ಸಮೀಕ್ಷೆಯಿಂದ ಜಾತಿಗಳ ನಡುವೆ ಒಡಕು ಸೃಷ್ಟಿ ಆತಂಕ:             
ಆರ್ಯವೈಶ್ಯ ಮಹಾಸಭಾದಿಂದ ಬೇರೆ ಸಮುದಾಯಗಳಿಗೂ ನೆರವು- ರವಿಶಂಕರ. 
                                                                                           ಜಯ ಧ್ವಜ ನ್ಯೂಸ್, ರಾಯಚೂರು,ಅ.5-                 ಆರ್ಯವೈಶ್ಯ ಮಹಾಸಭಾದಿಂದ ಕೇವಲ ಆರ್ಯವೈಶ್ಯ ಜನಾಂಗಕ್ಕ ಲ್ಲದೆ ಬೇರೆ ಸಮುದಾಯಗಳ ಆರ್ಥಿಕವಾಗಿ ಹಿಂದುಳಿದ ಜನರಿಗೂ ನೆರವು ನೀಡಲಾಗುತ್ತಿದೆ ಎಂದು ಕರ್ನಾಟಕ ಆರ್ಯವೈಶ್ಯ ಮಹಾಸಭಾ ರಾಜ್ಯಾಧ್ಯಕ್ಷ ಆರ್.ಪಿ.ರವಿಶಂಕರ್ ಹೇಳಿದರು. ಅವರಿಂದು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಆರ್ಯವೈಶ್ಯ ಮಹಾಸಭಾ ತನ್ನ ಸಂಪನ್ಮೂಲಗಳ ಆಧಾರದಿಂದ ಸೌಲಭ್ಯ ನೀಡುತ್ತಿದ್ದು ಸರ್ಕಾರದಿಂದ ಯಾವುದೇ ಸಹಾಯ ಪಡೆಯುತ್ತಿಲ್ಲವೆಂದ ಅವರು ಆರ್ಯವೈಶ್ಯ ಜನಾಂಗ ಮುಂದುವರಿದ ಜನಾಂಗವೆಂದು ಕರೆಯಲ್ಪಟ್ಟರು ಸಹ ನಮ್ಮಲಿಯೂ ಅನೇಕ ಕುಟುಂಬಗಳು ಆರ್ಥಿಕವಾಗಿ ಹಿಂದುಳಿದವರಾಗಿದ್ದಾರೆ ಅಂತವರ ಶೈಕ್ಷಣಿಕ, ಆರೋಗ್ಯ ಸೌಲಭ್ಯ ಮುಂತಾದವುಗಳಿಗೆ ಮಹಾಸಭಾ ಉದಾರವಾಗಿ ನೆರವು ನೀಡುತ್ತಿದೆ ಎಂದರು. ಮಹಾಸಭಾದಿಂದ  ಪ್ರತಿ ತಿಂಗಳು ಸುಮಾರು 48 ಲಕ್ಷ ರೂ. ವೆಚ್ಚದ ಸೇವಾ ಕಾರ್ಯ ಮಾಡುತ್ತಿದೆ ಎಂದ ಅವರು ಇದಕ್ಕೆಲ್ಲ ನಮಗೆ ಸರ್ಕಾರ ಧನ ಸಹಾಯ ಮಾಡುವುದಿಲ್ಲ ಬದಲಾಗಿ ಈ ಹಿಂದೆ ಮೈಸೂರು ಮಹಾರಾಜರ ಕಾಲದಲ್ಲಿ ಬೆಂಗಳೂರಲ್ಲಿ ಖರೀದಿಸಿದ ವಾಣಿಜ್ಯ ಸಮುಚ್ಚಯದಿಂದ ಬರುವ ಬಾಡಿಗೆ ಹಣದ ನೆರವಿನಿಂದ ಸೇವಾ ಕಾರ್ಯ ನಡೆಯುತ್ತಿದೆ ಅಲ್ಲದೆ ಕೆಲ ದಾನಿಗಳು ಸಹ ಸಮಾಜಕ್ಕೆ ದೇಣಿಗೆ ನೀಡುವವರು ಇದ್ದಾರೆ ಎಂದರು.  ಅರವತ್ತು ಸಾವಿರ ರೂ. ಬೆಲೆಯ 1600 ಲ್ಯಾಪ್ಟಾಪ್ ನೀಡಿದ್ದೇವೆ ಅಲ್ಲದೆ ದಾಬಸಪೇಟೆ ಬಳಿ ಶಾಲೆಯಲ್ಲಿ ಎಲ್ಲಾ ಸಮುದಾಯದ ಆರ್ಥಿಕವಾಗಿ  ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆ ಮೂಲಕ ಶಾಲೆಗೆ ಸೇರ್ಪಡೆ ಮಾಡಿಕೊಳ್ಳುತ್ತೇವೆಂದರು.

ವಿದ್ಯಾರ್ಥಿ ಮಿತ್ರ ಯೋಜನೆಯಡಿ ಇಂಜಿನಿಯರಿಂಗ್, ವ್ಯಾಸಂಗಕ್ಕೆ ಧನ ಸಹಾಯ ಮಾಡುತ್ತೇವೆ ಇದುವರೆಗೂ ಸುಮಾರು 13 ಕೋಟಿ ವೆಚ್ಚ ಮಾಡಲಾಗಿದೆ ಎಂದರು. ವಿದ್ಯಾರ್ಥಿಗಳ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ಯಾವುದೇ ಪ್ರಚಾರವಿಲ್ಲದೆ ಧನ ಸಹಾಯ ನೀಡಲಾಗುತ್ತಿದೆ ಎಂದರು. ವೃದ್ಧರಿಗೆ ಸಂಧ್ಯಾ ಶ್ರೀ ಮೂಲಕ ಮಾಸಿಕ 1500. ರೂ ಮತ್ತು ವಾಸವಿ ಚೇತನ್ ಯೋಜನೆ ಮೂಲಕ ದಿವ್ಯಾಂಗರಿಗೆ ಒಂದು ಸಾವಿರ ರೂ. ನೆರವು ನೀಡುತ್ತೇವೆ ಎಂದರು. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡಲು ಎಲ್ಲಾ ಸಮುದಾಯದ ವಿದ್ಯಾರ್ಥಿಗಳಿಗೆ ತರಬೇತಿ ಅಕಾಡೆಮಿ ಸ್ಥಾಪಿಸಲಾಗಿದೆ ಎಂದರು. ಹುಣಸೂರು ಬಳಿ ಅನಾಥ ವೃದ್ಧರಿಗೆ ವಾನಪ್ರಸ್ಥಾಶ್ರಮ ವೃದ್ದಾಶ್ರಮ ತೆರೆಯಲಾಗಿದ್ದು  ಅಲ್ಲಿ ಗೋಶಾಲೆ, ಕುಟೀರ ಉದ್ಯಮ ಸಹ ತೆರೆಯಲಾಗಿದೆ ಎಂದರು.

ನಮ್ಮ ಸಮುದಾಯದ ಜನರು ರಾಜಕೀಯದಲ್ಲಿರುವುದು ವಿರಳ ಸದ್ಯದ ಪರಿಸ್ಥಿತಿಯಲ್ಲಿ ಜಾತಿ ಪಾರಮ್ಯವಿದ್ದು ರಾಜ್ಯ ಸರ್ಕಾರದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ಜಾತಿಗಳ ನಡುವೆ ಸಂಘರ್ಷಕ್ಕೆ ಹಾದಿ ಮಾಡುತ್ತದೆ ಎಂಬ ಆತಂಕವಿದೆ ಎಂದರು. ಆರ್ಯವೈಶ್ಯ ಅಭಿವೃದ್ಧಿ ನಿಗಮ ನೂತನ ಅಧ್ಯಕ್ಷ ರಾಮ್ ಪ್ರಸಾದ್ ಮಾತನಾಡಿ ಇತ್ತೀಚೆಗೆ ನಾನು ಅಧ್ಯಕ್ಷ ಸ್ಥಾನ ಆಲಂಕರಿಸಿದ್ದು ಆರ್ಯವೈಶ್ಯ ಜನಾಂಗದ ಅಂಕಿ ಸಂಖ್ಯೆ ಪಡೆದು ಅವರಿಗೆ ಸರ್ಕಾರದಿಂದ ಸಿಗುವ ಸೌಲಭ್ಯ ದೊರಕಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದ ಅವರು ಅಭಿವೃದ್ಧಿ ಮಂಡಳಿಗೆ ಈ ಭಾಗಕ್ಕೆ ಪ್ರಾತಿನಿಧ್ಯ ಸಿಗುವಂತೆ ಸಿಎಂ, ಡಿಸಿಎಂಗೆ ಮನವಿ ಮಾಡುತ್ತೇನೆಂದರು. ಈ ಸಂದರ್ಭದಲ್ಲಿ ಆರ್ಯವೈಶ್ಯ ಸಮಾಜದ ಮುಖಂಡರಾದ ಕುಂಟ್ನಾಳ ವೆಂಕಟೇಶ, ಬಿ.ಜಗದೀಶ ಗುಪ್ತಾ, ದೇವನಪಲ್ಲಿ ವಾಸುದೇವ,ಕೆ.ಸಿ.ವಿರೇಶ ವಕೀಲ,ಎಂ.ಗಿರಿಧರ, ಹನುಮಂತಯ್ಯ, ವೀರೇಶ ರಾಘವೇಂದ್ರ ಇನ್ನಿತರರು ಉಪಸ್ಥಿತರಿದ್ದರು.

Comments

Popular posts from this blog