ಡಾ. ಜಯಲಕ್ಷ್ಮಿ ಮಂಗಳಮೂರ್ತಿಯವರಿಗೆ ಟಿಟಿಡಿ ಯಿಂದ ಜ.17 ರಂದು  ಪುರಂದರೋತ್ಸವ ಪ್ರಶಸ್ತಿ ಪ್ರದಾನ 

ಜಯ ಧ್ವಜ ನ್ಯೂಸ್, ರಾಯಚೂರು,ಡಿ.25-  ತಿರುಮಲ ತಿರುಪತಿ ದೇವಸ್ಥಾನ ದಾಸ ಸಾಹಿತ್ಯ ಪ್ರಾಜೆಕ್ಟ್ ವತಿಯಿಂದ 2025-2026ನೇ ಸಾಲಿನ ಪುರಂದರೋತ್ಸವ  ಪ್ರಶಸ್ತಿಯನ್ನು ಈ ಬಾರಿ ನಾಡಿನ ದಾಸಸಾಹಿತ್ಯ ವಿದ್ವಾಂಸರಾದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರತರಾದ ಡಾ. ಜಯಲಕ್ಷ್ಮಿ ಮಂಗಳಮೂರ್ತಿಯವರಿಗೆ ನೀಡಿ ಗೌರವಿಸಲಾಗುತ್ತಿದೆ ಎಂದು ಟಿ.ಟಿ.ಡಿ ದಾಸಸಾಹಿತ್ಯ ಪ್ರಾಜೆಕ್ಟ್ ನ ವಿಶೇಷ ಅಧಿಕಾರಿಗಳಾದ ವೇದಮೂರ್ತಿ ಪಂಡಿತ್ ಆನಂದ ತೀರ್ಥಾಚಾರ ಪಗಡಾಲ ಅವರು ತಿಳಿಸಿದ್ದಾರೆ.

    ಇದೇ ಜ.17ರಂದು ತಿರುಮಲದಲ್ಲಿ ನಡೆಯುತ್ತಿರುವ ಪುರಂದರ ದಾಸರ ಆರಾಧನೆಯ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಗುತ್ತಿದ್ದು  ಡಾ. ಜಯಲಕ್ಷ್ಮಿ ಮಂಗಳಮೂರ್ತಿಯವರು ದಾಸ ಸಾಹಿತ್ಯದಲ್ಲಿ ಅದ್ವಿತೀಯ ಸಾಧನೆಯನ್ನು ಮಾಡಿದ್ದಾರೆ. ಶ್ರೀ ನರಸಿಂಹ ವಿಠಲ  ಅಂಕಿತದಿಂದ 200 ಕ್ಕೂ ಹೆಚ್ಚು ಸಂಕೀರ್ತನೆಗಳನು  ರಚಿಸಿದ್ದಾರೆ. ಹತ್ತಕ್ಕೂ ಹೆಚ್ಚು ಮೌಲ್ಯಯುಕ್ತ ಗ್ರಂಥಗಳನ್ನು ರಚಿಸಿದ್ದಾರೆ. ಉಗಾ- ಬೋಗ, ಸುಳಾದಿಗಳನ್ನು ರಚಿಸಿ ದಾಸ ಸಾಹಿತ್ಯಕ್ಕೆ ಮಹತ್ತರ ಕೊಡುಗೆಯನ್ನು ನೀಡಿದ್ದಾರೆ. ಇವರು ಅತ್ಯುತ್ತಮ ವಾಗ್ಮಿ ಗಳಾಗಿದ್ದು ಹಲವಾರು ಸಂಘ ಸಂಸ್ಥೆಗಳಿಗೆ ಪದಾಧಿಕಾರಿಗಳಾಗಿದ್ದಾರೆ. 

  ರಾಯಚೂರಿನ ಶ್ರುತಿ ಸಾಹಿತ್ಯ ಮೇಳದ ಗೌರವಾಧ್ಯಕ್ಷ ರಾಗಿರುವ ಇವರು ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ವಿಶೇಷವಾಗಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ವಿಜಯೇಂದ್ರ ಪ್ರಶಸ್ತಿ, ದಾಸ ಸಾಹಿತ್ಯ ರತ್ನ ಪ್ರಶಸ್ತಿ, ರಂಗ ವಿಠ್ಠಲ ಪ್ರಶಸ್ತಿ, ಸಿರಿ ಗೋವಿಂದ ವಿಠ್ಠಲ ಪ್ರಶಸ್ತಿ, ವಿಪ್ರಶ್ರೀ ಪ್ರಶಸ್ತಿ, ಪ್ರಸನ್ನ ವೆಂಕಟ ದಾಸರ ಪ್ರಶಸ್ತಿ,  ಇವರ ಸಾಧನೆಗೆ  ಸಂದ ಗೌರವಗಳಾಗಿವೆ. 

 ಟಿಟಿಡಿ ದಾಸ ಸಾಹಿತ್ಯ ಪ್ರಾಜೆಕ್ಟ್ ನಿಂದ ಈ ಬಾರಿಯ ಪುರಂದರೋತ್ಸವ ಪ್ರಶಸ್ತಿಗೆ  ಭಾಜನರಾಗಿರುವ ಡಾ.ಜಯಲಕ್ಷ್ಮಿ ಮಂಗಳಮೂರ್ತಿ ಅವರಿಗೆ ಶೃತಿ ಸಾಹಿತ್ಯ ಮೇಳದ ಅಧ್ಯಕ್ಷರಾದ ಮುರಳೀಧರ್ ಕುಲಕರ್ಣಿ ಹಾಗೂ ಪದಾಧಿಕಾರಿಗಳು ಸೇರಿದಂತೆ ಅನೇಕರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Comments

Popular posts from this blog