ನ. 30ರಂದು ರಾಷ್ಟ್ರಮಟ್ಟದ ಬೆಳಕು ಸಂಭ್ರಮ-ಮೇಟಿಗೌಡ


ಜಯ ಧ್ವಜ, ನ್ಯೂಸ್ , ರಾಯಚೂರು ,ಅ.19- ಸಾಹಿತ್ಯ, ಸಾಂಸ್ಕೃತಿಕ ಹಾಗೂ ಕಾವ್ಯ ಕ್ಷೇತ್ರದಲ್ಲಿ ಅಗ್ರಗಣ್ಯ ಸೇವೆ ಸಲ್ಲಿಸುತ್ತಿರುವ ಬೆಳಕು ಸಂಸ್ಥೆ ತನ್ನ 121ನೇ ಮಹತ್ವದ ಕಾರ್ಯಕ್ರಮವನ್ನು ನವೆಂಬರ್ 30ರಂದು ಬೆಂಗಳೂರು ನಗರದ ಚಾಮರಾಜಪೇಟೆಯ ಅಕ್ಕಮಹಾದೇವಿ ಸಭಾಂಗಣದಲ್ಲಿ ಭವ್ಯವಾಗಿ ಆಯೋಜಿಸಲಾಗಿದೆ ಎಂದು ಬೆಳಕು ಸಂಸ್ಥೆಯ ಸಂಸ್ಥಾಪರಾದ ಅಣ್ಣಪ್ಪ ಮೇಟಿಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಉಚಿತವಾಗಿ ಭಾಗವಹಿಸಬಹುದಾಗಿದ್ದು ರಾಷ್ಟ್ರಮಟ್ಟದ ಸಂಭ್ರಮದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು, ಕವಿಗೋಷ್ಠಿ, ಗಾಯನ–ನೃತ್ಯ ಪ್ರದರ್ಶನಗಳು ಸೇರಿದಂತೆ ಸಾಧಕರಿಗೆ ರಾಷ್ಟ್ರಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ.

ಕವಿಗೋಷ್ಠಿ, ಗಾಯನ, ನೃತ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿಗೆ ಆಸಕ್ತಿ ಹೊಂದಿರುವವರು ತಮ್ಮ ಪರಿಚಯ ವಿವರಗಳನ್ನು ಕೆಳಗಿನ ವಾಟ್ಸಾಪ್ ಸಂಖ್ಯೆಗೆ ಕಳುಹಿಸಿ ನೋಂದಣಿ ಮಾಡಿಕೊಳ್ಳುವಂತೆ ಸಂಸ್ಥೆ ತಿಳಿಸಿದೆ. ಆಯ್ಕೆ ಸಮಿತಿ ತೀರ್ಮಾನವೇ ಅಂತಿಮವಾಗಲಿದದು ಆಸಕ್ತರು ಸಂಪರ್ಕಿಸಲು,ಅಣ್ಣಪ್ಪ ಮೇಟಿಗೌಡ,ಸಂಸ್ಥಾಪಕ ಅಧ್ಯಕ್ಷರು, ಬೆಳಕು ಸಂಸ್ಥೆ ಮೋ.ನಂ. 9035996070ಗೆ ಸಂಪರ್ಕಿಸಲು ತಿಳಿಸಿದ್ದಾರೆ.

Comments

Popular posts from this blog