ರಘುನಾಥ ಮತ್ತು ಜಯಸಿಂಹ ರವರನ್ನು ಭೇಟಿಯಾದ ರಮೇಶ್ ಕುಲಕರ್ಣಿ. ಜಯ ಧ್ವಜ ನ್ಯೂಸ್ ರಾಯಚೂರು, ನ.29- ಇಂದು ಬೆಂಗಳೂರಿನ ಗಾಯತ್ರಿ ಭವನದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಅಧ್ಯಕ್ಷರಾದ ಎಸ್. ರಘುನಾಥ್ ರವರನ್ನು ಎಕೆ ಬಿಎಂಎಸ್ ರಾಜ್ಯ ಜಂಟಿ ಕಾರ್ಯದರ್ಶಿ ಹಾಗೂ ಜಿಲ್ಲಾ ಪ್ರತಿನಿಧಿ ರಮೇಶ್ ಕುಲಕರ್ಣಿ ಭೇಟಿಯಾಗಿ ರಾಯಚೂರು ಜಿಲ್ಲಾ ಬ್ರಾಹ್ಮಣ ಮಹಾಸಭಾ ಕಾರ್ಯಕ್ರಮಗಳ ಬಗ್ಗೆ, ಜಿಲ್ಲಾ ಬ್ರಾಹ್ಮಣ ಯುವ ಸಮಾವೇಶದ ಬಗ್ಗೆ ಹಾಗೂ ಸದಸ್ಯತ್ವ ನೋಂದಣಿ ಅಭಿಯಾನದ ಬಗ್ಗೆ, ಜೊತೆಯಲ್ಲಿ ರಾಜ್ಯ ಕಾರ್ಯಕಾರಣಿಯಲ್ಲಿ ರಾಯಚೂರು ಜಿಲ್ಲೆಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುವ ಬಗ್ಗೆ ಸಮಾಲೋಚನೆ ನಡೆಸಿದರು . ನಂತರ ರಾಜ್ಯ ಅಧ್ಯಕ್ಷರಿಗೆ ಇತ್ತೀಚೆಗೆ ರಾಯಚೂರಿನಲ್ಲಿ ಬಿಡುಗಡೆಯಾದ ನಮ್ಮ ಸಮಾಜದ ಹೆಮ್ಮೆಯ ಶ್ರೀಮತಿ ಜಯಲಕ್ಷ್ಮಿ ಮಂಗಳಮೂರ್ತಿ ರವರ ಅಭಿನಂದನಾ ಗ್ರಂಥ "ಜಯ ದೀಪ್ತಿ " ನೀಡಿ ಅಭಿನಂದಿಸಲಾಯಿತು.
ಅದೇ ರೀತಿ ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಆಸುಗೋಡು ಜಯಸಿಂಹ ರವರನ್ನು ಭೇಟಿಯಾಗಿ, ರಾಯಚೂರು ಜಿಲ್ಲೆಯಿಂದ ನೇರ ಸಾಲಕ್ಕೆ ಅರ್ಜಿ ಸಲ್ಲಿಸಿದ ಎಲ್ಲಾ ಫಲಾನುಭವಿಗಳನ್ನು ಆಯ್ಕೆ ಮಾಡಲು ಕೋರಲಾಯಿತು ಜೊತೆಗೆ ಅಪರ ಧಾಮಕ್ಕೆ ಮಂಜೂರಾದ ಮುಕ್ತಿ ರಥವನ್ನು ರಾಯಚೂರಿಗೆ ಬೇಗನೆ ಹಸ್ತಾಂತರಿಸಲು ಕೋರಲಾಯಿತು ಮತ್ತು ಇನ್ನುಳಿದ ವಿಷಯಗಳ ಬಗ್ಗೆ ವಿಸ್ತಾರವಾಗಿ ಚರ್ಚಿ ಮಾಡಲಾಗಿ ಅಧ್ಯಕ್ಷರು ಸೂಕ್ತವಾಗಿ ಸ್ಪಂದಿಸಿದರು. ಈ ಸಂದರ್ಭದಲ್ಲಿ ಜಯಕುಮಾರ ಗಬ್ಬೂರು, ಪ್ರವೀಣ ಕುಮಾರ ಜಾಗೀರ್ದಾರ್ ಹಾಗೂ ಅನಿಲ ಕುಮಾರ ಗಾರಲದಿನ್ನಿ ಉಪಸ್ಥಿತರಿದ್ದರು.


Comments
Post a Comment