ನ.22 ರಂದು ರಾಯಚೂರು ಸಂಗೀತ ಉತ್ಸವ ಹಾಗೂ "ನುಲಿ ಸಿರಿ" ಪ್ರಶಸ್ತಿ ಪ್ರದಾನ ಸಮಾರಂಭ - ಪಂಡಿತ ಅಂಬಯ್ಯ ನುಲಿ.           
                                                                                      ಜಯ ಧ್ವಜ ನ್ಯೂಸ್, ರಾಯಚೂರು, ನ.20- ವಚನಸಿರಿ  ಪಂ.ಅಂಬಯ್ಯ ನುಲಿ ಸಂಗೀತ ಸಾಂಸ್ಕೃತಿಕ ಸಂಸ್ಥೆ ವತಿಯಿಂದ 3ನೇ ವಾರ್ಷಿಕೋತ್ಸವ ಅಂಗವಾಗಿ ನ.22 ರಂದು ರಾಯಚೂರು ಸಂಗೀತ ಉತ್ಸವ ಹಾಗೂ "ನುಲಿ ಸಿರಿ" ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಗೌರವಾಧ್ಯಕ್ಷ ಪಂ.ಅಂಬಯ್ಯ ನುಲಿ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅಂದು ಬೆಳಿಗ್ಗೆ 9.30ಕ್ಕೆ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ನಡೆಯುವ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕಿಲ್ಲೆ ಬೃಹನ್ಮಠದ ಶ್ರೀ ಶಾಂತಿಮಲ್ಲ ಶಿವಾಚಾರ್ಯ ಶ್ರೀ, ಸೋಮವಾರಪೇಟೆ ಹಿರೇಮಠದ ಅಭಿನವ ರಾಚೋಟಿ ಶ್ರೀ, ಗದಗ ವೀರೇಶ್ವರ ಪುಣ್ಯಾಶ್ರಮದ ಡಾ.ಕಲ್ಲಯ್ಯಜ್ಜನವರು ವಹಿಸಲಿದ್ದು ಉದ್ಘಾಟನೆಯನ್ನು ಓಂ ಸಾಯಿ ಧ್ಯಾನ ಮಂದಿರ ಸಂಸ್ಥಾಪಕ ಸಾಯಿ ಕಿರಣ್ ಆದೋನಿ ನೆರವೇರಿಸಲಿದ್ದು ಅಧ್ಯಕ್ಷತೆಯನ್ನು ಪ್ರಸಿದ್ಧ ಸಾಹಿತಿ  ನಾಡೋಜ ಕುಂ. ವೀರಭದ್ರಪ್ಪ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಸಚಿವರು, ಶಾಸಕರು, ಮಾಜಿ ಶಾಸಕರು ಸೇರಿದಂತೆ ಗಣ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು. 23 ಜನ ಸಾಧಕರಿಗೆ ನುಲಿ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದ್ದು.

ಕಲ್ಲಯ್ಯ ಅಜ್ಜನವರಿಗೆ ತುಲಾಭಾರ ನಡೆಯಲಿದ್ದು ರಾತ್ರಿ 9ರವರೆಗೆ ಖ್ಯಾತ ಕಲಾವಿದರಿಂದ ಹಿಂದುಸ್ಥಾನಿ, ಸುಗಮ ಸಂಗೀತ , ವಚನ, ಸಮೂಹ ನೃತ್ಯ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ ಎಂದರು. ಈ ಸಂದರ್ಭದಲ್ಲಿ ಚಿದಾನಂದ ನುಲಿ, ಈರಣ್ಣ,ಪ್ರಭು ಲಿಂಗಯ್ಯ,ದೇವೇಂದ್ರಮ್ಮ ಇದ್ದರು.

Comments

Popular posts from this blog