Posts

Image
  ನ. 30ರಂದು ರಾಷ್ಟ್ರಮಟ್ಟದ ಬೆಳಕು ಸಂಭ್ರಮ-ಮೇಟಿಗೌಡ ಜಯ ಧ್ವಜ, ನ್ಯೂಸ್ , ರಾಯಚೂರು ,ಅ.19- ಸಾಹಿತ್ಯ, ಸಾಂಸ್ಕೃತಿಕ ಹಾಗೂ ಕಾವ್ಯ ಕ್ಷೇತ್ರದಲ್ಲಿ ಅಗ್ರಗಣ್ಯ ಸೇವೆ ಸಲ್ಲಿಸುತ್ತಿರುವ ಬೆಳಕು ಸಂಸ್ಥೆ ತನ್ನ 121ನೇ ಮಹತ್ವದ ಕಾರ್ಯಕ್ರಮವನ್ನು ನವೆಂಬರ್ 30ರಂದು ಬೆಂಗಳೂರು ನಗರದ ಚಾಮರಾಜಪೇಟೆಯ ಅಕ್ಕಮಹಾದೇವಿ ಸಭಾಂಗಣದಲ್ಲಿ ಭವ್ಯವಾಗಿ ಆಯೋಜಿಸಲಾಗಿದೆ ಎಂದು ಬೆಳಕು ಸಂಸ್ಥೆಯ ಸಂಸ್ಥಾಪರಾದ ಅಣ್ಣಪ್ಪ ಮೇಟಿಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಉಚಿತವಾಗಿ ಭಾಗವಹಿಸಬಹುದಾಗಿದ್ದು ರಾಷ್ಟ್ರಮಟ್ಟದ ಸಂಭ್ರಮದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು, ಕವಿಗೋಷ್ಠಿ, ಗಾಯನ–ನೃತ್ಯ ಪ್ರದರ್ಶನಗಳು ಸೇರಿದಂತೆ ಸಾಧಕರಿಗೆ ರಾಷ್ಟ್ರಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ. ಕವಿಗೋಷ್ಠಿ, ಗಾಯನ, ನೃತ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿಗೆ ಆಸಕ್ತಿ ಹೊಂದಿರುವವರು ತಮ್ಮ ಪರಿಚಯ ವಿವರಗಳನ್ನು ಕೆಳಗಿನ ವಾಟ್ಸಾಪ್ ಸಂಖ್ಯೆಗೆ ಕಳುಹಿಸಿ ನೋಂದಣಿ ಮಾಡಿಕೊಳ್ಳುವಂತೆ ಸಂಸ್ಥೆ ತಿಳಿಸಿದೆ. ಆಯ್ಕೆ ಸಮಿತಿ ತೀರ್ಮಾನವೇ ಅಂತಿಮವಾಗಲಿದದು ಆಸಕ್ತರು ಸಂಪರ್ಕಿಸಲು,ಅಣ್ಣಪ್ಪ ಮೇಟಿಗೌಡ,ಸಂಸ್ಥಾಪಕ ಅಧ್ಯಕ್ಷರು, ಬೆಳಕು ಸಂಸ್ಥೆ ಮೋ.ನಂ. 9035996070ಗೆ ಸಂಪರ್ಕಿಸಲು ತಿಳಿಸಿದ್ದಾರೆ.
Image
  ದೀಪಾವಳಿ ಪಟಾಕಿ ಖರೀದಿ ಜೋರು:                  ಗ್ರಾಹಕರಿಗೆ   ಬೆಲೆ ಹೆಚ್ಚಳ ಬಿಸಿ; ಮಾರಾಟಗಾರರಿಗೆ ಕಠಿಣ ನಿಯಮಾವಳಿ                                                     ಜಯ ಧ್ವಜ ನ್ಯೂಸ್ , ರಾಯಚೂರು , ಅ.19-               ನಗರದ ಬಸವೇಶ್ವರ ವೃತ್ತದ ಬಳಿಯ ವಾಲ್ಕಟ್ ಮೈದಾನದಲ್ಲಿ ದೀಪಾವಳಿ ಪಟಾಕಿ ಮಳಿಗೆಗಳನ್ನು ತೆರೆಯಲಾಗಿದ್ದು ಖರೀದಿ ಜೋರಾಗಿ ನಡೆದಿದೆ. ಅತ್ತ ಪಟಾಕಿ ಬೆಲೆ ಏರಿಕೆಯಿಂದ ಗ್ರಾಹಕರ ಜೇಬು ಸುಡುತ್ತಿದ್ದರೆ ಇತ್ತ  ಕಠಿಣ ನಿಯಮಾವಳಿ ಗಳಿಂದ ಮಾರಾಟಗಾರರು ಬೇಸರ ವ್ಯಕ್ತಪಡಿಸಿದ್ದಾರೆ. ಒಂದು ವಾರ ಪಟಾಕಿ ಮಾರಾಟಕ್ಕೆ ಅವಕಾಶ ನೀಡಲಾಗಿದ್ದು ಅದನ್ನು ಹೆಚ್ಚಳ ಮಾಡಿದ್ದರೆ ವ್ಯಾಪಾರಕ್ಕೆ ಅನುಕೂಲವಾಗುತ್ತಿತ್ತು ಎಂದು ಮಾರಾಟಗಾರರ ಅನಿಸಿಕೆಯಾಗಿದೆ.       ತರಹೇವಾರಿ ಪಟಾಕಿ : ಸುಮಾರು ಮೂವತ್ತಕ್ಕೂ ಅಧಿಕ ಅಂಗಡಿಗಳು ಇದ್ದು ವಿವಿಧ ಬಗೆಯ ಪಟಾಕಿ ಮಾರಾಟಕ್ಕಿವೆ ಬಾನಂಗಳದಲ್ಲಿ ಚಿತ್ತಾರ ಮೂಡಿಸುವ ಪಟಾಕಿ ಜೊತೆಗೆ ಕಿವಿಗಡಚಿಕ್ಕುವ ಆಟಂ ಬಾಂಬ್, ಡಬಲ್ ಸೌಂಡ್, ಮಾರುದ್ದದ ಪಟಾಕಿ ಸರಗಳು, ನವಿಲು ಗರಿ...
Image
ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷರನ್ನು ಭೇಟಿಯಾದ ರಮೇಶ್ ಕುಲಕರ್ಣಿ                                                                                 ಜಯಧ್ವಜ  ನ್ಯೂಸ್ ,  ರಾಯಚೂರು, ಅ.19-   ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ  ಆಸುಗೋಡ ಜಯಸಿಂಹ ರವರನ್ನು ಬೆಂಗಳೂರಿನಲ್ಲಿ ರಾಯಚೂರು   ಜಿಲ್ಲಾ ಪ್ರತಿನಿಧಿ ರಮೇಶ್ ಕುಲಕರ್ಣಿ ಭೇಟಿ ಮಾಡಿದರು. ರಾಯಚೂರು ಜಿಲ್ಲೆಯ ವಿಪ್ರ ಸಮುದಾಯದ ವಿದ್ಯಾರ್ಥಿಗಳಿಗೆ ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ಮತ್ತು ವಿಪ್ರ ಸಮಾಜದ ಬಡವರಿಗೆ ಅಭಿವೃದ್ಧಿ ಮಂಡಳಿಯಿಂದ ದೊರೆಯುವ ಸೌಲಭ್ಯಗಳನ್ನು ಶೀಘ್ರದಲ್ಲೇ ದೊರೆಯುವಂತೆ ಮಾಡಬೇಕು, ಜೊತೆಯಲ್ಲಿ ಅಕ್ಟೋಬರ್ 31ಕ್ಕೆ ಸಾಲ ಸೌಲಭ್ಯಗಳ ದಿನಾಂಕ ಕೊನೆಗೊಳ್ಳುತ್ತಿದ್ದು ಇನ್ನು ಬಹಳಷ್ಟು ವಿಪ್ರ ಸಮಾಜದ ಬಂಧುಗಳು, ವಿದ್ಯಾರ್ಥಿಗಳು  ಇಡ್ಬ್ಲೂಎಸ್ ಸರ್ಟಿಫಿಕೇಟ್ ಪಡೆದುಕೊಂಡಿರುವುದಿಲ್ಲ, ಹಾಗಾಗಿ ನವಂಬರ್ 30ರವರೆಗೆ ಅರ್ಜಿ ಸಲ್ಲಿಸುವ ಅವಕಾಶ ನೀಡಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ರಾಜ್ಯ ಜಂಟಿ ಕಾರ್ಯದರ್ಶಿಗಳಾದ...
Image
ಸಚಿವ ದಿನೇಶ್ ಗುಂಡೂರಾವ್  ಭೇಟಿಯಾದ ಜಿಲ್ಲಾ ಪ್ರತಿನಿಧಿ ರಮೇಶ್ ಕುಲಕರ್ಣಿ                                        ಜಯ ಧ್ವಜ ನ್ಯೂಸ್ ರಾಯಚೂರು , ಅ.18-  ಇಂದು ಬೆಂಗಳೂರಿನಲ್ಲಿ ಕರ್ನಾಟಕ ಸರ್ಕಾರದ ಆರೋಗ್ಯ ಸಚಿವರಾದ  ದಿನೇಶ್ ಗುಂಡೂರಾವ್ ರವರನ್ನು ರಾಯಚೂರು ಜಿಲ್ಲೆಯ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಜಿಲ್ಲಾ ಪ್ರತಿನಿಧಿ  ರಮೇಶ್ ಕುಲಕರಣಿ ಹಾಗೂ ರಾಜ್ಯ ಜಂಟಿ ಕಾರ್ಯದರ್ಶಿ ಜಯಕುಮಾರ್ ಗಬ್ಬೂರ್ ಹಾಗೂ ರಾಜ್ಯ ಕಾರ್ಯ ಕಾರಣಿ ಸದಸ್ಯ  ಪ್ರವೀಣ್ ಕುಮಾರ್ ಜಾಗೀರ್ದಾರ್ ರವರು ಭೇಟಿಯಾಗಿ ಚರ್ಚಿಸಿದರು. ರಾಯಚೂರು ಜಿಲ್ಲಾ ಬ್ರಾಹ್ಮಣ ಮಹಾಸಭಾಕ್ಕೆ ಹಾಗೂ ನಗರದ ಗಾಯತ್ರಿ ಭವನ ಕಟ್ಟಡಕ್ಕೆ ಸರ್ಕಾರದಿಂದ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ವಿಪ್ರ ಬಾಂಧವರಿಗೆ ಅನುಕೂಲ ಮಾಡಿಕೊಡಬೇಕೆಂದು ವಿನಂತಿಸಿದರು.  ಮುಂದಿನ ದಿನದಲ್ಲಿ ನಡೆಯುವ ರಾಯಚೂರು ಜಿಲ್ಲಾ ವಿಪ್ರ ಸಮಾವೇಶದಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
Image
ಕುರ್ಡಿ ಗ್ರಾಮದಲ್ಲಿ ಸರ್ಕಾರಿ ಜಮೀನಿನಲ್ಲಿ ಸಾಗುವಳಿ ಅನುಕೂಲ ಕಲ್ಪಿಸಲು ವಸಂತಕುಮಾರ್ ಗೆ ಫಲಾನುಭವಿಗಳು ಮನವಿ.                     ಜಯ ಧ್ವಜ ನ್ಯೂಸ್ , ರಾಯಚೂರು, ಅ.18 - ಇಂದು ವಿಧಾನ ಪರಿಷತ್ ಸದಸ್ಯ ಎ.ವಸಂತ ಕುಮಾರ ಅವರನ್ನು ಮಾನವಿ ತಾಲ್ಲೂಕಿನ‌ ಕುರ್ಡಿ ಗ್ರಾಮದ ನಿವಾಸಿಗಳು ಭೇಟಿಯಾಗಿ  ಸಾಗುವಳಿ ಜಮೀನಿನ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದರು. ಕುರ್ಡಿ ಗ್ರಾಮದಲ್ಲಿ ಹತ್ತಾರು ವರ್ಷಗಳಿಂದ ಸರಕಾರಿ‌ ಜಮೀನು ಸಾಗುವಳಿ ಮಾಡುತ್ತ ಬಂದಂತಹ ಹತ್ತಾರು ಕುಟುಂಬಗಳನ್ನು ಇತ್ತೀಚಿಗೆ ಕೆಲವು ಪಟ್ಟಭದ್ರ ಹಿತಾಸಕ್ತ‌ ವ್ಯಕ್ತಿಗಳು ತಡೆದಿರುವದರಿಂದ ಬಡ ಗ್ರಾಮಸ್ಥರಿಗೆ ತೊಂದರೆಯಾಗಿರುವ  ಬಗ್ಗೆ ಗ್ರಾಮಸ್ಥರು ಎ.ವಸಂತಕುಮಾರ ಅವರಿಗೆ ಭೇಟಿಯಾಗಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಜೊತೆಗೆ ಮಾತನಾಡಿದ ಎ.ವಸಂತಕುಮಾರ ಅವರು ಗ್ರಾಮಸ್ಥರ ಸಮಕ್ಷಮದಲ್ಲಿ ಪಂಚನಾಮೆ ಮಾಡಿ ನೈಜ ಫಲಾನುಭವಿಗಳಿಗೆ ಸಾಗುವಳಿ ಮಾಡಲು ಅನುಕೂಲ ಮಾಡಿಕೊಡಬೇಕೆಂದು ಸೂಚಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಮಹಿಳೆಯರು, ಕುಟುಂಭಸ್ಥರು, ಫಲಾನುಭವಿಗಳು ಹಾಜರಿದ್ದರು.
Image
     ಎ ಆರ್ ವಿ ಸಿಮೆಂಟ್ ಸೊಸೈಟಿ ಮತ್ತು ವೈಟಿಪಿಎಸ್ ಅಧಿಕಾರಿಗಳು ಹಾರು ಬೂದಿ ಸಾಗಾಟ ಮಾಡುವ ಒಪ್ಪಂದ ಮತ್ತು ಷರತ್ತು ನಿಯಮ ಪಾಲನೆ ವಿಫಲತೆ ವಿರೋಧಿಸಿ  ಅ.27 ರಂದು ರೈತ ಸಂಘ ಪ್ರತಿಭಟನೆ . ಜಯ ಧ್ವಜ ನ್ಯೂಸ್ , ರಾಯಚೂರು ,ಅ.17- ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಕಲ್ಯಾಣ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ ವತಿಯಿಂದ ಮನವಿ ಪತ್ರದಲ್ಲಿ ತಿಳಿಯಪಡಿಸುವುದೇನೆಂದರೆ ದಿನಾಂಕ 10.12.2021 ರಂದು ಎ ಆರ್ ವಿ ಸಿಮೆಂಟ್ ಸೊಸೈಟಿ ಇವರು ವೈ ಟಿ ಪಿ ಎಸ್, ಆರ್ ಪಿ ಸಿ ಎಲ್ ಚಿಕ್ಕಸೂಗೂರು ತಾಲೂಕು ಜಿಲ್ಲಾ ರಾಯಚೂರು ಈ ಕಂಪನಿಯಲ್ಲಿ ಹಾರುಭೂದಿಯನ್ನು ತೆಗೆದುಕೊಂಡು ಹೋಗಲು ಕೆಲವು ಶರತ್ತು / ನಿಯಮ ಮಾಡಿಕೊಂಡಿದ್ದು ಇರುತ್ತದೆ ಒಪ್ಪಂದ ಏನೆಂದರೆ ಸದರಿ ಹಾರು ಬೂದಿಯನ್ನು ರೈಲ್ವೆ  ವ್ಯಾಗನ್ ಗಳ ಮುಖಾಂತರ ಸಾಗಾಟ ಮಾಡಬೇಕು ಎಂದು ಇರುತ್ತದೆ, ಆದರೆ ದುರಾದೃಷ್ಟದ ಸಂಗತಿ ಏನಂದರೆ  ಕಾನೂನು ಕಟ್ಟಳೆಗಳನ್ನು ಮುರಿದು ರಸ್ತೆಯ ಮುಖಾಂತರ ಭಾರಿ ಬಲ್ಕರ್ ವಾಹನಗಳಿಂದ ಅಕ್ರಮ ಸಾಗಾಟ ಮುಂದುವರೆದಿದೆ, ಈ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಎ ಆರ್ ವಿ ಸಿಮೆಂಟ್ ಸೊಸೈಟಿ ಮತ್ತು ವೈ ಟಿ ಪಿ ಎಸ್ ಪ್ರಮುಖ ಅಧಿಕಾರಿಗಳು ಭಾಗಿಯಾಗುವುದು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದು ರೈತ ಸಂಘ ಆರೋಪಿಸಿದ್ದುಈ ಕುರಿತಂತೆ ದಿನಾಂಕ 19.07.2025  ರಂದು ಕೆಪಿಸಿಎಲ್ ಮುಖ್ಯ ಕಚೇರಿ ಬೆಂಗಳೂರು ಟೆಕ್ನಿಕಲ್ ಡೈರೆಕ್ಟರ್ ಅವರಿಗೆ ನ...
Image
ಅನಂತಪುರ ಬಳಿ ಖಾಸಗಿ ಬಸ್‌ಗೆ ಬೆಂಕಿ:                ಮಹಿಳೆಯ ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ದುರಂತ ಜಯ ಧ್ವಜ ನ್ಯೂಸ್ ರಾಯಚೂರು, ಅ.17- ಬೆಂಗಳೂರನಿಂದ ರಾಯಚೂರಿಗೆ ಬರುತ್ತಿದ್ದ ಖಾಸಗಿ ಬಸ್ ನಡುರಸ್ತೆಯಲ್ಲೇ ಬೆಂಕಿಗೆ ಆಹುತಿಯಾದ ಘಟನೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಗರದಿನ್ನೆ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ತಡರಾತ್ರಿ ನಡೆದಿದೆ. ಅದೃಷ್ಟವಶಾತ  ಯಾವುದೇ ಪ್ರಾಣಹಾನಿ ಸಂಭವಿಸಿಲ್ಲವೆಂದು ಹೇಳಲಾಗುತ್ತಿದೆ. ಗ್ರೀನ್ ಲೈನ್ ಟ್ರಾವೆಲ್ಸ್ ಸಂಸ್ಥೆಗೆ ಸೇರಿದ ಬಸ್‌ನ ಹಿಂಬದಿ ಟಯರ್ ಬ್ಲಾಸ್ಟ್ ಆಗಿ ಕ್ಷಣಾರ್ಧದಲ್ಲಿ ಬೆಂಕಿಯ ಕಿಡಿ ಚಿಮ್ಮಿದ ಪರಿಣಾಮ ಸಂಪೂರ್ಣ ಬಸ್ ಬೆಂಕಿಗೆ ಆಹುತಿಯಾಗಿದೆ. ಆದರೆ, ಬಸ್‌ನಲ್ಲಿದ್ದ 36 ಮಂದಿ ಪ್ರಯಾಣಿಕರು ಸಕಾಲದಲ್ಲಿ ಹೊರಬಂದ ಪರಿಣಾಮ ದೊಡ್ಡ ದುರಂತ ತಪ್ಪಿದೆ.         ಬಸ್‌ನ ಹಿಂಭಾಗದಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ರಾಯಚೂರು ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ನಿರ್ಮಲಾ ಬೆಣ್ಣೆ ಅವರು ತಕ್ಷಣ ಚಾಲಕನಿಗೆ ತಿಳಿಸಿದರೂ, ಚಾಲಕ ಅದನ್ನು ತಕ್ಷಣವಾಗಿ ಗಮನಿಸದೇ ಕೆಲವು ಅಂತರದವರೆಗೆ ಚಾಲನೆ ಮುಂದುವರಿಸಿದ್ದಾನೆ. ಬಳಿಕ ಬೆಂಕಿ ತೀವ್ರಗೊಳ್ಳುತ್ತಿದ್ದಂತೆಯೇ ನಿರ್ಮಲಾ ಬೆಣ್ಣೆ ಅವರ ಒತ್ತಾಯದ ಮೇರೆಗೆ ಬಸ್ ನಿಲ್ಲಿಸಲಾಯಿತು. ಪ್ರಯಾಣಿಕರು ತಕ್ಷಣ ಬಸ್‌ನಿಂದ ಇಳಿದುಕೊಂಡು ಪ್ರಾಣ ಉಳಿಸಿಕೊಂಡಿದ್ದಾರ...