ಫೆ.11ರಂದು ನಗರಕ್ಕೆ ಪ್ರೇಮ ವಾಹಿನಿ ರಥಯಾತ್ರೆ -ಸುಬ್ರಮಣ್ಯಂ.                                                                                                                                              ಜಯ ಧ್ವಜ ನ್ಯೂಸ್, ರಾಯಚೂರು,ಫೆ.9- ಸತ್ಯ ಸಾಯಿ ಸೇವಾ ಆರ್ಗನೈಜೇಷನ್ ಈಶಾನ್ಯ ಕರ್ನಾಟಕ ವಿಭಾಗದಿಂದ ಫೆ.11 ರಂದು ನಗರಕ್ಕೆ ಪ್ರೇಮ ವಾಹಿನಿ ರಥಯಾತ್ರೆ ಆಗಮಿಸಲಿದೆ ಎಂದು ಆಯೋಜಕರಾದ ಸುಬ್ರಹ್ಮಣ್ಯಮ್ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಅಂದು ಬೆಳಿಗ್ಗೆ 10ಕ್ಕೆ ಶಕ್ತಿ ನಗರದಿಂದ ನಗರದ ಮಾ ಆಶಾಪುರಿ ಕಲ್ಯಾಣ ಮಂಟಪ ತಲುಪಲಿದೆ 

ಅಲ್ಲಿ ಭಕ್ತರಿಗೆ ಭೋಜನ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತದನಂತರ ರಥಯಾತ್ರೆ 1.30ಕ್ಕೆ  ನಗರದ ಗಂಜ್ ವೃತ್ತ, ಸಿಟಿ ಟಾಕೀಸ್ ವೃತ್ತ,ಚಂದ್ರಮೌಳೆಶ್ವರ ವೃತ್ತ, ಬಸವೇಶ್ವರ ವೃತ್ತ ಮೂಲಕ ಸಿಂಧನೂರಿನ ಕಡೆ ಪ್ರಯಾಣ ಬೆಳೆಸಲಿದೆ ಎಂದರು.ಫೆ.12 ರಂದು ಮಸ್ಕಿ, ಫೆ.13 ರಂದು ಸಿಂಧನೂರು ನಗರದ ಮೂಲಕ ಕೊಪ್ಪಳ ಜಿಲ್ಲೆ ಕಾರಟಗಿಗೆ ಸಾಗಲಿದೆ ಎಂದರು.     ಈ ಸಂದರ್ಭದಲ್ಲಿ, ಡಾ.ಬಸವರಾಜ್, ಶ್ರೀಧರರೆಡ್ಡಿ ಗುರ್ಜಾಪುರ ಉಪಸ್ಥಿತರಿದ್ದರು.

Comments

Popular posts from this blog