ವಾರ್ಡ್ ನಂ.17ರಲ್ಲಿ ಮಿತಿ ಮೀರಿದ ಪುಂಡರ ಹಾವಳಿ ಪೊಲೀಸ್ ಇಲಾಖೆ ನಿಷ್ಕ್ರೀಯ ಆರೋಪ.                                                        ಜಯ ಧ್ವಜ ನ್ಯೂಸ್, ರಾಯಚೂರು,ಡಿ.24- ನಗರದ ವಾರ್ಡ್ ನಂ.17 ರ ಚೌಡಮ್ಮಕಟ್ಟೆ ಬಳಿಯ ಓಣಿಗಳಲ್ಲಿ ಪುಂಡರ ಹಾವಳಿ ಮಿತಿ ಮೀರಿದ್ದು ಹಗಲು ರಾತ್ರಿಯನ್ನದೆ ದಳವಾಯಿ ಮನೆ ಕಟ್ಟೆ ಮೇಲೆ  ಪುಂಡರು ಗುಂಪು ಕುಳಿತುಕೊಂಡು ಪಕ್ಕದ ಓಣಿಯಲ್ಲಿ ಹಾವಳಿ ಹಾಕುತ್ತಿದ್ದು ಬಹುತೇಕ ಅಪ್ರಾಪ್ತ ಬಾಲಕರು ಪುಂಡತನಕ್ಕಿಳಿಯುತ್ತಿದ್ದು ಓಣಿಯಲ್ಲಿ ಪ್ರಶ್ನಿಸುವವರ ಮೇಲೆಯೆ ದಬ್ಬಾಳಿಕೆ ಮಾಡುತ್ತಾ ರಸ್ತೆಯ ಮಧ್ಯದಲ್ಲೆ ಜನ್ಮದಿನ ಪಾರ್ಟಿ ಮಾಡಿ ಕೇಕ್ ಕತ್ತರಿಸಿ ದಾರಿಯಲ್ಲಿ ಹೋಗುವ ಯುವತಿಯರಿಗೆ ,ಮಹಿಳೆಯರಿಗೆ ಚುಡಾಯಿಸುತ್ತ  ,ಕೂಗಾಡುತ್ತಾ ಅಸಭ್ಯ ವರ್ತನೆ ತೋರುತ್ತಿದ್ದಾರೆ.

ಅಲ್ಲದೆ ಮನೆಯೊಂದರ ಕಿಟಕಿ ಗಾಜು ಪುಡಿಗಟ್ಟಿದ್ದಾರೆ ಈ ಹಿಂದೆಯೂ ಇದೇ ರೀತಿ ಮನೆಯ ಗಾಜು ಒಡೆದಿದ್ದರು ಅದು ಈಗ ಮರುಕಳಿಸಿದ್ದು ಪೊಲೀಸ್ ಇಲಾಖೆಯ ನಿಷ್ಕ್ರೀಯತಯೇ ಇದಕ್ಕೆಲ್ಲ ಕಾರಣವೆಂಬುದು ನಿವಾಸಿಗಳ ಆರೋಪವಾಗಿದೆ ಮಧ್ಯಾಹ್ನ, ಸಾಯಿಂಕಾಲ ಮತ್ತು ರಾತ್ರಿ ಪೊಲೀಸರು ಗಸ್ತು ತಿರುಗಿದರೆ ಇದಕ್ಕೆ ಕಡಿವಾಣ ಹಾಕಬಹುದಾಗಿದೆ ಇತ್ತೀಚೆಗೆ ಅನೇಕ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದು ಅಪ್ರಾಪ್ತ ಬಾಲಕರೇ ಅಪರಾಧಿಕ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಕೊಳ್ಳುತ್ತಿದ್ದು  ಇದೆ ರೀತಿ ಮುಂದುವರೆದಲ್ಲಿ ನಗರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುವಲ್ಲಿ ಅನುಮಾನವಿಲ್ಲ ಪೊಲೀಸ್ ಇಲಾಖೆ ತಕ್ಷಣ ಇದಕ್ಕೆಲ್ಲ ಅಂತ್ಯ ಹಾಡಬೇಕೆಂಬುದು ನಿವಾಸಿಗಳ ಆಗ್ರಹವಾಗಿದೆ.

Comments

Popular posts from this blog