ಜಿಲ್ಲಾ ಮಟ್ಟದ ಪೆಂಕಾಕ್ ಪಂದ್ಯಾವಳಿಗೆ ಚಾಲನೆ:
ಜಿಲ್ಲಾ ಪೆಂಕಾಕ್ ಸಂಸ್ಥೆಯ ಅಧ್ಯಕ್ಷೆ ಮಾಸ್ಟರ್ ಲಕ್ಷ್ಮೀ ನೇತೃತ್ವ
ಜಯ ಧ್ವಜ ನ್ಯೂಸ್ , ರಾಯಚೂರು,ಡಿ.23- ಪೆನ್‌ಕಾಕ್ ಸಿಲಾಟ್ ಆಗ್ನೇಯ ಏಷ್ಯಾದ ಸಾಂಪ್ರದಾಯಿಕ ಸಮರ ಕಲೆ, ಇದು ಕೇವಲ ಆತ್ಮರಕ್ಷಣೆಗಷ್ಟೇ ಸೀಮಿತವಾಗಿಲ್ಲ, ಬದಲಿಗೆ ದೈಹಿಕ ಸಾಮರ್ಥ್ಯ, ಮಾನಸಿಕ ಶಿಸ್ತು, ಆಧ್ಯಾತ್ಮಿಕ ಸಮತೋಲನ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಒಳಗೊಂಡಿದೆ ಎಂದು ಕೆಪಿಸಿಎಲ್ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರಾದ ಮಹೇಶ್ ಪೊಲೀಸ್ ಪಾಟೀಲ್ ಹೇಳಿದರು.
ಅವರಿಂದು ರಾಯಚೂರು ಜಿಲ್ಲಾ ಶಕ್ತಿನಗರ ಬಸವ ಕಲ್ಯಾಣ ಮಂಟಪದಲ್ಲಿ ಪೆಂಕಾಕ್ ಸಿಲತ್ ಸ್ಪೋರ್ಟ್ ಅಸೋಸಿಯೇಷನ ಸಂಸ್ಥೆ ಅಧ್ಯಕ್ಷರಾದ ಮಾಸ್ಟರ್ ಲಕ್ಷ್ಮೀ ಅವರ ನೇತೃತ್ವದಲ್ಲಿ ರಾಯಚೂರು ಜಿಲ್ಲಾ ಮಟ್ಟದ ಪೆಂಕಾಕ್ ಪಂದ್ಯಾವಳಿ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿ ಪೆನ್‌ಕಾಕ್ ಸಿಲಾಟ್‌ನ ಮುಖ್ಯವಾಗಿ ಇದು ನೈಸರ್ಗಿಕ ದೇಹದ ಚಲನೆಗಳನ್ನು ಬಳಸುತ್ತದೆ, ಸಮತೋಲನ ಮತ್ತು ಚಲನೆಯನ್ನು ಸುಧಾರಿಸುತ್ತದೆ ಇದು ಇಂಡೋನೇಷ್ಯಾ ಮತ್ತು ಮಲೇಷಿಯಾದಿಂದ ಬಂದಿದ್ದು, ಸಂಸ್ಕೃತಿ ಮತ್ತು ಜೀವನ ತತ್ವಗಳನ್ನು ಒಳಗೊಂಡಿದೆ. ಇದು ಶಿಸ್ತು, ಗೌರವ ಮತ್ತು ಜವಾಬ್ದಾರಿ ಕಲಿಸುತ್ತದೆ ಇದನ್ನು ಕ್ರೀಡೆಯಾಗಿ ಏಷ್ಯನ್ ಗೇಮ್ಸ್‌ಗಳಂತಹ ದೊಡ್ಡ ಪಂದ್ಯಾವಳಿಗಳಲ್ಲಿ ಸೇರಿಸಲಾಗಿದೆ ಮತ್ತು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆಗಳು ನಡೆಯುತ್ತವೆ ಎಂದರು.
ನಂತರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕೆಪಿಸಿಎಲ್ ನ ಕೆಮಿಸ್ಟ್ ವಿಭಾಗದ ಜೆಸಿಐ ಅಧ್ಯಕ್ಷರಾದ ಗೌತಮ್ ಕಟ್ಟಿಮನಿ ಮಾತನಾಡಿ ಪೆನ್‌ಕಾಕ್ ಸಿಲಾಟ್ ಒಂದು ಸಂಪೂರ್ಣ ಕಲಾ ಪ್ರಕಾರವಾಗಿದ್ದು, ಆತ್ಮರಕ್ಷಣೆ, ದೈಹಿಕ ಮತ್ತು ಮಾನಸಿಕ ತರಬೇತಿ, ಮತ್ತು ಸಾಂಸ್ಕೃತಿಕ ಪ್ರಜ್ಞೆಯನ್ನು ಒದಗಿಸುತ್ತದೆ ಹೃದಯ ಸಂಬಂಧಿ ಫಿಟ್ನೆಸ್, ನಮ್ಯತೆ ಮತ್ತು ಒಟ್ಟಾರೆ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಭಾರತೀಯ ಪೆನ್‌ಕಾಕ್ ಸಿಲಾಟ್ ಫೆಡರೇಶನ್ ಐಪಿಎಸ್ ಎಫ್ ಭಾರತದಲ್ಲಿ ಕ್ರೀಡೆಯನ್ನು ಉತ್ತೇಜಿಸಲು ರಾಷ್ಟ್ರೀಯ ಕ್ರೀಡಾ ಫೆಡರೇಶನ್ ಇದೆ. ಇದು ಭಾರತ ಸರ್ಕಾರದ ಯುವಜನ ಸೇವೆ ಮತ್ತು ಕ್ರೀಡಾ ಸಚಿವಾಲಯದಿಂದ ಗುರುತಿಸಲ್ಪಟ್ಟಿದೆ ಎಂದರು.
ಈ ಸಂದರ್ಭದಲ್ಲಿ ಮುಖ್ಯ ಅಥಿತಿಗಳಾಗಿ ಕೆಪಿಸಿಎಲ್ ನ ಗುತ್ತೇದಾರ ಶರಣೇಗೌಡ ,ಜಿಲ್ಲಾ ಪೆಂಕಾಕ್ ಸಂಸ್ಥೆಯ ಸೆಕ್ರೆಟರಿ ಸಿದ್ಧಪ್ಪ , ಖಜಾಂಚಿ ಬಸವನಗೌಡ ಜಂಟಿ ಕಾರ್ಯದರ್ಶಿ, ಉಪಾಧ್ಯಕ್ಷರಾದ ಸುಜಾತಾ, ಮುದುಗಲ್ ರೆಹಮಾನ್ ತಂಡ, ಲಕ್ಕಿ ಫಿಟ್ನೆಸ್ ನ ತಂಡ, ಕೆಪಿಸಿಎಲ್ ಡಿಎವಿ ಸ್ಕೂಲ್ ತಂಡ, ಗಂಜಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಯದ್ಲಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಬಹಳ ಅತ್ಯುತ್ಸಾಹದಿಂದ ಪಂದ್ಯಾವಳಿಗಳಲ್ಲಿ ಭಾಗವಹಿಸಿದ್ದರು.
ಪಾಲಕರು ಪೋಷಕರ ಪ್ರೋತ್ಸಾಹ ದೊಂದಿಗೆ ಕಾರ್ಯಕ್ರಮ ಯಶಸ್ವಿಯಾಯಿತು. ಸವಿತ ಮುರಳಿಕೃಷ್ಣ ನಿರೂಪಿಸಿದರು.


Comments
Post a Comment