ಜಿಲ್ಲಾ ಕಾಂಗ್ರೆಸ್ ಸಮಿತಿ ಹೆಚ್ಚುವರಿ ಪದಾಧಿಕಾರಿಗಳ ನೇಮಕ: ಜಯ ಧ್ವಜ ನ್ಯೂಸ್ ರಾಯಚೂರು, ಅ.15- ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ಮನವಿಯ ಮೇರೆಗೆ ರಾಯಚೂರು ಜಿಲ್ಲಾ ಕಾಂಗ್ರೆ ಸ್ ಸಮಿತಿಗೆ ಈ ಕೆಳಕಾಣಿಸಿದಂತೆ ಹೆಚ್ಚುವರಿ ಪದಾಧಿಕಾರಿಗಳ ಪಟ್ಟಿಯನ್ನು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ರವರು ಅನುಮೋದನೆ ನೀಡಿದ್ದಾರೆ.
ಉಪಾಧ್ಯ ಕ್ಷರಾಗಿ ಅಬ್ದುಲ್ ಕರೀಂ, ಜಿ.ಶಿವಮೂರ್ತಿ, ಅಂದಾನಪ್ಪ ಗುಂಡಳ್ಳಿ, ಪ್ರಧಾನ ಕಾರ್ಯದರ್ಶಿಯಾಗಿ ದರೂರು ಬಸವರಾಜ ಪಾಟೀಲ, ರುದ್ರಪ್ಪ ಅಂಗಡಿ, ಈಶಪ್ಪ, ರಾಜಶೇಖರ ರಾಮಸ್ವಾಮಿ, ಶ್ರೀನಿವಾಸ ಶಿಂದೇ, ಕಾರ್ಯದರ್ಶಿಯಾಗಿ ಕೆ.ಇ.ಕುಮಾರ್, ರಾಮಕೃಷ್ಣ ನಾಯಕ್, ಸೈಯದ್ ದಸ್ತಗೀರ್, ರಿಯಾಜ್ ಆಜಾದ್ ನಗರ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಂಜಿನೇಯ್ಯ ಕೊಂಬಿನ್ ನೇಮಕ ವಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Comments
Post a Comment