ಎ ಆರ್ ವಿ ಸಿಮೆಂಟ್ ಸೊಸೈಟಿ ಮತ್ತು ವೈಟಿಪಿಎಸ್ ಅಧಿಕಾರಿಗಳು ಹಾರು ಬೂದಿ ಸಾಗಾಟ ಮಾಡುವ ಒಪ್ಪಂದ ಮತ್ತು ಷರತ್ತು ನಿಯಮ ಪಾಲನೆ ವಿಫಲತೆ ವಿರೋಧಿಸಿ  ಅ.27 ರಂದು ರೈತ ಸಂಘ ಪ್ರತಿಭಟನೆ.


ಜಯ ಧ್ವಜ ನ್ಯೂಸ್ , ರಾಯಚೂರು ,ಅ.17- ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಕಲ್ಯಾಣ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ ವತಿಯಿಂದ ಮನವಿ ಪತ್ರದಲ್ಲಿ ತಿಳಿಯಪಡಿಸುವುದೇನೆಂದರೆ ದಿನಾಂಕ 10.12.2021 ರಂದು ಎ ಆರ್ ವಿ ಸಿಮೆಂಟ್ ಸೊಸೈಟಿ ಇವರು ವೈ ಟಿ ಪಿ ಎಸ್, ಆರ್ ಪಿ ಸಿ ಎಲ್ ಚಿಕ್ಕಸೂಗೂರು ತಾಲೂಕು ಜಿಲ್ಲಾ ರಾಯಚೂರು ಈ ಕಂಪನಿಯಲ್ಲಿ ಹಾರುಭೂದಿಯನ್ನು ತೆಗೆದುಕೊಂಡು ಹೋಗಲು ಕೆಲವು ಶರತ್ತು / ನಿಯಮ ಮಾಡಿಕೊಂಡಿದ್ದು ಇರುತ್ತದೆ ಒಪ್ಪಂದ ಏನೆಂದರೆ ಸದರಿ ಹಾರು ಬೂದಿಯನ್ನು ರೈಲ್ವೆ  ವ್ಯಾಗನ್ ಗಳ ಮುಖಾಂತರ ಸಾಗಾಟ ಮಾಡಬೇಕು ಎಂದು ಇರುತ್ತದೆ, ಆದರೆ ದುರಾದೃಷ್ಟದ ಸಂಗತಿ ಏನಂದರೆ  ಕಾನೂನು ಕಟ್ಟಳೆಗಳನ್ನು ಮುರಿದು ರಸ್ತೆಯ ಮುಖಾಂತರ ಭಾರಿ ಬಲ್ಕರ್ ವಾಹನಗಳಿಂದ ಅಕ್ರಮ ಸಾಗಾಟ ಮುಂದುವರೆದಿದೆ, ಈ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಎ ಆರ್ ವಿ ಸಿಮೆಂಟ್ ಸೊಸೈಟಿ ಮತ್ತು ವೈ ಟಿ ಪಿ ಎಸ್ ಪ್ರಮುಖ ಅಧಿಕಾರಿಗಳು ಭಾಗಿಯಾಗುವುದು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದು ರೈತ ಸಂಘ ಆರೋಪಿಸಿದ್ದುಈ ಕುರಿತಂತೆ ದಿನಾಂಕ 19.07.2025  ರಂದು ಕೆಪಿಸಿಎಲ್ ಮುಖ್ಯ ಕಚೇರಿ ಬೆಂಗಳೂರು ಟೆಕ್ನಿಕಲ್ ಡೈರೆಕ್ಟರ್ ಅವರಿಗೆ ನಮ್ಮ ಸಂಘಟನೆ ವತಿಯಿಂದ ಮನವಿ ಪತ್ರವನ್ನು ನೀಡಿ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಲಾಗಿತ್ತು ಆದರೆ ಯಾವುದೇ ಕ್ರಮವನ್ನು ಕೈಗೊಳ್ಳದೆ ಯಥಾವತ್ತಾಗಿ  ಹಾರುಬೂದಿ   ಸಾಗಾಟವನ್ನು ಬಾರಿ ಬಲ್ಕರ್ ಗಳ ಮೂಲಕ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾರೆ, ಹಣದ ಹೊಳೆಯ ಭ್ರಷ್ಟಾಚಾರ ನಡೆದಿದೆ ಎಂಬುದು ಸತ್ಯಕ್ಕೆ ಸಮೀಪವಾದ ವಿಷಯವಾಗಿದೆ ಆದ್ದರಿಂದ ವೈಟಿಪಿಎಸ್  ಕಂಪನಿಯ ಪ್ರಮುಖ ಅಧಿಕಾರಿಗಳು ಮತ್ತು ಎ ಆರ್ ವಿ ಸಿಮೆಂಟ್  ಸೊಸೈಟಿ ವಿರುದ್ಧ ದಿನಾಂಕ 27.10.2025 ರಂದು ವೈ ಟಿ ಪಿ ಎಸ್ ಮುಖ್ಯ ದ್ವಾರದ ಮುಂದೆ  ಪ್ರತಿಭಟನೆಯನ್ನು ಹಮ್ಮಿಕೊಳ್ಳಲು  ಸಂಘಟನೆ ನಿರ್ಧಾರ ಮಾಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ .ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ  ಜಿಂದಪ್ಪ ,ಜಿಲ್ಲಾಧ್ಯಕ್ಷ ಕೆ‌.ರಂಗನಾಥ, ಭೀಮಣ್ಣ ವಡ್ಲೂರು ಅಂಜಿನಯ್ಯ ಚಿಕ್ಕಸೂಗೂರು ,ಭೀಮರಾಯ ಇನ್ನಿತರರು ಇದ್ದರು.

 

 


 

 




Comments

Popular posts from this blog