ಗಾಲಿಬ್ ಮೆಮೋರಿಯಲ್‌ ಟ್ರಸ್ಟ್ ವತಿಯಿಂದ ಜಿಲ್ಲೆಯ    ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ.                                 ಜಯ ಧ್ವಜ ನ್ಯೂಸ್, ರಾಯಚೂರು, ನ.25ನಗರದ ಗಾ಼ಲಿಬ್ ಮೆಮೋರಿಯಲ್‌ ಟ್ರಸ್ಟ್ ವತಿಯಿಂದ 2025ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದ ರಾಯಚೂರು ಜಿಲ್ಲೆಯವರಾದ   ಜ಼ಫರ್ ಮೋಹಿಯುದ್ದೀನ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಅನಾರೋಗ್ಯದ‌ ಕಾರಣ  ರತ್ನಮ್ಮ‌ ದೇಸಾಯಿಯವರು ಗೈರಾಗಿದ್ದರು, ಜ಼ಫರ್ ಮೋಹಿಯುದ್ದೀನ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ರಾಯಚೂರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾದೀಶರಾದ ಮಾರುತಿ‌ ಬಾಗಡೆ ಯವರು‌ ಮಾತನಾಡಿ ಅತ್ಯುನ್ನತ ಸಾಧನೆ ಮಾಡಿದ ಸಾಧಕರಿಗೆ ರಾಜ್ಯ ಸರಕಾರ ಪ್ರಶಸ್ತಿ ನೀಡುತ್ತ ಬಂದಿದೆ, ನಮ್ಮ ರಾಯಚೂರು ಜಿಲ್ಲೆಯ ಒಬ್ಬರು ಮಹನಿಯರಿಗೆ ಈ ಪ್ರಶಸ್ತಿ ದೊರೆತಿರುವದು ಅತ್ಯಂತ ಖುಷಿಯ ಸಂದರ್ಭ‌ ಎಂದು ಹೇಳಿದರು.


ಕನ್ನಡ ಭಾಷೆ, ಸಂಸ್ಕೃತಿ, ನಾಟಕ, ಕಲೆ ಲ, ಸಾಮಾಜಿಕ‌ ಹೋರಾಟ ಇತ್ಯಾದಿ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿರುವದ ಸಾಧಕರಿಗೆ ಮಾತ್ರ ಇಂತಹ ಪ್ರಶಸ್ತಿ ದೊರೆಯುತ್ತದೆ, ಇಂತಹ ಸಮಯದಲ್ಲಿ ಜ಼ಫರ್ ಮೋಹಿಯುದ್ದೀನ ಅವರು ರಂಗಭೂಮಿ ಕಲೆಯಲ್ಲಿ‌ ಸಾಕಷ್ಟು ಪಾತ್ರಗಳಲ್ಲಿ ಅಭಿನಯಿಸಿದ್ದಾರೆ ಎನ್ನುವದು ಸಂತೋಷದ ವಿಷಯ. ಇಂತಹ ಸಾಧಕರಿಗೆ ಗಾ಼ಲಿಬ್ ಮೆಮೋರಿಯಲ್ ಟ್ರಸ್ಟ್ ಸನ್ಮಾನಿಸುತ್ತಿರುವದು ಇನ್ನೂ ಒಳ್ಳೆಯ ಕೆಲಸ, ಈ ಟ್ರಸ್ಟ್ ನವರು ಸಾಹಿತ್ಯದ ಪುಸ್ತಕಗಳನ್ನು ಪ್ರಕಟಿಸುವ ಮೂಲಕ ಹೊಸ ಹೊಸ‌ ಸಾಹಿತಿಗಳಿಗೆ ಪ್ರೋತ್ಸಾಹ ನೀಡುವ ಕೆಲಸ ಮಾಡಬೇಕು, ನಾಟಕ ಕಲೆಯ ಬಗ್ಗೆ ಶಾಲಾ ಹಂತದಲ್ಲಿ ಸಣ್ಣಪುಟ್ಟ ನಾಟಕಗಳ ಸ್ಪರ್ಧೆ ಏರ್ಪಡಿಸಿ ಪ್ರೋತ್ಸಾಹ ನೀಡಬೆಕೇಂದು ಹೇಳಿದರು.

ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಜ಼ಫರ್ ಮೋಹಿಯುದ್ದೀನ ಅವರು, ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವದಕ್ಕಿಂತ ಹುಟ್ಟೂರಲ್ಲಿ ಸನ್ಮಾನ ಪಡೆಯುತ್ತಿರುವದು ಅತ್ಯಂತ ಹೆಮ್ಮೆಯ ವಿಷಯ ಎಂದು ಹೇಳಿದರು, ನಾನು ವಿದ್ಯಾರ್ಥಿ ದೆಸೆಯಿಂದಲೇ ನಾಟಕಗಳಲ್ಲಿ, ಸಿನೆಮಾಗಳಲ್ಲಿ ಪಾತ್ರ ಮಾಡುತ್ತ ಬಂದಿದ್ದೇನೆ, ಹಲವು ಕಲಾತ್ಮಕ ಪಾತ್ರಗಳಲ್ಲಿ ಅಭಿನಯಿಸಿದ್ದೇನೆ, ಇಂದಿನ ಯುವಕರು ಸಹ ಇಂತಹ ಅಭಿರುಚಿ ಬೆಳೆಸಿಕೊಳ್ಳಬೇಕಿದೆ, ಇತ್ತೀಚಿಗೆ ರಾಯಚೂರು ಜಿಲ್ಲೆಯ ಹಲವಾರು ಯುವಕರು ಸಿನೆಮಾ ರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ, ಇನ್ನೂ ಹೆಚ್ಚಿನ ಪ್ರೋತ್ಸಾಹ ಅಂತಹ ಯುವಕರೊಗೆ ಅವಶ್ಯಕತೆಯಿದೆ ಎಂದು ಹೇಳಿದರು.


ಗ಼ಾಲಿಬ್ ಮೆಮೋರಿಯಲ್ ಟ್ರಸ್ಟ್ ಅಧ್ಯಕ್ಷರಾದ ಸೈಯದ ತಾರೀಖ್ ಹಸನ್ ರಜ್ವಿ ಯವರು ಪ್ರಾಸ್ತಾವಿಕವಾಗಿ ಮಾತನಾಡಿದರು, ಟ್ರಸ್ಟ ಸದಸ್ಯ ಡಾ.ರಝಾಕ ಉಸ್ತಾದ ನಿರೂಪಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಹಾಗೂ ಟ್ರಸ್ಟ್ ಸದಸ್ಯ ಮಲ್ಲಿಕಾರ್ಜುನ ವಕೀಲರು, ವಕೀಲರ‌ ಸಂಘದ ಕಾರ್ಯದರ್ಶಿ ಲಕ್ಷ್ಮಪ್ಪ ಬಂಡಾರಿ, ಟ್ರಸ್ಟ್ ಸದಸ್ಯ ನೂರ್ ಮೊಹಮ್ಮದ ವಕೀಲರು, ಅನ್ವರ ವಹೀದ ಹಾಗೂ ಇತರರು ಉಪಸ್ಥಿತರಿದ್ದರು.

Comments

Popular posts from this blog