ಖ್ಯಾತ ಹಿರಿಯ ವೈದ್ಯರಾದ ಡಾ.ರಾಘವೇಂದ್ರ ಕುಲಕರ್ಣಿ ರವರಿಗೆ ಸನ್ಮಾನ ಜಯಧ್ವಜ ನ್ಯೂಸ್, ರಾಯಚೂರು, ಆ.8- ಖ್ಯಾತ ವೈದ್ಯರಾದ ಕುಲಕರಣಿ ಡಾಕ್ಟರ್ ಎಂದೇ ಪ್ರಸಿದ್ಧರಾದ ಶ್ರೀ ಡಾ. ರಾಘವೇಂದ್ರ ಕುಲಕರ್ಣಿ ರವರು ರಾಯಚೂರಿಗೆ ಬಹಳ ವರ್ಷಗಳ ನಂತರ ಆಗಮಿಸಿ ಶ್ರೀ ಸತ್ಯನಾಥ ಕಾಲೋನಿಯ ಸತ್ಯನಾಥ ಸಭಾಭವನದಲ್ಲಿ ಸಮಸ್ತ ಬ್ರಾಹ್ಮಣ ಸಮಾಜದ ಹಿರಿಯರನ್ನು, ಮುಖಂಡರನ್ನು, ಯುವಕರನ್ನು ಭೇಟಿ ಮಾಡಿ ತಮ್ಮ ಹಿಂದಿನ ವೈದ್ಯ ವೃತ್ತಿ ಜೀವನ , ಸಮಾಜ ಸೇವೆಯನ್ನು ತಮ್ಮ ವಿಚಾರಗಳನ್ನು ಹಂಚಿಕೊಂಡರು.
ಡಾ. ರಾಘವೇಂದ್ರ ಕುಲಕರ್ಣಿ ರವರನ್ನುಇದೇ ವೇಳೆ ಹೃತ್ಪೂರ್ವಕವಾಗಿ ಸನ್ಮಾನಿಸಲಾಯಿತು . ಈ ಸಂದರ್ಭದಲ್ಲಿ ಎಕೆಬಿಎಂಎಸ್ ಜಿಲ್ಲಾ ಪ್ರತಿನಿಧಿಯಾದ ರಮೇಶ್ ಕುಲಕರಣಿ, ಮಹಾಪೋಷಕರಾದ ನರಸಿಂಗ ರಾವ್ ದೇಶಪಾಂಡೆ ,ಜಿಲ್ಲಾ ಸಂಚಾಲಕರಾದ ವೇಣುಗೋಪಾಲ ಇನಾಮ್ದಾರ್, ಕಾರ್ಯಧ್ಯಕ್ಷರಾದ ವೆಂಕಟೇಶ ದೇಸಾಯಿ , ನಗರ ಅಧ್ಯಕ್ಷರಾದ ರಾಮರಾವ್ ಗಣೇಕಲ್ ,ಹಿರಿಯ ಉಪಾಧ್ಯಕ್ಷರಾದ ಪ್ರಾಣೇಶ್ ಮುತಾಲಿಕ್ ಮತ್ತು ಸಮಾಜದ ಮುಖಂಡರಾದ ಶ್ರೀ ತ್ರಿವಿಕ್ರಮ ಜೋಶಿ , ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಅನಿಲ್ ಕುಮಾರ್ ಗಾರಲದಿನ್ನಿ, ಪಂಡಿತ್ ಮುಕುಂದಾಚಾರ್,ಪಂ ಶ್ರೀಹರಿ ಅಚಾರ್ ,ಸುಬ್ಬರಾವ ಕುಲಕರ್ಣಿ, ಸೇರಿದಂತೆ ಸಮಾಜದ ಹಿರಿಯರು, ಮುಖಂಡರು, ಯುವಕರು, ಮಹಿಳೆಯರು ಉಪಸ್ಥಿತರಿದ್ದರು. .
Comments
Post a Comment