ರಾಯಚೂರಿನಲ್ಲಿ ಜಿಲ್ಲಾ ಉತ್ಸವ ಆಯೋಜನೆ: ಶೃತಿ ಸಾಹಿತ್ಯ ಮೇಳ ಸ್ವಾಗತ
ಜಯ ಧ್ವಜ ನ್ಯೂಸ್ , ರಾಯಚೂರು ,ಡಿ.23- ಜನವರಿ 29,30, 31ಕ್ಕೆ ರಾಯಚೂರು ಜಿಲ್ಲೆಯಲ್ಲಿ ಜಿಲ್ಲಾ ಆಡಳಿತದಿಂದ ರಾಯಚೂರು ಜಿಲ್ಲಾ ಉತ್ಸವ- 2026 ಹಮ್ಮಿಕೊಂಡಿರುವುದು ಹರ್ಷದಾಯಕ ಮತ್ತು ಸ್ವಾಗತಾರ್ಹ ವಾಗಿದೆ ಎಂದು ಶ್ರುತಿ ಸಾಹಿತ್ಯ ಮೇಳದ ಅಧ್ಯಕ್ಷ ಮುರಳಿಧರ ಕುಲಕರ್ಣಿಯವರು ತಿಳಿಸಿದ್ದಾರೆ.
ರಾಯಚೂರು ಉತ್ಸವ ಜರುಗಬೇಕೆಂಬುದು, ಸಾಹಿತ್ಯಾಸಕ್ತರ ಮತ್ತು ಕಲಾವಿದರ ಬಹು ದಿನಗಳ ಕನಸಾಗಿತ್ತು. ಈ ಉತ್ಸವವನ್ನು ಆಯೋಜಿಸುವಂತೆ ಶ್ರುತಿ ಸಾಹಿತ್ಯ ಮೇಳ ಮತ್ತು ಹಲವಾರು ಸಂಘಟನೆಗಳು ಸೇರಿ ರಾಯಚೂರು ಉತ್ಸವ ಆಚರಿಸಬೇಕೆಂದು ಹಲವಾರು ಬಾರಿ ಬೇಡಿಕೆಯನ್ನು ಸಲ್ಲಿಸಲಾಗಿತ್ತು.
ಬಹು ವರ್ಷಗಳ ನಂತರ ಜಿಲ್ಲೆಯಲ್ಲಿ ಮೂರು ದಿನಗಳ ವರೆಗೆ ರಾಯಚೂರು ಉತ್ಸವ ನಿಗದಿಯಾಗಿ ಮಾನ್ಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾಡಳಿತವು ಪ್ರಥಮ ಸಭೆ ನಡೆಸಿರುವುದು ಸಂತೋಷದ ವಿಷಯವಾಗಿದೆ.
ರಾಯಚೂರು ಜಿಲ್ಲೆ ಸಾಹಿತ್ಯ ಸಂಸ್ಕೃತಿ ,ಕಲೆ, ಇತಿಹಾಸ, ಇವುಗಳಿಗೆ ಅತ್ಯಂತ ಶ್ರೀಮಂತವಾಗಿರುವ ಪ್ರದೇಶವಾಗಿದೆ. ರಾಜ್ಯ ಸರ್ಕಾರದಿಂದ ಹಂಪಿ ಉತ್ಸವ, ಕದಂಬ ಉತ್ಸವ, ಮೈಸೂರು ಉತ್ಸವ, ಕರಾವಳಿ ಉತ್ಸವ, ಪಟ್ಟದಕಲ್ಲು ಉತ್ಸವ, ಮುಂತಾದ ಜಿಲ್ಲೆಗಳಲ್ಲಿ ಉತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ರಾಯಚೂರು ಜಿಲ್ಲಾ ಉತ್ಸವ ದಿಂದ ವಂಚಿತವಾಗಿತ್ತು.
ಬಹಳ ದಿನಗಳ ನಂತರ ಕಲಾವಿದರ ಕನಸು ನನಸಾಗಿರುವುದಕ್ಕೆ ಶ್ರುತಿ ಸಾಹಿತ್ಯ ಮೇಳದ ಗೌರವಾಧ್ಯಕ್ಷರಾದ ಶ್ರೀಮತಿ ಡಾ. ಜಯಲಕ್ಷ್ಮಿ ಮಂಗಳಮೂರ್ತಿ, ಅಧ್ಯಕ್ಷ ಮುರಳಿಧರ ಕುಲಕರ್ಣಿ, ಉಪಾಧ್ಯಕ್ಷ ಡಾ. ರಾಯಚೂರು ಶೇಷಗಿರಿ ದಾಸ್ ಕಾರ್ಯದರ್ಶಿ ರಮೇಶ್ ಕುಲಕರ್ಣಿ, ಜೆ.ಎಂ. ವೀರೇಶ್,ವಸುದೇಂದ್ರ ಸಿರವಾರ ಸುರೇಶ್ ಕಲ್ಲೂರ್, ನರಸಿಂಹಮೂರ್ತಿ, ರಮಕಾಂತ್ ಕುಲಕರ್ಣಿ, ರವೀಂದ್ರ ಕುಲಕರ್ಣಿ,
ಇವರುಗಳು ರಾಯಚೂರು ಜಿಲ್ಲಾ ಉತ್ಸವವನ್ನು ಸ್ವಾಗತಿಸಿ ಕರ್ನಾಟಕ ಸರ್ಕಾರಕ್ಕೆ ಮತ್ತು ಜಿಲ್ಲಾಡಳಿತಕ್ಕೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ .

Comments
Post a Comment