ದ್ವೇಷ ಭಾಷಣ ವಿಧೇಯಕ ವಿರೋಧಿಸಿ ಬಿಜೆಪಿ ಪ್ರತಿಭಟನೆ                                       ಜಯಧ್ವಜ ನ್ಯೂಸ್, ರಾಯಚೂರು,ಡಿ.26- ರಾಜ್ಯ ಸರ್ಕಾರ ಅನುಷ್ಠಾನಕ್ಕೆ ತರಲು ಮುಂದಾಗಿರುವ ದ್ವೇಷ ಭಾಷಣ ವಿಧೇಯಕವನ್ನು ವಿರೋಧಿಸಿ ಬಿಜೆಪಿ ರಾಯಚೂರು ನಗರ ಘಟಕದಿಂದ ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಲಾಯಿತು. ರಾಜ್ಯ ಸರ್ಕಾರ ಸಂವಿಧಾನದಲ್ಲಿ ಅಡಕವಾಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಮಾಡಲು ಹೊರಟಿದೆ ಸರ್ಕಾರದ ಲೋಪ ದೋಷಗಳನ್ನು ಜನರಿಗೆ ತಿಳಿಸುವುದನ್ನು ಈ ವಿಧೇಯಕದ ಮೂಲಕ ಹತ್ತಿಕ್ಕಲು ಹೊರಟಿದೆ ವಿಧೇಯಕದಲ್ಲಿ ಯಾವುದೇ ಸ್ಪಷ್ಟತೆಯಿಲ್ಲ ವೆಂದು ಆರೋಪಿಸಿರುವ ಬಿಜೆಪಿ ಕೂಡಲೆ ವಿಧೇಯಕ ಹಿಂಪಡೆಯಲು ಆಗ್ರಹಿಸಿದರು.

ಈ ಸಂದರ್ಭದಲ್ಲಿ  ಬಿಜೆಪಿ ಜಿಲ್ಲಾ ಅಧ್ಯಕ್ಷ ವೀರನಗೌಡ ಪಾಟೀಲ್ ಲೆಕ್ಕಿಹಾಳ್, ನಗರ ಶಾಸಕ ಡಾ. ಶಿವರಾಜ್ ಪಾಟೀಲ್ , ಮಾಜಿ ಎಂಎಲ್ಸಿ ಎನ್. ಶಂಕ್ರಪ್ಪ , ಉಟ್ಕೂರು ರಾಘವೇಂದ್ರ,ಸಂತೋಷ್ ರಾಜಗುರು, ಕಡಗೋಳ ಅಂಜಿನೇಯ್ಯ, ರಾಜಕುಮಾರ,
ರವಿ ಜಲ್ದಾರ್ ಕಡಗೋಳ್ ರಾಮಚಂದ್ರ, ವಿಜಯಕುಮಾರ್, ಬಂಡೇಶ್ ,  ಶಶಿರಾಜ್, ಬಂಗಿ ನರಸರೆಡ್ಡಿ, ವಿ ನಾಗರಾಜ್  ಭೀಮಣ್ಣ ಮಂಚಾಲ್ ವಿನಾಯಕ್ ಶಿವಕುಮಾರ್  ಪಾಟೀಲ್ ವಿ. ಪಿ. ರೆಡ್ಡಿ ನಾಗರಾಜ್ ಬಾಲ್ಕಿ ವಿರೇಶ್ ತಲ್ವಾರ್ ಸಿದ್ದನ್ ಗೌಡ ಗುಡಿಸಿ ನರಸರೆಡ್ಡಿ ಚಂದ್ರಶೇಖರ ಶೇಖರ್ ನಾಗವೇಣಿ ಅಶ್ವಿನಿ ಸಂಗೀತಾ ಶಿವಲಕ್ಷ್ಮೀ ರಾಧಾ ಪುಷ್ಪ ಶರಣಮ್ಮ ಸೇರಿದಂತೆ ಅನೇಕರಿದ್ದರು.

Comments

Popular posts from this blog