ನ.21 ಮತ್ತು 22 ಜೆಡಿಎಸ್ ಪಕ್ಷದ ಬೆಳ್ಳಿಹಬ್ಬ ಕಾರ್ಯಕ್ರಮ - ವಿರುಪಾಕ್ಷಿ. ಜಯ ಧ್ವಜ ನ್ಯೂಸ್, ರಾಯಚೂರು, ನ.19- ಜಾತ್ಯಾತೀತ ಜನತಾದಳ ಪಕ್ಷ 25 ವರ್ಷ ತುಂಬಿದ ಪ್ರಯುಕ್ತ ನ.21 ಮತ್ತು 22 ರಂದು ಬೆಳ್ಳಿ ಹಬ್ಬ ಆಚರಿಸಲಾಗುತ್ತಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಹೆಚ್.ಡಿ.ದೇವೆಗೌಡರು ಪ್ರಧಾನಮಂತ್ರಿಗಳಾಗಿ, ಮುಖ್ಯಮಂತ್ರಿಗಳಾಗಿ ಈ ದೇಶಕ್ಕೆ, ನಾಡಿಗೆ ಅನೇಕ ಕೊಡುಗೆ ನೀಡಿದ್ದಾರೆ ಅದೆ ರೀತಿ ಮಾಜಿ ಸಿಎಂ ಹಾಗೂ ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಸಹ ಅನೇಕ ಜನಪರ ಕಾರ್ಯ ಕೈಗೊಂಡಿದ್ದಾರೆ.
ಜೆಡಿಎಸ್ ಪಕ್ಷವನ್ನು ಬಲಿಷ್ಟಗೊಳಿಸುವ ನಿಟ್ಟಿನಲ್ಲಿ ಪಕ್ಷ ಬೆಳೆದು ಬಂದ ಹಾದಿ ಕುರಿತು ನ.21ರಂದು ಬೆಂಗಳೂರಿನ ಪಕ್ಷದ ಕೇಂದ್ರ ಕಛೇರಿಯಲ್ಲಿ ಬೆಳಿಗ್ಗೆ ಪಕ್ಷ ನಡೆದು ಬಂದ ಇಪ್ಪತೈದು ವರ್ಷದ ಹಾದಿಯ ಕುರಿತು ಪಕ್ಷಿನೋಟ, ಭಾವಚಿತ್ರ, ಭಿತ್ತಿಚಿತ್ರ ಪ್ರದರ್ಶನ ನಡೆಯಲಿದ್ದು ,ಸಂಜೆ 4.30ಕ್ಕೆ ಪಕ್ಷದ ವರಿಷ್ಠರಾದ ದೇವೆಗೌಡರು ಧ್ವಜಾರೋಹಣ ಮಾಡಲಿದ್ದಾರೆಂದ ಅವರು ನ.22ರಂದು ಎಲ್ಲಾ ಜಿಲ್ಲಾ, ತಾಲೂಕಾಗಳ ಪದಾಧಿಕಾರಿಗಳ ಸಭೆ ನಡೆಸಲಿದ್ದು ಜಿಲ್ಲಾ ಮಟ್ಟದಲ್ಲಿ ಪಕ್ಷದ ಬೆಳ್ಳಿ ಹಬ್ಬ ಆಚರಣೆಯ ದಿನಾಂಕ ನಿಗದಿ ಸಹ ಮಾಡಲಿದ್ದು ಮುಂಬರುವ ಜಿ.ಪಂ, ತಾ.ಪಂ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಪಕ್ಷವನ್ನು ಸದೃಡಗೊಳಿಸುವ ನಿಟ್ಟಿನಲ್ಲಿ ಕಾರ್ಯಯೋಜನೆ ಹಾಕಿಕೊಳ್ಳಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಮಹಾಂತೇಶ ಪಾಟೀಲ ಅತ್ತನೂರು, ಶಿವಶಂಕರ್ ವಕೀಲ,ಗಾಣಧಾಳ ಲಕ್ಷ್ಮೀಪತಿ,ರಾಮಕೃಷ್ಣ, ಸಣ್ಣ ನರಸಿಂಹ ನಾಯಕ,ನರಸಪ್ಪ, ಅಮರೇಶ, ಇನ್ನಿತರರು ಇದ್ದರು.


Comments
Post a Comment