ಅಲ್ಪಸಂಖ್ಯಾತರ ಶಾಶ್ವತ ಅಧ್ಯಯನ ಪೀಠ ಸ್ಥಾಪಿಸಲು ಡಾ.ರಝಾಕ್ ಉಸ್ತಾದ್ ಮನವಿ

ಜಯ ಧ್ವಜ ನ್ಯೂಸ್ , ರಾಯಚೂರು,ಪೆ.5- ವಿವಿಧ ಪ್ರದೇಶಗಳಲ್ಲಿ ಹಂಚಿಹೋಗಿರುವ ಕನ್ನಡ ಪ್ರದೇಶಗಳನ್ನು ಒಳಗೊಂಡಿರುವ ವಿಶಾಲ ಕರ್ನಾಟಕ ರಾಜ್ಯವಾಗಿರುವದರಿಂದ, ವಿವಿಧ ಪ್ರದೇಶಗಳ ರಾಜ, ಮಹಾರಜರ ಆಡಳಿತಕ್ಕೆ ಒಳಪಟ್ಟು ವಿಭಿನ್ನ ಸಾಂಸ್ಕೃತಿಕ ಹಿನ್ನಲೆಯನ್ನು ಹೊಂದಿದೆ, ಅದೇ ರೀತಿ ರಾಜ್ಯದ ಅಲ್ಪಸಂಖ್ಯಾತ ಸಮುದಾಯವು ಸಹ ವಿಭಿನ್ನ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಐತಿಹಾಸಿಕ ಹಾಗೂ ಸಾಂಸ್ಕೃತಿಕ ಹಿನ್ನಲೆಯನ್ನು ಹೊಂದಿರುತ್ತದೆ, ಆದ್ದರಿಂದ ಶ್ರೀ  ಆದಿಕವಿ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ  ರಾಯಚೂರು ಇಲ್ಲಿ ಅಲ್ಪಸಂಖ್ಯಾತರ ಅಧ್ಯಯನ ಪೀಠ ಸ್ಥಾಪಿಸುವದರ ಮೂಲಕ ಸದರಿ ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ, ರ‍್ಥಿಕ, ಐತಿಹಾಸಿಕ ಹಾಗೂ ಸಾಂಸ್ಕೃತಿಕ ಬೆಳವಣಿಗೆಗಳ ಕುರಿತು ನಿರಂತರ ಅಧ್ಯಯನ ಮಾಡಬಹುದಾಗಿದೆ.

ಇದೇ ರೀತಿಯ ವಿವಿಧ ಸಮುದಾಯಗಳ ಅಧ್ಯಯನ ಪೀಠಗಳು ರಾಜ್ಯವ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಈಗಾಗಲೇ ಕಾರ್ಯ ನಿರ್ಹಿವಹಿಸುತ್ತಿವೆ, ಅದಕ್ಕೆ ಬೇಕಾಗುವ ರ‍್ಥಿಕ ಸಂಪನ್ಮೂಲವನ್ನು ರಾಜ್ಯ ಸರಕಾರದ ಸಂಬಂದಪಟ್ಟ ಸಮುದಾಯಗಳ ಕಲ್ಯಾಣ ಇಲಾಖೆಗಳು ಹಾಗೂ ಗುಲ್ರ‍್ಗಾ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಲ್ಪಟ್ಟ ಅಕ್ಕಮಹಾದೇವಿ ಅಧ್ಯಯನ ಪೀಠ ಸ್ಥಾಪಿಸಲು ೨೦೧೭ ರಲ್ಲಿ ರಾಜ್ಯ ಸರಕಾರದ ಉನ್ನತ ಶಿಕ್ಷಣ ಇಲಾಖೆ ಅನುದಾನ ಒದಗಿಸಿದೆ.

ಆದ್ದರಿಂದ, ಅಲ್ಪಸಂಖ್ಯಾತರ ಸಾಮಾಜಿಕ, ಶೈಕ್ಷಣಿಕ, ರ‍್ಥಿಕ, ಐತಿಹಾಸಿಕ ಹಾಗೂ ಸಾಂಸ್ಕೃತಿಕ ಬೆಳವಣಿಗೆಗಳ ಕುರಿತು ನಿರಂತರ ಅಧ್ಯಯನ ಮಾಡಿ ಕಾಲಕಾಲಕ್ಕೆ ಸರಕಾರಕ್ಕೆ ವರದಿ ಸಲ್ಲಿಸಲು ಶ್ರೀ  ಆದಿಕವಿ ಮಹರ್ಷಿ ವಾಲ್ಮೀಕಿ  ವಿಶ್ವವಿದ್ಯಾಲಯ ರಾಯಚೂರು ಇವರು ಸಹ ಉತ್ಸುಕರಾಗಿದ್ದಾರೆ, ಈ ಕಾರ್ಯಕ್ಕೆ  ಶಾಶ್ವತ ಅಧ್ಯಯನ ಪೀಠ ಸ್ಥಾಪಿಸಲು ಸ್ಥಿರ ಠೇವಣಿಯಾಗಿ 5. ಕೋ.ರೂ ಅನುದಾನವನ್ನು ತಮ್ಮ ಇಲಾಖೆಯಿಂದ ಮಂಜೂರು ಮಾಡಿದಲ್ಲಿ, ಸದರಿ ಅನುದಾನದಲ್ಲಿ ನಿರಂತರವಾಗಿ ಅಲ್ಪಸಂಖ್ಯಾತರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಐತಿಹಾಸಿಕ ಹಾಗೂ ಸಾಂಸ್ಕೃತಿಕ ಬೆಳವಣಿಗೆಗಳ ಕುರಿತು ನಿರಂತರ ಅಧ್ಯಯನ ಮಾಡಲು ಸಾದ್ಯವಾಗುತ್ತದೆ. ಕಲ್ಯಾಣ ರ‍್ನಾಟಕ ಪ್ರದೇಶದಲ್ಲಿ ಅಲ್ಪಸಂಖ್ಯಾತ ಸಮುದಾಯವು ರಾಜ್ಯದ ಇತರೆ ಪ್ರದೇಶಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ, ಈ ಹಿನ್ನಲೆಯಲ್ಲಿ ಈ ಭಾಗದಲ್ಲಿ ಅಲ್ಪಸಂಖ್ಯಾತರ ಅಧ್ಯಯನ ಪೀಠ ಸ್ಥಾಪಿಸುವ ಅವಶ್ಯಕತೆ ಇದೆ ಕಾರಣ, ಅಲ್ಪಸಂಖ್ಯಾತರ ಸಾಮಾಜಿಕ, ಶೈಕ್ಷಣಿಕ, ರ‍್ಥಿಕ, ಐತಿಹಾಸಿಕ ಹಾಗೂ ಸಾಂಸ್ಕೃತಿಕ ಬೆಳವಣಿಗೆಗಳ ಕುರಿತು ನಿರಂತರ ಅಧ್ಯಯನ ಮಾಡಿ ಕಾಲಕಾಲಕ್ಕೆ ಸರಕಾರಕ್ಕೆ ವರದಿ ಸಲ್ಲಿಸಲು ಶ್ರೀ  ಆದಿಕವಿ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ರಾಯಚೂರು ಇವರಿಗೆ ಶಾಶ್ವತ ಅಲ್ಪಸಂಖ್ಯಾತರ ಅಧ್ಯಯನ ಪೀಠ ಸ್ಥಾಪಿಸಲು ಸ್ಥಿರ ಠೇವಣಿಯಾಗಿ 5 ಕೋ.ರೂ ಅನುದಾನವನ್ನು ತಮ್ಮ ಇಲಾಖೆಯಿಂದ ಮಂಜೂರು ಮಾಡಬೇಕೆಂದು ಡಾ.ರಝಾಕ ಉಸ್ತಾದ್ ಮನವಿ.

Comments

Popular posts from this blog