ಮದುವೆ ಸಮಾರಂಭಗಳಿಗೆ ಮಂಗಳಮುಖಿಯರ ಉಪಟಳ. ಜಯ ಧ್ವಜ ನ್ಯೂಸ್, ರಾಯಚೂರು, ನ.30- ಮದುವೆ ಸಮಾರಂಭಗಳಲ್ಲಿ ಮಂಗಳಮುಖಿಯರ ಉಪಟಳಕ್ಕೆ ಮದುವೆ ಮನೆಯವರು ರೋಸಿ ಹೋಗಿದ್ದಾರೆ. ಮದುವೆ ಸಮಾರಂಭದ ಅಕ್ಷತಾರೋಪಣ ಅಥವಾ ಆರತಕ್ಷತೆ ವೇಳೆ ತಂಡೋಪತಂಡವಾಗಿ ವೇದಿಕೆಗೆ ನುಗ್ಗುವ ಇವರು ಕೆಲ ಹೊತ್ತು ಆತಂಕ ಸೃಷ್ಟಿಸುತ್ತಾರೆ. ನವ ವಧು ವರರಿಗೆ ಆಶೀರ್ವದಿಸುವ ನೆಪದಲ್ಲಿ ಇಂತಿಷ್ಟೆ ಹಣ ನೀಡಬೇಕೆಂದು ಒತ್ತಾಯ ಮಾಡಿ ಸ್ಥಳದಲ್ಲಿ ಆತಂಕ ಮೂಡಿಸುತ್ತಾರೆ ಇದನ್ನು ಪ್ರಶ್ನಿಸುವವರು ಮೇಲೆ ಏರು ಧ್ವನಿ ಮಾತನಾಡುತ್ತ ಚಪ್ಪಾಳೆ ತಟ್ಟುತ್ತಾ ಶಿಳ್ಳೆ ಹಾಕುತ್ತಾ ಅಸಭ್ಯವಾಗಿ ವರ್ತಿಸುವ ಘಟನೆಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದು ಈ ಬಗ್ಗೆ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆನ್ನುವುದು ಸಾರ್ವಜನಿಕರು ಒತ್ತಾಯವಾಗಿದೆ.

Comments
Post a Comment