ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಚುನಾವಣೆಗೆ ಜಿ‌.ಎಸ್.ವೀರಭದ್ರಪ್ಪ ವಕೀಲರಿಂದ ನಾಮ ಪತ್ರ ಸಲ್ಲಿಕೆ.


ಜಯ ಧ್ವಜ ನ್ಯೂಸ್  ,ರಾಯಚೂರು, ಫೆ.6 ರಾಜ್ಯದಲ್ಲಿ ಮಾರ್ಚ್ 11 ರಂದು ನಡೆಯಲಿರುವ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು  ಚುನಾವಣೆಯ ಅಂಗವಾಗಿ ಇಂದು ಬೆಂಗಳೂರಿನ ವಕೀಲರು ಪರಿಷತ್ ಕಚೇರಿಯಲ್ಲಿ ತಮ್ಮ ತಂಡದೊಂದಿಗೆ ರಾಯಚೂರಿನ ವಕೀಲರು ಹಾಗೂ ರಾಯಚೂರು ವಕೀಲರ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿಗಳಾದ ಜಿ‌.ಎಸ್. ವೀರಭದ್ರಪ್ಪ ರವರು ನಾಮಪತ್ರವನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅಭ್ಯರ್ಥಿಯಾದ ಜಿ.ಎಸ್. ವೀರಭದ್ರಪ್ಪ,  ರಾಜ್ಯದ ವಕೀಲರ ಹಕ್ಕುಗಳು, ವೃತ್ತಿ ಗೌರವ, ಸಾಮಾಜಿಕ ಭದ್ರತೆ ಹಾಗೂ ವಕೀಲರ ಕಲ್ಯಾಣ ಯೋಜನೆಗಳ ಬಲಪಡಿಸುವುದು ನನ್ನ ಮುಖ್ಯ ಗುರಿಯಾಗಿದೆ, ವಕೀಲರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ವ್ಯವಸ್ಥೆ, ಯುವ ವಕೀಲರಿಗೆ ಮಾರ್ಗದರ್ಶನ, ಕಾರ್ಯಾಗಾರಗಳು, ಮಹಿಳಾ ವಕೀಲರಿಗೆ ವಿಶೇಷ ಸೌಲಭ್ಯ, ಕಲ್ಯಾಣ ನಿಧಿಗಳ ಸಮರ್ಪಕ ಬಳಕೆ ಮತ್ತು ಪಾರದರ್ಶಕ ಆಡಳಿತಕ್ಕಾಗಿ ಬದ್ಧತೆಯಿಂದ ಕೆಲಸ ಮಾಡುವೆ ಎಂದು ಹೇಳಿದರು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ವಕೀಲರು ಉಪಸ್ಥಿತರಿದ್ದು, ಬೆಂಬಲ ವ್ಯಕ್ತಪಡಿಸಿದರು. ವಕೀಲರ ಏಕತೆ ಮತ್ತು ಶಕ್ತಿ ಮೂಲಕ ಪರಿಷತ್ತನ್ನು ಇನ್ನಷ್ಟು ಪರಿಣಾಮಕಾರಿಯಾಗಿ ರೂಪಿಸುವ ಸಂಕಲ್ಪ ವ್ಯಕ್ತವಾಯಿತು.

ರಾಜ್ಯದ ಎಲ್ಲಾ ನ್ಯಾಯವಾದಿಗಳು ತಮ್ಮ ಮೊದಲ ಪ್ರಾಶಸ್ತ್ಯದ ಅಮೂಲ್ಯವಾದ ಮತವನ್ನು ನೀಡಿ ಬೆಂಬಲಿಸಿ, ವಕೀಲ ಸಮುದಾಯದ ಬಲವರ್ಧನೆಗಾಗಿ ನನಗೆ ಸೇವೆ ಮಾಡುವ ಅವಕಾಶ ಕಲ್ಪಿಸಿಕೊಡಬೇಕೆಂದು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.

Comments

Popular posts from this blog