ಅಲ್ಲಮಪ್ರಭು ಗೃಹ ನಿರ್ಮಾಣ ಸಹಕಾರ ಸಂಘ ಚುನಾವಣೆ : ಕೃಷ್ಣಮೂರ್ತಿ ಬಣ ಜಯಭೇರಿ
ಜಯ ಧ್ವಜ ನ್ಯೂಸ್ , ರಾಯಚೂರು, ನ.24- ನಗರದ ಅಲ್ಲಮಪ್ರಭು ಗೃಹ ನಿರ್ಮಾಣ ಸಹಕಾರ ಸಂಘದ ನಿರ್ದೇಶಕರ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಮೋದಿ ಕೃಷ್ಣಮೂರ್ತಿ ಬಣ ಜಯ ಬೇರಿ ಬಾರಿಸಿದೆ.
ಸಂಘದ 13 ನಿರ್ದೇಶಕರ ಸ್ಥಾನಗಳ ಪೈಕಿ ಲಕ್ಷ್ಮಣ ಹುಲಿಗಾರ, ರಂಗಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನುಳಿದ 11 ಸ್ಥಾನಗಳಿಗೆ 25 ಜನರು ಸ್ಪರ್ಧೆ ಮಾಡಿದ್ದರು. ಅವರಲ್ಲಿ ಮೋದಿ ಕೃಷ್ಣಮೂರ್ತಿ , ಬಾಷುಮಿಯ, ಡಿ.ಶರಣಮ್ಮ , ವಿ. ಲಕ್ಷ್ಮೀದೇವಿ, ರಾಯಪ್ಪ ಮಾಸ್ಟರ್, ಚಂದ್ರಶೇಖರ್, ವೀರೇಶ್, ತಿಮ್ಮಣ್ಣ ಯಾದವ್, ಸುರೇಶ್ ಸಾಹುಕಾರ, ಶರಣಗೌಡ , ರಾಮಪ್ಪ ಅವರು ಆಯ್ಕೆಯಾಗಿದ್ದಾರೆ ಎಂದು ಘೋಷಿಸಿ, ಚುನಾವಣಾ ಅಧಿಕಾರಿಗಳು ಪ್ರಮಾಣ ಪತ್ರ ನೀಡಿದ್ದಾರೆ.
ಚುನಾವಣಾ ಫಲಿತಾಂಶ ಹೊರ ಬೀಳುತ್ತಿದ್ದಂತೆ ವಿಜೇತ ಅಭ್ಯರ್ಥಿಗಳ ಬೆಂಬಲಿಗರು ಪಟಾಕಿ ಸಿಡಿಸಿ ಪರಸ್ಪರ ಸಿಹಿ ಹಂಚಿಕೊಂಡು, ಗುಲಾಲು ಎರಚಿಕೊಂಡು ಸಂಭ್ರಮಿಸಿದರು.

Comments
Post a Comment