ಡಿ. 23 ರಂದು ಆಕಾಶವಾಣಿ ಕೇಂದ್ರದಲ್ಲಿ    ಕವಿಗೋಷ್ಠಿ .     
                                                                                                              ಜಯ ಧ್ವಜ ನ್ಯೂಸ್ ,ರಾಯಚೂರು, ಡಿ.22- ಆಕಾಶವಾಣಿ ರಾಯಚೂರು ವತಿಯಿಂದ ಬಾನುಲಿ ಕವಿ ಗೋಷ್ಠಿ ಡಿ.23 ರಂದು  ಸಂಜೆ 4 ಗಂಟೆಗೆ ರಾಯಚೂರು ಆಕಾಶವಾಣಿ ಕೇಂದ್ರದಲ್ಲಿ ನಡೆಯಲಿದೆ. ಈ ಕವಿಗೋಷ್ಠಿ ಕಾರ್ಯಕ್ರಮದ ಉದ್ಘಾಟನೆಯನ್ನು ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ಸಾಹಿತಿಗಳಾದ ಡಾ. ರಮೇಶ್  ಅರೋಲಿ ಅವರು ಉದ್ಘಾಟಿಸಲ್ಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಧಾರವಾಡದ ಸಾಹಿತಿಗಳಾದ ಟಿ ಎಸ್ ಗೊರವರ, ಸಿಂಧನೂರಿನ ಕಥೆಗಾರರಾದ ಅಮರೇಶ್ ಗಿಣೆವಾರ ಅವರು  ಭಾಗವಹಿಸಲಿದ್ದಾರೆ.ಕವಿಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಯಚೂರು ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥರಾದ ವೆಂಕಟೇಶ್ ಬೇವಿನಬೆಂಚಿ ವಹಿಸಲಿದ್ದಾರೆ. ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಕವಿಗಳಾದ ವೇಣು ಜಾಲಿಬೆಂಚಿ, ರವಿ ಹಂಪಿ,ಮಲ್ಲೇಶ್ ಭೈರವ್ ,ಭಾರತೀಯ ಕುಲಕರ್ಣಿ ,ನರಸಿಂಹಲು ಒಡವಾಟಿ ,ವೀರೇಶ್ ಶಿವನಗುತ್ತಿ ,ಅಭಿಷೇಕ್ ಬಳೆ,ಮಹಾದೇವ್ ಪಾಟೀಲ್ ,ರವಿ ರಾಯಚೂರಕರ್, ಚಂದ್ರಶೇಖರ್ ಸುವರ್ಣಗಿರಿ ಮಠ,ಅಮರೇಶ ಪಾಟೀಲ್,  ಹುಸೇನಿ ಮಾನ್ವಿ , ಶರಭಯ್ಯ ಸ್ವಾಮಿ ಹಿರೇಮಠ, ವೆಂಕಟೇಶ್ ಬಾಗಲವಾಡ, ಮಂಜುಳಾ ಅರವಿಂದ ಪಾಟೀಲ್ ಭಾಗವಹಿಸಲಿದ್ದಾರೆ ಎಂದು ಕಾರ್ಯಕ್ರಮ ಮುಖ್ಯಸ್ಥ ವೆಂಕಟೇಶ ಬೇವಿನಬೆಂಚಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments

Popular posts from this blog