ಮಾಣಿಕ್ ಪ್ರಭು ಅಂಧ ಮಕ್ಕಳ ಶಾಲೆಯಲ್ಲಿ ಫೆಡರಲ್ ಶಿಕ್ಷಣ ಸಂಸ್ಥೆಯಿಂದ ಮಕ್ಕಳ ದಿನಾಚರಣೆ                                    ಜಯ ಧ್ವಜ ನ್ಯೂಸ್, ರಾಯಚೂರು, ನ.19-  ಶ್ರೀ ಮಾಣಿಕ ಪ್ರಭು ಅಂಧ ಮಕ್ಕಳ ಶಾಲೆ ಗೆ ಯರಮರಸ್ ಕ್ಯಾಂಪ್ ನ ಫೆಡರಲ್ ಪಬ್ಲಿಕ್ ಸ್ಕೂಲ್  ಸಂಸ್ಥೆ ಯ ಚೇರ್ ಮನ್  ಮಹಮ್ಮದ  ಅಬ್ದುಲ್ ಹೈ ಫಿರೋಜ್ ಅವರು ತಮ್ಮ ಶಾಲೆಯ 200 ಕ್ಕಿಂತ ಹೆಚ್ಚು ಮಕ್ಕಳು, ಶಾಲಾ ಸಿಬ್ಬಂದಿಯೊಂದಿಗೆ

ಆಗಮಿಸಿ ಮಕ್ಕಳ ದಿನಾಚರಣೆಯನ್ನು  ಅಂಧತ್ವ ಹೊಂದಿದ ಮಕ್ಕಳಿಂದ ಕೇಕ್ ಕತ್ತರಿಸುವ ಮೂಲಕ   ಆಚರಿಸಿ  ಅವರಿಗೆ ನಿತ್ಯೋಪಯೋಗಿ ವಸ್ತುಗಳ ಕಿಟ್ ನ್ನು ನೀಡಿ ಅವರು ಸಮಾಜದ ಮುಖ್ಯವಾಹಿನಿಗೆ ಸೇರಲು ತಮ್ಮ ಅಲ್ಪ ಕಾಣಿಕೆಯನ್ನು ಉದಾರತೆಯಿಂದ ನೀಡಿ ಉತ್ತಮವಾದ ಸಂದೇಶ ರವಾನಿಸಿದರು. ಸಮಾರಂಭದಲ್ಲಿ ಮಾಣಿಕ ಪ್ರಭು ಅಂಧಮಕ್ಕಳ ಶಾಲೆಯ ಮುಖ್ಯೋಪಾದ್ಯಾಯರಾದ ಶ್ರೀ ಯತ್ನಳ್ಳಿ ,ಶೋಭಾ, ಬ್ರಾಹ್ಮಣ ಸಮಾಜ ಯುವ ಮುಖಂಡ ಪ್ರಸನ್ನ ಆಲಂಪಲ್ಲಿ,ಫೆಡರಲ್ ಪಬ್ಲಿಕ್ ಶಾಲೆಯ ಶ್ರೀಲೇಖಾ ,ಮುಖ್ಯೋಪಾದ್ಯಾಯರು,ಶಾಲಾಯ ಸಿಬ್ಬಂದಿ ಭಾಗವಹಿಸಿದ್ದರು.

Comments

Popular posts from this blog