ಡಿ.28 ರಂದು ಯರಗೇರಾ ಹಜರತ್ ಬಡೇಸಾಹೇಬ್ 127ನೇ ವರ್ಷದ ಉರುಸ್. ಜಯಧ್ವಜ ನ್ಯೂಸ್, ರಾಯಚೂರು, ಡಿ.23- ತಾಲೂಕಿನ ಯರಗೇರಾದಲ್ಲಿ ಡಿ.28 ಹಜರತ್ ಬಡೆಸಾಹೇಬ್ ಉರುಸ್ ಹಮ್ಮಿಕೊಳ್ಳಲಾಗಿದೆ ಎಂದು ದರ್ಗಾ ಕಮಿಟಿ ಪ್ರಧಾನ ಕಾರ್ಯದರ್ಶಿ ಡಾ.ನಿಜಾಮುದ್ದೀನ್ ಪಟೇಲ್ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸರ್ವ ಧರ್ಮಗಳ ಸಮನ್ವಯದ ಸಂಕೇತವಾದ ಉರುಸ್ ಅಂಗವಾಗಿ ಡಿ.27 ರಂದು ಸಂದಲ್ ಷರೀಫ್, ಡಿ.28 ರಂದು ಉರುಸ್ ಷರೀಫ್ ಹಾಗೂ 29ರಂದು ಜಿಯಾರತ್ ನಡೆಯಲಿದ್ದು ರಾಜ್ಯ ಮತ್ತು ನೆರೆಯ ರಾಜ್ಯಗಳಿಂದಲೂ ಸಹಸ್ರಾರು ಸಂಖ್ಯೆಯ ಜನರು ಭಾಗವಹಿಸಲಿದ್ದಾರೆ ಗ್ರಾ.ಪಂ, ಪೊಲೀಸ್ ಇಲಾಖೆ ಹಾಗೂ ಜೆಸ್ಕಾಂ ಸಕಲ ಸಿದ್ಧತೆ ಮಾಡಿಕೊಂಡಿದ್ದು ವಿದ್ಯುತ್ ವ್ಯತ್ಯಯವಾಗದಂತೆ ಕ್ರಮ ವಹಿಸಲಿದೆ ಎಂದರು.
ಕಳೆದ ಬಾರಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು ಸುಮಾರು 31 ಜನರು ರಕ್ತದಾನಗೈದಿದ್ದರು ಎಂದು ಹೇಳಿದ ಅವರು ಯರಗೇರಿ ಪ್ರೌಡಶಾಲೆಯ ಅತಿಹೆಚ್ಚು ಅಂಕ ಪಡೆಯುವ ವಿದ್ಯಾರ್ಥಿಗೆ ದರ್ಗಾ ಕಮಿಟಿ 11 ಸಾವಿರ ರೂ. ಬಹುಮಾನ ರೂಪದಲ್ಲಿ ಪ್ರತಿಭಾ ಪುರಸ್ಕಾರ ನೀಡಲಿದೆ ಎಂದರು. ಉರುಸ್ ಕಾರ್ಯಕ್ರಮದಲ್ಲಿ ಸ್ವಚ್ಚತೆ ಹಾಗೂ ಸುವ್ಯವಸ್ಥೆಗೆ ಆದ್ಯತೆ ನೀಡಲಾಗುವುದು ಎಂದರು. ಈ ಸಂದರ್ಭದಲ್ಲಿ ಮೆಹೆಬೂಬು ಪಟೇಲ್, ಭಂಡಾರಿ ಫಕ್ರುದ್ದೀನ್ ಪಟೇಲ್, ಹಾಜಿ ಮಲಂಗ್, ಮೋಹಮ್ಮದ ರಫಿ ಇದ್ದರು.


Comments
Post a Comment