ಸಮಯೋಚಿತ, ಸಮಂಜಸ ನಡೆಯಾಗಿದೆ- ವಸಂತ ಕುಮಾರ್
ಜಯಧ್ವಜ ನ್ಯೂಸ್ , ರಾಯಚೂರು, ಅ.14- ಆರೆಸ್ಸೆಸ್ ಚಟುವಟಿಕೆ ನಿರ್ಬಂಧಕ್ಕೆ ಪ್ರಿಯಾಂಕ ಖರ್ಗೆಯವರು ಸಿಎಂಗೆ ಪತ್ರ ಬರೆದಿರುವದು

ಸಮಯೋಚಿತ, ಸಮಂಜಸ ನಡೆಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಎ. ವಸಂತ ಕುಮಾರ್ ಹೇಳಿದರು. ಅವರಿಂದು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಗ್ರಾಮೀಣಾಭಿವೃದ್ದಿ ಸಚಿವ
ಪ್ರಿಯಾಂಕ ಖರ್ಗೆಯವರು ಮಾತನಾಡಿದ್ದು ಸರಿಯಿದೆ ಎಂದ ಅವರು ಕಾಂಗ್ರೆಸ್ ಪಕ್ಷಕ್ಕೆ ಧಮ್ಮು ತಾಕತ್ತು ಇರುವುದರಿಂದಲೇ ದೇಶದಲ್ಲಿ
ಮೂರು ಬಾರಿ ಆರೆಸ್ಸೆಸ್ ನಿಷೇಧಿಸಲಾಗಿತ್ತು. ಮೂರು ಬಾರಿಯೂ ಮುಚ್ಚಳಿಕೆ
ಬರದು ಕೊಟ್ಟ ಆರೆಸ್ಸೆಸ್ ನಡೆಯಿಂದಲೇ ನಿಷೇಧ ನಿರ್ಬಂಧ ಸಡಿಸಲಾಗಿತ್ತು. ಬಿಜೆಪಿ
ನಾಯಕರು ಸತ್ಯವನ್ನು ಅರಿತು ಮಾತನಾಡಬೇಕೆಂದ ಅವರು ಹೇಳಿದರು.
ಸಮಾಜ ಸ್ವಾಸ್ಥ ಹಾಳು ಮಾಡುತ್ತಿರುವದರಿಂದ
ಸರ್ಕಾರ ಶಾಲೆಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆ ನಿರ್ಬಂಧಿಸಬೇಕೆಂದು
ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಆದರೆ ಬಿಜೆಪಿ ನಾಯಕರುಗಳ
ಆರೆಸ್ಸೆಸ್ ಸಮಾಜಿಕ ಸೇವಾ ಸಂಘಟನೆಯೆಂದು ಸಮರ್ಥಿಸಿಕೊಳ್ಳುತ್ತಿದ್ದಾರೆ.
ಸ್ವಾತಂತ್ರ್ಯ ಪೂರ್ವದಿಂದಲೂ ಬ್ರಿಟಿಷರ ಪರವಾಗಿ ಕೆಲಸ ಮಾಡಿರುವ ಆರೆಸ್ಸೆಸ್
ರಾಷ್ಟಿಯತೆ ಹೆಸರಿನಲ್ಲಿ ಹಿಂದೂ ರಾಷ್ಟç ನಿರ್ಮಾಣ ಮಾಡುವದಾಗಿ ಹೇಳುತ್ತಾ
ಬಂದಿದೆ. ಸಂಘಟನೆ ನೂರು ವರ್ಷವಾಗುತ್ತಿದ್ದು ಇಂದಿಗೂ ಸಾಕಾರಗೊಂಡಿಲ್ಲ.
1948 ರಲ್ಲಿ ಸರದಾರ ವಲ್ಲಭ ಬಾಯಿ ಪಟೇಲ್ ಗೃಹ ಸಚಿವರಾಗಿದ್ದಾಗ,1977 ರಲ್ಲಿ
ತುರ್ತುಪರಸ್ಥಿತಿ ಸಂದರ್ಭದಲ್ಲಿ ಹಾಗೂ 1992 ರಲ್ಲಿ ಪಿ.ವಿ.ನರಸಿಂಹರಾವ್
ಪ್ರಧಾನಿಯಾಗಿದ್ದಾಗಿ ಆರೆಸ್ಸೆಸ್ ನಿಷೇಧಕ್ಕೆ ಒಳಪಟ್ಟಿದೆ. ದ್ವೇಷ ಭಾವನೆ
ಹುಟ್ಟಿಸಿ ಪ್ರಚೋದಿಸುವ ಕೆಲಸ ಮಾಡುತ್ತಾ ಬಂದಿದೆ.1969 ರಲ್ಲಿ ನಡೆದ ಕೋಮು
ಸಂಘರ್ಷದ ಘಟನೆಯನ್ನು ನ್ಯಾಯಮೂರ್ತಿ ಜಗನಮೋಹನ್ ನೇತೃತ್ವದ
ಆಯೋಗ ಆರ್‌ಎಸ್‌ಎಸ್ ಮತ್ತು ಜನಸಂಘಗಳೇ ಘಟನೆ ಕಾರಣವೆಂದು ವರದಿ
ನೀಡಿತ್ತು. 1970 ರಲ್ಲಿ ನ್ಯಾಯಮೂರ್ತೀ ಮದನ ಮೊಹನ್ ನೇತೃತ್ವದ ತನಿಖಾ
ಆಯೋಗ, 1971 ರಲ್ಲಿ ತಲಚೇರಿ ಘಟನೆ,1979 ರಲ್ಲಿ ಜಮಶೇಡ ಪುರ ಘಟನೆ,
1982 ರಲ್ಲಿ ಕನ್ನಾಕುಮಾರಿಯಲ್ಲಿ ನಡೆದ ಕ್ರೈಸ್ತರ ಮೇಲೆ ನಡೆದ
ದೌರ್ಜನ್ಯದ ಘಟನೆಯಲ್ಲಿ ನ್ಯಾಯಮೂರ್ತಿ ವೇಣುಗೋಪಾಲ್ ನೀಡಿರುವ ವರದಿ
1993 ರಲ್ಲಿ ಬಾಬ್ರಿಮಸೀದಿ ಘಟನೆ, ಲೆಬನಾನ್ ಕಮೀಷನ್ ನೀಡಿದ ವರದಿಯಲ್ಲಿಯೂ
ಆರ್‌ಎಸ್‌ಎಸ್ ಹಾಗೂ ಬೆಂಬಲಿತ ಸಂಘಟನೆಗಳು ಆರೋಪಿಗಳಾಗಿರುವ ಇತಿಹಾಸವಿದೆ.
ಸುಪ್ರಿಂಕೊರ್ಟಿಗೆ ಹೋಗಿ ಕೆಲ ಪ್ರಕರಣಗಳಲ್ಲಿ ವಿನಾಯ್ತಿ ಪಡೆದಿರಬಹುದು. ಆದರೆ
ಕೋಮು ಸಂಘರ್ಷಕ್ಕೆ ಆರ್‌ಎಸ್‌ಎಸ್ ಸಂಘಟನೆ ಕಾರಣವಾಗಿದೆ ಎಂದು ಉಲ್ಲೇಖ
ಇರುವದು ಇತಿಹಾಸ. ಮಹಾತ್ಮಗಾಂಧೀ ಕೊಲೆ ಸೇರಿದಂತೆ ಅನೇಕ ಘಟನೆಗಳಲ್ಲಿ
ಸ್ವಯಂಸೇವಕರೇ ಭಾಗಿಯಾಗಿದ್ದಾರೆ. ಆದರೂ ಬಿಜೆಪಿ ನಾಯಕರು ಸಮಾಜ
ಸೇವೆ ಹೆಸರಿನಲ್ಲಿ ನೊಂದಣಿಯಿಲ್ಲದ ಸಂಘಟನೆಯನ್ನು
ಸಮರ್ಥಿಸಿಕೊಳ್ಳುತ್ತಲಿದ್ದಾರೆ. ತಮಿಳುನಾಡಿನಲ್ಲಿ ಈಗಾಗಲೇ ಆರ್‌ಎಸ್‌ಎಸ್
ಶಾಖೆಗಳನ್ನು ಸರ್ಕಾರಿ ಜಾಗದಲ್ಲಿ ನಿರ್ಬಂಧಿಸಲಾಗಿದೆ. ಅದೇ ಮಾದರಿಯಲ್ಲಿ
ನಿರ್ಭಂದಿಸಬೇಕೆಂದು ಪ್ರಿಯಾಂಕ ಖರ್ಗೆಯವರು ಪತ್ರ ಬರೆದಿರುವದು
ಸಮಯೋಚಿತ, ಸಮಂಜಸ ನಡೆಯಾಗಿದೆ ಎಂದರು. ಜವಾಹರ ಲಾಲ್ ನೆಹರು
ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ
ಭಾಗಿಯಾಗಿರಬಹುದು. ಆದರೆ ಆರ್‌ಎಸ್‌ಎಸ್ ಎಂದು ದೇಶಕ್ಕಾಗಿ ಸಮರ್ಪಿಸಿಕೊಂಡಿಲ್ಲ.
ಅದು ಹೇಳುವ ರಾಷ್ಟ್ರೀಯತೆ ಗುತ್ತಿಗೆ ಪಡೆದಿಲ್ಲ. ಆಯಾ ಧರ್ಮಗಳು ಜನರ
ನಂಬಿಕೆಯಿಂದ ಬೆಳೆದು ಬಂದಿವೆ. ಹಿಂದೂ ರಾಷ್ಟç ನಿರ್ಮಾಣದ ಹೆಸರಿನಲ್ಲಿ ಜನರನ್ನು
ದಾರಿತಪ್ಪಿಸುವ ಕೆಲಸ ಮಾಡುತ್ತಿದೆ. ಇಂತಹ ಸಂಘಟನೆ ನಿರ್ಭಂಧಿಸಬೇಕು
ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಪಾಟೀಲ್ ಇಟಗಿ, ಅಬ್ದುಲಕರೀಂ, ಡಾ.ರಜಾಕ್ ಉಸ್ತಾದ, ದರೂರು ಬಸವರಾಜ, ಅಂಜನಕುಮಾರ, ಎಂ.ಕೆ.ಬಾಬರ,ಟಿ.ಮಾರೆಪ್ಪ ಸೇರಿದಂತೆ ಇತರರಿದ್ದರು.

Comments
Post a Comment