ರಾಜಕಾರಣ ನನಗೆ ಇಷ್ಟವಿಲ್ಲ; ಸಿನಿಮಾದಲ್ಲಿಯೇ ಮುಂದುವರೆಯುತ್ತೇನೆ – ನಟ ಝೈದ್ ಖಾನ್

ಜಯ‌ ಧ್ವಜ ನ್ಯೂಸ್ , ರಾಯಚೂರು, ಡಿ.25- ರಾಜಕಾರಣ ಕೇವಲ ಭಾಷಣಕ್ಕೆ, ಆಶ್ವಾಸನೆಗೆ ಸೀಮಿತ, ನಾನು ರಾಜಕಾರಣಕ್ಕೆ ಬರಲ್ಲ, ಸಿನಿಮಾದಲ್ಲಿಯೇ ಮುಂದುವರೆಯುತ್ತೇನೆ ಎಂದು ಚಿತ್ರನಟ ಝೈದ್ ಖಾನ್ ತಿಳಿಸಿದರು.

ಅವರು ಕಲ್ಟ್ ಚಿತ್ರದ ಪ್ರಮೋಷನ್ ವಿಚಾರವಾಗಿ ರಾಯಚೂರಿನ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾನು ಚಿತ್ರರಂಗಕ್ಕೆ ಕಾಲಿಟ್ಟಿದೇನೆ ರಾಜಕೀಯ ಕ್ಷೇತ್ರ ಇಷ್ಟವಿಲ್ಲಣ ನಮ್ಮ ತಂದೆ ಮಾತ್ರ ರಾಜಕೀಯದಲ್ಲಿ ಇದ್ದಾರೆ, ನಮ್ಮ ತಂದೆ ಕುಟುಂಬಕ್ಕೆ ಸಮಯ ಕೊಡದೇ ಕೆಲಸ ಮಾಡುವುದನ್ನು ನೋಡಿ ನಾನು ರಾಜಕಾರಣದಿಂದ‌ ದೂರ ಇರಲು ನಿಶ್ಚಯಿಸಿದ್ದೇನೆ ಎಂದರು.

ಪರಭಾಷೆಗೆ ಹೋಲಿಸಿದರೆ ಕನ್ನಡ ಚಿತ್ರರಂಗ ಚಿಕ್ಕದು, ಇಲ್ಲಿ ಸಿನಿಮಾ ಟಾಕೀಸ್‌ ಕಡಿಮೆ ಇವೆ ಪೈಪೋಟಿ ಮಾಡಲು ಕಷ್ಟ, ಅನೇಕರು ಕೇವಲ‌ಹಣ ಮಾಡಬೇಕು, ಲಾಭ‌ಗಳಿಸುವತ್ತ ಗಮನಹರಿಸುತ್ತಿದ್ದಾರೆ ವಿನಃ ಪ್ರಯೋಗಾತ್ಮಕ ಚಿತ್ರ, ಸವಾಲುಗಳನ್ನು ಎದುರಿಸಲು ಸಿದ್ಧರಿಲ್ಲ ಲಾಭ ನಷ್ಟದ ವಿಚಾರದಲ್ಲಿ ನಿರ್ಮಾಪಕರಿಗೆ ಮೋಸ, ನಷ್ಟವಾಗಬಾರದು ಎಂದು ಸಿನಿಮಾ ತಯಾರಾಗುತ್ತಿವೆ‌ ಒಳ್ಳೆಯ ಚಿತ್ರಗಳಿಗೆ ಪ್ರೇಕ್ಷಕರು ಕೈಹಿಡಿಯಬೇಕು‌‌ಕನ್ನಡ ಚಿತ್ರಗಳನ್ನು ವೀಕ್ಷಿಸಿ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.

ಕಲ್ಟ್ ಫಿಲಂ ಮೂಲಕ ಯುವಕರಿಗೆ ಸಂದೇಶ  ಇಂದಿನ ಯುವ ಪೀಳಿಗೆ ಎದುರಿಸುತ್ತಿರುವ ಸವಾಲುಗಳು, ಭಾವನಾತ್ಮಕ ಸಂಬಂಧಗಳು ಹಾಗೂ ದುಶ್ಚಟಗಳಿಂದ ದೂರ ಇರಬೇಕಾದ ಅಗತ್ಯವನ್ನು ಆಧಾರವಾಗಿಸಿಕೊಂಡು ನಿರ್ಮಾಣವಾಗುತ್ತಿರುವ ಕಲ್ಟ್ ಕನ್ನಡ ಚಿತ್ರದ ಕುರಿತು  ಜೈದ್ ಖಾನ್ ತಿಳಿಸಿದರು.

 ಈ ಚಿತ್ರವು ಸಂಪೂರ್ಣವಾಗಿ ಯುವಕರನ್ನು ಕೇಂದ್ರವಾಗಿಟ್ಟುಕೊಂಡ ರೊಮ್ಯಾಂಟಿಕ್ ಕಥೆಯನ್ನು ಹೊಂದಿದ್ದು, ಭಾವನೆಗಳು ಹೇಗೆ ಜೀವನದ ದಿಕ್ಕನ್ನು ಬದಲಿಸುತ್ತವೆ ಎಂಬುದನ್ನು ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ ಎಂದರು.

ಒಬ್ಬ ವ್ಯಕ್ತಿಯೇ ಮೂರು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ವಿಶೇಷತೆ ಈ ಚಿತ್ರಕ್ಕಿದೆ. ಇಂದಿನ ಕಾಲಘಟ್ಟದ ಯುವಕರು ಗಾಂಜಾ, ಸಿಗರೇಟ್, ಮದ್ಯ ಸೇರಿದಂತೆ ಹಲವು ಕೆಟ್ಟ ಚಟಗಳಿಗೆ ಬಲಿಯಾಗುತ್ತಿರುವ ವಾಸ್ತವಿಕತೆಯನ್ನು ಈ ಚಿತ್ರ ಪ್ರಸ್ತುತಪಡಿಸುತ್ತದೆ. ಇಂತಹ ಚಟಗಳಿಂದ ಮಕ್ಕಳನ್ನು ರಕ್ಷಿಸುವಲ್ಲಿ ತಂದೆ-ತಾಯಿಗಳ ಜಾಗೃತಿ ಹಾಗೂ ಪಾತ್ರ ಎಷ್ಟು ಮಹತ್ವದ್ದೆಂಬುದನ್ನೂ ಚಿತ್ರ ಸ್ಪಷ್ಟವಾಗಿ ತೋರಿಸುತ್ತದೆ ಎಂದು ಹೇಳಿದರು.

ಈ ಚಿತ್ರವು ಯುವಕರು ಮತ್ತು ಯುವತಿಯರಿಗೆ ಮನರಂಜನೆಯ ಜೊತೆಗೆ ಸಂದೇಶ ನೀಡುವ ಕನ್ನಡ ಚಿತ್ರವಾಗಲಿದೆ. ‘ಮದವ’ ಎಂಬ ಯುವಕನ ಪಾತ್ರದಲ್ಲಿ ತಾನು ಅಭಿನಯಿಸುತ್ತಿದ್ದು, ಈ ಚಿತ್ರದ ಮೂಲಕ ಸಾಮಾಜಿಕ ಜವಾಬ್ದಾರಿಯ ಸಂದೇಶವನ್ನು ನೀಡಲು ಪ್ರಯತ್ನಿಸಲಾಗಿದೆ ಎಂದು ಜೈದ್ ಖಾನ್ ತಿಳಿಸಿದರು.

ಚಿತ್ರದ ನಿರ್ದೇಶಕರಾದ ಲೋಕಿಸ್ ಅವರಿಗೆ ಇದು ಮೊದಲ ಸಿನಿಮಾ. ಹೊಸಬರ ಪ್ರಯತ್ನಗಳಿಗೆ ಪ್ರೋತ್ಸಾಹ ನೀಡಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು. ಚಿತ್ರದ ಬಜೆಟ್ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲವೆಂದೂ, ಆದರೆ ವಿಷಯಾಧಾರಿತ ಚಿತ್ರವಾಗಿರುವ ಕಾರಣ ಗುಣಮಟ್ಟಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗ ಸಂಕಷ್ಟದ ಹಂತದಲ್ಲಿದೆ. ‘ನಾವು ಫಿಲಂ ಸ್ಟಾರ್‌ಗಳು’ ಎಂಬ ಅಹಂಕಾರಕ್ಕಿಂತ ಪ್ರೇಕ್ಷಕರ ನಂಬಿಕೆಯನ್ನು ಗಳಿಸುವ ಮನಸ್ಥಿತಿ ಅಗತ್ಯವಾಗಿದೆ. ಆ ನಂಬಿಕೆಯನ್ನು ಮರಳಿ ತರುವ ಪ್ರಯತ್ನವೇ ಈ ಕಲ್ಟ್ ಚಿತ್ರ ಎಂದರು.

Comments

Popular posts from this blog