ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದ ಮೆರವಣಿಗೆಯಲ್ಲಿ ಕಲೆ, ಸಂಸ್ಕೃತಿ, ಪರಂಪರೆಯ ಮೆಲುಕು

ಜಯ ಧ್ವಜ ನ್ಯೂಸ್ ,ರಾಯಚೂರು ಫೆ.5 - ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದ ನಿಮಿತ್ತ ಗುರುವಾರ ರಾಯಚೂರಿನ ಕರ್ನಾಟಕ ಸಂಘದ ಆವರಣದಿಂದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದವರೆಗೆ ನಡೆದ ವಿಜ್ರಂಭಣೆಯ ಮೆರವಣಿಗೆಯು ಈ ಭಾಗದ ಕಲೆ, ಸಂಸ್ಕೃತಿ, ಪರಂಪರೆಯ ಮೆಲುಕು ಹಾಕುವ ರೀತಿಯಲ್ಲಿ ವಿಜ್ರಂಭಣೆಯಿಂದ ನಡೆಯಿತು.  

ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವರು ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣಪ್ರಕಾಶ ಆರ್.ಪಾಟೀಲ ಅವರು ನಾಡ ದೇವತೆ ತಾಯಿ ಭುವನೇಶ್ವರಿ ದೇವಿಯ ಮೂರ್ತಿಗೆ ಪುಷ್ಪಾರ್ಪಿಸಿ, ಬಳಿಕ ಡೊಳ್ಳು ಬಾರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.


ಈ ಸಂದರ್ಭದಲ್ಲಿ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕರಾದ ಬಸವನಗೌಡ ದದ್ದಲ್, ರಾಯಚೂರು ನಗರ ಕ್ಷೇತ್ರದ ಶಾಸಕರಾದ ಡಾ.ಎಸ್ ಶಿವರಾಜ ಪಾಟೀಲ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಪಾಮಯ್ಯ ಮುರಾರಿ, ಜಿಲ್ಲಾಧಿಕಾರಿಗಳಾದ ನಿತೀಶ್ ಕೆ., ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹಪಾತ್ರ ಸೇರಿದಂತೆ ಇತರೆ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.


ಕರ್ನಾಟಕ ಸಂಘದ ಆವರಣದಿಂದ ಆರಂಭಗೊಂಡ ಮೆರವಣಿಗೆಯು ಬಂಗಾರ ಬಜಾರ್, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತದ ಮಾರ್ಗವಾಗಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದವರೆಗೆ ಅದ್ದೂರಿಯಾಗಿ ನಡೆದಿದ್ದು, ಮೆರವಣಿಗೆಯಲ್ಲಿ ಬಸವರಾಜ ಸಿಂಧನೂರು ಅವರಿಂದ ವೀರಗಾಸೆ, ಅಂಬರೇಶ ಹಸಮಕಲ್ ಅವರಿಂದ ಹಗಲುವೇಷ, ದೇವರಾಜು ಅವರಿಂದ ಚಿಲಿಪಿಲಿ ಗೊಂಬೆ, ಹನುಮಂತ ಮಸ್ಕಿ ಅವರಿಂದ ಕೀಲುಕುದುರೆ, ಲಿಂಗರಾಜ ನೀರಮಾನ್ವಿ ಅವರಿಂದ ಡೊಳ್ಳು ಕುಣಿತ, ಶಾಂತರಾಜು ಆಶಾಪೂರ ಅವರಿಂದ ಜಾಂಜ್ ಮೇಳ, ಶಿವರಾಜ ರುದ್ರಾಕ್ಷಿ ದೇವದುರ್ಗ


ಅವರಿಂದ ಹಗಲುವೇಷ, ಲಂಕೆಪ್ಪ ಆಮದಿಹಾಳ ಅವರಿಂದ ಕಣಿಹಲಗೆ, ಬಸವರಾಜ ಸಿರವಾರ ಅವರಿಂದ ಡೊಳ್ಳುಕುಣಿತ, ಪಂಪನಗೌಡ ಸಿಂಧನೂರು ಅವರಿಂದ ತಾಷಾರಾಂಡೋಲು, ಚಿನ್ನಪ್ಪ ಸಿಂಧನೂರು ಅವರಿಂದ ಹಗಲುವೇಷ, ಗದ್ದೆಪ್ಪ ಭಜಂತ್ರಿ ಆಮದಿಹಾಳ ಅವರಿಂದ ಶಹನಾಯಿ ವಾದನ, ತಮ್ಮಣ್ಣ ರಾಠೋಡ ದೇವದುರ್ಗ ಅವರಿಂದ ಲಂಬಾಣಿ ನೃತ್ಯ, ನಾಗೇಶ ಬೆಂಗಳೂರು ಅವರಿಂದ ಕೊಂಬುಕಹಳೆ, ಹನುಮಂತ್ರಾಯ ಅವರಿಂದ ಗೊರವ ಕುಣಿತ, ಮಾರೆಪ್ಪ ಆತಕೂರ ಅವರಿಂದ ತಮಟೆವಾದನ, ಹಣಮಂತ್ರ ಭಜಂತ್ರಿ ಅವರಿಂದ ನಾಸಿಕಡೊಳ್ಳು,

ಮಹೇಶ ಕವಿತಾಳ ಅವರಿಂದ ಹಗಲುವೇಷ, ನೀಲಕಂಠ ಕಲಬುರಗಿ ಅವರಿಂದ ಗೊಂಬೆ ಕುಣಿತ, ತಿಪ್ಪೇಸ್ವಾಮಿ ಚಿತ್ರದುರ್ಗ ಅವರಿಂದ ಮಹಿಳಾ ಡೊಳ್ಳು, ಶ್ರೀಕಾಂತ ದಕ್ಷಿಣ ಕನ್ನಡ ಅವರಿಂದ ಕಂಗೀಲು ಕುಣಿತ, ಕೆ ವಸಂತಕುಮಾರ ಬಳ್ಳಾರಿ ಅವರಿಂದ ಕಹಳೆವಾದನ, ಮಹಾಂತೇಶ ಚಿತ್ರದುರ್ಗ ಅವರಿಂದ ಸೋಮನಕುಣಿತ, ಸಿ ವೀರೇಶ ವಿಜಯನಗರ ಅವರಿಂದ ನಂದಿಧ್ವಜ ಮತ್ತು ಸಮಾಳ, ವೀರಯ್ಯ ಹಿರೇಮಠ ಕೊಪ್ಪಳ ಅವರಿಂದ ಭದ್ರಕಾಳಿ ಕುಣಿತ, ಮೀನ್ಷಾಕ್ಷಮ ದಾವಣಗೆರೆ ಅವರಿಂದ ಮಹಿಳಾ ವೀರಗಾಸೆ, ಕಲ್ಲಪ್ಪ ಹಂಚಿನಮನಿ ಧರವಾಡ ಅವರಿಂದ ಜಗ್ಗಲಗಿ, ಶ್ರೀನಿವಾಸ ದಾವಣಗೆರೆ ಕೋಳಿಕುಣಿತ, ಮಹಾಂತೇಶ ವಾಲಿ ಕೊಣ್ಣೂರ ಕರಡಿಮಜಲು, ಮಲ್ಲಿಕಾರ್ಜುನ ಕೊಪ್ಪದ ಅವರಿಂದ ಡೊಳ್ಳುಕುಣಿತ ಕಲಾ ಪ್ರಕಾರಗಳ ಪ್ರದರ್ಶನವು ಆಕರ್ಷಣೀಯವಾಗಿ ನಡೆದು ಸಾರ್ವಜನಿಕರ ಗಮನ ಸೆಳೆದವು.

Comments

Popular posts from this blog