ಹೈದರಾಬಾದ್ ರಸ್ತೆಯಲ್ಲಿ ಗಂಟೆಗಟ್ಟಲೆ ವಾಹದಟ್ಟಣೆ ಸವಾರರು ಪರದಾಟ ಜಯ ಧ್ವಜ ನ್ಯೂಸ್, ರಾಯಚೂರು, ಅ.8- ಹೈದರಾಬಾದ್ ರಸ್ತೆಯಲ್ಲಿ ಬೆಳಿಗ್ಗೆ ಗಂಟೆಗಟ್ಟಲೆ ವಾಹನ ದಟ್ಟಣೆಯಿಂದ ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ ವಾಹನ ಸವಾರರು, ಪ್ರಯಾಣಿಕರು ಪರಿತಪಿಸಿದರು. ಬೆಳಿಗ್ಗೆ ವೈಟಿಪಿಎಸ್ ಸಮೀಪದಲ್ಲಿ ಬೆಳಿಗ್ಗೆ ಹತ್ತಿ ತುಂಬಿಕೊಂಡ ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ ಇತರೆ ಬೃಹತ ಸರಕು ಸಾಗಟ ವಾಹನಗಳು, ಬಸ್ ಗಳು ಕದಲದೆ ಕೆಲ ಹೊತ್ತು ನಿಂತಿದ್ದರಿಂದ ಪ್ರಯಾಣಿಕರು, ವಾಹನ ಸವಾರರು ಪರದಾಡಿದರು.
ನಂತರ ಹೈವೆ ಪೆಟ್ರೋಲಿಂಗ್ ವಾಹನ ಪೊಲೀಸರು ಆಗಮಿಸಿ ಸಂಚಾರ ದಟ್ಟಣೆ ನಿವಾರಣೆ ಮಾಡಿದರು. ದಿನ ನಿತ್ಯ ಇದೆ ರೀತಿಯಲ್ಲಿ ವಾಹನ ದಟ್ಟಣೆ ಸಂಭವಿಸುತ್ತಿದೆ ಇದನ್ನು ನಿವಾರಿಸಬೇಕೆಂದು ವಾಹನ ಸವಾರರು ಒತ್ತಾಯಿಸಿದರು.
Comments
Post a Comment