ಫೆ.12 ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರ - ಚಾಮರಸ ಮಾಲಿಪಾಟೀಲ್.                                         ಜಯ ಧ್ವಜ ನ್ಯೂಸ್ ರಾಯಚೂರು, ಫೆ.9- ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿರುವುದನ್ನು ಖಂಡಿಸಿ ಫೆ.12ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ನಡೆಸಲಾಗುತ್ತದೆ ಎಂದು ಸಂಯುಕ್ತ ಹೋರಾಟ ರಾಜ್ಯ ಸಂಚಾಲಕ ಚಾಮರಸ್ ಮಾಲಿಪಾಟೀಲ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕೇಂದ್ರ ಸರ್ಕಾರ ನಾಲ್ಕು ಲೇಬರ್ ಕೋಡ್, ವಿಬಿಜಿರಾಮಜಿ ಯೋಜನೆ ಜಾರಿಗೆ ಮುಂದಾಗಿದ್ದು ಕಾರ್ಮಿಕರು, ಬಡವರು, ಕೂಲಿಕಾರರ ಮೇಲೆ ಗದಾ ಪ್ರಹಾರ ಮಾಡುತ್ತಿದ್ದು ನರೇಗಾ ಬದಲಾಯಿಸಿ ವಿಬಿಜಿರಾಮಜಿ ಜಾರಿಗೊಳಿಸುವುದು ಗ್ರಾಮೀಣ ಪ್ರದೇಶದಲ್ಲಿ ಮರಣ ಶಾಸನವಾಗಲಿದೆ ಎಂದರು.

ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ಮಾಡಿ ಕಾರ್ಮಿಕರ ಹಕ್ಕು ಕಸಿಯುವ ಹುನ್ನಾರ ಅಡಗಿದೆ ಎಂದರು. ನರೇಗಾದಡಿ ಇದ್ದ ನಿಯಮಗಳನ್ನು ತೆಗೆದು ಹೊಸ ಹೆಸರಿನೊಂದಿಗೆ ಕಾಯ್ದೆ ರೂಪಿಸಿ ಜನರಿಗೆ ಸಂಕಷ್ಟಕ್ಕೆ ದೂಡುತ್ತಿದೆ ಎಂದರು. ಇತ್ತೀಚೆಗೆ ನಗರಕ್ಕೆ ಆಗಮಿಸಿದ್ದ ಡಿಸಿಎಂ ಡಿ.ಕೆ.ಶಿವಕುಮಾರ ರಾಜ್ಯ ಸರ್ಕಾರ 6 ನೇ ಗ್ಯಾರಂಟಿಯಾಗಿ ಭೂಮಿ ನೀಡುವ ಬಗ್ಗೆ ಉಲ್ಲೇಖಿಸಿದ್ದು  ಯಾರಿಗೆ ಭೂಮಿ ನೀಡುತ್ತೇವೆ ಎಂದು ಸ್ಪಷ್ಟತೆಯಿಲ್ಲ ಅದು ದೊಡ್ಡ ಕಂಪನಿಗಳಿಗೆ ಅನೂಕೂಲ ಕಲ್ಪಿಸುವ ಹೇಳಿಕೆಯಂತೆ ಇದೆ ಎಂದರು.    ಫೆ.12 ರಂದು ಜಿಲ್ಲಾ ಮತ್ತು ತಾಲೂಕಾ ಕೇಂದ್ರಗಳಲ್ಲಿ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದರು. ಈ ಸಂದರ್ಭದಲ್ಲಿ ಎನ್.ಎಸ್ .ವಿರೇಶ, ಡಿ.ಎಸ್. ಶರಣಬಸವ,ಕೆ.ಜಿ.ವಿರೇಶ, ಹೆಚ್.ಪದ್ಮಾ, ಖಾಜಾ ಅಸ್ಲಾಂ ,ಮಹೇಶ್ ಚೀಕಲಪರವಿ ಇನ್ನಿತರರು ಇದ್ದರು.

Comments

Popular posts from this blog