ಹರಿಜನವಾಡದಲ್ಲಿ ಕುಡಿಯುವ ನೀರು ಪೋಲು ಜಯ ಧ್ವಜ ನ್ಯೂಸ್ ,ರಾಯಚೂರು, ಮೇ.3-ನಗರದ ಹರಿಜನವಾಡ ಬಡಾವಣೆಯಲ್ಲಿ ಕುಡಿಯುವ ನೀರಿನ ಪೈಪ್ ಹಾಳಾಗಿದ್ದು ನೀರು ಪೋಲಾಗುತ್ತಿದೆ.
ಕುಡಿಯುವ ನೀರಿನ ಸರಬರಾಜು ಮಾಡುವ ರೈಸಿಂಗ್ ಲೈನ್ ಅನೇಕ ತಿಂಗಳಿನಿಂದ ಹಾಳಾಗಿದ್ದು ಕಳಪೆ ದುರಸ್ಥಿ ಮಾಡಲಾಗಿದ್ದರಿಂದ ನೀರು ಪೋಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು ಸಂಬಂಧಿಸಿದ ಅಧಿಕಾರಿಗಳು ಹಾಗೂ ನಗರಸಭೆ ಮಾಜಿ ಸದಸ್ಯರು, ರಾಜಕೀಯ ನಾಯಕರು ಮೌನವಹಿಸಿದ್ದಾರೆ ಎಂದು ಹರಿಜನವಾಡ ಬಡಾವಣೆಯ ಟೈಗರ್ ಗ್ರೂಪ್ ಜಿಲ್ಲಾಧ್ಯಕ್ಷ ಸಣ್ಣಬಾಬು ಪ್ರಕಟಣೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Comments
Post a Comment