Posts

Showing posts from May, 2026
Image
ದರ್ವೇಶ ಕಂಪನಿ ಹೂಡಿಕೆದಾರರಿಗೆ ಪಾರದರ್ಶಕವಾಗಿ ಹಣ ಮರುಪಾವತಿಯಾಗಬೇಕು- ಅಂಬಾಜಿ ಮೈದರ್ಕರ್.                                    ಜಯ ಧ್ವಜ ನ್ಯೂಸ್, ರಾಯಚೂರು,ಜೂ.1-   ದರ್ವೇಶ ಕಂಪನಿ ಹೂಡಿಕೆದಾರರಿಗೆ ಪಾರದರ್ಶಕವಾಗಿ ಹಣ ಮರುಪಾವತಿ ಮಾಡಬೇಕೆಂದು ಸಮಾಜ ಸೇವಕ ಅಂಬಾಜಿ ಮೈದರ್ಕರ್ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾದ ನಂತರ ಹೂಡಿಕೆದಾರರಿಗೆ ಡಿಜಿಪೆಕ್ಸ್ ಮುಖಾಂತರ ಮಾಸಿಕ ಹಣ ಮರುಪಾವತಿಸಲು ಯೋಜನೆ ಜಾರಿಗೊಳಿಸಲಾಗಿದ್ದು ಅದನ್ನು ಸಮರ್ಪಕವಾಗಿ ಪಾರದರ್ಶಕವಾಗಿ ಮಾಡಿದರೆ ಮಾತ್ರ ಸಂಕಷ್ಟದಲ್ಲಿರುವ ಹೂಡಿಕೆದಾರರಿಗೆ ನ್ಯಾಯ ಸಿಗುತ್ತದೆ ಎಂದರು. ಡಿಜಿಪೆಕ್ಸ್ ಮರುಪಾವತಿ ದರ್ವೇಶ್ ಸಂಸ್ಥೆ ಆಡಿಯಲ್ಲೆ ನಡಿಯಬೇಕು ಬೇರೆಯವರಿಗೆ ವಹಿಸಿದರೆ ಅದು ಸರಿಯಾಗಿ ನಡೆಯುವುದಿಲ್ಲವೆಂದು ಹೇಳಿದರು. ತಕ್ಷಣ ದರ್ವೇಶ ಕಂಪನಿ ಮಾಲೀಕರು, ಏಜೆಂಟರು ಹೂಡಿಕೆದಾರರಿಗೆ ಮರುಪಾವತಿ ಪ್ರಾರಂಭಿಸಬೇಕು ಎಂದರು. ಈ ಸಂದರ್ಭದಲ್ಲಿ ಮಸೂದ ಅಲಿ, ಮತೀನ್, ಶಂಶುದ್ದೀನ್ ಇನ್ನಿತರರು ಉಪಸ್ಥಿತರಿದ್ದರು.
Image
  18 ನೇ ರೈಲ್ವೆ ಜೋನ್ ಅಸ್ತಿತ್ವಕ್ಕೆ- ಡಾ.ಬಾಬುರಾವ್ ಜಯ ಧ್ವಜ ನ್ಯೂಸ್ ರಾಯಚೂರು,ಮೇ.31-  ರೈಲ್ವೆ ಇಲಾಖೆಯ 18 ನೇ ರೈಲ್ವೆ ಜೋನ್ ಅಸ್ತಿತ್ವಕ್ಕೆ ಬಂದಿದೆ ಎಂದು ರೈಲ್ವೆ ಸಲಹಾ ಸಮಿತಿಯ ಮಾಜಿ ಸದಸ್ಯ ಡಾ. ತಿಳಿಸಿದ್ದಾರೆ. ದಕ್ಷಿಣ ಮಧ್ಯ ರೈಲ್ವೆ ಜೋನ್ ನಲ್ಲಿದ್ದ ವಿಜಯವಾಡ, ಗುಂಟೂರು, ಗುಂತಕಲ್,ವಿಶಾಖಪಟ್ಟಣಂ ವಿಭಾಗಗಳನ್ನು ಒಳಗೊಂಡಂತೆ ಹೊಸದಾಗಿ ಸೌತ್ ಕೋಸ್ಟ್ ರೈಲ್ವೆ ಜೋನ್ ಅಸ್ತಿತ್ವಕ್ಕೆ ಬಂದಿದ್ದು ಜೂನ್ ಒಂದರಂದು ಪ್ರಾರಂಭವಾಗಲಿದೆ ಎಂದು ಅವರು ತಿಳಿಸಿದ್ದಾರೆ. ರಾಯಚೂರು ಹಾಗೂ ಯಾದಗಿರಿಗಳು ಮೊದಲಿನಂತೆ ದಕ್ಷಿಣ ಮಧ್ಯೆ ರೈಲ್ವೆ ಜೋನ್ ನಲ್ಲಿ ಮುಂದುವರೆಯಲಿವೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Image
  ಅಂತರರಾಷ್ಟ್ರೀಯ ಕಾಮಿಕ್ಸ್ ಸ್ಪರ್ಧೆಯಲ್ಲಿ ಜಿಲ್ಲೆಯ ಸಿರಿ ಪರವತಿನೇನಿಗೆ ಗೌರವ ಪ್ರಶಸ್ತಿ ಜಯ ಧ್ವಜ ನ್ಯೂಸ್ ,ರಾಯಚೂರು,ಮೇ.30- ಜಿಲ್ಲೆಯ ಅಮರೇಶ್ವರ ಕ್ಯಾಂಪ್ ನಿವಾಸಿ ವಿನೋದಕುಮಾರ ಅವರ ಪುತ್ರಿ ಸಿರಿ ಪರವತಿನೇನಿ ಅವರು ಅಂತರರಾಷ್ಟ್ರೀಯ ಮಟ್ಟದ ನಾಲ್ಕನೇ ಎಫ್‌ಪಿಜಿ ವಿಶ್ವವಿದ್ಯಾಲಯಗಳ ಎಸ್‌ಡಿಜಿಗಳ ಇಂಗ್ಲಿಷ್ ನಾಲ್ಕು-ಫ್ರೇಮ್ ಕಾಮಿಕ್ಸ್ ಸ್ಕ್ರಿಪ್ಟ್ ಸ್ಪರ್ಧೆ-2026ರಲ್ಲಿ ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಸ್ತುತ ಬೆಂಗಳೂರಿನ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಡಿಸೈನ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಸಿರಿ, "ಜಸ್ಟ್ ಒನ್ ಚಾಯಿಸ್" ಎಂಬ ಶೀರ್ಷಿಕೆಯ ಕಾಮಿಕ್ಸ್ ಕೃತಿಯ ಮೂಲಕ ಈ ಸಾಧನೆ ಮಾಡಿದ್ದಾರೆ. ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ ಒಂದಾದ ಎಸ್‌ಡಿಜಿ-12 (ಜವಾಬ್ದಾರಿಯುತ ಬಳಕೆ ಮತ್ತು ಉತ್ಪಾದನೆ) ವಿಷಯವನ್ನು ಆಧರಿಸಿ ರಚಿಸಲಾದ ಈ ಕಾಮಿಕ್ಸ್, ಪ್ಲಾಸ್ಟಿಕ್ ತ್ಯಾಜ್ಯದ ದುಷ್ಪರಿಣಾಮಗಳು ಹಾಗೂ ಪರಿಸರ ಸ್ನೇಹಿ ಆಯ್ಕೆಗಳ ಮಹತ್ವವನ್ನು ಪರಿಣಾಮಕಾರಿಯಾಗಿ ಚಿತ್ರಿಸಿದೆ. ತೈವಾನ್‌ನ ಮಿಂಗ್ ಚಿ ತಂತ್ರಜ್ಞಾನ ವಿಶ್ವವಿದ್ಯಾಲಯ ಹಾಗೂ ಚಾಂಗ್ ಗುಂಗ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯಗಳು ಜಂಟಿಯಾಗಿ ಆಯೋಜಿಸಿದ್ದ ಈ ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ವಿವಿಧ ದೇಶಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ಸಿರಿಯವರ ಸೃಜನಶೀಲತೆ, ಸಾಮಾಜಿಕ ಕಾಳಜಿ ಹಾಗೂ ಪರಿ...
Image
  ಶೃತಿ ಸಾಹಿತ್ಯ ಮೇಳದಿಂದ ಶ್ರುತಿ-ಸಂಸ್ಕೃತಿ ಉಪನ್ಯಾಸ ಕಾರ್ಯಕ್ರಮ: ಆಳವಾದ ಅಧ್ಯಯನದಿಂದ ಮಾತ್ರ  ಪರಿಪೂರ್ಣ ಜ್ಞಾನ ಪ್ರಾಪ್ತಿ -ವಿಜಯಸಿಂಹಾಚಾರ್ಯ      ಜಯ ಧ್ವಜ ನ್ಯೂಸ್ ,ರಾಯಚೂರು,ಮೇ.30- ಯಾವುದೇ ವಿಷಯವಿರಲಿ ಆ ವಿಷಯದ ಬಗ್ಗೆ ಆಳವಾದ ಅಧ್ಯಯನವನ್ನು ಮಾಡಿದಾಗ ಮಾತ್ರ ಪರಿಪೂರ್ಣ ಜ್ಞಾನ ಲಭಿಸಿ ಸಂಸ್ಕೃತಿ ಹಾಗೂ ಸಂಸ್ಕಾರ ಅನಾವರಣಗೊಳ್ಳುತ್ತದೆ, ಎಂದು ಖ್ಯಾತ ವಿದ್ವಾಂಸರು, ಸಾಹಿತಿಗಳಾದ  ಪಂ. ಸಿ.ಜೆ.ವಿಜಯಸಿಂಹಾಚಾರ್ಯ ತೋಟಂತಿಲ್ಲಾಯ ಅವರು ಹೇಳಿದರು.   ಅವರು ಶ್ರುತಿ ಸಾಹಿತ್ಯ ಮೇಳ ರಾಯಚೂರು ವತಿಯಿಂದ ಶುಕ್ರವಾರದಂದು ಬೆಳಗ್ಗೆ ನಗರದ ಎಸ್‌ ಆರ್. ಕೆ.ಬಿ.ಎಡ್. ಕಾಲೇಜಿನ ಟ್ಯಾಗೋರ್ ಸಭಾಂಗಣದಲ್ಲಿ ಏರ್ಪಡಿಸಿದ ಶ್ರುತಿ ಸಂಸ್ಕೃತಿ ಕಾರ್ಯಕ್ರಮದಲ್ಲಿ ಸಂಸ್ಕೃತಿ ಮತ್ತು ಸಂಸ್ಕಾರ ಎಂಬ ವಿಷಯದ ಮೇಲೆ ಮಾತನಾಡಿದರು. ಸಾಧನೆಯಿಂದ ನಿಧಾನವಾಗಿ  ಹುಟ್ಟಿದ ಪ್ರತಿಭೆ  ಕೊನೆಯವರೆಗೂ ಇರುತ್ತದೆ. ಆದರೆ ಪ್ರಸ್ತುತ ಪ್ರತಿಭೆಗಳು ಹಾಗೂ ಜ್ಞಾನಅಂದೇ ಹುಟ್ಟಿ ಅಂದೆ ಸಾಯುತ್ತವೆ. ಇಂದು ಅತಿಯಾದ ತಂತ್ರಜ್ಞಾನದ ಬಳಕೆಯ ಮೇಲೆ  ಅವಲಂಬಿತಗೊಂಡು ಸ್ವಂತಿಕೆಯು ಮರೆಯಾಗುತ್ತಿದೆ, ಆದ್ದರಿಂದ ಪ್ರತಿಯೊಬ್ಬರೂ ನಿರಂತರ ಸತತ ಅಧ್ಯಯನದ ರೂಢಿಯನ್ನು ಬೆಳೆಸಿಕೊಳ್ಳಬೇಕೆಂದು ಹೇಳಿದರು.  ಕಾರ್ಯಕ್ರಮವನ್ನು ಉದ್ಘಾಟಿಸಿದ ಅಂತರಾಷ್ಟ್ರೀಯ ಕಲಾವಿದರಾದ ಪಂಡಿತ ನರಸಿಂಹಲು ವಡವಾಟಿಯವರು ಮಾತನಾಡಿ...
Image
  ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ಜಿಲ್ಲೆಯಿಂದ ಯಾರಿಗೆ ಒಲಿಯಲಿದೆ ಮಂತ್ರಿ ಸ್ಥಾನ?                                                    ಜಯ ಧ್ವಜ ನ್ಯೂಸ್, ರಾಯಚೂರು,ಮೇ.29-    ಸಿದ್ದರಾಮಯ್ಯ ರಾಜೀನಾಮೆಯಿಂದ ತೆರವಾದ ಮುಖ್ಯಮಂತ್ರಿ ಸ್ಥಾನವನ್ನು ಡಿಕೆ ಶಿವಕುಮಾರ್  ಅಲಂಕರಿಸುವುದು  ಬಹುತೇಕ ಖಚಿತ ಎನ್ನಲಾಗಿದ್ದು ನಾಳೆ ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಮಾಡಲಾಗುತ್ತದೆ ಎನ್ನಲಾಗಿದೆ .ಅವರ ನೇತೃತ್ವದ ಸರ್ಕಾರದಲ್ಲಿ ಯಾರೆಲ್ಲ ಮಂತ್ರಿ ಮಂಡಲ ಸೇರುತ್ತಾರೆ ಎಂಬುದು ಇನ್ನೂ ನಿಖರವಾಗಿಲ್ಲ ಈಗಾಗಲೆ ಸಚಿವ ಸ್ಥಾನ ಆಕಾಂಕ್ಷಿಗಳು ಹೈಕಮಾಂಡ್ ಗೆ ಮನವರಿಕೆ ಮಾಡುವಲ್ಲಿ ನಿರತರಾಗಿದ್ದಾರೆ . ರಾಯಚೂರು ಜಿಲ್ಲೆಯಿಂದ ಯಾರಿಗೆ ಮಂತ್ರಿ ಸ್ಥಾನ ಸಿಗುತ್ತದೆ ಎಂಬ ಕುತೂಹಲವಿದ್ದು ಹೊಸ ಮುಖಗಳಿಗೆ ಮಣೆ ಹಾಕಲಾಗುತ್ತದೆಯೋ ಅಥವಾ ಹಳಬರನ್ನೇ ಮುಂದುವರಿಸುತ್ತಾರೋ ಎನ್ನುವುದು ಸ್ಪಷ್ಟ ಗೊಂಡಿಲ್ಲ.  ಹಿರಿಯ ರಾಜಕಾರಣಿ ಎಐಸಿಸಿ ಮಟ್ಟದಲ್ಲಿ ತಮ್ಮದೆ ವರ್ಚಸ್ಸು ಹೊಂದಿರುವ ಎನ್ ಎಸ್ ಬೋಸರಾಜುರವರು ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಸಚಿವರಾಗಿದ್ದಾರೆ ಉಳಿದಂತೆ ಜಿಲ್ಲೆಯಿಂದ ನಾಲ್ವರ...
Image
  ತಾಲೂಕಿನಲ್ಲಿ ಎಲ್ ಪಿ ಜಿ ಪೆಟ್ರೋಲ್ ,ಡೀಸೆಲ್ ಅಭಾವವಿಲ್ಲ - ತಹಸೀಲ್ದಾರ್                                      ಜಯ ಧ್ವಜ ನ್ಯೂಸ್ , ರಾಯಚೂರು,ಮೇ.27- ತಾಲೂಕಿನಲ್ಲಿ ಎಲ್ ಪಿ ಜಿ ಪೆಟ್ರೋಲ್ , ಡೀಸೆಲ್ ಅಭಾವವಿಲ್ಲವೆಂದು ತಹಸೀಲ್ದಾರ್ ತಿಳಿಸಿದ್ದಾರೆ. ಗ್ಯಾಸ್ ಏಜೆನ್ಸಿಗಳು, ಪೆಟ್ರೋಲ್ ಬಂಕ್ ಗಳು ನೋ ಸ್ಟಾಕ್ ಬೋರ್ಡ್ ಅಂಟಿಸಬಾರದು ಸೂಕ್ತ ದಾಸ್ತಾನು ಸಂಗ್ರಹಿಸಬೇಕು ಮತ್ತು ನಿಗದಿತ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡಿದರೆ ಅಂತಹವರು ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Image
  ಮುಂಗಾರು ಹಂಗಾಮಿನ ಪೂರ್ವ ಸಿದ್ದತಾ ಸಭೆ: ಬಿತ್ತನೆ ಬೀಜ, ರಸಗೊಬ್ಬರ ಜಿಲ್ಲೆಯಲ್ಲಿ ಸಮರ್ಪಕವಾಗಿ ಪೂರೈಕೆಯಾಗಲಿ -ಜಿಲ್ಲಾಧಿಕಾರಿ ಪೂವಿತಾ. ಎಸ್ ಜಯ ಧ್ವಜ ನ್ಯೂಸ್ ,ರಾಯಚೂರು, ಮೇ.26 - ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಸಮರ್ಪಕವಾಗಿ ಪೂರೈಸಲು ಬೀಜ ಮತ್ತು ರಸಗೊಬ್ಬರಗಳ ಕಂಪನಿಗಳ ಪ್ರತಿನಿಧಿಗಳು ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿಗಳಾದ ಪೂವಿತಾ ಎಸ್. ಅವರು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ‌ನೀಡಿದರು. ಅವರಿಂದು ನಗರದ ನೂತನ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ2026-27ನೇ ಸಾಲಿನ ಮುಂಗಾರು ಹಂಗಾಮಿನ ಪೂರ್ವ ಸಿದ್ದತೆಗಳ ಕುರಿತು ಕೃಷಿ ಇಲಾಖೆ ಹಾಗೂ ಬೀಜ ಮತ್ತು ರಸಗೊಬ್ಬರ ಕಂಪನಿಗಳ ಪ್ರತಿನಿಧಿಗಳಿಗೆ ಕರೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ 2026ರ ಜನವರಿ 1ರಿಂದ ಮೇ 26ರವರೆಗೆ ಒಟ್ಟು 654 ಮಿಲಿ ಮೀಟರ್‌ ಮಳೆಯಾಗಿದ್ದು, ಇದರಲ್ಲಿ ಮಸ್ಕಿ ತಾ‌ಲ್ಲೂಕಿನಲ್ಲಿ ಅತಿ ಹೆಚ್ಚು ಮಳೆಯಾಗಿದೆ ಮತ್ತು ದೇವದುರ್ಗ ತಾಲ್ಲೂಕಿನಲ್ಲಿ ಅತಿ ಕಡಿಮೆ ಮಳೆಯಾಗಿದೆ.2026-27ನೇ  ಸಾಲಿನಲ್ಲಿ ಭತ್ತ, ಜೋಳ, ಮೆಕ್ಕೆ ಜೋಳ, ಸಜ್ಜೆ, ನವಣೆಯಂತಹ ಒಟ್ಟು 2,18,861ಹೆಕ್ಟರ್ ಗಳಷ್ಟು ಏಕದಳ ಧಾನ್ಯಗಳ ಮುಂಗಾರು ಹಂಗಾಮಿನ ಕ್ಷೇತ್ರವಾರು ಗುರಿಯನ್ನು ಹೊಂದಿದ್ದು, ತೊಗರಿ, ಹೆಸರು, ಉದ್ದು, ಅ...
Image
  ನರಸಿಂಹಲು ಮಾಡಗಿರಿ ಉಚ್ಚಾಟನೆಗೆ ಆಗ್ರಹಿಸುವವರಿಂದಲೇ ಪಕ್ಷ ವಿರೋಧಿ ಚಟುವಟಿಕೆ -ರಮೇಶ್.                                                                                    ಜಯಧ್ವಜ ನ್ಯೂಸ್, ರಾಯಚೂರು, ಮೇ.26- ನರಸಿಂಹಲು ಮಾಡಗಿರಿಯವರನ್ನು ಪಕ್ಷದಿಂದ ಉಚ್ಚಾಟಿಸಬೇಕೆಂದು ಆಗ್ರಹಿಸುವವರಿಂದಲೆ ಪಕ್ಷ ವಿರೋಧಿ ಚಟುವಟಿಕೆ ನಡೆಯುತ್ತಿದೆ ಎಂದು ನರಸಿಂಹಲು ಮಾಡಗಿರಿ ಬೆಂಬಲಿಗ ಹಾಗೂ ಸಂಬಂಧಿ ರಮೇಶ್ ಆರೋಪಿಸಿದರು. ಅವರಿಂದು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನಿನ್ನೆ ವಸಂತ ಕುಮಾರ್ ಬೆಂಬಲಿಗರಾದ ಅಂಜಿನ್ ಕುಮಾರ್ ಹಾಗೂ ಇತರರು ನರಸಿಂಹಲು ಮಾಡಗಿರಿಯವರನ್ನು ಪಕ್ಷದಿಂದ ಉಚ್ಚಾಟಿಸಬೇಕೆಂದು ಹೇಳಿದ್ದು ಸಮಂಜಸವಲ್ಲ ಬದಲಾಗಿ ವಸಂತಕುಮಾರ್ ರವರೇ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ವಿರುದ್ಧ ಚಟುವಟಿಕೆ ನಡೆಸಿ ಕಾಂಗ್ರೆಸ್ ಅಭ್ಯರ್ಥಿಯ ಸೋಲಿಗೆ ಕಾರಣರಾಗಿದ್ದಾರೆ ಅಲ್ಲದೆ ಅವರ ಬೆಂಬಲಿಗರು ಶಿವರಾಜ್ ಪಾಟೀಲ್ ರವರನ್ನು ಚುನಾವಣೆಯಲ್ಲಿ ಜಯಶಾಲಿಯಾದ ನಂತರ ಸನ್ಮಾನಿಸಿರುವ ದಾಖಲೆಗಳಿದ್ದು ಯಾರು ಪಕ್ಷದ ವಿರುದ್ಧ ಕೆಲಸ ಮಾಡಿದ್ದಾರೆ ಎನ್...
Image
  ತಾರಕಕ್ಕೇರಿದೆ ಬೆಂಬಲಿಗರ ಆರೋಪ ಪ್ರತ್ಯಾರೋಪ.                     ಜಯ ಧ್ವಜ ನ್ಯೂಸ್, ರಾಯಚೂರು,ಮೇ.26-  ಕಾಂಗ್ರೆಸ್    ಪ್ರಭಾವಿ  ರಾಜಕೀಯ ನಾಯಕರಿಬ್ಬರ ಬೆಂಬಲಿಗರ ಆರೋಪ ಪ್ರತ್ಯಾರೋಪ ತಾರಕಕ್ಕೇರಿದ್ದು ಬೆಂಬಲಿಗರ ಸರಣಿ ಪತ್ರಿಕಾಗೋಷ್ಠಿ ಮೂಲಕ ಏಟಿಗೆ ಎದಿರೇಟು ಎನ್ನುವ ರೀತಿಯಲ್ಲಿ ಸಾಗಿದೆ. ನಗರದ ಹರಿಜನವಾಡದಲ್ಲಿ 5 ಕೋಟಿ ರೂ. ವೆಚ್ಚದ ಡಾ.ಬಾಬು ಜಗಜೀವನರಾಮ್  ಸಮುದಾಯ ಭವನ ನಿರ್ಮಾಣಕ್ಕೆ ಕಾರಣಿಕರ್ತರು ಸಚಿವ ಎನ್.ಎಸ್.ಬೋಸರಾಜು ಕಾರಣವೆಂದು ಬೋಸರಾಜು ಕಟ್ಟಾ ಬೆಂಬಲಿಗರಾದ ನರಸಿಂಹಲು ಮಾಡಿಗಿರಿಯವರು ಪತ್ರಿಕಾ ಜಾಹಿರಾತು ಪ್ರಕಟಗೊಂಡ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಚರ್ಚಿತವಾದ ನಂತರ ಪತ್ರಿಕಾ ಗೋಷ್ಠಿಯಲ್ಲಿ ನರಸಿಂಹಲು ಮಾಡಗಿರಿ ಬೋಸರಾಜುರವರಿಂದಲೆ  ಅಭಿವೃದ್ಧಿ   ನಮ್ಮ ಬಡಾವಣೆಯಲ್ಲಿ ಆಗಿದೆ  ವಸಂತ ಕುಮಾರ್ ಅಭಿವೃದ್ಧಿ ಶೂನ್ಯ ವೆಂದು ಹೇಳಿದ ನಂತರ ಮರುದಿನವೇ ವಸಂತ ಕುಮಾರ್ ಬೆಂಬಲಿಗರ ಪಡೆಯಲ್ಲಿ ಗುರುತಿಸಿಕೊಂಡಿರುವ ಅಂಜಿನ ಕುಮಾರ್  ಪತ್ರಿಕಾ ಗೋಷ್ಟಿಯ ಮೂಲಕ ಪ್ರತ್ಯುತ್ತರ ನೀಡಿ ನರಸಿಂಹಲು ಮಾಡಗಿರಿಯವರನ್ನು ಪಕ್ಷದಿಂದ ಉಚ್ಚಾಟಿಸಬೇಕೆಂದು ಹೇಳಿದ ಮರುದಿನವೇ  ನರಸಿಂಹಲು ಮಾಡಗಿರಿ ಬೆಂಬಲಿಗರು ಪತ್ರಿಕಾ ಗೋಷ್ಠಿ ಏರ್ಪಡಿಸಿ ವಸಂತ ಕುಮಾರ್ ಪಕ್ಷ ವಿರೋಧಿ ನಡೆ ಬಗ್ಗೆ ಎಳೆ ಎಳೆಯಾಗಿ ಬಿಡಿ...
Image
  ಕೆಲ ಅರ್ಹ ಫಲಾನುಭವಿಗಳಿಗೆ ಜಮಾ ಆಗದ ವಿಧವಾವೇತನ , ಅಂಗವಿಕಲ ಮಾಸಾಶನ, ಗೃಹ ಲಕ್ಷ್ಮಿ ಹಣ                                                                    ಜಯ ಧ್ವಜ ನ್ಯೂಸ್, ರಾಯಚೂರು, ಮೇ.25-  ನಗರದ    ಕೆಲ  ಅರ್ಹ ಫಲಾನುಭವಿಗಳಿಗೆ ಸರ್ಕಾರದಿಂದ ದೊರೆಯುವ ಮಾಸಾಶನ, ಗ್ಯಾರಂಟಿ ಹಣ ಜಮಾ ಆಗದಿರುವುದರಿಂದ  ಫಲಾನುಭವಿಗಳು ಆತಂಕಕ್ಕೊಳಗಾಗಿದ್ದಾರೆ.  ಕಳೆದ ಎರೆಡು ತಿಂಗಳಿನಿಂದ ವಿಧವಾ , ಅಂಗವಿಕಲ ಮಾಸಾಶನ, ಗೃಹ ಲಕ್ಷ್ಮಿ ಹಣ, ಬಂದಿಲ್ಲವೆಂದು ದೂರಿರುವ ಫಲಾನುಭವಿಗಳು  ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ . ತಮ್ಮ ಖಾತೆಯಿರುವ ಅಂಚೆ ಕಛೇರಿಗೆ ಅಲೆದಾಡಿ ಸುಸ್ತಾಗಿದ್ದಾರೆ.
Image
    ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ನೇಮಕಾತಿಗೆ ಆಗ್ರಹಿಸಿ ಶಿಕ್ಷಕ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯಿಂದ ಪ್ರತಿಭಟನೆ ಜಯ ಧ್ವಜ ನ್ಯೂಸ್ ,ರಾಯಚೂರು ,ಮೇ.25- ಪ್ರಾಥಮಿಕ, ಪದವೀಧರ ಮತ್ತು ಪ್ರೌಢಶಾಲಾ ಶಿಕ್ಷಕರು ಹಾಗು ದೈಹಿಕ ಶಿಕ್ಷಣ ಶಿಕ್ಷಕರು, ಚಿತ್ರಕಲ ರಂಗ ಕಲ ಮತ್ತು ಸಂಗೀತ ಶಿಕ್ಷಕರ ನೇಮಕಾತಿಗೆ ಕೂಡಲೇ ಅಧಿಸೂಚನೆ ಹೊರಡಿಸಲು ಆಗ್ರಹಿಸಿ ಇಂದು ಅಂಬೇಡ್ಕರ್ ವೃತ್ತದಲ್ಲಿ ಶಿಕ್ಷಕ ಆಕಾಂಕ್ಷಿ ಅಭ್ಯರ್ಥಿಗಳು ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಲಾಯಿತು. ಹಲವಾರು ವರ್ಷಗಳಿಂದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಶಿಕ್ಷಕರ ನೇಮಕಾತಿಯನ್ನು ಮಾಡಿರುವುದಿಲ್ಲ. ಪ್ರತಿ ವರ್ಷ 15 ರಿಂದ 20 ಸಾವಿರ ಶಿಕ್ಷಕರು ನಿವೃತ್ತಿಯಾಗುತ್ತಿದ್ದಾರೆ. ಆ ಹುದ್ದೆಗಳನ್ನು ಹಾಗೆಯೇ ಖಾಲಿ ಬಿಡಲಾಗಿದೆ.  ಇಡೀ ರಾಜ್ಯದಲ್ಲಿ ಅಂದರೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಲ್ಲಿ 79,694 ಹುದ್ದೆಗಳು ಖಾಲಿ ಇವೆ.  ಕಲ್ಯಾಣ ಕರ್ನಾಟಕ ಭಾಗವು ಇಡೀ ರಾಜ್ಯದಲ್ಲಿಯೇ ಶಿಕ್ಷಕರ ಗಂಭೀರ ಕೊರತೆಯನ್ನು ಎದುರಿಸುತ್ತಿದೆ. ಕಲ್ಯಾಣ ಕರ್ನಾಟಕದ ಶಾಲೆಗಳಲ್ಲಿ ಒಟ್ಟು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸೇರಿದಂತೆ 22,595 ಹುದ್ದೆಗಳು ಖಾಲಿ ಬಿದ್ದಿವೆ. ಅದರಲ್ಲಿ 18,317 ಪ್ರಾಥಮಿಕ ಶಾಲಾ ಶಿಕ್ಷಕರು, 4278 ಪ್ರೌಢಶಾಲಾ ಶಿಕ್ಷಕರ ಅನುಮೋದಿತ ಹುದ್ದೆಗಳು ಖಾಲಿ ಬಿಡಲಾಗಿದೆ. ಈ ವಿಷಯದಲ್ಲಿ ರಾಯ...
Image
  ಸ್ಟೇಶನ್ ರಸ್ತೆಯಲ್ಲಿ ಕೂದಲೆಳೆ ಅಂತರದಲ್ಲಿ ತಪ್ಪಿದ ರಸ್ತೆ ಅಪಘಾತ.                                                                                            ಜಯ ಧ್ವಜ ನ್ಯೂಸ್, ರಾಯಚೂರು,ಮೇ.24-      ಅಪಘಾತ ವಲಯವೆಂದೆ ಕುಖ್ಯಾತಿ ಪಡೆದ ಸ್ಟೇಶನ್ ರಸ್ತೆಯಲ್ಲಿ ಬೆಳಿಗ್ಗೆ ಕೂದಲೆಳೆ ಅಂತರದಲ್ಲಿ ರಸ್ತೆ ಅಪಘಾತ ವೊಂದು ತಪ್ಪಿದ ಪ್ರಸಂಗ ನಡೆದು ವಾಹನ ಸವಾರರು ನಿಬ್ಬೆರಗಾದರು. ಟ್ರಾಕ್ಟರ್ ಅಡ್ಡಾದಿಡ್ಡಿ ಚಲಿಸಿದ ಪರಿಣಾಮ ರಸ್ತೆಯಲ್ಲಿ ಚಲಿಸುತ್ತಿದ್ದ ವಿಶಿಷ್ಟಚೇತನ ತ್ರಿಚಕ್ರ ವಾಹನಕ್ಕೆ ಟ್ರಾಲಿ ತಾಗಿದ ಪರಿಣಾಮ ತ್ರಿಚಕ್ರ ವಾಹನ ರಸ್ತೆ ವಿಭಜಕಕ್ಕೆ ತಳ್ಳಲ್ಪಟ್ಟಿತು ಕೂದಲೆಳೆ ಅಂತರದಲ್ಲಿ ಭಾರಿ ಅಪಘಾತ ತಪ್ಪಿದಂತಾಯಿತು .
Image
  ಬೆಂಗಳೂರು-ಮುಂಬೈ  ಸ್ಲೀಪರ್ ವಂದೇಭಾರತ ರೈಲು ಸಂಚಾರ ಖಚಿತಪಡಿಸಿದ ರೈಲ್ವೆ ಇಲಾಖೆ- ಡಾ.ಬಾಬುರಾವ್ ಜಯ ಧ್ವಜ ನ್ಯೂಸ್ ,ರಾಯಚೂರು, ಮೇ.23- ಬೆಂಗಳೂರು- ಮುಂಬೈ ಮಧ್ಯ ಹೊಸ ಸ್ಲೀಪರ್ ವಂದೇ ಭಾರತ ರೈಲು ಸಂಚರಿಸುವುದನ್ನು ರೈಲ್ವೆ ಇಲಾಖೆ ಖಚಿತ ಪಡಿಸಿದೆ ಎಂದು ರೈಲ್ವೆ ಸಲಹಾ ಸಮಿತಿ ಮಾಜಿ ಸದಸ್ಯ ಡಾ. ಬಾಬುರಾವ್ ಅವರು ತಿಳಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು ಈ ರೈಲು ಬೆಂಗಳೂರಿನಿಂದ ಹೊರಟು, ಗುಂತಕಲ್, ರಾಯಚೂರು, ಕಲಬುರಗಿ, ಸೊಲ್ಲಾಪೂರ ಮಾರ್ಗವಾಗಿ ಸಂಚರಿಸಲಿದೆ. ಟಿಕೆಟ್ ದರ ಮೂರನೇ ದರ್ಜೆ ಏಸಿಗೆ ಪ್ರತಿ ಕಿ.ಮೀಗೆ ಜಿಎಸ್ ಟಿ ಸೇರಿ ರೂ . ದ್ವಿತೀಯ ದರ್ಜೆ ಏಸಿಗೆ  3.10 ರೂ. ಪ್ರಥಮ ದರ್ಜೆ ಏಸಿಗೆ 3.80 ರೂ. ನಿಗದಿಪಡಿಸಲಾಗಿದೆ. ರೈಲು ಸಂಚಾರದ ದಿನಾಂಕವನ್ನು ಶೀಘ್ರದಲ್ಲಿ ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಉದ್ಯಾನ ಎಕ್ಸ್ ಪ್ರೆಸ್ ಬಿಟ್ಟರೆ ಬೆಂಗಳೂರಿನಿಂದ ಮುಂಬೈಗೆ ಸಂಚರಿಸಲು 30 ವರ್ಷಗಳಿಂದ ಬೇರೆ ಯಾವುದೇ ರೈಲುಗಳ ಸೌಲಭ್ಯ ಇರಲಿಲ್ಲ.  ಈಗ ಬೆಂಗಳೂರು-ಮುಂಬೈ ನ್ಯೂ ಸ್ಲೀಪರ್ ವಂದೇಭಾರತ ರೈಲು ಸಂಚಾರದಿಂದಾಗಿ ಮತ್ತೊಂದು ರೈಲಿನ ಸೌಲಭ್ಯ ದೊರೆದಂತಾಗಿದೆ. ಈ ರೈಲು ಉದ್ಯಾನ ಗಿಂತ 9 ಕ್ಕಿಂತ ಹೆಚ್ಚು ತಾಸು ಉಳಿತಾಯ ಮಾಡಲಿದೆ. ಜೊತೆಗೆ ಈ ಭಾಗದ 30 ವರ್ಷದ ಕನಸು  ನನಸಾದಂತಾಗಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರಾ...
Image
  ಪತ್ರಿಕಾ ಭವನದಲ್ಲಿ ರಿಪೋರ್ಟ್ ರ್ಸ್ ಗಿಲ್ಡ್ ನಿಂದ ಪ್ರತಿಭಾ ಪುರಸ್ಕಾರ,  ಐದು ಸಾವಿರ ರೂ. ನಗದು ಬಹುಮಾನ ವಿತರಣೆ  ಜಯ ಧ್ವಜ ನ್ಯೂಸ್ , ರಾಯಚೂರು,ಮೇ.22-   ಪತ್ರಕರ್ತರ ಮಕ್ಕಳಿಗೆ ವಿದ್ಯೆಗೆ ಪ್ರೋತ್ಸಾಹ ನೀಡಲು ಪತ್ರಕರ್ತರ ಸಂಘಗಳು ಸರಕಾರದ ಮೇಲೆ ಒತ್ತಡ ಹಾಕಬೇಕು ಎಂದು ರಾಯಚೂರು ಪ್ರಭಾ ಪತ್ರಿಕೆ ಸಂಪಾದಕರಾದ ಸುಶೀಲೇಂದ್ರ ಸೋದೆಗಾರ ಸಲಹೆ ನೀಡಿದರು. ಅವರಿಂದು ನಗರದ ಪತ್ರಿಕಾ ಭವನದಲ್ಲಿ ಪತ್ರಕರ್ತರ ಮಕ್ಕಳಿಗಾಗಿ  ಎಸ್ ಎಸ್ ಎಲ್ ಸಿ ಪಿಯುಸಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪತ್ರಕರ್ತರ ಮಕ್ಕಳಿಗಾಗಿ ಉತ್ತಮ ಕೆಲಸ ಆಯೋಜಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಮಧ್ಯಮ ವರ್ಗ ದಿಂದ ಅನೇಕ ಪತ್ರಕರ್ತರು ಬಂದಿದ್ದು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶುಲ್ಕ ಕಟ್ಟುವಷ್ಟು ಆರ್ಥಿಕ ಸಾಮರ್ಥ್ಯ ಇರುವುದಿಲ್ಲ.  ಎಲ್ಲರೂ‌ ಸೇರಿ  ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ಅಗತ್ಯ ನೆರವು ಸಿಗುವಂತೆ ಸಂಘಟನೆಗಳು ಸರ್ಕಾರದ ಮೇಲೆ ಒತ್ತಡ ಹಾಕಬೇಕು.. ಪತ್ರಕರ್ತರ ಮಕ್ಕಳಿಗೆ ನೆರವು ಕೊಡಿಸಲು ಸಲಹೆ ಮಾಡಿದರು. ನಗದು ಬಹುಮಾನ 5ಸಾವಿರ ರೂ ನೀಡುತ್ತಿರುವುದಕ್ಕೆ ಶ್ಲಾಘಿಸಿದರು. ರಿಪೋರ್ಟರ್ಸ ಗಿಲ್ಡ್ ಸದಸ್ಯರಾದ ಕೆ.ಸತ್ಯ ನಾರಾಯಣ ಮಾತನಾಡಿ,  ಸಮಾಜದಲ್ಲಿ ಅಂಕುಡೊಂಕುಗಳಿಗೆ ಪರಿಹಾರ ಹುಡುಕುವ ಜೊತೆಗೆ ಕುಟುಂಬ ನಿರ್ವಹಣೆ ಮಾಡಲು ಎಲ್ಲರೂ ಶ್ರಮ ಪಡುತ್ತಾರೆ ಗಿಲ್ಡ್ ನ ಅನೇಕ ಕಾರ್ಯಕ್ರ...
Image
  ಕಾಡ್ಲೂರಿಗೆ ಶ್ರೀ ಪೇಜಾವರ ಶ್ರೀಗಳ ದಿಗ್ವಿಜಯ .                                                              ಜಯ ಧ್ವಜ ನ್ಯೂಸ್, ರಾಯಚೂರು,ಮೇ.21- ತಾಲೂಕಿನ ಕಾಡ್ಲೂರು ಗ್ರಾಮಕ್ಕೆ ಉಡುಪಿ ಪೇಜಾವರ ಮಠಾಧೀಶರಾದ ಶ್ರೀ ಶ್ರೀ 1008 ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದಂಗಳವರು ಬುಧುವಾರ ದಿಗ್ವಿಜಯಗೈದರು. ಗ್ರಾಮಕ್ಕೆ ಆಗಮಿಸಿದ ಅವರನ್ನು ಗ್ರಾಮಸ್ಥರು, ವಿಪ್ರ ಬಾಂಧವರು ವಾದ್ಯ ವೈಭವ ಬಾಣ ಬಿರುಸುಗಳಿಂದ ಪೂರ್ಣಕುಂಭದಿಂದ ಸ್ವಾಗತಿಸಿದರು. ಅನೇಕ ಭಕ್ತಾದಿಗಳು ತಮ್ಮ ಮನೆಗಳಲ್ಲಿ ಶ್ರೀಗಳ ಪಾದಪೂಜೆ ನೆರವೇರಿಸಿದರು. ನಂತರ ಗ್ರಾಮದ ಪುರಾತನ ಹಾಗೂ ವಿಶಿಷ್ಟ ವಾಸ್ತುಶಿಲ್ಪವುಳ್ಳ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಸಂಸ್ಥಾನ ಪೂಜೆ ನೆರವೇರಿಸಿದರು. ಬಂದ ಭಕ್ತಾದಿಗಳಿಗೆ ಫಲ ಮಂತ್ರಾಕ್ಷತೆ ವಿತರಿಸಿದರು. ಕಲ್ಯಾಣಿ ವಾಸುದೇವಾಚಾರ್ಯ ಕುಟುಂಬಸ್ಥರು ಭಕ್ತಾದಿಗಳಿಗೆ  ಸಕಲ ವ್ಯವಸ್ಥೆ ಹಾಗೂ ತೀರ್ಥ ಪ್ರಸಾದ ವ್ಯವಸ್ಥೆ ಮಾಡಿದ್ದರು. ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.                    ಕೃಷ್ಣಾನದಿ ತೀರಕ್ಕೆ ಭೇಟಿ : ಸಾಯಿಂಕಾಲ ಗ್ರಾಮದ ಕೃಷ್ಣಾ...
Image
  ಪತ್ರಕರ್ತ ಸೋಮಣ್ಣ ಗುರಿಕಾರ ನಿಧನಕ್ಕೆ ಪತ್ರಿಕಾ ಭವನದಲ್ಲಿ ಶ್ರದ್ಧಾಂಜಲಿ ಜಯ ಧ್ವಜ ನ್ಯೂಸ್ ,ರಾಯಚೂರು, ಮೇ.19 - ಹಿರಿಯ ಪತ್ರಕರ್ತ ಸೋಮಣ್ಣ ಗುರಿಕಾರ ನಿಧನ ಹಿನ್ನೆಲೆಯಲ್ಲಿ ನಗರದ ಪತ್ರಿಕಾ ಭವನದಲ್ಲಿ ಇಂದು ಶ್ರದ್ಧಾಂಜಲಿ ಸಭೆ ನಡೆಸಲಾಯಿತು. ಮೊದಲಿಗೆ ಒಂದು ನಿಮಿಷ ಮೌನಾಚರಣೆ ಸಲ್ಲಿಸಲಾಯಿತು. ಬಳಿಕ ಸೋಮಣ್ಣ ಗುರಿಕಾರ ಅವರ ಭಾವಚಿತ್ರಕ್ಕೆ ಪತ್ರಕರ್ತರು ಪುಷ್ಪನಮನ ಸಲ್ಲಿಸಿ ಗೌರವ ಸೂಚಿಸಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಆರ್.ಗುರುನಾಥ ಮಾತನಾಡಿ, ಸೋಮಣ್ಣ ಅವರು ಹಟ್ಟಿ ಚಿನ್ನದ ಗಣಿ ಪಟ್ಟಣದಲ್ಲಿ ಕಳೆದ 20 ವರ್ಷಗಳಿಂದ ಒಂದೇ ಸಂಸ್ಥೆಯಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದರು. ಅನೇಕ ಜನಪರ ವರದಿಗಳನ್ನು ಮಾಡಿ ಗಮನ ಸೆಳೆದಿದ್ದರು. ಅವರು ಕಾರ್ಮಿಕರ ಕುಟುಂಬದಿಂದ ಬಂದವರಾಗಿದ್ದು, ಪತ್ರಿಕಾ ವೃತ್ತಿಯಲ್ಲಿ ನಿಷ್ಠೆಯಿಂದ ಕೆಲಸ ಮಾಡಿದ್ದರು ಎಂದು ಸ್ಮರಿಸಿದರು. ಕಳೆದ ಐದು–ಆರು ವರ್ಷಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಈ ವೇಳೆ ಸ್ನೇಹಿತರು ಹಾಗೂ ಸಹೋದ್ಯೋಗಿಗಳು ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ಮೂಲಕ ನೆರವಾಗಿದ್ದರು. ಸಿಎಂ ನಿಧಿ ಸೇರಿದಂತೆ ಹಲವರ ಸಹಾಯದಿಂದ ಚಿಕಿತ್ಸೆಗಾಗಿ ಆರ್ಥಿಕ ನೆರವು ಒದಗಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿರುವುದು ದುಃಖಕರ ಸಂಗತಿ ಎಂದರು. ಪತ್ರಕರ್ತರ ವೃತ್ತಿಯಲ್ಲಿ ಭದ್ರತೆಯ ಕೊರತೆ ಇದೆ. ಆರೋಗ್ಯ ಸಮಸ್ಯೆಗಳಿದ್ದರೂ ಅನೇಕ...
Image
  ರಾಯಚೂರು ಮತ್ತು ಕೊಪ್ಪಳ ಆರ್ ಡಿ ಸಿ ಸಿ ಬ್ಯಾಂಕ್ ನೇಮಕಾತಿ ಹೊಸ ರೋಸ್ಟರ್ ಬಿಂದು ಅನ್ವಯ ಮಾಡಿ- ರವೀಂದ್ರನಾಥ ಪಟ್ಟಿ.                                                                                                                                            ಜಯ ಧ್ವಜ ನ್ಯೂಸ್, ರಾಯಚೂರು,ಮೇ.17-  ರಾಯಚೂರು ಮತ್ತು ಕೊಪ್ಪಳ ಆರ್ ಡಿ ಸಿ ಸಿ ಬ್ಯಾಂಕ್ (371ಜೆ)  ನೇಮಕಾತಿ ಹೊಸ ರೋಸ್ಟರ್  ಬಿಂದು ಅನ್ವಯ ನೇಮಕಾತಿ ಮಾಡುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ರಾಜ್ಯ ಕೋರ್ ಕಮೀಟಿ ಸದಸ್ಯರಾದ ರವೀಂದ್ರನಾಥ ಪಟ್ಟಿ ಹೇಳಿದರು. ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ರಾಜ್ಯ ಸರ್ಕಾರ ತರಾತುರಿಯಲ್ಲಿ ನೇಮಕಾತಿ ಮಾಡುತ್ತಿದೆ ಈಗಾಗಲೆ ಮೌಖಿಕ ಸಂದರ್ಶನ ನಡೆಯುತ್ತಿದೆ ಹೊಸ ರೋಸ್ಟರ್ ಅಡಿ ಮೀಸಲಾತಿ ನೀಡದೆ ಅನ್ಯಾಯ ನಡೆ...
Image
ಪೊಲೀಸರ ವಿರುದ್ಧ ಪತ್ರಕರ್ತರ ತಂಡಕ್ಕೆ  ಒಂಭತ್ತು ವಿಕೆಟ್‌ಗಳ ಭರ್ಜರಿ ಗೆಲುವು: ಪೊಲೀಸ್ ಪರೇಡ್ ಮೈದಾನದಲ್ಲಿ ಸೌಹಾರ್ದ ಕ್ರಿಕೆಟ್ ಪಂದ್ಯ ಜಯ ಧ್ವಜ ನ್ಯೂಸ್, ರಾಯಚೂರು,ಮೇ.17- ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಪೊಲೀಸರು ಮತ್ತು ಪತ್ರಕರ್ತರ ನಡುವೆ ಇಂದು ನಡೆದ ಸೌಹಾರ್ದ ಕ್ರಿಕೆಟ್ ಪಂದ್ಯದಲ್ಲಿ ಪತ್ರಕರ್ತರ ತಂಡ ಒಂಭತ್ತು ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು.   ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಕ್ಷುಗಿರಿ ಬ್ಯಾಟಿಂಗ್ ಮಾಡುವ ಮೂಲಕ ಕ್ರಿಕೆಟ್ ಪಂದ್ಯಕ್ಕೆ ಚಾಲನೆ ನೀಡಿದರು. ಟಾಸ್ ಗೆದ್ದ ಪತ್ರಕರ್ತರ ತಂಡದ ನಾಯಕ ಸಿದ್ಧಯ್ಯ ಸ್ವಾಮಿ  ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. . ಮೊದಲು ಬ್ಯಾಟಿಂಗ್ ಮಾಡಿದ ಪೊಲೀಸರ ತಂಡ 10 ಓವರ್‌ಗಳಲ್ಲಿ 69 ರನ್ ಗಳಿಸಿತು. ಪತ್ರಕರ್ತರ ತಂಡದ ಆಕ್ರಮಣಕಾರಿ ಬೌಲಿಂಗ್ ದಾಳಿಗೆ ಪೊಲೀಸ್ ತಂಡದ ಆಟಗಾರರು ಹೆಚ್ಚು ಕಾಲ ಕ್ರೀಸ್‌ನಲ್ಲಿ ಉಳಿಯಲಿಲ್ಲಿ. ಅಣ್ಣಪ್ಪ ಮೇಟಿಗೌಡ, ಲಕ್ಷ್ಮಣ, ಶ್ರೀಕಾಂತ, ಭೀಮೇಶ ಉತ್ತಮ ಬೌಲಿಂಗ್ ಪ್ರದರ್ಶನ ಮಾಡಿದರು. ಉತ್ತಮ ಕ್ಷೇತ್ರ ರಕ್ಷಣೆ ಕಾಪಾಡಿಕೊಂಡ ಪತ್ರಕರ್ತರ ತಂಡ ಪೊಲೀಸ್ ತಂಡ ಹೆಚ್ಚು ರನ್ ಸೇರಿಸದಂತೆ ಕಡಿವಾಣ ಹಾಕಿತು. ಎಸ್‌ಪಿ ಅರುಣಾಂಕ್ಷುಗಿರಿರವರು ಮಾತ್ರ 19 ರನ್ ಗಳಿಸಿ ನಾಟ್ ಔಟ್ ಆಗಿ ಉಳಿಯುವ ಮೂಲಕ ತಂಡ ಹೆಚ್ಚಿನ ಮೊತ್ತ ಸೇರಿಸಲು ನೆರವಾದರು.   ನಂತರ ಬ್ಯಾಟಿಂಗ್ ಆರಂಭಿಸಿದ ಪತ್ರಕರ್ತರ ತಂಡ ಕೇವಲ 6 ಓವರ್‌ಗಳಲ್ಲಿ ನಿಗದಿತ...
Image
ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಅಧಿಕ ಉಷ್ಣಾಂಶ ದಾಖಲು ಸಾಧ್ಯತೆ:                                                      ಮುನ್ನೆಚ್ಚರಿಕೆಗೆ ಜಿಲ್ಲಾಧಿಕಾರಿ ಎಸ್.ಪೂವಿತಾ ಸಲಹೆ ಜಯ ಧ್ವಜ ನ್ಯೂಸ್ ,ರಾಯಚೂರು ಮೇ.15- ಭಾರತೀಯ ಹವಾಮಾನ ಇಲಾಖೆಯ ವರದಿಯ ಪ್ರಕಾರ ಮುಂದಿನ ದಿನಗಳಲ್ಲಿ ರಾಯಚೂರು ಜಿಲ್ಲೆಯಲ್ಲಿ ಅಧಿಕ ಉಷ್ಣಾಂಶ ದಾಖಲಾಗುವ ಸಾಧ್ಯತೆಯಿದ್ದು, ಸಾರ್ವಜನಿಕರು ಅವಶ್ಯಕ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿಗಳಾದ ಎಸ್.ಪೂವಿತಾ ಅವರು ಸಲಹೆ ನೀಡಿದ್ದಾರೆ.  ರಾಯಚೂರು ಜಿಲ್ಲೆಯಲ್ಲಿ ಅಧಿಕ ಉಷ್ಣಾಂಶ ದಾಖಲಾಗುವ ಸಾಧ್ಯತೆಯಿದ್ದು, ಬಿಸಿ ಗಾಳಿ (ಹೀಟ್ ವೇವ್) ಎಚ್ಚರಿಕೆ ನೀಡಲಾಗಿದೆ. ಹೀಟ್ ವೇವ್ ಸ್ಟ್ರೋಕ್ ನಿಂದಾಗಿ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿರುವುದರಿಂದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮುಂಜಾಗ್ರತಾ ಕ್ರಮವಾಗಿ ಈ ಕೆಳಕಂಡ ಸಲಹೆಗಳನ್ನು ನೀಡಿದೆ. *ಸೂರ್ಯನ ಶಾಖ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಏನು ಮಾಡಬೇಕು:* ಸಾರ್ವಜನಿಕರು ರೇಡಿಯೋ, ಟಿವಿ, ದಿನ ಪತ್ರಿಕೆಗಳಲ್ಲಿ ಬಿಸಿಲಿನ ತಾಪ...
Image
  ನೇತಾಜಿ ನಗರ ಠಾಣೆ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ- ಚಿನ್ನ , ಬೆಳ್ಳಿ ಆಭರಣ ಜಪ್ತಿ.                                         ಜಯಧ್ವಜ ನ್ಯೂಸ್, ರಾಯಚೂರು, ಮೇ.14-   ನೇತಾಜಿ ನಗರ ಪೊಲೀಸ್ ಠಾಣೆ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ ನಡೆಸಿ 1.26ಲಕ್ಷ ರೂ. ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಹನುಮಾನ್ ಟಾಕೀಸ್ ಬಳಿಯ  ಕೊತ್ತಪೇಟೆ ನಿವಾಸಿ ರಹೀಮ ತಂದೆ ಶೇಕ್ ನಜೀರ್ ಮನೆಯ ಬೀಗ ಮುರಿದು 1.49 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿ, ನಗದು ದೋಚಿದ್ದ ಆರೋಪಿ  ರಹೀಮ್  ನನ್ನು ಬಂಧಿಸಿದ ಪೊಲೀಸರು ಚಿನ್ನ ಬೆಳ್ಳಿ ಆಭರಣ ವಶ ಪಡಿಸಿಕೊಂಡಿದ್ದಾರೆ. ಪಶ್ಚಿಮ ವಲಯ ಸಿಪಿಐ, ನೇತಾಜಿ ನಗರ ಠಾಣೆ ಪಿಐಸ್ ಐ, ಸಿಬ್ಬಂದಿಗಳ ಕಾರ್ಯಕ್ಕೆ ಎಸ್ಪಿ , ಎಎಸ್ಪಿ, ಡಿಎಸ್ಪಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
Image
  ಮಾವಿನ ಕೆರೆಗೆ ಜಿಲ್ಲಾಧಿಕಾರಿ ಎಸ್.ಪೂವಿತಾ ಭೇಟಿ ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸೂಚನೆ ಜಯ ಧ್ವಜ ನ್ಯೂಸ್ ,ರಾಯಚೂರು ಮೇ.14 -  ರಾಯಚೂರು ನಗರದ ಐತಿಹಾಸಿಕ ಮಾವಿನಕೆರೆ ಪ್ರದೇಶಕ್ಕೆ ಜಿಲ್ಲಾಧಿಕಾರಿಗಳಾದ ಎಸ್.ಪೂವಿತಾ ಅವರು ಮೇ.13ರ ಬುಧುವಾರ ದಂದು ಭೇಟಿ ನೀಡಿ ಪರಿಶೀಲಿಸಿದರು. ಕೆರೆ ಅಭಿವೃದ್ಧಿ ಕಾಮಗಾರಿಯ ವೀಕ್ಷಣೆ ನಡೆಸಿ, ಜಿಲ್ಲಾಧಿಕಾರಿ ಎಸ್.ಪೂವಿತಾ ಅವರು ಮಾತನಾಡಿ, ಕೆರೆ ಅಭಿವೃದ್ಧಿ ಕಾಮಗಾರಿಯನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕು. ಕಾಮಗಾರಿಗೆ ಯಾವುದೇ ಅಡೆತಡೆ ಬಂದರೆ ಕೂಡಲೇ ಜಿಲ್ಲಾಡಳಿತವನ್ನು ಸಂಪರ್ಕ ಮಾಡಬೇಕು ಹಾಗೂ ಕಾಮಗಾರಿಯನ್ನು ಗುಣಮಟ್ಟದಿಂದ ಮಾಡಬೇಕೆಂದು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು. ನಂತರ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಂದ ಕೆರೆಯ ವಿಸ್ತರಣೆ ಮಾಹಿತಿಯನ್ನು ಪಡೆದರು. ಮಾವಿನಕೆರೆಗೆ ಬೇರೆ ಬೇರೆ ಕಡೆಗಳಿಂದ ಗಟಾರು ನೀರು ಕೆರೆಗೆ ಹರಿದು ಬರದಂತೆ ನೋಡಿಕೊಳ್ಳಬೇಕು. ಸಾರ್ವಜನಿಕರು ಕೆರೆಗೆ ಕಸ ಮತ್ತು ಪ್ಲಾಸ್ಟಿಕ್ ಎಸೆಯದಂತೆ ಜನರಲ್ಲಿ ಜಾಗೃತಿ ಮೂಡಿಸಬೇಕೆಂದು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು. ಇದೇ ಸಂದರ್ಭದಲ್ಲಿ ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹಪಾತ್ರ, ಕೆರೆ ಅಭಿವೃದ್ಧಿ ಮತ್ತು ಸಂರಕ್ಷಣಾಧಿಕಾರಿ ಆನಂದ ರೆಡ್ಡಿ, ಕೆರೆ ಇಂಜಿನಿಯರ್ ಬಸವರಾಜ ಸೇರಿದಂತೆ ಗುತ್ತೇದಾರರು,...