೆ ಈಗಲೂ ಇರುತ್ತೇವೆ, ತಾಲೂಕುಗಳಲ್ಲಿ ತಾಲೂಕು ಸಮ್ಮೇಳನಗಳು ಆಗಲಿ ದತ್ತಿ ಕಾರ್ಯಕ್ರಮ ನಡೆಯಲಿ, ಅದಕ್ಕೆ ಏನು ಕೇಂದ್ರ ಕಸಾಪದಿಂದ ಹಣ ಬರುತ್ತೆ ಅದು ನೀಡಲು ರಾಜ್ಯಾಧ್ಯಕ್ಷರು ಸಿದ್ದರಿದ್ದಾರೆ ನಾವು ಹಿಂದೆ ಇದ್ದಂತೆ ನಿಮ್ಮ ಒಳ್ಳೆ ಕಾರ್ಯಗಳ ಜೊತೆಗೆ ಇರುತ್ತೇವೆ ಎಂದರು.
ಈಗ ಹೊಸದಾಗಿ ಬಂದವರು ಏನು ಕಾರ್ಯಕ್ರಮ ಮಾಡಿದ್ರು ಅದು ಕಸಾಪ ವ್ಯಾಪ್ತಿಯಲ್ಲಿ ಬರುವುದಿಲ್ಲ ರಾಜ್ಯ ಸಮಿತಿಯಿಂದ ಯಾವುದೇ ಹಣ ಬರುವುದಿಲ್ಲವೆಂದು ರಾಜ್ಯಾಧ್ಯಕ್ಷರು ಸ್ಪಷ್ಟವಾಗಿ ತಿಳಿಸಿದ್ದಾರೆ,ಈ ರೀತಿ ಗೊಂದಲ ಬೇಡ ಜಿಲ್ಲಾಧ್ಯಕ್ಷರೇ ಮೊದಲು ರಾಜ್ಯಾಧ್ಯಕ್ಷರ ಬಳಿ ಚರ್ಚೆ ಮಾಡಿ ಈ ಎಲ್ಲಾ ಗೊಂದಲಗಳಿಗೆ ಅಂತ್ಯಹಾಡಿ ಇನೋದ್ ಎರಡು ದಿನಾ ಕಳೆದರೆ ನ್ಯಾಯಾಲಯದ ಮೆಟ್ಟಿಲಿನವರಿಗೂ ನಿಮ್ಮ ಹಾಗೂ ಜಿಲ್ಲೆಯ ಕಸಾಪ ಹೆಸರು ಹೋಗುತ್ತೆ, ನಿಮ್ಮ ಅಧಿಕಾರವದಿಯಲ್ಲಿ ಈ ರೀತಿ ಕಪ್ಪು ಚುಕ್ಕಿ ಬೇಡ..
ಅದು ಹೋಗುವುದು ಬೇಡವೆಂದರೆ ಮೊದಲು ಎಲ್ಲರ ಬಳಿ ಚರ್ಚೆ ಮಾಡಿ ರಾಜ್ಯಾಧ್ಯಕ್ಷರ ಹತ್ತಿರ ಮಾತಾಡಿ ತೀರ್ಮಾನ ಮಾಡಿ ಎನ್ನುವುದು ನನ್ನ ವಿನಂತಿ.
ನಾನು ರಾಜ್ಯಾಧ್ಯಕ್ಷರ ಹತ್ತಿರ ಜಿಲ್ಲಾಧ್ಯಕ್ಷರ ನಿಷ್ಕ್ರಿಯತೆ, ಯಾವುದೇ ಸಮ್ಮೇಳನಗಳನ್ನು ಮಾಡುತ್ತಿಲ್ಲ ಎನ್ನುವುದರ ಬಗ್ಗೆ ಕೂಡ ಚರ್ಚೆ ಮಾಡಲಾಗಿದ್ದು, ಕಸಾಪ ಬೈಲಾದಲ್ಲಿ ಅವರ ಬದಲಿಗೆ ಹಂಗಾಮಿ ಅಧ್ಯಕ್ಷರನ್ನು ನೇಮಿಸಲು ಬರುವುದಿಲ್ಲವೆಂದು ತಿಳಿಸಿದ್ದಾರೆ.
ಈಗ ತಾಲೂಕುಗಳಲ್ಲಿ ಪದಗ್ರಹಣ ಮಾಡುತ್ತಿರುವ ಹಾಗೂ ಪದಗ್ರಹಣ ಮಾಡಿದ ಹೊಸ ಪದಾಧಿಕಾರಿಗಳು ಕಸಾಪ ಬೈಲಾದ ನಿಯಮ 32/3ಪ್ರಕಾರ ಅನುಮೋದನೆ ಇಲ್ಲದೆ ಇದ್ರೆ ಮಾನ್ಯತೆ ಇಲ್ಲಾ ಎಂದು ನಿಮಗೆ ತಿಳಿದರೂ ಕೂಡ ಹೊಸ ಪದಾಧಿಕಾರಿಗಳನ್ನು ಹಾಗೂ ಹಳೆಯ ಪದಾಧಿಕಾರಿಗಳಿಗೆ ಮುಜುಗರ ಉಂಟುಮಾಡುವ ಕೆಲಸ ಯಾಕೆ ನೀವೂ ಮಾಡಿದ್ದು ಎಂದು ಪ್ರಶ್ನಿಸಿದರು.
ಕ ಸಾ ಪ ಜಿಲ್ಲಾಧ್ಯಕ್ಷರು ಕಾರ್ಯನಿರ್ವಹಣೆ ಮಾಡದಿದ್ದರೇ ರಾಜೀನಾಮೆ ನೀಡಲೌ ಅಥವಾ ಪ್ರಧಾನ ಕಾರ್ಯದರ್ಶಿಗಳು ಹಾಗೂ ಪದಾಧಿಕಾರಿಗಳ ಜೊತೆಗೆ ಕೆಲಸ ಮಾಡಿಕೊಂಡು ಹೋಗಲಿ ಇಲ್ಲವಾದರೆ ಕನ್ನಡ ಭವನ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದರು. ಈ ಸಂಧರ್ಭದಲ್ಲಿ ಕಲಾ ಸಂಕುಲ ಸಂಸ್ಥೆಯ ಸಂಸ್ಥಾಪಕರಾದ ಮಾರುತಿ ಬಡಿಗೇರ್ ಉಪಸ್ಥಿತರಿದ್ದರು.
Comments
Post a Comment