ಮಾತೋಶ್ರೀ ತಪೋವನದಲ್ಲಿ ಸ್ವಾನುಭಾವ ಶಿಬಿರ ಉದ್ಘಾಟನೆ: ನಮ್ಮೊಳಗಿನ ಅರಿವಿನ ಕೊರತೆಯಿಂದ ಅಪಾಯಕಾರಿ ಕಡೆ ವಾಲಿದ್ದೇವೆ- ಪ್ರೊ.ಶಿವಾನಂದ ಕೆಳಗಿನಮನಿ
ಜಯ ಧ್ವಜ ನ್ಯೂಸ್ ,ರಾಯಚೂರು,ಫೆ.12-
ಇಂದು ನಮ್ಮೊಳಗಿನ ಅರಿವಿನ ಕೊರತೆಯಿಂದ ತಂತ್ರಜ್ಞಾನದ ಪ್ರಭಾವದಿಂದ ಅಪಾಯಕಾರಿ ಕಡೆಗೆ ವಾಲಿದ್ದೇವೆ ಎಂದು ರಾಯಚೂರಿನ ಮಹರ್ಷಿ ವಾಲ್ಮಿಕಿ ವಿವಿಯ ಪ್ರೊ. ಶಿವಾನಂದ ಕೆಳಗಿನಮನಿ ಹೇಳಿದರು.
ನಗರದ ಹೊರವಲಯದ ಮಾತೋಶ್ರೀ ತಪೋವನದ ಬಸವ ಕಲ್ಯಾಣ ಮಂಟಪದಲ್ಲಿ ಮಾತೋಶ್ರೀ ಶ್ರೀ ನೀಲಮ್ಮ ತಾಯಿಯವರ 24 ನೇ ಪುಣ್ಯಸ್ಮರಣೆ ಹಾಗೂ ಡಬ್ಬೇರು ಮಡುವಿನ ಪರಮಪೂಜ್ಯ ಸದ್ಗುರು ವಿದ್ಯಾನಂದ ಶರಣರ ಸ್ಮರಣೆ ನಿಮಿತ್ತ ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಬಸವಸೇವಾ ಪ್ರತಿಷ್ಠಾನ ಸಹಯೋ ಗದಲ್ಲಿ ಸ್ವಾನುಭಾವ ಶಿಬಿರ ಉದ್ಘಾಟಿಸಿ ಮಾತನಾಡಿದರು. ಇವತ್ತು ಜಾಗತಿಕ ಮಟ್ಟದಲ್ಲಿ ಮನುಷ್ಯನ ವಿಚಾರ ಅರಿಯಲು ಎಐ ತಂತ್ರಜ್ಞಾನಕ್ಕೆ ಅವಲಂಬನೆ ಹೆಚ್ಚಿದ್ದ ರಿಂದ ನಮ್ಮ ಬದುಕು ಅಪಾಯಕಾರಿಯತ್ತ ಜಾರಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಆಂತರಿಕವಾಗಿ ಶೋಧಿಸಿ ಕೊಳ್ಳುವುದು ಬಹಳ ಕಷ್ಟದ ಕೆಲಸ ಇನ್ನೊಬ್ಬರ ಬಗ್ಗೆ ಮಾತನಾಡುವುದೆ ಹೆಚ್ಚು. ನಮ್ಮೊಳಗೆ ನಾವು ಶೋಧಿಸಿಕೊಂಡಿದ್ದರೆ ಇಂದು ಜಗತ್ತಲ್ಲಿ ನಡೆಯುತ್ತಿರುವ ಪ್ರಕ್ಷೋಬೆಗಳಿರುತ್ತಿರಲಿಲ್ಲ ಎಂದರು.
ಜಾಗತಿಕ ಮಟ್ಟದಲ್ಲಿ ತುಮಲು, ಆಶಾಂತಿ ದುರಾಸೆ, ಅಹಂಕಾರ,ಮತ್ತೊಬ್ಬರಿಗೆ ಹಿಂಸೆ ವಿಕೃತಿ ಹೆಚ್ಚಲು ನಮ್ಮೊಳಗಿನ ಅರಿವಿನ ಕೊರತೆ ಕಾರಣ.
೭೦ರ ದಶಕದಲ್ಲಿ ಬಟ್ಟೆ ಊಟಕ್ಕೆ ಯೋಚಿಸುವಂತಿತ್ತು. ೯೦ ರ ದಶಕದ ಜಾಗತೀಕರಣದ ಪರಿಣಾಮ ನಾವು ಸಹೋದರತೆ, ಇತಿಹಾಸ, ಹಬ್ಬ, ಕೂಡಿ ಬಾಳುವ ಸೌಹಾರ್ದತೆಯನ್ನು ಕಳೆದು ಕೊಂಡಿದ್ದೇವೆ.ನಾಗರೀಕನಾದಂತೆ ಭ್ರಷ್ಟಾಚಾರ ಹೆಚ್ಚಾಗಿದೆ ಎಂಬುದು ಕಳವಳಕಾರಿ ಸಂಗತಿ ಎಂದು ಹೇಳಿದರು.
ಇಂದು ಹಳ್ಳಿ ನಗರ ಬೇಧವಿಲ್ಲ ಎಲ್ಲ ಕಡೆಗೂ ಅಸಹ್ಯ ಸಂಸ್ಕೃತಿ ಆರಂಭವಾಗಿದೆ.ಮದುವೆ ಬೇಡ ಸಹ ಜೀವನಕ್ಕೆ ಮಾರು ಹೋಗುತ್ತಿರುವುದು ಬಂದಿದ್ದು ಎಷ್ಟು ಸಮಂಜಸ.
ಸ್ವತಂತ್ರವಾಗಿ ವರ್ತಿಸುವ ಇಂದ್ರಿಯಗಳು ಯಾರ ಅಧೀನದಲ್ಲಿ ಇವೆ ಎಂಬುದು ಪ್ರಶ್ನೆ ಹುಟ್ಟು ಹಾಕಿದೆ. ನಮ್ಮ ಹತೋಟಿ ಯಲ್ಲಿಲ್ಲ.ಅನೇಕ ವ್ಯಸನ ಗಳಿಗೆ ಮಾರು ಹೋಗಿದ್ದು. ಅವುಗಳನ್ನು ಮಾರ್ಗದರ್ಶಿ ಯಾಗಿ ಬಳಸಿಕೊಳ್ಳಬಹುದಿತ್ತು ಆದಾಗಲಿಲ್ಲ.
ಅರಿವಿನ ತಿಳಿವು ನಮ್ಮೊಳಗಿದ್ದರೆ ಸುಖಿ ಜೀವಿ ಯಾಗಿರುತ್ತಿದ್ದೆವು.
ಮೋಹ ಎಲ್ಲಿ ಕಳೆದುಕೊಳ್ಳಬೇಕೆಂಬುದು ನಮ್ಮ ಅಗತ್ಯತೆಗಳನ್ನು ಪೂರೈಸಲು ಇನ್ನಾರೊ ಬರುವುದಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅನುಭಾವಿಗಳು ಹಾಗೂ ಸಂಪಾದಕರಾದ ಬಸವರಾಜ ಸ್ವಾಮಿ ಸ್ವಾನುಭಾವ ನಮ್ಮೊಳಗಿದೆ ಅದನ್ನು ಬಳಸುತ್ತಿಲ್ಲ. ಕಣ್ಣಲ್ಲಿ ಅಜ್ಞಾನ ಆವರಿಸಿದೆ. ದೇಹದಲ್ಲಿ ಜ್ಞಾನ ಇದೆ ಅರಳುವುದಿಲ್ಲ ಎಲ್ಲರಿಗೂ. ಅರಿವಿಗೆ ಬರಲು 25 ವರ್ಷ ಕಲಿಯುವುದೆ ಆಯಿತು ಜ್ಞಾನವಲ್ಲ ಅದು ಮಾಹಿತಿಯಷ್ಟೆ. ಇದನ್ನು ಶಿಕ್ಷಣ ಸಂಸ್ಥೆಗಳು ವಿಶ್ವ ವಿದ್ಯಾಲಯಗಳು ಆಲೋಚನೆ ಮಾಡುತ್ತಿಲ್ಲ. ನೋಡುವುದೊಂದು ಮಾತನಾ ಡುವುದೊಂದು ಹಾಗಾಗಿ ಸ್ವಾನುಭಾವದ ಕಡೆ ವಾಲಬೇಕಿದೆ ಎಂದರು.
ಮನುಷ್ಯನಷ್ಟು ಅಜ್ಞಾನಿ ಯಾರೂ ಇಲ್ಲ
ದೇಹದಿಂದ ಬಂದ ಗ್ರಂಥಗಳು ಧರ್ಮ ಗ್ರಂಥ ಮಾಡಿಕೊಂಡಿದ್ದೇವೆ ಇದು ವಿಪರ್ಯಾಸವ ಲ್ಲವೆ. ಆಲೋಚನೆ ಮಾಡಿದರೆ ಮಾತ್ರ ಸ್ವಾನು ಭಾವ ಮಾಡಲು ಈ ಕಾರ್ಯಕ್ರಮ ರೂಪಿಸಿದ್ದೇವೆ ಎಂದು ಹೇಳಿದರು.
ಸಾನಿಧ್ಯ ವಹಿಸಿದ್ದ ಬೆನಕನಹಳ್ಳಿಯ ಶರಣರಾದ ಶ್ರೀ ದೇವಾನಂದ ಶರಣರು ಮಾತನಾಡಿ, ಶಾಲೆ ಕಾಲೇಜಿನಲ್ಲಿ ಕಲಿಯುವ ವಿದ್ಯೆ ಬದುಕಿನ ವಿದ್ಯೆ ಅಷ್ಟೆ. ಆತ್ಮ ವಿದ್ಯೆ ಕಲಿಸಬೇಕಿದೆ. ಐದು ಇಂದ್ರಿಯಗಳು ನಮ್ಮ ಸ್ವಂತಿಕೆಗೆ ಮಾತ್ರ ಇದಾರಾಚೆ ಇನ್ನೊಂದು ಲೋಕವಿದೆ. ಅಲ್ಲಿ ಆನಂದವಿದೆ. ಸುಖ ದುಃಖದ, ಮಾನ ,ಅಪಮಾನ ಲಾಭ, ನಷ್ಟದ ಲೋಕ ಇಲ್ಲಿದೆ. ಜ್ಞಾನಕ್ಕೆ ಧರ್ಮದಲ್ಲಿ
ಮನುಷ್ಯನಾಗಿ ಪ್ರಕೃತಿಯಲ್ಲಿ ಮನುಷ್ಯರಾಗಿ ಜೀವಿಸಬೇಕು.
ಆತ್ಮ ಕಾಣದಂತೆ ಮಾಡಿದ ಬುದ್ದಿ ಕಂಟಕವಾ ಗಿದೆ. ಹಾಗಾಗಿ, ಬದುಕುವುದನ್ನು ಅನ್ಯರಿಗೆ ಕಲಿಸಿಕೊಟ್ಟವರು ಶರಣ ಸಂತರು ಎಂದ ಅವರು ಶಿಕ್ಷಕರು ಪಾಠದ ಜೊತೆಗೆ ಮಕ್ಕಳು ಬದುಕುವುದು ಹೇಗೆ ತಿಳಿಸಬೇಕಿದೆ. ಆತ್ಮ ವಿದ್ಯೆಯ ಕಿಚ್ಚು ಹಚ್ಚಬೇಕಿದೆ. ಕೇವಲ ಭೌತಿಕ ಜ್ಞಾನ ಕೊಡದೆ ಆತ್ಮ ಜ್ಞಾನದ ಕಿಚ್ಚು ಹಚ್ಚಲು ಉನ್ನತ ಶಿಕ್ಷಣದ ಉಪನ್ಯಾಸಕರು ಕೊಡ ಬೇಕು.
ಬುದ್ದಿಜೀವಿಗೂ, ಆತ್ಮಜೀವಿಗೂ ವಿಭಿನ್ನ. ಆತ್ಮ ಜೀವಿಯಾಗುವುದು ಕಷ್ಟ. ಆದ್ಯಾತ್ಮದ ಕಿಚ್ಚು ಹಚ್ಚಿ ಎಂದು ಸಲಹೆ ನೀಡಿದರು.
ನಮಗೆ ಬರುವ ಕಷ್ಟ ಬಹುದೊಡ್ಡ ಗುರು, ಕಷ್ಟ ಇಲ್ಲದೆ ಸಾಧಿಸಲು ಸಾಧ್ಯವಿಲ್ಲ ಅದನ್ನಿ ಸವಾಲಾಗಿ ಸ್ವಿಕರಿಸಿ ಪಾಠ ಕಲಿಯಿರಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲೂಕಾಧ್ಯಕ್ಷ ಡಾ.ಬಿ.ವಿಜಯರಾಜೇಂದ್ರ ಮಾತನಾಡಿ, ಬಿಎಡ್ ವಿದ್ಯಾರ್ಥಿಗಳಿಗೆ ಇರುವ ತತ್ವಶಾಸ್ತ್ರದ ಮನೋವಿಜ್ಞಾನ ಪರಿಚಾಯತ್ಮಕ ಕಾರ್ಯಕ್ರಮದ ಭಾಗವಾಗಿ ನಾಲ್ಕು ಜ್ಞಾನದ ಗೋಷ್ಠಿಗಳು ಸಹಕಾರಿಯಾಗಲಿದೆ ಎಂದರು.
ವೇದಿಕೆಯಲ್ಲಿ. ಮಂಡ್ಯದ ಆದಿಚಿಂಚನಗಿರಿ ವಿವಿಯ ಪ್ರಾಧ್ಯಾಪಕರಾದ ಡಾ.ಟಿ.ವಾಸುದೇವ ಮೂರ್ತಿ,ಸಾಹಿತಿಗಳಾದ ಬಿ.ಜಿ.ಹುಲಿ, ಅಯ್ಯಪ್ಪಯ್ಯ ಹುಡಾ, ಆಂಜನೇಯ ಜಾಲಿಬೆಂಚಿ, ವೆಂಕಟರಾವ್ ಕುಲಕರ್ಣಿ,ಕಸಾಪ ಜಿಲ್ಲಾ ಕೋಶಾಧ್ಯಕ್ಷ ನಾಗಪ್ಪ ಹೊರಪ್ಯಾಟಿ, ಸಂಘಟನಾ ಕಾರ್ಯದರ್ಶಿ ಡಾ.ರೇಖಾ ಪಾಟೀಲ, ಸದಸ್ಯ ಡಾ. ಬಿ.ಎಂ.ವಿರೂಪಾಕ್ಷಿ , ಗೌರವ ಕಾರ್ಯದರ್ಶಿ ರಾವುತರಾವ್ ಬರೂರ ಇದ್ದರು. ಗೌರವ ಕಾರ್ಯದರ್ಶಿ ಪ್ರತಿಭಾ ಗೋನಾಳ ಪ್ರಾರ್ಥಿಸಿದರು. ವೈಶಾಲಿ ಪಾಟೀಲ ನಿರೂಪಿಸಿ ವಂದಿಸಿದರು ವೆಂಕಟೇಶ ಹೂಗಾರ ಸ್ವಾಗತಿಸಿದರು.


Comments
Post a Comment