ಸಚಿವ ದಿನೇಶ್ ಗುಂಡೂರಾವ್  ಭೇಟಿಯಾದ ಜಿಲ್ಲಾ ಪ್ರತಿನಿಧಿ ರಮೇಶ್ ಕುಲಕರ್ಣಿ 
   
                                 ಜಯ ಧ್ವಜ ನ್ಯೂಸ್ ರಾಯಚೂರು , ಅ.18- ಇಂದು ಬೆಂಗಳೂರಿನಲ್ಲಿ ಕರ್ನಾಟಕ ಸರ್ಕಾರದ ಆರೋಗ್ಯ ಸಚಿವರಾದ  ದಿನೇಶ್ ಗುಂಡೂರಾವ್ ರವರನ್ನು ರಾಯಚೂರು ಜಿಲ್ಲೆಯ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಜಿಲ್ಲಾ ಪ್ರತಿನಿಧಿ  ರಮೇಶ್ ಕುಲಕರಣಿ ಹಾಗೂ ರಾಜ್ಯ ಜಂಟಿ ಕಾರ್ಯದರ್ಶಿ ಜಯಕುಮಾರ್ ಗಬ್ಬೂರ್ ಹಾಗೂ ರಾಜ್ಯ ಕಾರ್ಯ ಕಾರಣಿ ಸದಸ್ಯ  ಪ್ರವೀಣ್ ಕುಮಾರ್ ಜಾಗೀರ್ದಾರ್ ರವರು ಭೇಟಿಯಾಗಿ ಚರ್ಚಿಸಿದರು.

ರಾಯಚೂರು ಜಿಲ್ಲಾ ಬ್ರಾಹ್ಮಣ ಮಹಾಸಭಾಕ್ಕೆ ಹಾಗೂ ನಗರದ ಗಾಯತ್ರಿ ಭವನ ಕಟ್ಟಡಕ್ಕೆ ಸರ್ಕಾರದಿಂದ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ವಿಪ್ರ ಬಾಂಧವರಿಗೆ ಅನುಕೂಲ ಮಾಡಿಕೊಡಬೇಕೆಂದು ವಿನಂತಿಸಿದರು.  ಮುಂದಿನ ದಿನದಲ್ಲಿ ನಡೆಯುವ ರಾಯಚೂರು ಜಿಲ್ಲಾ ವಿಪ್ರ ಸಮಾವೇಶದಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.

Comments

Popular posts from this blog