Posts

Showing posts from March, 2026
Image
ನಿಗದಿತ ಅವಧಿಯೊಳಗೆ ತೆರಿಗೆ ಪಾವತಿಸಿ, ರಿಯಾಯಿತಿ ಪಡೆಯಿರಿ-  ಆಯುಕ್ತ ಜುಬಿನ್ ಮೊಹಪಾತ್ರ ಜಯ ಧ್ವಜ ನ್ಯೂಸ್ ,ರಾಯಚೂರು, ಮಾರ್ಚ್ 31 - ಮಹಾನಗರ ಪಾಲಿಕೆಯಿಂದ 2026-27ನೇ ಸಾಲಿನ ಕಂದಾಯ ಪಾವತಿಯನ್ನು ಏಪ್ರಿಲ್ 1ರಿಂದ 30ರೊಳಗಾಗಿ ತೆರಿಗೆ ಪಾವತಿ ಮಾಡಿದಲ್ಲಿ ತೆರಿಗೆ ಪಾವತಿಯ ಒಟ್ಟು ಮೊತ್ತಕ್ಕೆ ಶೇ. 5 ರಷ್ಟು ರಿಯಾಯಿತಿಯನ್ನು ಘೋಷಿಸಲಾಗಿದ್ದು,  ನಿಗದಿತ ಅವಧಿಯೊಳಗೆ ಪಾವತಿ ಮಾಡಿ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹಪಾತ್ರ ಅವರು ತಿಳಿಸಿದ್ದಾರೆ.  ಮೇ ಮತ್ತು ಜೂನ್ ಮಾಹೆಯಲ್ಲಿ ಯಾವುದೇ ರೀತಿಯ ರಿಯಾಯಿತಿ ನೀಡಲಾಗುವುದಿಲ್ಲ. ಮತ್ತು ಜುಲೈ 2026 ರಿಂದ ಒಟ್ಟು ಆಸ್ತಿ ತೆರಿಗೆಯ ಮೊತ್ತಕ್ಕೆ ಶೇಕಡ 2ರಷ್ಟು ಬಡ್ಡಿಯನ್ನು ವಿಧಿಸಲಾಗುವುದು. ನಿಗದಿತ ಅವಧಿಯಲ್ಲಿ ಪಾಲಿಕೆಗೆ ಪಾವತಿ ಮಾಡಬೇಕಾದ ಆಸ್ತಿಯ ಕಂದಾಯ ತೆರಿಗೆ, ನೀರಿನ ಶುಲ್ಕಗಳನ್ನು ಪಾವತಿ ಮಾಡುವುದರಿಂದ ನಗರದ ಸರ್ವತೋಮುಖ ಅಭಿವೃದ್ಧಿಯ ಕಾರ್ಯಗಳನ್ನು ಕೈಗೊಳ್ಳಲು ಅನುಕೂಲವಾಗುತ್ತದೆ. ಇದಕ್ಕಾಗಿ ಮಹಾನಗರ ಪಾಲಿಕೆಯ ವಲಯ ಕಚೇರಿ-1ರಲ್ಲಿ ಆಸ್ತಿ ತೆರಿಗೆ ಪಾವತಿ ಮಾಡಲು ಎರಡು ಕೌಂಟರ್‌ಗಳು ಮತ್ತು ವಲಯ ಕಚೇರಿ-02 ರಲ್ಲಿ ಒಂದು ಕೌಂಟರ್‌ನ್ನು ತೆರೆಯಲಾಗಿದ್ದು, ಈ ಕೌಂಟರ್‌ಗಳಲ್ಲಿ ತೆರಿಗೆ ಪಾವತಿ ಮಾಡಬಹುದಾಗಿದೆ ಎಂದು ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Image
  71 ದಿನದಲ್ಲಿ 1,079 ಪ್ರಕರಣ ವಿಲೇವಾರಿ, 2 ಲಕ್ಷ 28 ಸಾವಿರ ದಂಡ, 34 ಸಾವಿರ ಪರಿಹಾರ- ಬಿ.ವೆಂಕಟ ಸಿಂಗ್ ಜಯ ಧ್ವಜ ನ್ಯೂಸ್ ,ರಾಯಚೂರು ಮಾರ್ಚ 31- ಕರ್ನಾಟಕ ಮಾಹಿತಿ ಆಯೋಗ ಕಲಬುರಗಿ ಪೀಠದಲ್ಲಿ ಕಳೆದ ಐದು ತಿಂಗಳಲ್ಲಿ 71 ದಿನ ಕಲಾಪ ನಡೆಸಿ 1,079 ಪ್ರಕರಣಗಳು ವಿಲೇವಾರಿ ಮಾಡಿದೆ ಎಂದು ಕರ್ನಾಟಕ ಮಾಹಿ ಆಯೋಗದ ಕಲಬುರಗಿ ಪೀಠದ ರಾಜ್ಯ ಮಾಹಿತಿ ಆಯುಕ್ತರಾದ ಶ್ರೀ ಬಿ.ವೆಂಕಟ ಸಿಂಗ್ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, 24ನೇಯ ನವಂಬರ್-2025 ರಿಂದ ಮಾರ್ಚ ಅಂತ್ಯಕ್ಕೆ 2,520 ಪ್ರಕರಣಗಳು ವಿಚಾರಣೆಗೆ ಕೈಗೆತ್ತಿಕೊಂಡು 1,079 ಪ್ರಕರಣಗಳು ವಿಲೇವಾರಿ ಮಾಡಿರುವುದಾಗಿ ತಿಳಿಸಿದ್ದಾರೆ. ಅರ್ಜಿದಾರರಿಗೆ ಮಾಹಿತಿ ನೀಡಲು ಕಾಲ ಹರಣ ಮಾಡಿ ಸಮಯ ಮತ್ತು ಆರ್ಥಿಕ ನಷ್ಟ ಉಂಟು ಮಾಡಿದ ಕಾರಣ ನೊಂದ ಅರ್ಜಿದಾರರಿಗೆ 34 ಸಾವಿರ ಪರಿಹಾರ ನೀಡಲು ಆದೇಶ ಮಾಡಲಾಗಿದೆ ಎಂದು ಹೇಳಿದ್ದಾರೆ. ವಿಶೇಷವಾಗಿ 71 ದಿನದಲ್ಲಿ ಕಳೆದ ಒಂದು ದಶಕದಿಂದ ವಿಲೇವಾರಿಗೆ ಬಾಕಿ ಇದ್ದ ಹಳೇ ಪ್ರಕರಣಗಳನ್ನು ಆದ್ಯತೆ ಮೇಲೆ ಎಲೇ ಮಾಡಿರುವುದಾಗಿ ತಿಳಿಸಿರುವ ಅವರು ಬರುವ ದಿನಗಳಲ್ಲಿ ಹೊಸ ಪ್ರಕರಣಗಳು ಕೈಗೆತ್ತಿಕೊಂಡು ವಿಚಾರಣೆ ಶೀಘ್ರವಾಗಿ ಮುಗಿಸಿ ಅರ್ಜಿದಾರರಿಗೆ ಮಾಹಿತಿ ಕೊಡಿಸಲು ಕ್ರಮ ವಹಿಸುವುದಾಗಿ ತಿಳಿಸಿದ್ದಾರೆ.
Image
  ಭಗವಾನ್ ಮಹಾವೀರರ ಶಾಂತಿ, ಸೌಹಾರ್ಧತೆ ಸಂದೇಶಗಳು ಇಂದಿಗೂ ಪ್ರಸ್ತುತ -ಡಾ.ಹಂಪಣ್ಣ ಸಜ್ಜನ್ ಜಯ ಧ್ವಜ ನ್ಯೂಸ್ ,ರಾಯಚೂರು, ಮಾರ್ಚ್ 31- ಭಗವಾನ್ ಮಹಾವೀರರು ತಮ್ಮ ಜೀವಿತಾವಧಿಯಲ್ಲಿ ಪರಿಪಾಲನೆ ಮಾಡಿದ ಮತ್ತು ಇಡೀ ಜಗತ್ತಿಗೆ ತಿಳಿಸಿಕೊಟ್ಟ ಶಾಂತಿ, ಸೌಹಾರ್ಧತೆ ಮತ್ತು ಸಹೋದರತೆ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ರಾಯಚೂರು ಸಹಾಯಕ ಆಯುಕ್ತರಾದ ಡಾ.ಹಂಪಣ್ಣ ಸಜ್ಜನ್ ಅವರು ಹೇಳಿದರು.  ಅವರಿಂದು ನಗರದ ಸುಮತಿನಾಥ ಜೈನ ಶ್ವೇತಾಂಬರ ಮೂರ್ತಿ ಪೂಜಕ ಆರಾಧನಾ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಯಚೂರು ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಡೆದ ಭಗವಾನ್ ಶ್ರೀ ಮಹಾವೀರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಅಹಿಂಸಾ ತತ್ವ ಪ್ರತಿಪಾದಿಸಿದ ಮಹಾವೀರರು ಸೇರಿದಂತೆ ಅನೇಕ ಮಹನೀಯರು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ಮತ್ತು ಜೀವನ ಸಂದೇಶ ನೀಡಿದ್ದಾರೆ. ಅಂತಹ ಮಹನೀಯರ ಜಯಂತಿಗಳು ಕೇವಲ ಆಚರಣೆಗಳಿಗೆ ಮಾತ್ರ ಸೀಮಿತವಾಗದೇ, ಅವರ ತತ್ವಾದರ್ಶಗಳು ಜೀವನದಲ್ಲಿ ಅಳವಡಿಸಿಕೊಂಡಾಗ ಮಹನೀಯರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಹೇಳಿದರು.  ಈ ವೇಳೆ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಸ್ವಾಮಿ ಅವರು ಮಾತನಾಡಿ, ಕರುಣೆ, ಅಹಿಂಸೆ, ಸಮಾನತೆ ಸೇರಿದಂತೆ ಭಗವಾನ್ ಮಹಾವೀರರು ಬೋಧನೆ ಮಾಡಿದ ಅಂಶಗಳನ್ನು ಜೀವನದಲ್ಲಿ ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು. ನಾವು ಬದುಕಬೇಕು,...
Image
  ಕೃಷಿ ವಿ.ವಿ ಆಡಳಿತ ಭವನಕ್ಕೆ ವಾಲ್ಮೀಕಿ ಆಡಳಿತ ಭವನ ಎಂದು ನಾಮಕರಣ ಮಾಡಲು ಮನವಿ ಜಯ ಧ್ವಜ ನ್ಯೂಸ್ ,ರಾಯಚೂರು, ಮಾ.28 - ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಆಡಳಿತ ಭವನಕ್ಕೆ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಆಡಳಿತ ಭವನ ಎಂದು ನಾಮಕರಣ ಮಾಡಬೇಕೆಂದು ಹೈದರಾಬಾದ್ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘವು ಮನವಿ ಮಾಡಿದೆ. ಹೈದರಾಬಾದ್ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದ ಪದಾಧಿಕಾರಿಗಳು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಎಂ. ಹನುಮಂತಪ್ಪ ಅವರಿಗೆ ಮನವಿ ಸಲ್ಲಿಸಿ, ರಾಯಚೂರು ಕೃಷಿ ವಿಶ್ವವಿದ್ಯಾನಿಲಯದ ಕೇಂದ್ರ ಗ್ರಂಥಾಲಯಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಕೇಂದ್ರ ಗ್ರಂಥಾಲಯ ಎಂದೂ ಮತ್ತು ಪ್ರೇಕ್ಷಾಗೃಹ ಭವನಕ್ಕೆ ಜಗಜ್ಯೋತಿ ಶ್ರೀ ಬಸವಣ್ಣನವರ ಹೆಸರು ನಾಮಕರಣ ಮಾಡುವ ಮೂಲಕ ಮಹಾನ್ ದಾರ್ಶನಿಕರನ್ನು ನೆನೆಯುವ ಕಾರ್ಯ ಮಾಡುತ್ತಿರುವುದು ಅತ್ಯಂತ ಸಂತೋಷದ ವಿಷಯ ಮತ್ತು ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಮಾಜವು ತಮಗೆ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.  ಈ ಜಗತ್ತಿಗೆ ಮಹಾನ್ ಗ್ರಂಥವಾದ  ರಾಮಾಯಣವನ್ನು ನೀಡುವ ಮೂಲಕ ಒಬ್ಬ ರಾಜನಾದವನು ಯಾವ ರೀತಿ ರಾಜ್ಯಭಾರ ಮಾಡಬೇಕು ಮತ್ತು ತನ್ನ ರಾಜ್ಯದ ಪ್ರಜೆಗಳನ್ನು ಯಾವ ರೀತಿ ಸುರಕ್ಷಿತವಾಗಿ ಇಡಬೇಕು ಮತ್ತು ಅಣ್ಣ-ತಮ್ಮಂದಿರ ಸಂಬಂಧ, ತಂದೆ-ತಾಯಿಯ ಸಂಬಂಧ ಹೆಂಡತಿ-ಮಕ್ಕಳ ಸಂಬಂಧ ಮಹಿಳೆಯರಿಗೆ ಗೌರವ ಮತ್ತು ರಕ್ಷಣೆ ಯಾವ ರ...
Image
  ಕಾಡ್ಲೂರಲ್ಲಿ ಶ್ರೀ ರಾಮೋತ್ಸವ ಆಚರಣೆ:                                            ಶ್ರೀ ರಾಮದೇವರ  ಆದರ್ಶ ನಾವೆಲ್ಲರೂ ಪಾಲಿಸೋಣ-  ಶ್ರೀ ವಿದ್ಯಾಕಣ್ವ ವಿರಾಜತೀರ್ಥ  ಶ್ರೀಪಾದಂಗಳವರು .                                                                         ಜಯ ಧ್ವಜ ನ್ಯೂಸ್ ,ರಾಯಚೂರು,ಮಾ.28-           ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರ ದೇವರ ಆದರ್ಶವನ್ನು ನಾವೆಲ್ಲರೂ ಪಾಲಿಸೋಣವೆಂದು ಕಣ್ವಮಠಾಧೀಶರಾದ ಶ್ರೀ ವಿದ್ಯಾಕಣ್ವ ವಿರಾಜ ತೀರ್ಥ ಶ್ರೀಪಾದಂಗಳವರು ನುಡಿದರು. ಅವರು ಶುಕ್ರವಾರ ರಾಮನವಮಿ ಅಂಗವಾಗಿ ತಾಲೂಕಿನ ಕಾಡ್ಲೂರು ಗ್ರಾಮದ ಶ್ರೀ ಕೃಷ್ಣಾ ನದಿ ತೀರದ ಶ್ರೀವನವಾಸಿ ರಾಮದೇವರ ಹಾಗೂ ಶ್ರೀ ಉಪೇಂದ್ರ ತೀರ್ಥ ಕರಾರ್ಚಿತ ಶ್ರೀ ಮುಖ್ಯಪ್ರಾಣದೇವರ ಸನ್ನಿಧಾನದಲ್ಲಿ ಶ್ರೀ ರಾಮೋತ್ಸವದಲ್ಲಿ ಸಾನಿಧ್ಯ ವಹಿಸಿದ್ದರು. ಬೆಳಿಗ್ಗೆ ದೇವಸ್ಥಾನಕ್ಕೆ ಆಗಮಿಸಿದ್ದ ಅವರನ್ನು ಕಾಡ್ಲೂ...
Image
  ಮಾದಿಗ ಸಮಾಜಕ್ಕೆ ಕಾಂಗ್ರೆಸ್ ಸರ್ಕಾರದಿಂದ ಎಂದಿಗೂ ನ್ಯಾಯ ಸಿಗುವುದಿಲ್ಲ- ರವೀಂದ್ರ ಜಲ್ದಾರ್ ಆಕ್ರೋಶ  ಜಯ ಧ್ವಜ ನ್ಯೂಸ್ , ರಾಯಚೂರು, ಮಾ.27- ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ನೇತೃತ್ವದಲ್ಲಿ ಒಳ ಮೀಸಲಾತಿ ಅನುಷ್ಠಾನ ಜಾರಿ ವಿಷಯದಲ್ಲಿ ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಳ್ಳದೆ ಇಂದು ಮಾದಿಗರಿಗೆ ಮತ್ತೊಮ್ಮೆ ಮಹಾ ದ್ರೋಹ ಮಾಡಿದ್ದಾರೆ ಮಾದಿಗರ ಸಹನೆಯನ್ನು ಪರೀಕ್ಷೆ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ಮಾದಿಗರ ಅಕ್ರೋಶದ ಶಾಪ ತಟ್ಟೆ ತಟ್ಟುತ್ತದೆ ಎಂದ ಮಾದಿಗ ಸಮಾಜದ ರಾಜ್ಯ ಹಿರಿಯ ಮುಖಂಡ  ರವೀಂದ್ರ ಜಲ್ದಾರ್ ಅವರು ನಾಳೆ ನಡೆಯಬೇಕಾಗಿದ್ದ ವಿಶೇಷ ಸಚಿವ ಸಂಪುಟ ಸಭೆ ಮುಂದೋಡಿದ್ದು ಹಾಗೂ ಒಳ ಮೀಸಲಾತಿ ಜಾರಿಗಾಗಿ  ಷಡಕ್ಷರಮುನಿ ಸ್ವಾಮೀಜಿಗಳು ಹರಿಹರದಿಂದ ಬೆಂಗಳೂರಿನ ವಿಧಾನಸೌಧದ ವರೆಗೆ ಹಮ್ಮಿಕೊಂಡಿದ್ದ ಪಾದಯಾತ್ರೆಯ ಹೋರಾಟಕ್ಕೆ ಕಾಂಗ್ರೆಸ್ ಸರ್ಕಾರ ಅವರನ್ನು ಬಂಧಿಸಿ ಹೋರಾಟವನ್ನು ದಿಕ್ಕು ತಪ್ಪಿಸಿರುವ ಕಾಂಗ್ರೆಸ್ ಸರ್ಕಾರದ ನಡೆ ಮಾದಿಗ ವಿರೋಧ ನೀತಿಯನ್ನು ಉಗ್ರವಾಗಿ ಖಂಡಿಸುತ್ತಾ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಮಾದಿಗರಿಂದ ತಕ್ಕ ಪಾಠ ಕಲಿಸುವುದರ ಜೊತೆಗೆ ದಾವಣಗೆರೆ ಹಾಗೂ ಬಾಗಲಕೋಟೆ ಉಪಚುನಾವಣೆಗಳಲ್ಲಿ ಮಾದಿಗರ ಶಕ್ತಿ ಪ್ರದರ್ಶನ ಮಾಡಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟಕ್ಕೆ ನಾವೆಲ್ಲರೂ ಕಂಕಣಬದ್ಧರಾಗಿ ಹೋರಾಡಬೇಕು ಎಂದು ಪತ್ರಿಕಾ ಹೇಳಿಕೆ...
Image
ತೈಲ ಸರಬರಾಜಿನಲ್ಲಿ ಅಭಾವ ವದಂತಿ :   ಪೆಟ್ರೋಲ್ ಪಂಪ್ ಗಳಲ್ಲಿ ಸಾಲುಗಟ್ಟಿದ ವಾಹನಗಳು                                                                                                                                                                                                           ಜಯ ಧ್ವಜ ನ್ಯೂಸ್, ರಾಯಚೂರು,ಮಾ.26-                       ಪಶ್ಚಿಮ‌ ಏಷ್ಯಾದಲ್ಲಿ ಯುದ್ಧ ಹಿನ್ನಲೆಯಲ್ಲಿ  ದೇಶದಲ್ಲಿ ತೈಲ ಅಭಾವ ಆತಂಕ ಶುರುವಾದಂತಾಗಿದೆ.      ...
Image
  ವಿಶ್ವಕರ್ಮರ ಬೇಡಿಕೆ ಈಡೇರಿಸಲು ಒತ್ತಾಯಿಸಿ ಪಂಜಿನ ಮೆರವಣಿಗೆ   ಜಯ ಧ್ವಜ ನ್ಯೂಸ್ ,ರಾಯಚೂರು, ಮಾ. 26 - ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ರಾಯಚೂರು ಹಾಗೂ ಜಿಲ್ಲಾ ವಿಶ್ವಕರ್ಮ ಸಮಾಜ ರಾಯಚೂರು ಇವರಿಂದ ಬುಧವಾರ ಸಂಜೆ ರಾಯಚೂರು ನಗರದಲ್ಲಿ ವಿಶ್ವಕರ್ಮ ಸಮಾಜದ ಬೇಡಿಕೆಗಳಿಗೆ ಒತ್ತಾಯಿಸಿ ಪಂಜಿನ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.  ನಗರದ ನೇತಾಜಿ ನಗರ ವೃತ್ತದಿಂದ ತೀನ್ ತೀನ್ ಕಂದೀಲ್ ಜಾಕಿರ್ ಹುಸೇನ್ ಸರ್ಕಲ್ ಬಸ್ ನಿಲ್ದಾಣ,ಅಂಬೇಡ್ಕರ್ ವೃತ್ತದ ವರೆಗೆ ರಾತ್ರಿ 9ಗಂಟೆ ವರೆಗೆ ಪಂಜಿನ ಮೆರವಣಿಗೆಯು ನಡೆಯಿತು .ಸಮಾಜದ ಮುಖಂಡರು ಅಂಬೇಡ್ಕರ್ ವೃತ್ತದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಿಂದ ಆಗಮಿಸಿದ ಅಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು.. ಸಮಾಜದ ಪರವಾಗಿ ಸರ್ಕಾರಕ್ಕೆ ಒತ್ತಾಯಿಸಲು ವಿವಿಧ ಘೋಷಣೆಗಳನ್ನು ಹಾಕಿ ಶಾಂತಿಯುತ ಪ್ರತಿಭಟನೆಯನ್ನು ಮಾಡಲಾಯಿತು.   ವಿಶ್ವಕರ್ಮ ಸಮಾಜವನ್ನು ಎಸ್ಟಿಗೆ ಸೇರಿಸಬೇಕು ಕುಲಶಾಸ್ತ್ರ ಅಧ್ಯಯನ ಪುನರ್ ರಚನೆ ಆಗಬೇಕು. ತಿಂಥಣಿ ಶ್ರೀ ಜಗದ್ಗುರು ಮೌನೇಶ್ವರ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ಆಗಬೇಕು. ಈ ಮೂರು ಸಮಾಜದ ಬೇಡಿಕೆಗಳನ್ನು ಸರಕಾರಕ್ಕೆ ಈಡೇರಿಸುವಂತೆ ಒತ್ತಾಯಿಸಿ ವಿಶ್ವಕರ್ಮ ಸಮಾಜದವರು ಪಂಜನ ಮೆರವಣಿಗೆಯನ್ನು ಮೊದಲ ಬಾರಿಗೆ ಮಾಡಿದರು.  ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ರಾಯಚೂರು ಜಿಲ್ಲಾಧ್ಯಕ್ಷರಾದ ಮಾರುತಿ ಬಡಿಗೇರ್ ಈ ಹೋರಾಟದ ನೇತೃತ್ವವನ್ನು...
Image
  ಒಪೆಕ್ ಆಸ್ಪತ್ರೆಗೆ ಮಾನವ ಹಕ್ಕುಗಳ ಆಯೋಗ ಭೇಟಿ; ಪರಿಶೀಲನೆ ಜಯ ಧ್ವಜ ನ್ಯೂಸ್, ರಾಯಚೂರು ಮಾ.25- ರಾಯಚೂರು ಪ್ರವಾಸದಲ್ಲಿ ಮಾರ್ಚ 25ರಂದು ವಿವಿಧೆಡೆ ಭೇಟಿ ಕೈಗೊಂಡ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು ಹಾಗೂ  ಸದಸ್ಯರು ಸಂಜೆ 6 ಗಂಟೆ ವೇಳೆಗೆ ನಗರದ ರಾಜೀವಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ತೆರಳಿ ಆಸ್ಪತ್ರೆಯಲ್ಲಿನ ಸೌಕರ್ಯಗಳ ಬಗ್ಗೆ ಖುದ್ದು ಪರಿಶೀಲಿಸಿ ಮಾಹಿತಿ ಪಡೆದುಕೊಂಡರು. ಆಸ್ಪತ್ರೆ ಪ್ರವೇಶದ ವೇಳೆ, ಒಬ್ಬ ರೋಗಿಯು ಟ್ರಾಲಿ ಮೇಲೆ ಮತ್ತೊಬ್ಬರು ನೆಲದ ಮೇಲೆ ಮಲಗಿರುವುದನ್ನು  ಅಧ್ಯಕ್ಷರು ಹಾಗೂ ಸದಸ್ಯರು ನೋಡಿ, ರೋಗಿಗಳ ಅಹವಾಲು ಆಲಿಸಿದರು. ನಾವು ನೆನ್ನೆಯೇ ಬಂದಿದ್ದೇವೆ. ಇದುವರೆಗೆ ಬೆಡ್ ನೀಡಿಲ್ಲ.  ಮರುದಿನ ಬೆಳಗ್ಗೆ ರಕ್ತ ಪರೀಕ್ಷೆ ಮಾಡಿದ್ದಾರೆ ಎಂದು ರೋಗಿಯೊಬ್ಬರು ತಿಳಿಸಿದರು. ಇದುವರೆಗೆ ಯಾಕೆ ಬೆಡ್ ನೀಡಿಲ್ಲ? ಈ ರೀತಿ ನಿರ್ಲಕ್ಷ್ಯ ಮಾಡಬೇಡಿ ಎಂದು ವೈದ್ಯರ ಕಾರ್ಯವೈಖರಿಗೆ ಅಧ್ಯಕ್ಷರು ಅಸಮಾಧಾನ ವ್ಯಕ್ತಪಡಿಸಿದರು. ರಿಮ್ಸ್ ನಿರ್ದೇಶಕರಾದ ಡಾ.ರಮೇಶ, ಒಪೆಕ್ ಆಸ್ಪತ್ರೆಯ ವಿಶೇಷಾಧಿಕಾರಿ ಡಾ.ರಮೇಶ  ಸಾಗರ್ ಅವರು ಆಗಮಿಸಿಆಯೋಗಕ್ಕೆ ಮಾಹಿತಿ ನೀಡಿದರು. ಈ ವೇಳೆ ಡಾ.ಮುರಳೀರಾವ್, ಡಾ.ಗೋಪಿನಾಥ, ಡಾ.ಮಂಜುನಾಥ ಹಟ್ಟಿ, ಡಾ.ವೀರೇಶ ಇದ್ದರು.
Image
  ರಾಯಚೂರು ಜಿಲ್ಲೆಯಲ್ಲಿ ಮಾನವ ಹಕ್ಕುಗಳ ಆಯೋಗದ ಪ್ರವಾಸ: ಹಾಸ್ಟೆಲ್, ಬಸ್ ನಿಲ್ದಾಣ, ಜಿಲ್ಲಾ ಕಾರಾಗೃಹ, ಪೊಲೀಸ್ ಠಾಣೆಗಳಿಗೆ ಭೇಟಿ; ಪರಿಶೀಲನೆ ಜಯ ಧ್ವಜ ನ್ಯೂಸ್ ,ರಾಯಚೂರು ಮಾ.25 -  ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಗೌರವಾನ್ವಿತ ಅಧ್ಯಕ್ಷರಾದ ಡಾ.ಟಿ.ಶ್ಯಾಮ್ ಭಟ್ ಹಾಗೂ ಸದಸ್ಯರಾದ ಎಸ್.ಕೆ ವಂಟಿಗೋಡಿ ಅವರು  ಇಂದು  ರಾಯಚೂರು ನಗರಕ್ಕೆ ಆಗಮಿಸಿ ವಿವಿಧೆಡೆ ಮಿಂಚಿನ ಸಂಚಾರ ನಡೆಸಿದರು.  ಬೆಳಗ್ಗೆ ಬೆಂಗಳೂರಿನಿಂದ ಹೊರಟು ಹೈದ್ರಾಬಾದ್ ಮೂಲಕ ಮಧ್ಯಾಹ್ನ ವೇಳೆಗೆ ರಾಯಚೂರ ನಗರಕ್ಕೆ ಆಮಿಸಿದ ಆಯೋಗವು, ಮಧ್ಯಾಹ್ನ ಊಟದ ವಿರಾಮದ ಬಳಿಕ ವಿವಿಧೆಡೆ ಭೇಟಿ ಆರಂಭಿಸಿತು. ಮೊದಲಿಗೆ ರಂಗಮಂದಿರ ಹತ್ತಿರದ ಡಾ.ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡಿದ ಅಧ್ಯಕ್ಷರು ಹಾಗೂ ಸದಸ್ಯರು, ವಸತಿ ನಿಲಯಗಳ ವಿದ್ಯಾರ್ಥಿಗಳೊಂದಿಗೆ ಮಾತನಾಡಿ ಅವರ ಅಹವಾಲು ಆಲಿಸಿದರು. ಸ್ನಾನಕ್ಕೆ ಬಿಸಿನೀರು ಸಿಗುತ್ತಾ? ಸೋಪುಕಿಟ್ ಕೊಡುತ್ತಾರಾ? ವೈದ್ಯರು ನಿಯಮಿತ ಭೇಟಿ ಕೊಡುತ್ತಾರಾ? ಸ್ಕೂಲ್ ಬಸ್ ಬರುತ್ತಾ? ಊಟ ಸರಿಯಾಗಿ ಕೊಡುತ್ತಾರಾ? ಸಿಸಿ ಟಿವಿ ಇದೆನಾ? ಎಂದು ಕೇಳಿ  ಮಾಹಿತಿ ಪಡೆದುಕೊಂಡರು. ಸದ್ಯ ಒಂದು ಕೋಣೆಯಲ್ಲಿ ಐದಾರು, ಆರೇಳು ಜನ ವಿದ್ಯಾರ್ಥಿನಿಯರಿದ್ದು, ಇಕ್ಕಟ್ಟಾಗಿವೆ. ವಿದ್ಯಾರ್ಥಿಗಳ ಸಂಖ್ಯೆಗ‌ನುಸಾರ ರೂಮಿನ ವ್ಯವಸ್ಥೆಯಾಗಬೇಕಿದೆ ಎಂದು ಹಾಸ್ಟೆಲ್ ವಾರ್ಡನ್ ಅವರು  ತಿ...
Image
  ಭಾರತ ಸರ್ಕಾರದ ವಾರ್ತಾ ಶಾಖೆಯಿಂದ ವಾರ್ತಾಲಾಪ ಕಾರ್ಯಾಗಾರ:   ತಾಲೂಕು ಮಟ್ಟದ ಪತ್ರಕರ್ತರ ಕಾರ್ಯಕ್ಷಮತೆಯೂ ಹೆಚ್ಚಾಗಲಿ -  ನಿತೀಶ್ ಕೆ   ಜಯ ಧ್ವಜ ನ್ಯೂಸ್ ,ರಾಯಚೂರು ಮಾ.25-  ವರದಿಗಾರಿಕೆ, ಸಂಪಾದಕೀಯ ಬರೆಹ, ಪತ್ರಿಕೋದ್ಯಮದ ಪ್ರಾಥಮಿಕ ಹಂತದ ತಿಳಿವಳಿಕೆ ಸೇರಿದಂತೆ ನಾನಾ ವಿಷಯಗಳ ಬಗ್ಗೆ ತಾಲೂಕು ಮಟ್ಟದಲ್ಲಿನ ಪತ್ರಕರ್ತರಿಗೆ ತಿಳಿವಳಿಕೆಯ ಕಾರ್ಯಕ್ಷಮತೆ, ಕಾರ್ಯದಕ್ಷತೆಹೆಚ್ಚಿಸುವ ದಿಶೆಯಲ್ಲಿ ಕಾರ್ಯಕ್ರಮಗಳನ್ನು,  ಕಾರ್ಯಗಾರಗಳನ್ನು ರೂಪಿಸಬೇಕಿದೆ ಎಂದು ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರು ಹೇಳಿದರು. ಅವರಿಂದು ಭಾರತ ಸರ್ಕಾರದ ವಾರ್ತಾ ಶಾಖೆ (ಪಿಐಬಿ) ಬೆಂಗಳೂರು ಹಾಗೂ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ರಾಯಚೂರು ಇವರ ಸಂಯುಕ್ತಾಶ್ರಯದಲ್ಲಿ  ನಗರದ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ನಡೆದ ಕೇಂದ್ರ ಪುರಸ್ಕೃತ ಯೋಜನೆಗಳ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ವಾರ್ತಾಲಾಪ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಮಾಧ್ಯಮಗಳಿಂದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ಕಾರ್ಯ ನಿರಂತರವಾಗಿ ಆಗಬೇಕು ಎಂದು ಸಲಹೆ ಮಾಡಿದ ಜಿಲ್ಲಾಧಿಕಾರಿಗಳು, ವಾರ್ತಾಲಾಪದಂತಹ ಈ ರೀತಿಯ ಕಾರ್ಯಗಾರಗಳು ನಿರಂತರ ನಡೆಯಬೇಕು ಎಂದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷರಾದ ಪವನ್ ಕಿಶೋರ್ ಪಾಟೀಲ್ ಅವರು ಮಾತನಾಡಿ, ಕೆಲವು ಯೋಜನೆ...
Image
  ಕೆಕೆ ಆರ್ ಡಿಬಿ ಸಾವಿರಾರು ಕೋಟಿ ರೂ .ಕಾಮಗಾರಿಗಳಿಗೆ ಗ್ರಹಣ : ಅಧ್ಯಕ್ಷ ಅಜಯ್ ಸಿಂಗ್, ಕಾರ್ಯದರ್ಶಿ ನಳಿನ್ ಅತುಲ್ ವಜಾಗೊಳ್ಳಬೇಕು- ರಾಘವೇಂದ್ರ ಕುಷ್ಟಗಿ.                                                                    ಜಯ ಧ್ವಜ ನ್ಯೂಸ್, ರಾಯಚೂರು, ಮಾ.24-     ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಸಾವಿರಾರು ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಗ್ರಹಣ ಹಿಡಿದಿದೆ ಎಂದು ಹೈದ್ರಾಬಾದ್ ಕರ್ನಾಟಕ ಜನಾಂದೋಲನ ಕೇಂದ್ರ ಸಂಚಾಲಕ ರಾಘವೇಂದ್ರ ಕುಷ್ಟಗಿ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಂಡಳಿಯ ಐದು ಸಾವಿರ ಕೋಟಿ ರೂ. ಅನುದಾನದಲ್ಲಿ ಕಳೆದ ವರ್ಷ ಕೇವಲ 862 ಕೋಟಿ ರೂ. ವೆಚ್ಚದ ಕಾಮಗಾರಿಗೆ ಕ್ರೀಯಾ ಯೋಜನೆ ಸಲ್ಲಿಸಿ ಅನುಮೋದನೆ ಪಡೆಯಲಾಗಿದೆ ಆದರೆ ಉಳಿದ ಕಾಮಗಾರಿಗಳಿಗೆ ಕ್ರಿಯಾ‌ಯೋಜನೆ ಸಲ್ಲಿಸದ ಕಾರಣ ಈ ಭಾಗಕ್ಕೆ ಮಹಾಮೋಸವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಕಾಮಗಾರಿ ಗುಣಮಟ್ಟ ಪರಿಶೀಲನೆಗೆ ಮೊರನೇ ವ್ಯಕ್ತಿಯ ಸಂಸ್ಥೆಯನ್ನು ನೇಮಿಸಲು ಸ್ವತಃ ಸಿಎಂ ಆದೇಶಿಸಿದ್ದರೂ ಅದಕ್ಕೆ ಕಿಮ್ಮತ್ತು ನೀಡಲಾಗಿಲ್ಲವೆಂದರು. ಮಂಡಳಿ ಅಧ್ಯಕ್ಷರು ಮತ್ತು ಕಾರ್ಯದರ್ಶ...
Image
  ತುಂಗಭದ್ರಾ ಎಡದಂಡೆ ನಾಲೆ ಒಡೆದಿದ್ದರಿಂದ ರೈತರಲ್ಲಿ ಆತಂಕ:        ಎರೆಡು ಸಾವಿರ ಕೋಟಿ ರೂ. ವೆಚ್ಚದಲ್ಲಿ ಆಧುನೀಕರಣಗೊಂಡ ನಾಲೆ- ಚಾಮರಸ್ ಮಾಲಿಪಾಟೀಲ .                                                                ಜಯ ಧ್ವಜ ನ್ಯೂಸ್ ರಾಯಚೂರು, ಮಾ.24- ತುಂಗಭದ್ರಾ ಎಡದಂಡೆ ನಾಲೆ ಒಡೆದಿದ್ದು ರೈತರಲ್ಲಿ ಆತಂಕ ಮೂಡಿಸಿದೆ ಎಂದು ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಟಿಎಲ್ ಬಿಸಿ ಕಾಲುವೆ ಮೈಲು 13ರಲ್ಲಿ ಒಡೆದಿದ್ದು ರೈತರಲ್ಲಿ ಆತಂಕ ಮೂಡಿಸಿದೆ ಎಂದ ಅವರು ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗೆ ಕುಡಿಯುವ ನೀರಿನ ಸಲುವಾಗಿ ಎರೆಡು ಸಾವಿರ ಕ್ಯೂಸೆಕ್ ನೀರು ಕಾಲುವೆಗೆ ಹರಿಸಿದ ವೇಳೆ ಈ ಘಟನೆ ಜರುಗಿದ್ದು ಒಂದು ವೇಳೆ ನಾಲ್ಕು ಸಾವಿರ ಕ್ಯೂಸೆಕ್ ನೀರು ಹರಿಸಿದ ವೇಳೆ ಕಾಲುವೆ ಎಷ್ಟು ಕಡೆ ಒಡೆಯಬಹುದು ಎಂಬ ಆತಂಕ ಮನೆ ಮಾಡಿದೆ ಎಂದರು. 2010 ರಿಂದ ಇಲ್ಲಿಯವರೆಗೆ ಸುಮಾರು 2 ಸಾವಿರ ಕೋಟಿ.ರೂ. ವೆಚ್ಚದಲ್ಲಿ ನಾಲೆ ಆಧುನೀಕರಣಗೊಂಡ ನಂತರವೂ ಒಡೆದಿದೆ ಎಂದರೆ ಕಾಮಗಾರಿ ಗುಣಮಟ್ಟ ಯಾವ ರೀತಿ ಮಾಡಲಾಗಿದೆ ಎಂಬುದು ಯ...
Image
  ಶ್ರೀಗಿರಿ ಅಭಯ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ 52 ನೇ ಶರಣ ಚಿಂತನ ಶಿವಾನುಭವ ಗೋಷ್ಠಿ ಮತ್ತು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ:                  ಹೆಣ್ಣು ಸಂಸಾರದ ಕಣ್ಣಾಗಬೇಕು- ಅನಿತಾ ಹಿರೇಮನಿ ಜಯ ಧ್ವಜ ನ್ಯೂಸ್ , ರಾಯಚೂರು, ಮಾ.23-   ನಗರದ ಮಾರುತಿ ನಗರ ಬಡಾವಣೆಯಲ್ಲಿ ಶ್ರೀ ಗಿರಿ ಅಭಯ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ 52 ನೇ ಶರಣ ಚಿಂತನ ಶಿವಾನುಭವ ಗೋಷ್ಠಿ ಮತ್ತು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ  ಜಿಲ್ಲಾ ಕಾರಾಗೃಹದ ಅಧೀಕ್ಷಕರಾದ  ಅನಿತಾ ಹಿರೇಮನಿ ರವರು  ಸುಂದರ ಪರಿಸರದಲ್ಲಿ ದೇವಸ್ಥಾನ ನಿರ್ಮಿಸಿ 52ನೇ ಶರಣ ಚಿಂತನ ಗೋಷ್ಠಿ  ಮತ್ತು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮವನ್ನು ಹಮ್ಮಿಕೊಂಡು ಮಹಿಳೆಯರಿಗೆ ಪ್ರೋತ್ಸಾಹಿಸುತ್ತಾ ಬರುತ್ತಿರುವುದು ತುಂಬ ಶ್ಲಾಘನೀಯವಾಗಿದೆ. 12ನೇ ಶತಮಾನದ ಬಸವಣ್ಣ ರಾದಿಯಾಗಿ  ಅಕ್ಕಮಹಾದೇವಿ, ಮುಕ್ತಾಯಕ್ಕ,  ಆಯ್ದಕ್ಕಿ ಲಕ್ಕಮ್ಮ, ಇನ್ನಿತರ ಶರಣೆಯರು ಗಂಡು ಹೆಣ್ಣು ಬೇದಭಾವವಿಲ್ಲದೆ ಅನೇಕ ವಚನಗಳನ್ನು ರಚಿಸಿದ್ದಾರೆ.ಸಂಸಾರದಲ್ಲಿ ಮಹಿಳೆ ಬೆಳಿಗ್ಗೆಯಿಂದ ರಾತ್ರಿ ವರೆಗೆ ಸಂಸಾರದ ಎಲ್ಲ ಜವಾಬ್ದಾರಿಗಳನ್ನು ಹೊತ್ತುಕೊಂಡು ನಿಸ್ವಾರ್ಥವಾಗಿ ಕುಟುಂಬದ ಏಳ್ಗೆಗಾಗಿ ಹಗಲಿರಲು ದುಡಿಯುತ್ತಿದ್ದಾಳೆ ಅಷ್ಟೇ ಅಲ್ಲ ಇಂದಿನ ವಿದ್ಯಾ...
Image
  ತ್ವರಿತಗತಿಯಲ್ಲಿ‌ ನಾಲೆ ದುರಸ್ತಿಗೊಳಿಸಲು ಸೂಚನೆ:  ಜಿಲ್ಲೆಯ ಜನತೆಗೆ ಕುಡಿಯುವ ನೀರಿನ ತೊಂದರೆ ಆಗದಂತೆ ಅಗತ್ಯ ಕ್ರಮ- ಸಚಿವ ಎನ್ಎಸ್ ಬೋಸರಾಜು ಜಯ ಧ್ವಜ ನ್ಯೂಸ್ ,ರಾಯಚೂರು ಮಾ. 𝟮𝟬-  ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ  ಎನ್.ಎಸ್. ಬೋಸರಾಜು ಅವರು ತುಂಗಭದ್ರಾ ಯೋಜನೆಯ ಎಡದಂಡೆ ಕಾಲುವೆಯ ೧೩ನೇ ಮೈಲಿಯಲ್ಲಿ ಕಾಲುವೆ ಒಡೆದ ಸ್ಥಳಕ್ಕೆ ಇಂದು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಕಾಲುವೆ ಒಡೆದ ಪರಿಣಾಮವಾಗಿ ಉಂಟಾಗಿರುವ ಸಮಸ್ಯೆಗಳನ್ನು ಹಾಗೂ ಸ್ಥಳದಲ್ಲಿ ಕೈಗೊಳ್ಳಲಾಗುತ್ತಿರುವ ಕಾಮಗಾರಿಯನ್ನು ವೀಕ್ಷಿಸಿದ ಸಚಿವರು, ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದುಕೊಂಡರು. ಈಗಾಗಲೇ ದುರಸ್ತಿ ಕಾರ್ಯ ಆರಂಭವಾಗಿದ್ದು, ಕುಡಿಯುವ ನೀರಿನ ಅಭಾವ ಉಂಟಾಗದಂತೆ ತಡೆಯಲು ಸಮರೋಪಾದಿಯಲ್ಲಿ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಿ, ಕಾಲುವೆಗೆ ಕುಡಿಯುವ ನೀರನ್ನು ಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಬೇಸಿಗೆಯ ಸಮಯವಾಗಿರುವುದರಿಂದ ಸಾರ್ವಜನಿಕರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳುವುದು ಸರ್ಕಾರದ ಮೊದಲ ಆದ್ಯತೆಯಾಗಿದೆ. ಹಗಲಿರುಳು ಕಾರ್ಯಾಚರಣೆ ನಡೆಸಿ, ತ್ವರಿತಗತಿಯಲ್ಲಿ ಕಾಮಗಾರಿಯನ್ನು ಮುಕ್ತಾಯಗೊಳಿಸಲು ಅಗತ್ಯವಿರುವ ಎಲ್ಲಾ ಯಂತ್ರೋಪಕರಣಗಳು ಹಾಗೂ ಕಾರ್ಮಿಕರನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ವಿಳಂಬ ಧೋರಣೆ ಅನು...
Image
  ಕುರ್ವಕಲಾ ಗ್ರಾಮಕ್ಕೆ ಗ್ರಾಮೀಣ  ಶಾಸಕ ಬಸನಗೌಡ  ದದ್ದಲ್ ಭೇಟಿ:  ಸೇತುವೆ ಕಾಮಗಾರಿ ಪರಿಶೀಲನೆ ಜಯ ಧ್ವಜ ನ್ಯೂಸ್ ರಾಯಚೂರು, ಮಾ.20- ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ರಾಯಚೂರು ಗ್ರಾಮೀಣ ಶಾಸಕರಾದ ಬಸನಗೌಡ ದದ್ದಲ್ ಅವರು ಇಂದು ರಾಯಚೂರು ಗ್ರಾಮೀಣ ಭಾಗದಲ್ಲಿ ಪ್ರವಾಸ ಕೈಗೊಂಡು ರಾಯಚೂರು ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರ ನೇತೃತ್ವದಲ್ಲಿ ಕುರ್ವಕಲಾ ಗ್ರಾಮಕ್ಕೆ ಭೇಟಿ ನೀಡಿ, ಸೇತುವೆ ಕಾಮಗಾರಿಯ ವೀಕ್ಷಣೆ ನಡೆಸಿದರು. ಭೇಟಿ ಸಂದರ್ಭದಲ್ಲಿ ಶಾಸಕರು, ದೇವಸ್ಥಾನ ಸುತ್ತಲು ಸಂಚರಿಸಿ ವೀಕ್ಷಣೆ ನಡೆಸಿ, ರಸ್ತೆ, ಕುಡಿಯುವ ನೀರು, ಸಮುದಾಯ ಭವನ, ಕಲ್ಯಾಣ ಮಂಟಪ ಹಾಗೂ ಹಲವಾರು ಅಭಿವೃದ್ಧಿ ಕಾಮಗಾರಿಗಳ ನೀಲಿ ನಕ್ಷೆ ತಯಾರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ರಾಯಚೂರು ಸೇರಿದಂತೆ ಸುತ್ತಲಿನ ಜಿಲ್ಲೆಗಳ ಮತ್ತು ಬೇರೆ ಬೇರೆ ರಾಜ್ಯಗಳ ಬಹಳಷ್ಟು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಹಾಗಾಗಿ ಗ್ರಾಮ ಸಂಪರ್ಕದ ಎಲ್ಲ ರಸ್ತೆಗಳು ಅಚ್ಚುಕಟ್ಟಾಗಿ ಇರಬೇಕು. ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು. ದೇವಸ್ಥಾನದ ಅಭಿವೃದ್ಧಿಯ ಜೊತೆಗೆ ಇಲ್ಲಿಗೆ ಆಗಮಿಸುವ ಭಕ್ತರಿಗೆ ಮೂಲಭೂತ ಸೌಲಭ್ಯ ಒದಗಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಧಾರ್ಮಿಕ ಕ್ಷೇತ್ರಗಳನ್ನು ಅಭಿವೃದ್ಧಿಗೊಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂಬುದನ್ನು ಅರಿತು ಅಧಿಕಾರಿಗಳು ರಸ್ತೆ ಅಭಿವೃದ್ಧಿ, ಕುಡಿಯುವ ನೀರು ಸರ...
Image
    ಯುಗಾದಿ ಹಾಗೂ ರಂಜಾನ್ ಹಬ್ಬದ ಪ್ರಯುಕ್ತ ತಾರಾನಾಥ   ಶಿಕ್ಷಣ ಸಂಸ್ಥೆಯಿಂದ ನೂರಕ್ಕೂ ಅಧಿಕ ಸಿಬ್ಬಂದಿಗೆ ಉಚಿತ ಗೋಧಿ ವಿತರಣೆ  ಜಯ ಧ್ವಜ ನ್ಯೂಸ್  ,ರಾಯಚೂರು, ಮಾ.20- ನಗರದ  ತಾರಾನಾಥ ಶಿಕ್ಷಣ ಸಂಸ್ಥೆಯ ವತಿಯಿಂದ  ಪ್ರತಿವರ್ಷದಂತೆ ಈ ವರ್ಷವೂ ನೂತನ ಸಂವತ್ಸರ ಯುಗಾದಿ ಹಾಗೂ ಪವಿತ್ರ ರಂಜಾನ್ ಹಬ್ಬದ ಅಂಗವಾಗಿ ಮಾನವೀಯತೆ ಮತ್ತು ಸಹಭಾಗಿತ್ವದ ಸಂಕೇತವಾಗಿ ವಿಶೇಷ ಕಾರ್ಯಕ್ರಮವನ್ನು ಚನ್ನಬಸಮ್ಮ.ಎಂ ನಾಗಪ್ಪ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಯಿತು.  ಸಂಸ್ಥೆಯ ಅಧೀನದಲ್ಲಿರುವ ಎಲ್ಲಾ ಶಾಲಾ ಮತ್ತು ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೂರಕ್ಕೂ ಅಧಿಕ ಡಿ ಗ್ರೂಪ್ ನೌಕರರಿಗೆ ಸಂಸ್ಥೆಯ ಅಧ್ಯಕ್ಷರಾದ  ಪಾರಸಮಲ್ ಸುಖಾಣಿ  ಅವರು ಪ್ರತಿಯೊಬ್ಬರಿಗೂ ೩೫ ಕೆಜಿ ಗೋಧಿಯನ್ನು ಉಚಿತವಾಗಿ ವಿತರಿಸಿದರು. ಈ ಉಪಕ್ರಮವು ಸಿಬ್ಬಂದಿಯ ಆರ್ಥಿಕ ಭದ್ರತೆಗೆ ನೆರವಾಗುವುದರ ಜೊತೆಗೆ ಹಬ್ಬದ ಸಂಭ್ರಮವನ್ನು ಮತ್ತಷ್ಟು ಅರ್ಥಪೂರ್ಣಗೊಳಿಸಿತು.  ಈ  ಸಂದರ್ಭದಲ್ಲಿ ಚನ್ನಬಸಮ್ಮ ಎಂ ನಾಗಪ್ಪ ಬಾಲಕಿಯರ ಪದವಿಪೂರ್ವ ಕಾಲೇಜಿನ ಚೇರ್‌ಮನ್‌ಗಳಾದ  ಬಸ್ಸಪ್ಪ ತಿಪ್ಪಾರೆಡ್ಡಿ, ತಾರಾನಾಥ ಶಿಕ್ಷಣ ಸಂಸ್ಥೆಯ ಆಡಳಾತಾಧಿಕಾರಿಗಳಾದ  ಎಂ. ವಿರೇಶಪ್ಪ, ಸಿ ಎಂ ಎನ್ ಪ.ಪೂ ಕಾಲೇಜಿನ ಪ್ರಾಚಾರ್ಯರಾದ  ವೆಂಕಟೇಶ ದೊಡ್ಡಮನಿ, ಎಸ್ ಎಸ್ ಆರ್ ಜಿ ಮಹಿಳಾ ಪದವಿ ಕಾಲೇಜಿನ ಪ್ರ...
Image
  ಅಂಗನವಾಡಿ ಕೇಂದ್ರಗಳಲ್ಲಿ ಎಲ್ ಕೆ ಜಿ‌ ಯುಕೆಜಿ   ಪ್ರಾರಂಭಿಸಲು ಒತ್ತಾಯಿಸಿ ಮಾರ್ಚ್ 23 ರಿಂದ ಜಿಲ್ಲೆಯಾದ್ಯಂತ ಅಂಗನವಾಡಿ ಕೇಂದ್ರಗಳು ಬಂದ್ - ಹೆಚ್ .ಪದ್ಮಾ ಜಯ ಧ್ವಜ ನ್ಯೂಸ್ , ರಾಯಚೂರು ,ಮಾ.20 - ಶಿಕ್ಷಣ ಇಲಾಖೆ ಯಿಂದ ಪ್ರಾರಂಭಿಸಿದ ಎಲ್ ಕೆ ಜಿ‌ ಯುಕೆಜಿ ರದ್ದು ಪಡಿಸಿ ಅಂಗನವಾಡಿ ಕೇಂದ್ರಗಳಲ್ಲಿ ಎಲ್ ಕೆ ಜಿ‌ ಯುಕೆಜಿ   ಪ್ರಾರಂಭಿಸಲು ಒತ್ತಾಯಿಸಿ ಮಾರ್ಚ್ 23 ರಿಂದ ಜಿಲ್ಲೆಯಾದ್ಯಂತ ಅಂಗನವಾಡಿ ಕೇಂದ್ರ ಬಂದ್ ಮಾಡಿ ಬೆಂಗಳೂರು ಚಲೋ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು) ಜಿಲ್ಲಾ ಸಮಿತಿ  ಜಿಲ್ಲಾಧ್ಯಕ್ಷೆ ಹೆಚ್ .ಪದ್ಮಾ ತಿಳಿಸಿದ್ದಾರೆ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಸಿಐಟಿಯು ನೇತೃತ್ವದಲ್ಲಿ  ಕಳೆದ ಮೂರು ನಾಲ್ಕು ವರ್ಷಗಳಿಂದ ಸತತವಾಗಿ ಹೋರಾಟ ನಡೆಸಿ ಅಂಗನವಾಡಿ ಕೇಂದ್ರಗಳನ್ನು ಪೂರ್ವ ಪ್ರಾಥಮಿಕ ಶಾಲೆಗಳಾಗಿ ಪರಿವರ್ತಿಸಲು ಒತ್ತಾಯಿಸಲಾಗುತ್ತಿದ್ದರು ಸರ್ಕಾರವು ಅದಕ್ಕೆ ಸ್ಪದಿಸದೇ ಸರ್ಕಾರಿ ಶಾಲೆಗಳಲ್ಲಿ ಎಲ್ ಕೆ ಜಿ.ಯುಕೆಜಿ ತರಗತಿಗಳನ್ನು ಪ್ರಾರಂಭಿಸಲು ಮುಂದಾಗಿದು ಕೂಡಲೇ ಅದನ್ನು ಕೈ ಬಿಟ್ಟು ಅಂಗನವಾಡಿ ಕೇಂದ್ರಗಳಲ್ಲೇ ಎಲ್ ಕೆಜಿ -ಯುಕೆಜಿ ಪ್ರಾರಂಭಿಸಲು ಮತ್ತು ಎಫ್ ಆರ್ ಎಸ್ ( ಫೇಸ್ ಕ್ಯಾಪ್ಚರ್) ಪದ್ದತಿ ಕೈಬಿಡಲು.ಇವತ್ತಿನ ಬೆಲೆ ಏರಿಕೆ ಅನುಗುಣವಾಗಿ ಕನಿಷ್ಟ ವೇತನ 36000 ಜಾರಿಗೆ.ಹಾಗೂ ಅಂಗನವ...
Image
  ಸಹಕಾರ ಸಂಘಗಳ ಮೇಲೆ ಸರ್ಕಾರದ ಮೇಲ್ವಿಚಾರಣೆಗೆ  ವಿಧಾನ ಪರಿಷತ್ ಸದಸ್ಯ ಎ.ವಸಂತಕುಮಾರ್ ಮನವಿ. ಜಯ ಧ್ವಜ ನ್ಯೂಸ್ , ರಾಯಚೂರು ,ಮಾ.18- ಹಿತಾಸಕ್ತಿ ಸಂಘರ್ಷದಲ್ಲಿ ಸಹಕಾರ ಸಂಘಗಳು" ಎಂಬ ಶೀರ್ಷಿಕೆ ಅಡಿಯಲ್ಲಿ ಮಾಧ್ಯಮ ವರದಿಯನ್ನು   ಪ್ರಸ್ತಾಪಿಸುತ್ತಾ, ರಾಜ್ಯದ  ಸಹಕಾರಿ ವಲಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆದಿರುವ ಅಕ್ರಮಗಳು ಹಾಗೂ ಆಡಳಿತಾತ್ಮಕ ದೌರ್ಬಲ್ಯಗಳಿಂದ ಸಾವಿರಾರು ಠೇವಣಿದಾರರು ಮತ್ತು ರೈತರು ಸಂಕಷ್ಟಕ್ಕೆ ಸಿಲುಕಿರುವ ಗಂಭೀರ ಪರಿಸ್ಥಿತಿ ನಿರ್ಮಾಣವಾಗಿದೆ. ಸಹಕಾರಿ ಸಂಸ್ಥೆಗಳ ಮೇಲೆ ನಂಬಿಕೆ ಇಟ್ಟು ತಮ್ಮ ಜೀವನದ ಉಳಿತಾಯವನ್ನು ಠೇವಣಿ ಇಟ್ಟಿರುವ ಹಿರಿಯ ನಾಗರಿಕರು, ನಿವೃತ್ತರು ಹಾಗೂ ಸಾಮಾನ್ಯ ಜನರು ಇಂದು ಭಾರೀ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಹಗರಣಗಳಿಂದ ಅನೇಕ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ತಳ್ಳಲ್ಪಟ್ಟಿದ್ದು, ಕೆಲವರು ಹಣಕ್ಕಾಗಿ ಕಾಯುತ್ತಾ ಜೀವ ಕಳೆದುಕೊಂಡಿರುವ ಘಟನೆಗಳೂ ವರದಿಯಾಗಿವೆ. ಸರ್ಕಾರದ ಮಾಹಿತಿಯ ಪ್ರಕಾರ ರಾಜ್ಯದಲ್ಲಿರುವ **೪೭,೭೩೬ ಸಹಕಾರ ಸಂಘಗಳಲ್ಲಿ ೧೪,೭೯೮ ಸಂಘಗಳು ನಷ್ಟದಲ್ಲಿದ್ದು**, **೧೨೫ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ದಿವಾಳಿಯಾಗಿವೆ**. ಹಾಗೆಯೇ **೫,೩೭೩ ಸೌಹಾರ್ದ ಸಹಕಾರ ಸಂಸ್ಥೆಗಳಲ್ಲಿ ೧,೦೧೭ ಸಂಸ್ಥೆಗಳು ನಷ್ಟದಲ್ಲಿದ್ದು**, ೧೮ ಸಂಸ್ಥೆಗಳಲ್ಲಿ ಅವ್ಯವಹಾರಗಳು ನಡೆದಿರುವುದು ತಿಳಿದುಬಂದಿದೆ. ಸಹಕಾರಿ ಸಂಸ್ಥೆಗಳ ಆಡಳಿತದಲ್ಲಿ ಪಾರದರ್ಶಕ...