ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷರನ್ನು ಭೇಟಿಯಾದ ರಮೇಶ್ ಕುಲಕರ್ಣಿ
                                                                               ಜಯಧ್ವಜ  ನ್ಯೂಸ್ ,  ರಾಯಚೂರು, ಅ.19-  ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ  ಆಸುಗೋಡ ಜಯಸಿಂಹ ರವರನ್ನು ಬೆಂಗಳೂರಿನಲ್ಲಿ ರಾಯಚೂರು   ಜಿಲ್ಲಾ ಪ್ರತಿನಿಧಿ ರಮೇಶ್ ಕುಲಕರ್ಣಿ ಭೇಟಿ ಮಾಡಿದರು. ರಾಯಚೂರು ಜಿಲ್ಲೆಯ ವಿಪ್ರ ಸಮುದಾಯದ ವಿದ್ಯಾರ್ಥಿಗಳಿಗೆ ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ಮತ್ತು ವಿಪ್ರ ಸಮಾಜದ ಬಡವರಿಗೆ ಅಭಿವೃದ್ಧಿ ಮಂಡಳಿಯಿಂದ ದೊರೆಯುವ ಸೌಲಭ್ಯಗಳನ್ನು ಶೀಘ್ರದಲ್ಲೇ ದೊರೆಯುವಂತೆ ಮಾಡಬೇಕು, ಜೊತೆಯಲ್ಲಿ ಅಕ್ಟೋಬರ್ 31ಕ್ಕೆ ಸಾಲ ಸೌಲಭ್ಯಗಳ ದಿನಾಂಕ ಕೊನೆಗೊಳ್ಳುತ್ತಿದ್ದು ಇನ್ನು ಬಹಳಷ್ಟು ವಿಪ್ರ ಸಮಾಜದ ಬಂಧುಗಳು, ವಿದ್ಯಾರ್ಥಿಗಳು  ಇಡ್ಬ್ಲೂಎಸ್ ಸರ್ಟಿಫಿಕೇಟ್ ಪಡೆದುಕೊಂಡಿರುವುದಿಲ್ಲ, ಹಾಗಾಗಿ ನವಂಬರ್ 30ರವರೆಗೆ ಅರ್ಜಿ ಸಲ್ಲಿಸುವ ಅವಕಾಶ ನೀಡಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ರಾಜ್ಯ ಜಂಟಿ ಕಾರ್ಯದರ್ಶಿಗಳಾದ  ಜಯಕುಮಾರ ಗಬ್ಬೂರು ಹಾಗೂ ರಾಜ್ಯ ಕಾರ್ಯಕಾರಣಿ ಸದಸ್ಯ ಪ್ರವೀಣ್ ಕುಮಾರ್ ಜಾಗೀರ್ದಾರ್ ಉಪಸ್ಥಿತರಿದ್ದರು.

Comments

Popular posts from this blog