ಡಿ.28 ರಂದು ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮ : ರಘುನಾಥ ರೆಡ್ಡಿ ಮನ್ಸಲಾಪೂರುರವರಿಗೆ ಜೀವಮಾನ ಸಾಧನೆ ವಿಶೇಷ ಪ್ರಶಸ್ತಿ - ವಿಜಯ್. ಜಯ ಧ್ವಜ ನ್ಯೂಸ್ , ರಾಯಚೂರು , ಡಿ.24- ರಾಯಚೂರು ರಿಪೋರ್ಟರ್ಸ್ ಗಿಲ್ಡ್ , ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ರಾಯಚೂರು ಕರ್ನಾಟಕ ಸರಕಾರ ಹಾಗೂ ಜಿಲ್ಲಾ ಮತ್ತು ಪ್ರಾಾದೇಶಿಕ ದಿನಪತ್ರಿಕೆಗಳ ಸಂಪಾದಕರ ಸಂಘ ರಾಯಚೂರು ಜಿಲ್ಲಾಾ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ಡಿ.28 ರಂದು ಬೆಳಿಗ್ಗೆ 11ಕ್ಕೆ ಪತ್ರಿಕಾ ಭವನದ ಸಭಾಂಗಣದಲ್ಲಿ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಿಕೊಳ್ಳಲಾಗಿದೆ ಎಂದು ರಾಯಚೂರು ರಿಪೋರ್ಟ್ರ್ಸ್ ಗಿಲ್ಡ್ ಅಧ್ಯಕ್ಷ ವಿಜಯ್ ಜಾಗಟಗಲ್ ಹೇಳಿದರು.
ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅಂದು ಬೆಳಿಗ್ಗೆ 11 ಗೆ ನಡೆಯುವ ಕಾರ್ಯಕ್ರಮವನ್ನು ಶ್ರೀ ಎನ್.ಎಸ್ ಬೋಸರಾಜು, ಮಾನ್ಯ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಹಾಗೂ ಕೊಡಗು ಜಿಲ್ಲಾಾ ಉಸ್ತುವಾರಿ ಸಚಿವರು ಕರ್ನಾಟಕ ಸರಕಾರ ಇವರು ಉದ್ಘಾಾಟಿಸಲಿದ್ದಾಾರೆ. ಪತ್ರಕರ್ತರ ತುರ್ತುನಿಧಿಗೆ ವಿಧಾನ ಪರಿಷತ್ ಶಾಸಕರಾದ ಶ್ರೀ .ಎ. ವಸಂತಕುಮಾರ ಚಾಲನೆ ನೀಡುವರು. ಸಂಸದರಾದ ಶ್ರೀ ಜಿ.ಕುಮಾರ ನಾಯಕ ಅವರು ರಾಯಚೂರು ರಿಪೋರ್ಟರ್ಸ್ ಗಿಲ್ಡ್ ನ ವೆಬ್‌ಸೈಟ್‌ಲೋಕಾರ್ಪಣೆ ಮಾಡುವರು ಎಂದರು.
ರಾಯಚೂರು ರಿಪೋರ್ಟರ್‌ಸ್ ಗಿಲ್ಡ್‌ನ ವಿವಿಧ ವಾರ್ಷಿಕ ದತ್ತಿ ಪ್ರಶಸ್ತಿಗಳನ್ನು ಸಾಧಕ ನಗರದ ಪತ್ರಕರ್ತರಿಗೆ ಶ್ರೀ ಬಸನಗೌಡ ದದ್ದಲ್ ಮಾನ್ಯ ಅಧ್ಯಕ್ಷರು ಕರ್ನಾಟಕ ಪರಿಶಿಷ್ಟಪಂಗಡ ಅಭಿವೃದ್ಧಿ ನಿಗಮ ಕರ್ನಾಟಕ ಸರಕಾರ ಹಾಗೂ ಗ್ರಾಾಮಾಂತರ ಶಾಸಕರು ರಾಯಚೂರು. ಡಾ. ಎಸ್.ಶಿವರಾಜ ಪಾಟೀಲ್ ಮಾನ್ಯ ಶಾಸಕರು ರಾಯಚೂರು ಅವರು ಮಾಡಲಿದ್ದಾಾರೆ. ಪತ್ರಿಕಾ ವಿತರಕರಿಗೆ ಜರ್ಕಿನ್‌ಗಳನ್ನು ರಾಯಚೂರು ಮಹಾನಗರ ಪಾಲಿಕೆ ಮಾಜಿ ಮೇಯರ್ ನರಸಮ್ಮ ನರಸಿಂಹಲು ಮಾಡಗಿರಿ ಅವರು ವಿತರಿಸಲಿದ್ದಾಾರೆ. ಮುಖ್ಯ ಅತಿಥಿಗಳಾಗಿ ಜಗನ್ನಾಥ ಆರ್ ದೇಸಾಯಿ , ಸ್ಥಾನಿಕ ಸಂಪಾದಕರು, ವಿಜಯವಾಣಿ ಗಂಗಾವತಿ ಆವೃತ್ತಿ. ನಿತೀಶ್.ಕೆ ಜಿಲ್ಲಾಾಧಿಕಾರಿಗಳು, ಈಶ್ವರ್‌ಕುಮಾರ ಕಾಂದೂ ಸಿಇಓ, ಜಿ.ಪಂ ರಾಯಚೂರು, ಜುಬಿನ್ ಮೊಹಪಾತ್ರ ಮಾನ್ಯ ಆಯುಕ್ತರು, ಮಹಾನಗರ ಪಾಲಿಕೆ ರಾಯಚೂರು. ಪುಟ್ಟಮಾದಯ್ಯ .ಎಂ, ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿಗಳು ,ರಾಯಚೂರು , ಡಾ.ಜಿ ಸುರೇಶ , ಹಿರಿಯ ಸಹಾಯಕ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಸರಕಾರ ಚನ್ನಬಸವ ಬಾಗಲವಾಡ , ಅಧ್ಯಕ್ಷರು, ಜಿಲ್ಲಾಾ ಮತ್ತು ಪ್ರಾಾದೇಶಿಕ ದಿನಪತ್ರಿಕೆಗಳ ಸಂಪಾದಕರ ಸಂಘ ಇವರು ಭಾಗವಹಿಸಲಿದ್ದಾಾರೆ.
ಇದೇ ವೇಳೆ ಮಾಹಿತಿ ಆಯೋಗದ ಆಯುಕ್ತರಾಗಿರುವ ಬಿ.ವೆಂಕಟಸಿಂಗ್ ಅವರನ್ನು ವಿಶೇಷವಾಗಿ ಗಿಲ್ಡ್‌ನಿಂದ ಸನ್ಮಾಾನಿಸಲಾಗುತ್ತದೆ.
ಅಲ್ಲದೆ, ಜೀವಮಾನ ಸಾಧನೆ ವಿಶೇಷ ಪ್ರಶಸ್ತಿಗೆ ಶ್ರೀ ರಘುನಾಥರೆಡ್ಡಿ , ಹಿರಿಯ ಉಪಸಂಪಾದಕರು , ಪ್ರಜಾಪ್ರಸಿದ್ದ ಪತ್ರಿಕೆ, ರಾಯಚೂರು
ವಿವಿಧ ವಾರ್ಷಿಕ ದತ್ತಿ ಪ್ರಶಸ್ತಿಗಳಿಗೆ ಚಂದ್ರಕಾಂತ್ ಮಸಾನಿ. ಹಿರಿಯ ಪತ್ರಕರ್ತರು, ಪ್ರಜಾವಾಣಿ, ದಿನಪತ್ರಿಿಕೆ ರಾಯಚೂರು, ಅಬ್ದುಲ್ ಖಾದರ್. ಛಾಯಾಗ್ರಾಾಹಕರು , ಪವರ್‌ಟಿವಿ, ರಾಯಚೂರು, ಶ್ರೀನಿವಾಸ ಕೆ. ವರದಿಗಾರರು, ಅಮೋಘ ಕೇಬಲ್ ಚಾನೆಲ್, ರಾಯಚೂರು, ಬಿ. ರಾಜು. ವರದಿಗಾರರು , ಪ್ರಜಾಪ್ರಸಿದ್ದ ಪತ್ರಿಿಕೆ, ರಾಯಚೂರು ಇವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಪತ್ರಿಿಕಾ ದಿನಾಚರಣೆ ಅಂಗವಾಗಿ ಪತ್ರಕರ್ತರ ಹಾಗೂ ವಿವಿಧ ಇಲಾಖೆ ಅಧಿಕಾರಿಗಳ ಕ್ರಿಕೆಟ್ ಪಂದ್ಯಾಾವಳಿಯನ್ನು ಡಿ.25ರಂದು ಬೆಳಿಗ್ಗೆೆ ನಗರದ ಮಹಾತ್ಮಗಾಂಧಿ ಜಿಲ್ಲಾಾ ಕ್ರೀಡಾಂಗಣದಲ್ಲಿ ಹಮ್ಮಿಿಕೊಳ್ಳಲಾಗಿದೆ ಎಂದು ತಿಳಿಸಿದ ಅವರು ಕಾರ್ಯಕ್ರಮಕ್ಕೆ ಎಲ್ಲ ಪತ್ರಕರ್ತರು ಆಗಮಿಸಿ ಭಾಗವಹಿಸಿ ಯಶಸ್ವಿಿಗೊಳಿಸಲು ವಿನಂತಿಸಿಕೊಂಡರು . ಈ ಸಂದರ್ಭದಲ್ಲಿ ಚನ್ನಬಸವ ಬಾಗಲವಾಡ, ಅಧ್ಯಕ್ಷರು , ಜಿಲ್ಲಾಾ ಮತ್ತು ಪ್ರಾದೇಶಿಕ ದಿನಪತ್ರಿಕೆಗಳ ಸಂಪಾದಕರ ಸಂಘ ರಾಯಚೂರು, ಎಂ.ಜಯರಾಮ್, ಉಪಾಧ್ಯಕ್ಷರು, ಆರ್‌ಆರ್‌ಜಿ ರಾಯಚೂರು, ವೆಂಕಟೇಶ ಹೂಗಾರ, ಪ್ರಧಾನ ಕಾರ್ಯದರ್ಶಿ ಆರ್‌ಆರ್‌ಜಿ ರಾಯಚೂರು.ಶ್ರೀಕಾಂತ್ ಸಾವೂರು, ಜಂಟಿ ಕಾರ್ಯದರ್ಶಿ ಆರ್‌ಆರ್‌ಜಿ ರಾಯಚೂರು, ಖಾನ್‌ಸಾಬ್ ಮೊಮಿನ್, ಪ್ರಧಾನ ಕಾರ್ಯದರ್ಶಿ ಜಿಲ್ಲಾಾ ಮತ್ತು ಪ್ರಾಾದೇಶಿಕ ದಿನಪತ್ರಿಿಕೆಗಳ ಸಂಪಾದಕರ ಸಂಘ ರಾಯಚೂರು,ಕೆ.ಸಣ್ಣ ಈರಣ್ಣ, ಖಜಾಂಚಿ, ರಾಯಚೂರು ರಿಪೋರ್ಟರ್ಸ್ ಗಿಲ್ಡ್ ರಾಯಚೂರು ಉಪಸ್ಥಿತರಿದ್ದರು.








Comments
Post a Comment