ಪದವಿ ಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ವರ್ಧೆಗಳ ಉದ್ಘಾಟನೆ :
ವಿದ್ಯಾರ್ಥಿಗಳು ಒತ್ತಡದಿಂದ ಹೊರಬರಲು ಪಠ್ಯೇತರ ಚಟುವಟಿಕೆಗಳು ಸಹಕಾರಿ - ಸೋಮಶೇಖರಪ್ಪ ಹೊಕ್ರಾಣಿ
ಜಯ ಧ್ವಜ ನ್ಯೂಸ್ ,ರಾಯಚೂರು,ನ. 23- ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸುವ ಜೊತೆಗೆ ಒತ್ತಡದಿಂದ ಹೊರಬರಲು ಸಾಂಸ್ಕೃತಿ ಸ್ಪರ್ಧೆಗಳು ಸಹಕಾರಿಯಾಗಲಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಪ್ರಭಾರಿ ಉಪನಿರ್ದೇಶಕರಾದ ಸೋಮಶೇಖರಪ್ಪ ಹೊಕ್ರಾಣಿ ತಿಳಿಸಿದರು.
ಅವರಿಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ಪೂರ್ಣಿಮಾ ಪದವಿ ಪೂರ್ವ ಕಾಲೇಜುಗಳ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳು ಸಾಂಸ್ಕೃತಿಕ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿದರು. ಪ್ರತಿ ಮಗು ಯಾವುದೇ ಅವಕಾಶದಿಂದ ವಂಚಿತಗೊಳ್ಳದಂತೆ ಗಮನಹರಿಸಬೇಕಿದೆ.
ಅಭ್ಯಾಸದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ವಿದ್ಯಾರ್ಥಿಗಳು ತೊಡಗಸಿಬೇಕಿದ್ದರಿಂದ ಮೊದಲ ಹಂತದಲ್ಲಿ ಕಾಲೇಜಿನಲ್ಲಿ ನಂತರ ಜಿಲ್ಲಾಮಟ್ಟದಲ್ಲಿ ನಂತರ ವಲಯ ಮಟ್ಟ ಹಾಗೂ ರಾಜ್ಯಮಟ್ಟದಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ.
ಪ್ರತಿಭೆಗಳಿಗೆ ವೇದಿಕೆ ದೊರಕಿದಾಗ ಹೊಸ ಪ್ರತಿಭೆಗಳು ಹೊರಹೊಮ್ಮಲು ಸಾಧ್ಯವಿದೆ ಎಂದರು.
ಮಾನವಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಕುಂಟೆಪ್ಪ ಗೌರಿಪುರ ಮಾತನಾಡಿ ಶಿಕ್ಷಣವೆಂದರೆ ಕೇವಲ ಕಲಿಕೆ ಮಾತ್ರವಲ್ಲ. ಎಲ್ಲ ಹಂತದಲ್ಲಿಯೂ ಶಿಕ್ಷಣ ಒದಗಿ ಸಬೇಕಾಗುತ್ತದೆ. ಆಭ್ಯಾಸದೊಂದಿಗೆ ಇತರೆ ಚಟುವಟಿಕೆಯೂ
ಸಹ ಪರಿಪೂರ್ಣತೆಯನ್ನು ರೂಪಿಸಲು ಸಹಕಾರಿಯಾಗುತ್ತದೆ.
ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಪ್ರತಿಭೆಯನ್ನು ಪ್ರದರ್ಶಿಸಬೇಕು ಎಂದರು.
ಪೂರ್ಣಿಮಾ ಕಾಲೇಜಿನ ಆಡಳಿತಾಧಿಕಾರಿಗಳಾದ ರಾಕೇಶ ರಾಜಲಬಂಡಿ ಮಾತನಾಡಿ, ವಿದ್ಯಾರ್ಥಿಗಳು ಹವ್ಯಾಸದಿಂದ ಪ್ರತಿಭೆ ಗುರುತಿಸಿಕೊಳ್ಳಬೇಕು. ಪ್ರತಿಯೊಬ್ಬರಲ್ಲಿಯೂ ವಿಶೀಷ್ಟ ಕೌಶಲ್ಯ, ಕಲೆ ಇರುತ್ತದೆ. ವೇದಿಕೆಗಳು ಸಿಕ್ಕಾಗ ಮಾತ್ರ ಪ್ರದರ್ಶಿಸಲು ಸಾಧ್ಯವಾಗುತ್ತದೆ. ದಿನದ 24 ಗಂಟೆಯೂ ಕಲಿಕೆಯಲ್ಲಿ ತೊಡಗುವ ವಿದ್ಯಾರ್ಥಿಗಳು ಕ್ರೀಡೆ, ಇತರೆ ಸಾಂಸ್ಕೃತಿಕ ಚಟುವಟಿಕೆಗಳಿಗೂ ಸಮಯ ನೀಡಿ ರೂಢಿಸಿಕೊಂಡು ಭವಿಷ್ಯ ರೂಪಿಸಿಕೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ರಾಯಚೂರು ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಡಾ.ರವೀಂದ್ರ ಬಂಡಿ, ಹಮದದ್೯ ಕಾಲೇಜಿನ ಪ್ರಾಚಾರ್ಯರಾದ ಡಾ.ಕಾಶಪ್ಪ ಬುದ್ದ, ಜವಾಹರನಗರ ಪಿಯು ಕಾಲೇಜಿನ ಪ್ರಾಚಾರ್ಯರಾದ ರವಿಕುಮಾರ, ಪಿಯು ಕಾಲೇಜುಗಳ ಉಪನ್ಯಾಸಕ ಸಂಘದ ಅಧ್ಯಕ್ಷರಾದ ನರಪಸ್ಪ ಭಂಡಾರಿ, ಜಹೀರಾಬಾದ ಪಿಯು ಕಾಲೇಜಿನ ಪ್ರಾಚಾರ್ಯರಾದ ಡಾ.ಪ್ರೇಮಲತಾ, ಹಿರಿಯ ಉಪನ್ಯಾಸಕರುಗಳಾದ ಈರಣ್ಣ ನಾಯಕ್, ಶಿವಪ್ಪ, ವರಮುನಿ ಸೇರಿದಂತೆ ಜಿಲ್ಲೆಯ ವಿವಿಧ ಕಾಲೇಜಿನ ಉಪನ್ಯಾಸಕರುಗಳು , ವಿದ್ಯಾರ್ಥಿಗಳು ಭಾಗವಹಿಸಿದ್ದರು.



Comments
Post a Comment