ಶ್ರೀ ಸುಬುಧೇಂದ್ರತೀರ್ಥರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಜಯ ಧ್ವಜ ನ್ಯೂಸ್ , ರಾಯಚೂರು, ನ.29-ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀ ಪಾದಂಗಳವರಿಗೆ ಮೈಲೀಸ್ ಲೀಡರ್ ಶಿಪ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು. ವಿಶ್ವವಿದ್ಯಾಲಯ ಕುಲಪತಿ ಡಾ.ಕೆ.ರವಿ ಆಚಾರ್, ಡೀನ್ ಡಾ.ಕೆ.ಟಿ.ರಾಜೇಂದ್ರಕುಮಾರ್ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು.
ಶ್ರೀ ಸುಬುಧೇಂದ್ರತೀರ್ಥ ಶ್ರೀ ಪಾದಂಗಳವರಿಗೆ ಇದು ಮೂರನೇ ಗೌರವ ಡಾಕ್ಟರೇಟ್ ಪದವಿ ಲಭಿಸಿದೆ. ಈ ಸಂದರ್ಭದಲ್ಲಿ ರಾಜಾ ಎಸ್ .ಗಿರಿಯಾಚಾರ್ಯ, ಹೈಕೋರ್ಟ್ ನಿವೃತ್ತ ನ್ಯಾಯಾಧೀಶ .ಕೆ.ಶ್ರೀಧರ ರಾವ್, ವಿ.ಆರ್.ಪಂಚಮುಖಿ, ಹರಿದಾಸ ಭಟ್ ಇನ್ನಿತರರು ಇದ್ದರು.


Comments
Post a Comment