ಶ್ರೀ ಮಹರ್ಷೀ ವಾಲ್ಮೀಕಿ ವಿಶ್ವವಿದ್ಯಾಲಯದಲ್ಲಿ ವಿಪ್ರ ವಿದ್ಯಾರ್ಥಿಗಳ ಸಾಧನೆ: ಕೆಕೆಬಿಎಂಎಸ್ ನಿಂದ ಸನ್ಮಾನ ಜಯ ಧ್ವಜ ನ್ಯೂಸ್ ರಾಯಚೂರು,ಅ.15- ಶ್ರೀ ಮಹರ್ಷೀ ವಾಲ್ಮೀಕಿ ವಿಶ್ವವಿದ್ಯಾಲಯದಲ್ಲಿ ವಿಪ್ರ ವಿದ್ಯಾರ್ಥಿಗಳು ಸಾಧನೆ ಮೆರೆದ ಹಿನ್ನಲೆಯಲ್ಲಿ ಕಲ್ಯಾಣ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಘಟಕದಿಂದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ವಿಪ್ರ ಸಮಾಜದ ವಿದ್ಯಾರ್ಥಿಗಳಾದ ಅನುಷಾ ಕೀಲಿ ತಂದೆ ಪ್ರಸನ್ನ ಕೀಲಿ ಅವರು ವಿಶ್ವ ವಿದ್ಯಾಲಯದ ಎಂಎಸ್ಸಿ ಗಣಿತ ಶಾಸ್ತ್ರದಲ್ಲಿ ಎರಡನೇ ಶ್ರೇಣಿ ಪಡೆದು ಜಿಲ್ಲೆಗೆ ಯುನಿವರ್ಸಿಟಿಗೆ ಹಾಗೂ ವಿಪ್ರ ಸಮಾಜಕ್ಕೆ ಕೀರ್ತಿ
ತಂದಿದ್ದಾರೆ ಹಾಗೂ ಶ್ರೀರಕ್ಷಾ ತಂದೆ ರವೀಂದ್ರ ಕುಲಕರ್ಣಿ ಅವರು ವಿಶ್ವ ವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದಲ್ಲಿ ನಾಲ್ಕನೇ ಶ್ರೇಣಿ ಪಡೆದು ಜಿಲ್ಲೆಗೆ, ಯುನಿವರ್ಸಿಟಿಗೆ ಹಾಗೂ ವಿಪ್ರ ಸಮಾಜಕ್ಕೆ ಕೀರ್ತಿ ತಂದಿದ್ದಾರೆ . ಈ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕಲ್ಯಾಣ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಿ ರಾಯಚೂರು ವತಿಯಿಂದ ಅವರವರ ಮನೆಗೆ ತೆರಳಿ ಅಭಿನಂದಿಸಿ ಸನ್ಮಾನಿಸಿ ಗೌರವಿಸಲಾಯಿತು.
ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕೀರ್ತಿ ಗಳಿಸಲಿ ಎಂದು ಶುಭಹಾರೈಸಲಾಯಿತು. ಈ ಸಂದರ್ಭದಲ್ಲಿ ಕೆಕೆಬಿಎಂಎಸ್ ವಿಭಾಗೀಯ ಅದ್ಯಕ್ಷರಾದ ಜಗನ್ನಾಥ ಕುಲಕರ್ಣಿ, ಗುರುರಾಜಾಚಾರ್ ಜೋಶಿ ತಾಳಿಕೋಟಿ, ಹನುಮಂತ ರಾವ್ ಕಲ್ಲೂರಕರ್, ಹರೀಶ್ ಕೊಪ್ಪರ್, ನರಸಿಂಹ ಮೂರ್ತಿ ಕುಲಕರ್ಣಿ, ಶೇಷಗಿರಿ ದಾಸ್, ಗೋಪಾಲಕೃಷ್ಣ ತಟ್ಟಿ, ವೆಂಕಟೇಶ ಕೋಲಾರ, ವ್ಯಾಸರಾವ್ ಗೋನವಾರ, ಹನುಮೇಶ ಮಾನ್ವೀಕರ್, ಜಯಕುಮಾರ್ ದೇಸಾಯಿ ಕಾಡ್ಲೂರು , ರಾಮಚಂದ್ರ ಜೋಶಿ, ಸೇತು ಮಾಧವ ಕೆರೂರ, ಸುಧೀಂದ್ರ, ರಾಘವೇಂದ್ರ, ಸಂದೀಪ್ ಕುರ್ಡಿ, ಶ್ರೀ ವೆಂಕೋಬಾಚಾರ್ ಪುರೋಹಿತ ಕಾಡ್ಲೂರು, ನಾರಾಯಣರಾವ್, ಪ್ರವೀಣ್ ಕುಲಕರ್ಣಿ, ಮುರಳೀಧರ ಕುಲಕರ್ಣಿ, ರವೀಂದ್ರ ಕುಲಕರ್ಣಿ, ಪ್ರಸನ್ನ ಕೀಲಿ ಸೇರಿದಂತೆ ವಿದ್ಯಾರ್ಥಿಗಳ ಪಾಲಕರು ಇನ್ನು ಅನೇಕರು ಉಪಸ್ಥಿತರಿದ್ದರು.
Comments
Post a Comment