ನಾಳೆ ನಗರದ ಬಯಲು ಆಂಜನೇಯ ದೇವಸ್ಥಾನದಲ್ಲಿ ಶ್ರೀ ಗುರುಜಗನ್ನಾಥದಾಸರ ಆರಾಧನೆ          ಜಯ ಧ್ವಜ ನ್ಯೂಸ್ , ರಾಯಚೂರು, ಅ.7-      ನಗರದ ಬಯಲು ಆಂಜನೇಯ ದೇವಸ್ಥಾನದಲ್ಲಿ ಶ್ರೀ ಗುರು ಜಗನ್ನಾಥದಾಸರ ಆರಾಧನೆ ಅ.8 ರಂದು ಹಮ್ಮಿಕೊಳ್ಳಲಾಗಿದೆ.

  ದಾಸ ಶ್ರೇಷ್ಠರಾದ ಶ್ರೀಗುರು ಜಗನ್ನಾಥದಾಸರ  107ನೇ ಆರಾಧನಾ ಮಹೋತ್ಸವವನ್ನು  ನಾಳೆ ದಿನಾಂಕ 8ರಂದು ಸಂಜೆ 6 ಗಂಟೆಗೆ  ನಗರದ ಜವಾಹರ ನಗರದಲ್ಲಿರುವ ಬಯಲು ಆಂಜನೇಯ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ.

   ಉಪನ್ಯಾಸ, ದಾಸವಾಣಿ ಹಾಗೂ ದಾಸರ ಭಾವಚಿತ್ರಕ್ಕೆ ಪೂಜಿ ಸಲ್ಲಿಸುವ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ದಾಸ ಸಾಹಿತ್ಯದ ಬಂಧುಗಳು ಭಾಗವಹಿಸಿ ದಾಸರ ಕೃಪೆಗೆ ಪಾತ್ರರಾಗಬೇಕೆಂದು ಕಾರ್ಯಕ್ರಮದ ಆಯೋಜಕರಾದ ಮುರಳಿಧರ ಕುಲಕರ್ಣಿಯವರು ಕೋರಿದ್ದಾರೆ.

Comments

Popular posts from this blog