ದೀಪಾವಳಿ ಪಟಾಕಿ ಖರೀದಿ ಜೋರು:                 ಗ್ರಾಹಕರಿಗೆ ಬೆಲೆ ಹೆಚ್ಚಳ ಬಿಸಿ; ಮಾರಾಟಗಾರರಿಗೆ ಕಠಿಣ ನಿಯಮಾವಳಿ                                                   ಜಯ ಧ್ವಜ ನ್ಯೂಸ್ , ರಾಯಚೂರು , ಅ.19-               ನಗರದ ಬಸವೇಶ್ವರ ವೃತ್ತದ ಬಳಿಯ ವಾಲ್ಕಟ್ ಮೈದಾನದಲ್ಲಿ ದೀಪಾವಳಿ ಪಟಾಕಿ ಮಳಿಗೆಗಳನ್ನು ತೆರೆಯಲಾಗಿದ್ದು ಖರೀದಿ ಜೋರಾಗಿ ನಡೆದಿದೆ. ಅತ್ತ ಪಟಾಕಿ ಬೆಲೆ ಏರಿಕೆಯಿಂದ ಗ್ರಾಹಕರ ಜೇಬು ಸುಡುತ್ತಿದ್ದರೆ ಇತ್ತ  ಕಠಿಣ ನಿಯಮಾವಳಿ ಗಳಿಂದ ಮಾರಾಟಗಾರರು ಬೇಸರ ವ್ಯಕ್ತಪಡಿಸಿದ್ದಾರೆ. ಒಂದು ವಾರ ಪಟಾಕಿ ಮಾರಾಟಕ್ಕೆ ಅವಕಾಶ ನೀಡಲಾಗಿದ್ದು ಅದನ್ನು ಹೆಚ್ಚಳ ಮಾಡಿದ್ದರೆ ವ್ಯಾಪಾರಕ್ಕೆ ಅನುಕೂಲವಾಗುತ್ತಿತ್ತು ಎಂದು ಮಾರಾಟಗಾರರ ಅನಿಸಿಕೆಯಾಗಿದೆ.

     
ತರಹೇವಾರಿ ಪಟಾಕಿ: ಸುಮಾರು ಮೂವತ್ತಕ್ಕೂ ಅಧಿಕ ಅಂಗಡಿಗಳು ಇದ್ದು ವಿವಿಧ ಬಗೆಯ ಪಟಾಕಿ ಮಾರಾಟಕ್ಕಿವೆ ಬಾನಂಗಳದಲ್ಲಿ ಚಿತ್ತಾರ ಮೂಡಿಸುವ ಪಟಾಕಿ ಜೊತೆಗೆ ಕಿವಿಗಡಚಿಕ್ಕುವ ಆಟಂ ಬಾಂಬ್, ಡಬಲ್ ಸೌಂಡ್, ಮಾರುದ್ದದ ಪಟಾಕಿ ಸರಗಳು, ನವಿಲು ಗರಿ ಬಿಚ್ಚಿ ನರ್ತಿಸುವ ಮಾದರಿಯ ಪಟಾಕಿ ಸೇರಿದಂತೆ ವಿವಿಧ ಮಾದರಿ ಮತ್ತು ದರಗಳ ಪಟಾಕಿ ಲಭ್ಯವಿದೆ. ಸೂಕ್ತ ಮುಂಜಾಗ್ರತೆ ಹಾಗೂ ಅಗ್ನಿ ಅವಘಡ ಸಂಭಿವಿಸದಂತೆ ಜಾಗೃತಿ ವಹಿಸುವ ಅಗತ್ಯವಿದೆ. ಮಕ್ಕಳು ಹಿರಿಯರ ಜೊತೆಗೂಡಿ ಜಾಗರೂಕತೆಯಿಂದ ಪಟಾಕಿ ಸಿಡಿಸಿ ಸುಂದರ ಹಾಗೂ ಸುರಕ್ಷಿತ ಮತ್ತು ಪರಿಸರ ಸ್ನೇಹಿ ದೀಪಾವಳಿ ಆಚರಿಸಬೇಕೆನ್ನುವುದು ಜಯಧ್ವಜ ಕಳಕಳಿಯಾಗಿದೆ.     
  

Comments

Popular posts from this blog