ಜನಸಾಮಾನ್ಯರಿಗೂ ದಾಸ ದೀಕ್ಷೆ ನೀಡಿ ಭಕ್ತಿ ಬಿತ್ತಿದ ಶ್ರೀ ಗುರು ಜಗನ್ನಾಥ ದಾಸರು -ಮುರಳಿಧರ ಕುಲಕರ್ಣಿ
ಜಯ ಧ್ವಜ ನ್ಯೂಸ್ , ರಾಯಚೂರು,ಅ.9- ಶ್ರೀ ಗುರು ಜಗನ್ನಾಥದಾಸರು ಜಾತಿ, ಮತ ,ಪಂಥ ಎನ್ನದೆ ಜನಸಾಮಾನ್ಯರಿಗೂ ಹಾಗೂ ದೀನ ದಲಿತರಿಗೆ ಹರಿದಾಸ ದೀಕ್ಷೆ ನೀಡಿ ಹರಿದಾಸ ಸಾಹಿತ್ಯದ ಪರಂಪರೆಯನ್ನು ಹಾಗೂ ಭಕ್ತಿ ಪಂಥವನ್ನು ಬೆಳೆಸಿದ ಶ್ರೇಷ್ಠ ಹರಿದಾಸ ರಾಗಿದ್ದಾರೆಂದು ಶೃತಿ ಸಾಹಿತ್ಯ ಮೇಳದ ಅಧ್ಯಕ್ಷರಾದ ಶ್ರೀ ಮುರಳಿಧರ ಕುಲಕರ್ಣಿ ಅವರು ಹೇಳಿದರು.
ಅವರು ಬುಧವಾರ ಸಂಜೆ ರಾಯಚೂರಿನ ಜವಾಹರ ನಗರದ ಬಯಲು ಆಂಜನೇಯ ದೇವಸ್ಥಾನದಲ್ಲಿ ಜರುಗಿದ
ಶ್ರೀ ಗುರು ಜಗನ್ನಾಥ ದಾಸರ 107 ನೇ ಮಧ್ಯಾರಾದನೆಯ ಕಾರ್ಯಕ್ರಮದಲ್ಲಿ ಉಪನ್ಯಾಸ ವನ್ನು ನೀಡಿದರು.
ಶ್ರೀ ಗುರು ಜಗನ್ನಾಥದಾಸರ ಆದವಾನಿಯಾ ಕೌತಾಳಮಂ
ಪ್ರದೇಶವು ದಾಸರ ಕಾರ್ಯಕ್ಷೇತ್ರವಾಗಿದ್ದು, ಇವರು ಹಲವಾರು ಸಂಕೀರ್ತನೆಗಳನ್ನು, ಉಗಾಭೋಗಗಳನ್ನು ಸುಳಾದಿಗಳನ್ನು ವಿಶೇಷವಾಗಿ
ಮಂತ್ರಾಲಯ ಪ್ರಭುಗಳಾದ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ ಪರಮ ಭಕ್ತರಾದ ಇವರು ರಾಯರ ಮೇಲೆ 200ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಶ್ರೀ ವೆಂಕಟೇಶ ಸ್ತವನರಾಜ, ಲಕ್ಷ್ಮಿ ಹೃದಯ, ಪ್ರಹ್ಲಾದ ಚರಿತೆ, ಬ್ರಹ್ಮ ಸೂತ್ರ ಭಾಷ್ಯ ತತ್ವ ಪ್ರದೀಪೀಕಾ, ಶ್ರೀ ರಾಘವೇಂದ್ರ ವಿಜಯ ಮುಂತಾದ ಕೃತಿಗಳು ಪ್ರಸಿದ್ಧಿಯನ್ನು ಪಡೆದಿವೆ. ಇವರು ಸಂಸ್ಕೃತದಲ್ಲಿ ಎರಡು ಗ್ರಂಥಗಳನ್ನು ಕನ್ನಡದಲ್ಲಿ ಐವತ್ತುಕ್ಕೂ ಹೆಚ್ಚು ಬೃಹತ್ ಕೃತಿಗಳನ್ನು ರಚಿಸಿ ದಾಸ ಸಾಹಿತ್ಯಕ್ಕೆ ವಿಶಿಷ್ಟವಾದ ಕೊಡುಗೆಯನ್ನು ನೀಡಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪತ್ರಕರ್ತ ಜಯ ಕುಮಾರ್ ದೇಸಾಯಿ ಕಾಡ್ಲೂರು ರವರು ಮಾತನಾಡಿ
ಶ್ರೀ ಗುರು ಜಗನ್ನಾಥದಾಸರು
ದಾಸ ಸಾಹಿತ್ಯದ ಶ್ರೇಷ್ಠ ದಾಸರಾಗಿದ್ದಾರೆ ಮಂತ್ರಾಲಯ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ ಮೇಲೆ ರಚಿಸಿದ ಕೀರ್ತನೆಗಳು ಮೇರು ಕೃತಿಗಳಾಗಿವೆ, ಇವರ ಮೂಲ ಹೆಸರು ಸ್ವಾಮಿ ರಾವ್ ಆಗಿದ್ದು, ಜೀವನದಲ್ಲಿ ನಡೆದ ಅಹಿತಕರ ಘಟನೆಯಿಂದ ದಾಸ ದೀಕ್ಷೆಯನ್ನು ಪಡೆದು ಇಬ್ರಾಹಿಂಪುರ ಕೃಷ್ಣಾಚಾರ್ಯರು ಕೃಪೆಗೆ ಪಾತ್ರರಾಗಿ ದಾಸ ಸಾಹಿತ್ಯದ ಪರಂಪರೆಯನ್ನು ಬೆಳೆಸಿದರು.
ಎಂದು ಹೇಳಿದರು.
ಕಾರ್ಯಕ್ರಮವನ್ನು ಹಿರಿಯ ಕಲಾವಿದರಾದ ಶ್ರೀ ಸುರೇಶ್ ಕಲ್ಲೂರ್ ಅವರು ಉದ್ಘಾಟಿಸಿ
ಶ್ರೀ ಗುರು ಜಗನ್ನಾಥದಾಸರು ರಚಿಸಿದ ಹಲವಾರು ಸಂಕೀರ್ತನಗಳನ್ನು ಹಾಡಿ ಕಾರ್ಯಕ್ರಮಕ್ಕೆ ಶುಭ ಕೋರಿದರು.
ದಾಸರ ಭಾವಚಿತ್ರಕ್ಕೆ ಅರ್ಚಕರಾದ ಶ್ರೀಧರಾಚಾರ್ಯ ಮುಂಗಲಿ ಅವರು ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾರುತಿ ಭಜನಾ ಮಂಡಳಿಯ ಅಧ್ಯಕ್ಷರಾದ ವೆಂಕಟೇಶ್ ಕೋಲಾರ್, ಕೃಷ್ಣಮೂರ್ತಿ ಹುಣಸಿಗಿ, ನರಸಿಂಹ ,ನಿವೃತ್ತ ಶಿಕ್ಷಕಿ ನಾಗರತ್ನ ಮುಂತಾದವರು ಭಾಗವಹಿಸಿದ್ದರು.
Comments
Post a Comment