Posts

Showing posts from April, 2026
Image
  ವಿಶ್ವಕರ್ಮ ಸಮಾಜದಿಂದ ಪ್ರತಿಭಾ ಪುರಸ್ಕಾರ ಅರ್ಜಿ ಆಹ್ವಾನ.   ಜಯಧ್ವಜ ನ್ಯೂಸ್  ,ರಾಯಚೂರು, ಮೇ 1. ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ರಾಯಚೂರು ಹಾಗೂ ಜಿಲ್ಲಾ ವಿಶ್ವಕರ್ಮ ಸಮಾಜ ರಾಯಚೂರು ಇವರ ಸಹಯೋಗದಲ್ಲಿ ರಾಯಚೂರು ಜಿಲ್ಲಾಮಟ್ಟದ ಪ್ರತಿಭಾ ಪುರಸ್ಕಾರವನ್ನು ಜೂನ್ ತಿಂಗಳಲ್ಲಿ ಹಮ್ಮಿಕೊಳ್ಳಲಾಗಿದೆ.  ಪ್ರಸಕ್ತ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ದ್ವಿತೀಯ ವರ್ಷದಲ್ಲಿ ಶೇ. 80ಕ್ಕಿಂತ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರದಲ್ಲಿ ತಮ್ಮ ಅಂಕಪಟ್ಟಿ ಭಾವಚಿತ್ರ ವಿಳಾಸ ಮೊಬೈಲ್ ಸಂಖ್ಯೆಯೊಂದಿಗೆ ಈ ತಿಂಗಳು 15 ರ ಒಳಗಾಗಿ ಜನಾರ್ಧನ ಮುಮ್ಮಡಿ ವಿಶ್ವಕರ್ಮ ಮೊಬೈಲ್ ಸಂಖ್ಯೆ 8197448606 ಇವರಿಗೆ ವಾಟ್ಸಪ್ ಮೂಲಕ ಕಳಿಸಬೇಕು. ಪ್ರತಿಭಾ ಪುರಸ್ಕಾರದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ಪ್ರಮಾಣ ಪತ್ರ ಸಸಿ ಮೆಡಲ್ ವಿತರಿಸಲಾಗುವುದು. ರಾಯಚೂರು ಜಿಲ್ಲೆಯ  ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯವಾಗುತ್ತದೆ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ರಾಯಚೂರು ಜಿಲ್ಲಾಧ್ಯಕ್ಷರಾದ ಮಾರುತಿ ಬಡಿಗೇರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Image
  ವಿಧಾನಪರಿಷತ್ ಸದಸ್ಯರಾದ  ಎ.ವಸಂತ್ ಕುಮಾರ್ ಅವರಿಂದ ನಗರ ಪ್ರಾಥಮಿಕ ಅರೋಗ್ಯ ಕೇಂದ್ರಗಳಿಗೆ ದಿಡೀರ್ ಭೇಟಿ ಪರಿಶೀಲನೆ  ಜಯ ಧ್ವಜ ನ್ಯೂಸ್ ,ರಾಯಚೂರು,ಏ.28 - ನಗರ ಪ್ರಾಥಮಿಕ ಅರೋಗ್ಯ ಕೇಂದ್ರ ಎಲ್ ಬಿ ಎಸ್ ನಗರದ ಪ್ರಾಥಮಿಕ ಅರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಆಸ್ಪತ್ರೆಯ ಸ್ವಚ್ಛತೆ, ಸಿಬ್ಬಂದಿ ಹಾಜರಾತಿ, ಮತ್ತು ಔಷದಗಳ ಲಭ್ಯತೆ ಬಗ್ಗೆ ವಿಚಾರಿಸಿದರು, ಸಿಬ್ಬಂದಿಗಳ ಹಾಜರಾತಿ ಪರಿಶೀಲಿಸಿ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡು ಕರ್ತವ್ಯದ ಸಮಯದಲ್ಲಿ ಎಲ್ಲರು ಕಡ್ಡಾಯವಾಗಿ ಹಾಜರಾಗಿರಬೇಕೆಂದು ತಿಳಿಸಿದರು.  ತದನಂತರ ಹರಿಜನವಾಡ್ ನಗರ ಪ್ರಾಥಮಿಕ ಅರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಚಿಕಿತ್ಸೆಗೆ ಬಂದಿದ್ದ ಸಾರ್ವಜನಿಕರಲ್ಲಿ ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ಸ್ಪಂದನೆ, ಚಿಕಿತ್ಸೆ, ಮತ್ತು ಔಷಧಗಳ ಸರಿಯಾದ ರೀತಿಯಲ್ಲಿ ವಿತರಿಸಲಾಗುತ್ತದಯೇ ಎಂದು ವಿಚಾರಿಸಿದರು, ರೋಗಿಗಳ ದಾಖಲಾತಿ ವಿವರ ಪರಿಶೀಲಿಸಿದರು.   ಕೆಲವು ವ್ಯಕ್ತಿಗಳು ಆಸ್ಪತ್ರೆಯ ಸಿಬ್ಬಂದಿಗಳ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸುತ್ತಿರುವ ಬಗ್ಗೆ ವೈದ್ಯರು  ತಿಳಿಸಿದಾಗ ಕೂಡಲೇ ಡಿವೈಎಸ್ಪಿ ಮತ್ತು ಪಿ ಎಸ್ ಐ ಅವರಿಗೆ ಕರೆ ಮಾಡಿ ಸೂಕ್ತ ಭದ್ರತೆ ನೀಡಲು ಸೂಚಿಸಿದರು. ರಾಯಚೂರಿನ ಆಮ್ ತಲಾಬ್ ನ ನಗರ ಪ್ರಸೂತಿ ಕೇಂದ್ರಕ್ಕೆ ಭೇಟಿ ನೀಡಿ ವೈದ್ಯರೊಂದಿಗೆ ಚರ್ಚಿಸಿ, ಸಿಬ್ಬಂದಿಗಳ ಮತ್ತು ಚಿಕಿತ್ಸಾ ಪರಿಕರಗಳ ಕೊರತೆ ಬಗ್ಗೆ ಕೊಡಲೇ ಡಿ ಎಚ್ ಓ ಅವರ ಗಮ...
Image
  ಪತ್ರಿಕಾ ಭವನ ಸಂಪರ್ಕ ರಸ್ತೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ವಸಂತಕುಮಾರ್ ಭೂಮಿ ಪೂಜೆ .                                                          ಜಯ ಧ್ವಜ ನ್ಯೂಸ್ ರಾಯಚೂರು, ಏ.27- ನಗರದ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರ ಹಿಂಭಾಗದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನಕ್ಕೆ ಹಾಗೂ ರಿಪೋರ್ಟರ್ಸ್ ಗೀಲ್ಡ್  ಸಂಪರ್ಕಿಸಲು ಸಿಸಿ ರಸ್ತೆ ನಿರ್ಮಾಣಕ್ಕೆ ಕೆಕೆಆರ್ ಡಿಬಿ ಅನುದಾನದಲ್ಲಿ ಭೂಮಿ ಪೂಜೆಯನ್ನು ವಿಧಾನ ಪರಿಷತ್ ಸದಸ್ಯ ಎ.ವಸಂತಕುಮಾರ ಅವರು ನೇರವೇರಿಸಿದರು. ನಂತರ ಮಾತನಾಡಿದ  ಅವರು ನಗರದಲ್ಲಿ ಬೃಹತ್ ಡಾ.ಬಿ.ಆರ್.ಅಂಬೇಡ್ಕರ್  ಸಮುದಾಯ ಭವನ ನಿರ್ಮಾಣ ಮಾಡಲಾಗಿದ್ದು, ಅಲ್ಲಿಗೆ ಹೋಗಲು ಮತ್ತು ರಿಪೋರ್ಟರ್ಸ್ ಗಿಲ್ಡ್ (ಪತ್ರಿಕಾ ಭವನ)ಕ್ಕೆ ಸಂಪರ್ಕ ಕಲ್ಪಿಸಲು ಸಿಸಿ ರಸ್ತೆಯ ಅವಶ್ಯಕತೆ ಇರುವದರಿಂದ 15 ಲಕ್ಷ ರೂ. ಕೆಕೆಆರ್ ಡಿಬಿ ಅನುದಾನದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ, ಮುಂದಿನ‌ ದಿನಗಳಲ್ಲಿ ಇನ್ನೂ ಅಗತ್ಯ ಮೂಲ‌ ಸೌಲಭ್ಯ ಒದಗಿಸಲಾಗುವದು ಎಂದು ಹೇಳಿದರು. ಈ ಸಂದರ್ಭದಲ್ಲಿ ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಬ್ದುಲ್ ಕರೀಮ, ಜೆ. ಸತ್ಯನಾಥ, ಸೈಯ...
Image
  ದಾಸ ಪರಂಪರೆಯನ್ನು ಬೆಳೆಸಿದ ಮಹನೀಯರು ಶ್ರೀ ಶಾಮ ಸುಂದರ ದಾಸರು- ಮುರಳೀಧರ ಕುಲಕರ್ಣಿ                                                ಜಯ ಧ್ವಜ ನ್ಯೂಸ್ ,ರಾಯಚೂರು,ಏ.26- ನಗರದ ಜವಾಹರ ನಗರದ ಬಯಲು ಆಂಜನೇಯ ದೇವಸ್ಥಾನದಲ್ಲಿ ನಿನ್ನೆ ಸಂಜೆ ವರಕವಿಗಳು ದಾಸ ಶ್ರೇಷ್ಠರಾದ ಶ್ರೀ ಶಾಮಸುಂದರ ದಾಸರ ಆರಾಧನೆಯನ್ನು ದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ವಿಜ್ರಂಭಣೆಯಿಂದ ಆಚರಿಸಲಾಯಿತು.  ಆರಾಧನೆಯ ಕಾರ್ಯಕ್ರಮದಲ್ಲಿ ಉಪನ್ಯಾಸಗಳು ದಾಸವಾಣಿ ಕಾರ್ಯಕ್ರಮಗಳು ಭಜನಾ ಮಂಡಳಿಯಿಂದ ಭಜನೆ ಕಾರ್ಯಕ್ರಮಗಳು ಜರಗಿದವು.                            ಶೃತಿ ಸಾಹಿತ್ಯ ಮೇಳದ ಅಧ್ಯಕ್ಷ ಮುರಳಿಧರ ಕುಲಕರ್ಣಿ ಅವರು ಉಪನ್ಯಾಸವನ್ನು ನೀಡಿ ಶ್ರೀ ಶಾಮ ಸುಂದರ ದಾಸರು ಮಾನವಿಯ ಗುಂಡಾಚಾರ್ಯರೆಂದು ಪ್ರಸಿದ್ಧಿಯಾಗಿದ್ದರು ಇವರು ಜಗನ್ನಾಥದಾಸರಿಂದ ಸ್ವಪ್ನಾಂಕಿತವನ್ನು ಪಡೆದು ಶಾಮ ಸುಂದರ ವಿಠಲ ಎಂಬ ಅಂಕಿತದಿಂದ ನೂರಾರು ಸಂಕೀರ್ತನೆಗಳನ್ನು, ಸುಳಾದಿಗಳನ್ನು, ಬಯಲಾಟಗಳನ್ನು,ಲಾವಣಿ ಪದಗಳನ್ನು, ಗೀಗಿ ಪದಗಳನ್ನು, ಶೋಬಾನಗೀತೆಗಳನ್ನು, ಜೋಗುಳ ಗೀತೆಗಳನ್ನು, ಕೋಲಾಟ ಪದಗಳನ್ನು ರಚಿಸಿ ಹರಿದಾಸ ಶ್ರೇಷ್ಠ ...
Image
ವಸಂತ ಕುಮಾರ್ ರಿಂದ ವಿವಿಧೆಡೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ                                                                                 ಜಯ ಧ್ವಜ ನ್ಯೂಸ್ ,ರಾಯಚೂರು, ಏ.26 -  ನಗರ ವಿಧಾನ ಸಭಾ ಕ್ಷೇತ್ರದ ಬಾಯಿದೊಡ್ಡಿ ಗ್ರಾಮದಲ್ಲಿ ಕೆಕೆಆರ್ ಡಿಬಿ ಅನುದಾನದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ವಿಧಾನ ಪರಿಷತ್ ಸದಸ್ಯ ಎ.ವಸಂತಕುಮಾರ ಅವರು ಭೂಮಿ ಪೂಜೆ ನೆರವೇರಿಸಿದರು. ಬಾಯಿದೊಡ್ಡಿ ಗ್ರಾಮದಲ್ಲಿ ಕೆಕೆಆರ್ ಡಿಬಿ ಯ 30 ಲಕ್ಷ ರೂ. ಅನುದಾನದಲ್ಲಿ ಸಿಸಿ ರಸ್ತೆ ನಿರ್ಮಾಣ‌ ಮಾಡಲು ಇಂದು ಭೂಮಿ‌ ಪೂಜೆ‌ ನೆರವೇರಿಸಿ ಮಾತನಾಡಿದ ಎ.ವಸಂತಕುಮಾರ ಅವರು ಇಂದಿಗೂ ನಗರ ವಿಧಾನ‌ ಸಭಾ ಕ್ಷೇತ್ರದ ಗ್ರಾಮೀಣ ಭಾಗದಲ್ಲಿ ಮೂಲಭೂತ‌ ಸೌಕರ್ಯಗಳ ಕೊರತೆ ಸಾಕಷ್ಟು ಇದ್ದು, ನಾಗರೀಕರಿಗೆ ರಸ್ತೆ, ಚರಂಡಿ, ಕುಡಿಯುವ‌ ನೀರು ಒದಗಿಸುವದು ನಮ್ಮ ಸರಕಾರದ‌ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಇನ್ನೂ ಹಚ್ಚಿನ‌ ಸೌಲಭ್ಯ ಒದಗಿಸಲು ಪ್ರಯತ್ನಿಸಲಾಗುವದು ಎಂದು ಹೇಳಿದರು. ಈ ಸಂದರ್ಭದಲ್ಲಿ ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಬ್ದುಲ‌ ಕರೀಮ, ಯೋಜನಾ ಆಯೋಗದ ಸದಸ್ಯ ಡಾ.ರ...
Image
  ಕಸಾಪ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮಹಿಳೆಯರು ಸ್ಪರ್ಧಿಸಲಿ-ರೇಖಾ ಬಡಿಗೇರ್    ಜಯ ಧ್ವಜ ನ್ಯೂಸ್ ,ರಾಯಚೂರು ಏ.26.   ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರ ಚುನಾವಣೆ ಹತ್ತಿರ ಬರುತ್ತಿದ್ದು ಈ ಬಾರಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಜಿಲ್ಲೆಯ ಮಹಿಳೆಯರು ಸ್ಪರ್ಧೆ ಮಾಡಲಿ ಎಂದು ಸಾಹಿತಿ ರೇಖಾ ಬಡಿಗೇರ್ ಮಹಿಳೆಯರಲ್ಲಿ ಮನವಿ ಮಾಡಿದ್ದಾರೆ. ಜಿಲ್ಲಾ  ಹಾಗೂ ರಾಜ್ಯಮಟ್ಟದಲ್ಲಿ ಹೆಸರು ಮಾಡಿದ ಅನೇಕ ಮಹಿಳಾ ಸಾಹಿತಿಗಳಿದ್ದಾರೆ.  ಅಲ್ಲದೇ ಕಸಾಪದಲ್ಲಿ ಇದುವರೆಗೆ ಜಿಲ್ಲೆಯ ಮಹಿಳೆಯರಿಗೆ ತಾಲೂಕು ಅಧ್ಯಕ್ಷ ಸ್ಥಾನ ಅಥವಾ  ಪದಾಧಿಕಾರಿಗಳ ಸ್ಥಾನಕ್ಕಷ್ಡೇ ಸೀಮಿತಗೊಳಿಸುತ್ತಾ ಬರಲಾಗಿದೆ. ನಾಮಕೇವಾಸ್ತೆ ನೇಮಕ ಮಾಡುವುದು ನಡೆಯುತ್ತಿದೆ.   ಜಿಲ್ಲಾಧ್ಯಕ್ಷ ಚುನಾವಣೆಗೆ  ಪುರುಷರೇ ಸ್ಪರ್ಧೆ ಮಾಡುತ್ತಿರುವುದು ಕಂಡುಬರುತ್ತಿದೆ. ಈ ಹಿನ್ನೆಲೆ ಈ ಬಾರಿ ಹೆಚ್ಚಿನ ಸಂಖ್ಯೆಯ ಮಹಿಳೆಯರೂ ಸ್ಪರ್ಧೆ ಗಿಳಿಯಬೇಕಿದೆ.  ಮಹಿಳೆಯರು ಜಿಲ್ಲಾಧ್ಯಕ್ಷರಾದಾಗ ಜಿಲ್ಲೆಯಲ್ಲಿ ಮಹಿಳೆಯರಿಗೂ ಒಂದು ಉನ್ನತ ಸ್ಥಾನಮಾನ ದೊರೆಯಲಿವೆ. ಹಾಗಾಗಿ, ಮಹಿಳೆಯರೂ  ಸಾಹಿತ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಬರಬೇಕಿದೆ ಎಂದಿದ್ದಾರೆ.  ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕು ಪ್ರತಿಯೊಬ್ಬ ಮಹಿಳೆಯರಿಗೂ ಇದೆ. ರಾಜ್ಯದಲ್ಲಿ ಬೇರೆ ಬೇರೆ ಜಿಲ್ಲೆಯಲ್ಲಿ ಈಗಾಗಲೇ ಜಿಲ್ಲಾಧ್ಯಕ್...
Image
  ಹರಿದಾಸ ಸಾಹಿತ್ಯಕ್ಕೆ ವಿಶಿಷ್ಟ  ಕೊಡುಗೆ ನೀಡಿದವರು ಶ್ರೀಶೇಷ ದಾಸರು -ಮುರಳಿಧರ ಕುಲಕರ್ಣಿ   ಜಯ ಧ್ವಜ ನ್ಯೂಸ್ , ರಾಯಚೂರು, ಏ.25- ಗದ್ವಾಲ ಸಂಸ್ಥಾನ ರಾಜನಿಂದ ಅವಮಾನಿತಗೊಂಡು, ಜೀವನದಲ್ಲಿ  ಜಿಗುಪ್ಸೆ ಹೊಂದಿ ಆತ್ಮಹತ್ಯೆ ಮಾಡಿಕೊಳ್ಳಲು ಹೋದಂತ ಶೇಷಪ್ಪನವರು  ಚಿಂತ್ರವಲ್ಲಿಯ ಪ್ರಾಣದೇವರ ಸೇವೆಯನ್ನು ಮಾಡಿ ಶ್ರೀ ವಿಜಯದಾಸರ ಅನುಗ್ರಹದಿಂದ ಶೇಷ ದಾಸರಾಗಿ ದಾಸ ಸಾಹಿತ್ಯಕ್ಕೆ ವಿಶೇಷ ಶ್ರೇಷ್ಠ ಕೊಡುಗೆ ನೀಡಿದ ಮಹನೀಯರಾಗಿದ್ದಾರೆ ಎಂದು ಶ್ರುತಿ ಸಾಹಿತ್ಯ ಮೇಳದ ಅಧ್ಯಕ್ಷ ಮುರಳಿಧರ ಕುಲಕರ್ಣಿ ಅವರು ಹೇಳಿದರು.  ಅವರು ನಿನ್ನೆ ದಾಸ ಶ್ರೇಷ್ಠರಾದ ಶ್ರೀ ಶೇಷ ದಾಸರ 208ನೆಯಆರಾಧನೆಯ ಪ್ರಯುಕ್ತ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.     ಶ್ರೀಶೇಷ ದಾಸರು 43 ಸುಳಾದಿಗಳನ್ನು, 14 ಉಗಾ ಭೋಗ ಗಳನ್ನು, 4 ಪದ್ಯಗಳನ್ನು, ಪಂಚ ಪ್ರಮೇಯಗಳನ್ನು ,ಗದ್ಯಗಳನ್ನು ,ಶ್ರೀ ವಿಜಯರಾಯರ  ಚಕ್ರಾಬಾಜ್ಜ ಮಂಡಲ ವಿವರವನ್ನು ರಚಿಸಿದ್ದಾರೆ. ಇವುಗಳಲ್ಲಿ ಪ್ರಾರ್ಥನಾ ಸುಳಾದಿ, ಜ್ಞಾನ ಯಜ್ಞ ಸುಳಾದಿ,ವಾರದ ಸುಳಾದಿ, ಶ್ರೀ ಲಕ್ಷ್ಮೀದೇವಿ ,ಸುಳಾದಿ ಮುಂತಾದವುಗಳೆಲ್ಲ ತುಂಬಾ ಪ್ರಸಿದ್ಧಿಯನ್ನು ಪಡೆದಿವೆ, ಎಂದು ಹೇಳಿದರು.   ಪತ್ರಕರ್ತ ಜಯಕುಮಾರ್ ದೇಸಾಯಿ ಕಾಡ್ಲೂರುರವರು ಮಾತನಾಡಿ, ದೈವಾಂಶ ಸಂಭೂತರಾದ ಶ್ರೀ ಶೇಷ ದಾಸರು ಜನಸಾಮಾನ್ಯರಿಗೆ ಸನ್ಮಾರ್ಗದ ಹಾದಿ ತೋರಿಸುವ ಕಾರ್ಯವನ್...
Image
  ಸಿಇಟಿ ಪರೀಕ್ಷೆಯಲ್ಲಿ ಜನಿವಾರ ನಿರ್ಬಂಧ ಖಂಡನೀಯ- ಪಲಗುಲ ನಾಗರಾಜ ಜಯ ಧ್ವಜ ನ್ಯೂಸ್ , ರಾಯಚೂರು, ಏ.24- ಸಿಇಟಿ ಪರೀಕ್ಷೆಯಲ್ಲಿ ವಿದ್ಯಾರ್ಥಿಯ ಧರಿಸಿದ್ಧ ಜನಿವಾರ ತೆಗೆಸಿದ್ದು ರಾಜ್ಯ ಸರ್ಕಾರದ ನೀತಿ ಖಂಡನೀಯ  ಎಂದು ಆರ್ಯವೈಶ್ಯ ಸಮಾಜದ ಚಿಂತಕ ಪಲುಗುಲ ನಾಗರಾಜ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರತ ದೇಶ ಸಂಸ್ಕೃತಿ, ಸಂಪ್ರದಾಯ, ಆಚಾರ ವಿಚಾರಗಳ ಭೂಮಿ ಆಗಿರುತ್ತದೆ. ಆಯಾ ಜಾತಿಗಳಲ್ಲಿ ಅವರದೇ ಆದ ಸಂಪ್ರದಾಯ ಇರುತ್ತದೆ ಹಾಗಂತ ಪರೀಕ್ಷೆ ಬರೆಯುವಾಗ ಹೀಗೆಯೇ ಬರಬೇಕು ಎಂದು ಮುಂಚೆಯೇ ಆದೇಶ ಹೊರಡಿಸಬೇಕು ಅದು ಬಿಟ್ಟು ಪರೀಕ್ಷೆ ಪ್ರವೇಶಿಸುವಾಗ ಜನಿವಾರ ಹಾಕಬಾರದು,ಉಡುದಾರ ಹಾಕಬಾರದು ಎನ್ನುವ ಕಟ್ಟಪ್ಪಣೆ ಒಂದು ಸಮುದಾಯವನ್ನು ಅವಮಾನ ಮಾಡಿದಂತೆ ಆಗುತ್ತದೆ. ಇತ್ತೀಚೆಗೆ ವಿಶೇಷ ತಂತ್ರಜ್ಞಾನದ ಸಲಕರಣೆ ಬಂದು ಪರೀಕ್ಷೆಯಲ್ಲಿ ಗೊಂದಲ ಸೃಷ್ಟಿಸುತ್ತವೆ ಆದರೆ ಅದೇ ಮಾನದಂಡ ಇಟ್ಟುಕೊಂಡು ಜನಿವಾರ ಹಾಕಬಾರದು ಎನ್ನುವ ನೀತಿ ಸರಿಯಲ್ಲ, ಜನಿವಾರದಲ್ಲಿ ಏನಾದರೂ ತಂತ್ರಜ್ಞಾನದ ಸಾಧನ ಇಟ್ಟುಕೊಂಡು ಬರಲು ಸಾಧ್ಯವೇ ?. ಪರೀಕ್ಷೆ ಹೆಸರಲ್ಲಿ ಜಾತಿಗೆ ಅವಮಾನ ಮಾಡುವುದು ಖಂಡಿಸಲಾಗುತ್ತದೆ. ಜನಿವಾರ , ಉಡುದಾರ ಪರೀಕ್ಷೆಗೆ ಅಡ್ಡ ಬರುವುದೇ ಈ ಹಿಂದೆಯೂ ಜನಿವಾರ ತೆಗೆಸಿದರೆ ಮಾತ್ರ ಪರೀಕ್ಷೆಗೆ ಅವಕಾಶ ಎಂದಿದ್ದರು ಆದರೆ ಭವಿಷ್ಯ ಕಂಡುಕೊಳ್ಳುವ ನಿಟ್ಟಿನಲ್ಲಿ ಇರುವ ವಿದ್ಯಾರ್ಥಿಗಳು ತಮ್ಮ ಸಂಪ್ರದಾಯಗಳನ್ನು ಬಿಡುವ ಮನಸ್ಸಿಲ್ಲದಿದ್ದರು ಬದುಕು ಕಟ್...
Image
  ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆ 21ನೇ ಸ್ಥಾನಕ್ಕೆ ಜಿಗಿತ : ಬಿ.ವಿ.ಆರ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಸುಖದೇವ್ ಗೆ 625 ಕ್ಕೆ 625 ಅಂಕ: ಸಚಿವ ಬೋಸರಾಜು  ಶ್ಲಾಘನೆ ಜಯ ಧ್ವಜ ನ್ಯೂಸ್ ,ರಾಯಚೂರು, ಏ. 23-  ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ರಾಯಚೂರು ಜಿಲ್ಲೆಯು ಅತ್ಯುತ್ತಮ ಸಾಧನೆ ತೋರಿದ್ದು, ಕಲ್ಯಾಣ ಕರ್ನಾಟಕ ಭಾಗದಲ್ಲೇ ಪ್ರಥಮ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಕಳೆದ ವರ್ಷ  30ನೇ ಸ್ಥಾನದಲ್ಲಿದ್ದ ಜಿಲ್ಲೆ, ಈ ಬಾರಿ 94.41% ಫಲಿತಾಂಶದೊಂದಿಗೆ ಬರೋಬ್ಬರಿ 9 ಸ್ಥಾನಗಳ ಬೃಹತ್ ಜಿಗಿತ ಕಂಡು 21ನೇ ಸ್ಥಾನಕ್ಕೆ ಏರಿದೆ. ಈ ಅಭೂತಪೂರ್ವ ಸಾಧನೆಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ  ಎನ್.ಎಸ್. ಬೋಸರಾಜು ಅವರು  ಹರ್ಷ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ, ಮಾನ್ವಿ ತಾಲೂಕಿನ ಬಿ.ವಿ.ಆರ್. ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಸುಖದೇವ್ ಅವರು 625 ಕ್ಕೆ 625 ಪೂರ್ಣ ಅಂಕಗಳನ್ನು ಗಳಿಸುವ ಮೂಲಕ ಜಿಲ್ಲೆಗೆ ಹಾಗೂ ಇಡೀ ರಾಜ್ಯಕ್ಕೆ ಕೀರ್ತಿ ತಂದಿರುವುದು ಅತ್ಯಂತ ಹೆಮ್ಮೆಯ ಸಂಗತಿ. ಸುಖದೇವ್ ಅವರ ಈ ಅಸಾಧಾರಣ ಸಾಧನೆಗೆ ಸಚಿವರು ವಿಶೇಷವಾಗಿ ಶ್ಲಾಘಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಸಚಿವ ಎನ್.ಎಸ್. ಬೋಸರಾಜು ಅವರು, "ರಾಯಚೂರು ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ ವರ್ಷದಿಂದ ವರ್ಷಕ್ಕೆ ಅತ್ಯುತ್ತಮಗೊಳ್ಳುತ್ತಿರುವುದಕ್ಕೆ ಈ ಫಲಿತಾ...
Image
  ಗಾಯತ್ರಿ ಭವನ: ಬಾಗಿಲು ಚೌಕಟ್ಟು ಸ್ಥಾಪನೆ.                                                                 ಜಯ ಧ್ವಜ ನ್ಯೂಸ್ , ರಾಯಚೂರು, ಏ.23-  ಇಂದು ನಗರದ ನವೋದಯ ಆಸ್ಪತ್ರೆ ಹತ್ತಿರ ಇರುವ ಬ್ರಾಹ್ಮಣ ಸಮಾಜದ ಹೆಮ್ಮೆಯ ಗಾಯತ್ರಿ ಭವನದ ನೂತನ ಬಾಗಿಲು ಚೌಕಟ್ಟು ಕೂಡಿಸಲಾಯಿತು. ಈಗಾಗಲೆ ಅನೇಕ ಜನಪ್ರತಿನಿಧಿಗಳ ಅನುದಾನ ಹಾಗೂ ಸಮಾಜದ ಹಿರಿಯರ ಸಹಕಾರದೊಂದಿಗೆ ಗಾಯತ್ರಿ ಭವನ ಕಟ್ಟಡದ ಕಾಮಗಾರಿ ಭರದಿಂದ ಸಾಗಿದ್ದು ಇಂದು ಮುಖ್ಯ ದ್ವಾರ ಚೌಕಟ್ಟು ಸ್ಥಾಪನೆ ಶಾಸ್ತ್ರೋಕ್ತವಾಗಿ ನೆರವೇರಿತು. ಈ  ಸಂದರ್ಭದಲ್ಲಿ ಎಕೆಬಿಎಂಎಸ್ ರಾಯಚೂರು ಜಿಲ್ಲಾ ಪ್ರತಿನಿಧಿ ರಮೇಶ ಕುಲಕರಣಿ, ಜಿಲ್ಲಾ ಸಂಚಾಲಕ  ವೇಣುಗೋಪಾಲ ಇನಾಮ್ದಾರ್, ಕಾರ್ಯಧ್ಯಕ್ಷರಾದ ವೆಂಕಟೇಶ್ ದೇಸಾಯಿ, ರಾಜ್ಯ ಕಾರ್ಯಕಾರಣಿ ಸದಸ್ಯರಾದ ಜಯಕುಮಾರ ಗಬ್ಬೂರು, ನಗರ ಸಂಚಾಲಕರಾದ ರಾಮರಾವ್ ಗಣೆಕಲ್, ಹಿರಿಯರಾದ ನಂದಾಪುರ ಶ್ರೀನಿವಾಸ, ಪ್ರಾಣೇಶ ಮುತಾಲಿಕ್, ಡಾ.ಆನಂದ್ ತೀರ್ಥ ಪಡ್ನೀಸ್ ,ಟಿ ರಮೇಶ್ ,ಕೋಲಾರ ವೆಂಕಟೇಶ್, ಜಿಲ್ಲಾ ಕಾರ್ಯದರ್ಶಿಗಳಾದ ಅನಿಲ್ ಕುಮಾರ್ ಹಾಗೂ ವಿಷ್ಣು ತೀರ್ಥ ಸಿರವಾರ, ರಮಾಕಾಂತ್ ರಾವ್ ಗುಂಜಳ್ಳಿ, ಕಿಶನ್ ರಾವ್ ಎಲ್.ಕೆ. ದ...
Image
  ಆದಿಕವಿ ಶ್ರೀ ವಾಲ್ಮೀಕಿ ವಿವಿ : ಶ್ರೀ ಭಗೀರಥ ಜಯಂತಿ ಆಚರಣೆ ತಪೋನಿಷ್ಠೆಗೆ ಆದರ್ಶ ಮಹರ್ಷಿ ಭಗೀರಥ - ಪ್ರೊ.ಪಿ.ಭಾಸ್ಕರ್ ಜಯ ಧ್ವಜ ನ್ಯೂಸ್. ರಾಯಚೂರು,ಏ.23- ಕಠಿಣ ತಪಸ್ಸಿನ ಮೂಲಕ ಗಂಗೆಯನ್ನು ಭೂಮಿಗೆ ತರುವಲ್ಲಿ ಮಹರ್ಷಿ ಭಗೀರಥರ ಪಾತ್ರ ಅಪ್ರತಿಮವಾದುದು, ಪೂರ್ವಜರ ಆತ್ಮಕ್ಕೆ ಶಾಂತಿ ಒದಗಿಸಿದ ಭಗೀರಥರ ಸಾಹಸವನ್ನು ಈ ದಿನವು ಅಸಾಧಾರಣ ಪರಿಶ್ರಮ, ಛಲ ಮತ್ತು ಸಮರ್ಪಣಾ ಮನೋಭಾವವನ್ನು ಸಂಕೇತಿಸುತ್ತದೆ ಎಂದು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ವಾಣಿಜ್ಯ ನಿಕಾಯದ ಡೀನರಾದ ಪ್ರೊ.ಪಿಭಾಸ್ಕರ್ ಅವರು ತಿಳಿಸಿದರು. ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಹಾಲ್‌ನಲ್ಲಿ ಶ್ರೀ ಭಗೀರಥ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಆಚರಿಸಿ ಮಾತನಾಡಿದ ಅವರು, ಹಿಂದೂ ಪುರಾಣಗಳಲ್ಲಿ ಛಲಬಿಡದ ರಾಜಋಷಿಯಾಗಿ ಪರಿಚಿತರಾದ ಇವರು ಸಕಲ ಜೀವರಾಶಿಗೆ ಅನುಕೂಲವಾಗುವಂತೆ ನಮ್ಮ ದೇಶದ ಜೀವನದಿ ಅಷ್ಟೆ ಅಲ್ಲದೇ ಗಂಗೆಯನ್ನು ಹಿಮಾಲಯದಿಂದ ಭೂಮಿಗೆ ತಂದು ಜೀವಧಾತುಗಳಿಗೆ ಸನ್ಮಾರ್ಗವನ್ನು ಕಲ್ಪಿಸಿದ ಮಹಾಪುರುಷರು. ಪ್ರಯತ್ನ ಪರಾಕಾಷ್ಠೆಯ ಭಗೀರಥ ಪ್ರಯತ್ನವೆಂದು ಜನಜನಿತವಾಗಿದ್ದು ತನ್ನ ಸಾಹಸಕ್ಕೆ ಗುರುಭಕ್ತಿಗೆ ತಪೋನಿಷ್ಠೆಗೆ ಆದರ್ಶವಾಗಿ ಕಂಗೊಳಿಸುತ್ತಾರೆ ಎಂದು ಅವರು ಹೇಳಿದರು.   ಕಾರ್ಯಕ್ರಮದಲ್ಲಿ ವಿಜ್ಞಾನ ನಿಕಾಯ ಡೀನರಾದ ಪ್ರೊ.ಪಾರ್ವತಿ.ಸಿ.ಎಸ್., ಕಲಾ ನಿಕಾಯ ಡೀನರಾದ ಡ...
Image
ನಗರದಲ್ಲಿ ತಾಪಮಾನ ಏರಿಕೆ: ಸಾರ್ವಜನಿಕರ ರಕ್ಷಣೆಗಾಗಿ ಶಾಶ್ವತ ನೆರಳು ಹಾಗೂ ನೀರಿನ ವ್ಯವಸ್ಥೆಗೆ ಪ್ರಗತಿಪರ ಸಂಘಟನೆಗಳ ಒತ್ತಾಯ   ಜಯ ಧ್ವಜ ನ್ಯೂಸ್ , ರಾಯಚೂರು,ಏ.23- ನಗರದಲ್ಲಿ ದಿನದಿಂದ ದಿನಕ್ಕೆ ಏರುತ್ತಿರುವ ತಾಪಮಾನದಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿರುವ ಹಿನ್ನಲೆಯಲ್ಲಿ, ಇಂದು ವಿವಿಧ ಪ್ರಗತಿಪರ ಸಂಘಟನೆಗಳು ಒಗ್ಗೂಡಿ ಮಾನವೀಯ ದೃಷ್ಟಿಕೋನದಿಂದ  ಸಂಘಟನೆಗಳ ಪ್ರತಿನಿಧಿಗಳು ನಗರದ ಪ್ರಮುಖ ವೃತ್ತಗಳಾದ ಬಸವೇಶ್ವರ ವೃತ್ತ ಹಾಗೂ ಗಂಜ್ ವೃತ್ತಗಳಿಗೆ ಭೇಟಿ ನೀಡಿ, ಟ್ರಾಫಿಕ್ ಸಿಗ್ನಲ್‌ಗಳಲ್ಲಿ ನಿಲ್ಲುವ ವಾಹನ ಸವಾರರಿಗೆ ಶಾಶ್ವತ ನೆರಳು ಒದಗಿಸುವ ಉದ್ದೇಶದಿಂದ ಪರದೆ (ಶೇಡ್) ವ್ಯವಸ್ಥೆಯನ್ನು ಪರಿಶೀಲಿಸಿ, ಸೂಕ್ತ ಸಲಹೆಗಳನ್ನು ನೀಡಿದರು. ಹೆಚ್ಚುತ್ತಿರುವ ಬಿಸಿಲಿನ ತಾಪಮಾನದಲ್ಲಿ ಸಿಗ್ನಲ್‌ಗಳಲ್ಲಿ ನಿಂತುಕೊಳ್ಳುವ ನಾಗರಿಕರಿಗೆ ನೆರಳು ಸೌಲಭ್ಯ ಅತ್ಯಂತ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು. ಇದಾದ ನಂತರ ಮಹಾನಗರ ಪಾಲಿಕೆ ಆಯುಕ್ತರನ್ನು ಭೇಟಿ ಮಾಡಿದ ಪ್ರತಿನಿಧಿ ಮಂಡಳಿ, ಈ ಕಾಮಗಾರಿಯನ್ನು ಆದ್ಯತೆಯಿಂದ ಕೈಗೊಂಡು ಶೀಘ್ರದಲ್ಲಿ ಪೂರ್ಣಗೊಳಿಸುವಂತೆ ಮನವಿ ಸಲ್ಲಿಸಿತು. ಜೊತೆಗೆ, ನಗರದಲ್ಲಿನ ಜನನಿಭೀಡ ಪ್ರದೇಶಗಳಲ್ಲಿ ನೀರಿನ ಅರವಟ್ಟಿಗೆ (ಕುಡಿಯುವ ನೀರಿನ ತಾತ್ಕಾಲಿಕ ಕೇಂದ್ರಗಳು) ವ್ಯವಸ್ಥೆ ಮಾಡಬೇಕು ಹಾಗೂ ಪ್ರಮುಖ ರಸ್ತೆಗಳ ಮೇಲೆ ನೀರಿನ ಟ್ಯಾಂಕರ್ ಅಥವಾ ಅಗ್ನಿಶಾಮಕ ವಾಹನಗಳ ಮೂಲಕ ...
Image
  ಸ್ಟೇಶನ ರಸ್ತೆಯಲ್ಲಿ ನಿರಂತರ ಅಪಘಾತ; ರಿಂಗ್ ರಸ್ತೆಗೆ ಬಾಬುರಾವ್ ಒತ್ತಾಯ ಜಯ ಧ್ವಜ ನ್ಯೂಸ್ ,ರಾಯಚೂರು,ಏ.23-  ರಾಷ್ಟ್ರೀಯ ಹೆದ್ದಾರಿ 167ರ ದುಸ್ಥಿತಿ ದಿನೇದಿನೇ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಅಭಿವೃದ್ಧಿಯ ಸಂಕೇತವಾಗಬೇಕಾದ ಈ ರಸ್ತೆ ಇದೀಗ ಅಪಘಾತಗಳ ಸಾವಿನ ಬಲೆಯಾಗಿ ಪರಿಣಮಿಸಿದೆ. ನವೋದಯ ವೈದ್ಯಕೀಯ ಶಿಕ್ಷಣ ಸಂಸ್ಥೆ ವೃತ್ತದಿಂದ ಹೈದರಾಬಾದ್ ಬೈಪಾಸ್ ವರೆಗೆ ಹರಡುವ ಈ ಹೆದ್ದಾರಿಯಲ್ಲಿ ಇದುವರೆಗೆ ಸುಮಾರು 800ಕ್ಕೂ ಹೆಚ್ಚು ಮಂದಿ ಜೀವ ಕಳೆದುಕೊಂಡಿರುವುದು ಆತಂಕಕಾರಿ ಸಂಗತಿಯಾಗಿದ್ದು, ಇತ್ತೀಚೆಗೆ ನಡೆದ ಅಪಘಾತದಲ್ಲಿ  ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟ ದುರ್ಘಟನೆಗೆ  ಸಮಾಜ ಸೇವಕ ಹಾಗೂ ಬಿಜೆಪಿ ಮಾಜಿ ಜಿಲ್ಲಾ ಉಪಾಧ್ಯಕ್ಷ ಡಾ. ಬಾಬುರಾವ್ ಕಳವಳ ವ್ಯಕ್ತಪಡಿಸಿದ್ದಾರೆ. ಸ್ಥಳೀಯರು ಹಾಗೂ ವಾಹನ ಸವಾರರ ಪ್ರಕಾರ, ಹೆದ್ದಾರಿಯ ಕಿರಿದಾದ ವಿನ್ಯಾಸ, ಸಮರ್ಪಕ ದಾರಿದೀಪಗಳ ಕೊರತೆ, ಎಚ್ಚರಿಕಾ ಸೂಚನಾ ಫಲಕಗಳ ಅಭಾವ ಹಾಗೂ ನಿಯಂತ್ರಣರಹಿತ ವೇಗದ ಸಂಚಾರವೇ ಅಪಘಾತಗಳ ಪ್ರಮುಖ ಕಾರಣಗಳಾಗಿವೆ. ವಿಶೇಷವಾಗಿ ರಾತ್ರಿ ವೇಳೆಯಲ್ಲಿ ಬೆಳಕಿನ ಕೊರತೆಯಿಂದ ದೃಶ್ಯತೆ ಕುಂದಿ ಅಪಘಾತಗಳ ಪ್ರಮಾಣ ಹೆಚ್ಚುತ್ತಿದೆ. ಪೊಲೀಸರ ಪ್ರಾಥಮಿಕ ಮಾಹಿತಿಯಂತೆ, ಹೆದ್ದಾರಿಯ ಹಲವು ಭಾಗಗಳಲ್ಲಿ ಅಪಾಯಕಾರಿ ತಿರುವುಗಳು ಮತ್ತು ವಿಭಜನೆ ಇಲ್ಲದ ರಸ್ತೆಯ ಕಾರಣದಿಂದ ಮುಖಾಮುಖಿ ಡಿಕ್ಕಿಗಳು ಸಾಮಾನ್ಯವಾಗಿವೆ. ಈ ಹಿನ್ನೆಲೆಯಲ್ಲಿ ಹಲವು ಸ್ಥಳಗಳು...
Image
  ಹೆಲ್ಮೆಟ್ ಧರಿಸಿ ಜೀವ ಕಾಪಾಡಿಕೊಳ್ಳಿ - ಎಸ್ಪಿ ಅರುಣಾಂಗ್ಶು ಗಿರಿ  ಜಯ ಧ್ವಜ ನ್ಯೂಸ್ ರಾಯಚೂರು, ಏ.23- ಬೈಕ್ ಸವಾರರು ತಮ್ಮ ಅಮೂಲ್ಯವಾದ ಜೀವವನ್ನು ಕಾಪಾಡಿಕೊಳ್ಳಲು ಪ್ರತಿಯೊಬ್ಬ ಬೈಕ್ ಸವಾರರು ಹೆಲ್ಮೆಟ್ ಧರಿಸಬೇಕು ಎಂದು ರಾಯಚೂರು  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಶುಗಿರಿ ಹೇಳಿದರು.      ಅವರಿಂದು ರಾಯಚೂರು ಜಿಲ್ಲಾ ಪೊಲೀಸ್ ಮತ್ತು ರಾಯ್ ಕೆಮ್ ಮೆಡಿಕೇರ್  ಲಿಮಿಟೆಡ್ ಕಂಪನಿ ಸಹಯೋಗದಲ್ಲಿ ವಡ್ಲೂರು  ಸರ್ಕಲ್ ಎಸ್ ಬಿ ಐ ಬ್ಯಾಂಕ್ ಆವರಣದಲ್ಲಿ ಉಚಿತ ಹೆಲ್ಮೆಟ್ ವಿತರಣೆ ಹಾಗೂ ಕಾನೂನು ಅರಿವು ಕಾರ್ಯಕ್ರಮವನ್ನು  ಉದ್ಘಾಟಿಸಿ ಮಾತನಾಡಿದರು.     ದೇಹದ ಯಾವುದೇ ಭಾಗಕ್ಕೂ ಪೆಟ್ಟಾದರೂ ಚಿಕಿತ್ಸೆ ಪಡೆಯಬಹುದು, ಆದರೆ ಮನುಷ್ಯನ ತಲೆಗೆ ಪೆಟ್ಟಾದರೆ  ಜೀವ ಹೋಗುವ ಸಂಭವವಿರುತ್ತದೆ ಎಲ್ಲರೂ ಹೆಲ್ಮೆಟ್ ಧರಿಸಬೇಕು   ಬೈಕ್ ಸವಾರನಾ ತಲೆ ಒಂದು ಮೊಟ್ಟೆ ಇದ್ದಂತೆ ಮೊಟ್ಟೆ  ಒಡೆದರೆ ಅದನ್ನು ಜೋಡಿಸಲು ಆಗುವುದಿಲ್ಲವೋ ಅದೇ ರೀತಿಯಾಗಿ ಮನುಷ್ಯನ ತಲೆಯೂ ಒಂದು ಮೊಟ್ಟೆ ಇದ್ದಂತೆ  ಆದ್ದರಿಂದ ತಲೆಗೆ ಪೆಟ್ಟಾಗದಂತೆ ಕಾಪಾಡಿಕೊಳ್ಳುವುದು  ಪ್ರತಿಯೊಬ್ಬ ಬೈಕ್ ಸವಾರನ  ಕರ್ತವ್ಯವಾಗಿದೆ ಎಂದು ಹೇಳಿದರು. ಪೊಲೀಸರು ಎಷ್ಟೇ ಬೈಕ್ ಸವಾರರಿಗೂ ದಂಡ  ಹಾಕಿದರು ಹೆಲ್ಮೆಟ್ ಧರಿಸುವುದನ್ನು ಅಭ್ಯಾಸ ಮಾಡಿಕೊಳ್ಳುತ್ತಿಲ...
Image
  ಸಿಯಾತಲಾಬ್‌ ಕೊಳಗೇರಿ ಅಭಿವೃದ್ಧಿ ನಿಗಮ ಮನೆ ನಿರ್ಮಾಣ ಕಾಮಗಾರಿ ವೀಕ್ಷಣೆ :                  ಮನೆಗಳ ನಿರ್ಮಾಣ ವಿಳಂಬವಾದರೆ ಅಧಿಕಾರಿಗಳೆ ಹೊಣೆ- ಎ.ವಸಂತಕುಮಾರ                                                                                                                                                                                                      ಜಯ ಧ್ವಜ ನ್ಯೂಸ್ ,ರಾಯಚೂರು, ಏ.23 -   ನಗರದ ಸಿಯಾತಲಾಬ್ ಪ್ರದೇಶಕ್ಕೆ ಇಂದು ವಿಧಾನ ಪರಿಷತ್ ಸದಸ್ಯ ಎ.ವಸಂತಕುಮಾರ ಅವರು ಭೇಟಿ ನೀಡಿ...
Image
  ಸ್ಟೇಶನ್ ರಸ್ತೆಯಲ್ಲಿ ಅಪಘಾತಗಳು ಮುಂದುವರಿಕೆ :        ಸಾರ್ವಜನಿಕರಿಂದ   ರಿಂಗ್ ರೋಡ್ ಕನವರಿಕೆ.                                                           ಜಯ ಧ್ವಜ ನ್ಯೂಸ್ ರಾಯಚೂರು, ಏ.22- ನಗರದ ಸ್ಟೇಶನ್ ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ಬೈಕ್ ಸವಾರನೋರ್ವ ಮೃತಪಟ್ಟಿದ್ದು ಸ್ಟೇಶನ್ ರಸ್ತೆ ಸಾವಿನ ದಾರಿಯಾಗಿ ಮಾರ್ಪಡುತ್ತಿದ್ದು  ಜನರಲ್ಲಿ ಭಯ ಮೂಡಿಸುತ್ತಿದೆ.                          ಯಮ ಸ್ವರೂಪಿ ಲಾರಿ ಮತ್ತು ಬೃಹತ್ ವಾಹನಗಳು ಸ್ಟೇಶನ್ ರಸ್ತೆಯಲ್ಲಿ ಸಂಚರಿಸುತ್ತಿದ್ದು ಬಹುಮಹಡಿ ವಾಣಿಜ್ಯ ಮಳಿಗೆಗಳು ಇನ್ನಿತರ ವ್ಯಾಪಾರ ಚಟುವಟಿಕೆಗಳ  ಭರಾಟೆಯಿಂದ ಜನ ಮತ್ತು ವಾಹನಗಳಿಂದ ಸದಾ ಗಿಜಿಗುಡುತ್ತಿರುತ್ತದೆ . ಅಂಗಡಿ ಮುಂಗಟ್ಟುಗಳು ಮುಂದೆ ವಾಹನ ನಿಲುಗಡೆ ಮತ್ತು ಇದೆ ರಸ್ತೆಯಲ್ಲಿ ಲಾರಿ, ಬಸ್ಸು ಮುಂತಾದ ವಾಹನ ಸಂಚಾರದಿಂದ ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರು ಈ ರಸ್ತೆಯಲ್ಲಿ ಸಂಚರಿಸಬೇಕಾದರೆ ಜೀವ ಕೈಯಲ್ಲಿ ಹಿಡಿದು ಓಡಾಡುವ ಪರಿಸ್ಥಿತಿಯಿದೆ  ಸಾಯಿಂಕಾಲವಾದರಂತು ಈ ರಸ್ತೆ ಅಕ್ಷರಶಃ...
Image
  ಜಿಲ್ಲಾಡಳಿತದಿಂದ ಶ್ರೀ ಶಂಕರಾಚಾರ್ಯರ ಜಯಂತ್ಯೋತ್ಸವ: ಶಂಕರಾಚಾರ್ಯರ ಕಾರ್ಯ ಇಂದಿಗೂ ಶಾಶ್ವತ- ಶಾಸಕ ಶಿವರಾಜ ಪಾಟೀಲ್ ಜಯ ಧ್ವಜ ನ್ಯೂಸ್ ,ರಾಯಚೂರು, ಏ. 21-  ಆದಿ ಶಂಕರಾಚಾರ್ಯರು ಸನಾತನ ಧರ್ಮ ರಕ್ಷಣೆಗಾಗಿ ಅವರು ಮಾಡಿದ ಮಹಾನ್ ಕಾರ್ಯ ಇಂದಿಗೂ ಶಾಶ್ವತವಾಗಿದೆ. ಸಹಸ್ರಾರು ವರ್ಷಗಳ ನಂತರವು  ಅವರು ಮಾಡಿದ ಕಾರ್ಯ ಮಹತ್ವದಾಗಿದೆ ಎಂದು ರಾಯಚೂರು ನಗರ ಕ್ಷೇತ್ರದ ಶಾಸಕರಾದ ಡಾ.ಶಿವರಾಜ ಎಸ್.ಪಾಟೀಲ್ ಅವರು ಹೇಳಿದರು. ಅವರಿಂದು ಸಂಜೆ ನಗರದ ಗಾಜಗಾರಪೇಟೆಯ ಶೃಂಗೇರಿ ಶಂಕರ ಮಠದ ಆವರಣದಲ್ಲಿ ಜಿಲ್ಲಾಡಳಿ, ಜಿಲ್ಲಾ ಪಂಚಾಯತ್,  ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ‌ ಹಮ್ಮಿಕೊಳ್ಳಲಾಗಿದ್ದ ಶ್ರೀ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ  ಮಾತನಾಡಿದರು. ನಾವು ಹಿಂದೂ ಎಂದು ಹೇಳಿಕೊಳ್ಳಲು ಶಂಕರಾಚಾರ್ಯರು ಮೂಲಕಾರಣ ಆಗಿದ್ದಾರೆ. ರಾಯಚೂರಿನ ಶೃಂಗೇರಿ ಶಂಕರ ಮಠಕ್ಕೆ ಬೇಕಾಗುವ ಅಗತ್ಯ ಸೌಕರ್ಯಗಳನ್ನು ಒದಗಿಸಲು ಶ್ರಮಿಸಲಾಗುವುದು. ಈಗಾಗಲೇ ಸಮಾಜದ ಆನೇಕ ಅಭಿವೃದ್ಧಿ ಕೆಲಸ ಕಾರ್ಯವನ್ನು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಅತ್ಯುತ್ತಮ ಕೆಲಸ ಕಾರ್ಯಗಳನ್ನು ‌ಮಾಡಲಾಗುತ್ತದೆ ಎಂದರು. ಉಪನ್ಯಾಸಕರಾಗಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರಿನ ಧಾರ್ಮಿಕ ಉಪನ್ಯಾಸಕರು ಹಾಗೂ ಪುರೋಹಿತರಾದ ಸುಪ್ರತೀಕ ಭಟ್ ಅವರು ಮಾತನಾಡಿ, ಭಾರತದ ಶ್ರೇಷ್ಠ ಆಧ್ಯಾತ್ಮಿಕ ನಾಯಕ ತತ್...
Image
  ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿವಿಯಲ್ಲಿ ಶ್ರೀ ಶಂಕರಾಚಾರ್ಯ ಜಯಂತಿ ಆಚರಣೆ: ಶಂಕರಾಚಾರ್ಯರು ಆಧ್ಯಾತ್ಮ ಲೋಕದ ಧರ್ಮೋದ್ದಾರಕರು - ಪ್ರೊ.ಶಿವಾನಂದ ಕೆಳಗಿನಮನಿ ಜಯ ಧ್ವಜ ನ್ಯೂಸ್ ,ರಾಯಚೂರು,ಏ.೨೧- ಆತ್ಮಜ್ಞಾನ ಎನ್ನುವುದು ಬ್ರಹ್ಮಜ್ಞಾನವಾಗಿ ಪ್ರತಿಯೊಬ್ಬರಲ್ಲೂ ಇರುವಂತಹದ್ದು ಎಂದು ತೋರಿಸಿಕೊಟ್ಟವರು ಶ್ರೀ ಶಂಕರಾಚಾರ್ಯರು ಭಾರತೀಯ ಧಾರ್ಮಿಕ ಪಂಥದೊಳಗೆ ವಿಶೇಷವಾಗಿ ಗುರುತಿಸಲ್ಪಡುತ್ತಾರೆ. ಮನುಷ್ಯ ಜಾತಿಯಲ್ಲಿ ಹುಟ್ಟಿದ ಪ್ರತಿಯೊಬ್ಬರು ಬ್ರಹ್ಮಜ್ಞಾನ ಹೊಂದಲು ಸಾಧ್ಯ ಎಂದು ಸಂದೇಶ ಸಾರಿದವರು ಶಂಕರಾಚಾರ್ಯರು ಎಂದು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಶಿವಾನಂದ ಕೆಳಗಿನಮನಿ ಅವರು ಹೇಳಿದರು. ಅವರಿಂದು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭಾಂಗಣದಲ್ಲಿ ಶ್ರೀ ಆದಿಗುರು ಶಂಕರಾಚಾರ್ಯರ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ಜೀವಾತ್ಮ ಪರಮಾತ್ಮ ಎನ್ನುವುದರಲ್ಲಿ ಯಾವುದೇ ವ್ಯತ್ಯಾಸಗಳಿಲ್ಲ. ಜೀವಾತ್ಮ ಪರಮಾತ್ಮ ಮಧ್ಯೆ ಮಾಯೆ ಮುಸುಕಿಕೊಂಡಿದೆ ಮಾಯೆಯನ್ನು ಬಿಡಿಸಿಕೊಳ್ಳುವ ವ್ಯಕ್ತಿ ಪರಮಾತ್ಮನ ಸನ್ನಿಧಿಗೆ ಹೋಗಬಹುದು ಅಥವಾ ಪರಮಾತ್ಮನಾಗಬಹುದು ಎಂಬ ತತ್ವವನ್ನು ಸಾರಿದವರು ಮತ್ತು ಅಹಂಬ್ರಹ್ಮಾಸ್ಮಿ ಪರಿಕಲ್ಪನೆ ಹೇಳಿದವರು ಶಂಕರಾಚಾರ್ಯರು ಎಂದು ಅವರು ಹೇಳಿದರು. ಶಂಕರಾಚಾರ್ಯರು ಅತಿ ಕಡಿಮೆ ವಯಸ್ಸಿನಲ್ಲೇ ದೇಶದಾದ್ಯಂತ ಸಂಚರಿಸಿ ಧಾರ್ಮಿ...
Image
  ಜಿಲ್ಲಾಡಳಿತದಿಂದ ಬಸವ ಜಯಂತೋತ್ಸವ: ಸಮಾನತೆಯ ತತ್ವದ ಪ್ರತಿಪಾದಕ ಬಸವಣ್ಣ- ಶಾಸಕ ಡಾ.ಶಿವರಾಜ ಪಾಟೀಲ್ ಜಯ ಧ್ವಜ ನ್ಯೂಸ್ ,ರಾಯಚೂರು, ಏ 20- ಸಮಾನತೆಯ  ತತ್ವವನ್ನು ಪ್ರತಿಪಾದಿಸಿದ ಕೀರ್ತಿ ಬಸವಣ್ಣ ಅವರದ್ದು, ಅವರ ಆದರ್ಶವನ್ನು ನಾವೆಲ್ಲರೂ ಪಾಲಿಸಬೇಕೆಂದು ರಾಯಚೂರು ನಗರದ ಕ್ಷೇತ್ರದ ಶಾಸಕರಾದ ಡಾ.ಶಿವರಾಜ ಎಸ್.ಪಾಟೀಲ್ ಅವರು ಹೇಳಿದರು. ಅವರಿಂದು ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಯಚೂರು ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸಮಾಜದವರು ಒಗ್ಗಟಾಗಿ ಸಮಾಜದ ಏಳಿಗೆ ಶ್ರಮಿಸಬೇಕು. ಸಮಸ್ಯೆಗಳು ಇದ್ದಲ್ಲಿ ಯಾವುದೇ ಸರ್ಕಾರ ಇರಲಿ ಹೋರಾಟ ಮಾಡಿ, ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು. ಕಾಯಕವೇ ಕೈಲಾಸ ತತ್ವದಡಿ ಎಲ್ಲರೂ ಸಮಾನರು ಯಾವುದೇ ಕೆಲಸದಲ್ಲಿ ಮೇಲು–ಕೀಳಿಲ್ಲ ಎಂದು ಸಾರಿದ ಬಸವಣ್ಣ ಅವರು ಸಾಮಾಜಿಕ ಕ್ರಾಂತಿಯ ಹರಿಕಾರರು ಹೌದು. ದೇಶದಲ್ಲಿ ಅನುಭವ ಮಂಟಪದ ಮೂಲಕ ಸಾಮೂಹಿಕ ಶಿಕ್ಷಣಕ್ಕೆ ಚಾಲನೆ ನೀಡಿದವರಲ್ಲಿ ಬಸವಣ್ಣ ಮೊದಲಿಗರು. ವಿದ್ಯೆಯಿಂದ ವಂಚಿರಾದವರಿಗೆ, ಮಹಿಳೆಯರಿಗೆ ಅಲ್ಲಿ ಶಿಕ್ಷಣ ಹಾಗೂ ಅಭಿಪ್ರಾಯ ವ್ಯಕ್ತಪಡಿಸಲು ಮುಕ್ತ ಅವಕಾಶ ಮಾಡಿಕೊಟ್ಟು ಸಾಮಾಜಿಕ ಬದಲಾವಣೆಗೆ ಕಾರಣರಾದರು ಎಂದು ಶಾಸಕರು ಹೇಳಿದರು. ಏಪ್ರಿಲ್ 22ರಂದು‌ ರಾಯಚೂರಿನಲ್ಲಿ ಸಮ...