ತುಂಗಭದ್ರಾ ಜಲಾಶಯದಿಂದ ಎರಡನೇ ಬೆಳೆಗೂ ನೀರು ಹರಿಸಿ- ಮಾಲೀಪಾಟೀಲ
.                                               ಜಯ ಧ್ವಜ ನ್ಯೂಸ್, ರಾಯಚೂರು,ಅ.25- ತುಂಗಭದ್ರಾ ಜಲಾಶಯದಿಂದ ಎರಡನೇ ಬೆಳೆಗೂ ನೀರು ಹರಿಸುವಂತೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಇತ್ತೀಚೆಗೆ ಮಂತ್ರಾಲಯಕ್ಕಾಗಮಿಸಿದ ಡಿಸಿಎಂ ಡಿಕೆ ಶಿವಕುಮಾರ್ ರವರನ್ನು ರೈತ ಮುಖಂಡರೊಂದಿಗೆ ಭೇಟಿಯಾಗಿ ಜಿಲ್ಲೆಯ ನೀರಾವರಿ ಸಮಸ್ಯೆ ಬಗ್ಗೆ ಚರ್ಚಿಸಿದ್ದೇವೆ ತುಂಗಭದ್ರಾ ಜಲಾಶಯ ಕ್ರೈಸ್ಟ್ ಗೇಟ್ ಅಳವಡಿಕೆ ನೆಪವೊಡ್ಡಿ ಎರಡನೆ ಬೆಳೆಗೆ ನೀರು ಅಲಭ್ಯತೆ ಆಗದಂತೆ ನೋಡಿಕೊಳ್ಳಲು ಮನವಿ ಮಾಡಿದ್ದೇವೆಂದರು. ಅಧಿಕ ಮಳೆ ಹಿನ್ನೆಲೆಯಲ್ಲಿ ಜಲಾಶಯ ಒಳ ಹರಿವು ಹೆಚ್ಚಳವಾಗಿದೆ ಸುಮಾರು 80 ಟಿಎಂಸಿ ನೀರು ಸಂಗ್ರಹವಾಗಿದೆ  ಮುಂಬರುವ ಬೇಸಿಗೆಯಲ್ಲಿ ಕೃಷಿ ಮತ್ತು ಕುಡಿಯುವ ನೀರಿಗೆ ತೊಂದರೆಯಾಗದಂತೆ ನಿಗಾವಹಿಸಬೇಕೆಂದರು.

ಎರಡನೆ ಬೆಳೆ ಇಲ್ಲದಂತಾದರೆ ರೈತರು ಸೇರಿದಂತೆ ವ್ಯಾಪಾರಸ್ಥರು ಸೇರಿದಂತೆ ಅನೇಕ ಕೃಷಿ ಅವಲಂಬಿತರಿಗೆ ನಷ್ಟವಾಗಲಿದೆ ಎಂದರು.ಬೆಸಿಗೆ ಬೆಳೆಗೆ ನೀರು ಸಂಗ್ರಹಿಸಲು ಸಾಧ್ಯ ಗೇಟ್ ಅಳವಡಿಕೆ ನಡುವೆಯೂ ನೀರು ಸಂಗ್ರಹ ಮಾಡಬಹುದೆಂದ ಅವರು 50 ಟಿಎಂಸಿ ನೀರು ಸಂಗ್ರಹ ಮಾಡಿ ಗೇಟ್ ಅಳವಡಿಸಿಬಹುದು ಎಂದರು. ಸರ್ಕಾರ ಕೂಡಲೆ ರೈತರೊಂದಿಗೆ ಸಭೆ ನಡೆಸಬೇಕು ಅಲ್ಲದೆ ಜಿಲ್ಲೆಯ ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು ರೈತರೊಂದಿಗೆ ಸಿಎಂ ಭೇಟಿಗೆ ಸಮಯ ನಿಗದಿಯಾಗಬೇಕೆಂದರು. ಅತಿವೃಷ್ಟಿಗೆ ಸಿಲುಕಿ ರೈತರು ನಲುಗಿದ್ದು ಸರ್ಕಾರ ಸಮೀಕ್ಷೆ ಬಳಿಕ ಪರಿಹಾರ ನೀಡುತ್ತೇವೆ ಎಂದಿತ್ತು ಆದರೆ ಇದುವರೆಗೂ ಪರಿಹಾರ ಸಿಕ್ಕಲವೆಂದರು. ಹತ್ತಿ ಖರೀದಿ ಕೇಂದ್ರ ಸ್ಥಾಪನೆಯಾಗಿಲ್ಲ ರೈತರಿಗೆ ಹತ್ತಿ ಮಾರಾಟ ಮಿತಿ ಸಡಲಿಸಬೇಕೆಂದರು. ಕೂಡಲೆ ಸರ್ಕಾರ ರೈತ ಮುಖಂಡರ ಸಭೆ ಕರೆಯಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಗಂಗಾಧರ ನಾಯಕ, ಬೂದಯ್ಯ ಸ್ವಾಮಿ, ಜಾನ್ ವೆಸ್ಲಿ, ಪ್ರಭಾಕರ ಪಾಟೀಲ,ಚಂದ್ರಶೇಖರ ಇದ್ದರು.

Comments

Popular posts from this blog