Posts

Image
  ಸೆ.21 ಮತ್ತು 22 ರಂದು ಗೋವಿಂದ ಗಾನ  ಅಂಗವಾಗಿ ವೈವಿಧ್ಯಮಯ ಕಾರ್ಯಕ್ರಮ:                      ದಾಸರು ಇಡಿ ಮನುಕುಲಕ್ಕೆ ಸೀಮಿತ- ಶೇಷಗಿರಿ ದಾಸ್.                          ರಾಯಚೂರು,ಸೆ.16- ಹರಿದಾಸ ಸೇವಾ ಇಂಟರ್ ನ್ಯಾಷನಲ್ ಹಾಗೂ ಟಿಟಿಡಿ ದಾಸ ಸಾಹಿತ್ಯ ಪ್ರಾಜೆಕ್ಟ್ ಸಂಯುಕ್ತಾಶ್ರಯದಲ್ಲಿ ಸೆ.21 ಮತ್ತು 22 ರಂದು ಗೋವಿಂದ ಗಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಖ್ಯಾತ ಗಾಯಕ ಹಾಗೂ ಗೋವಿಂದ ಗಾನ ಅಧ್ಯಕ್ಷರಾದ ಶೇಷಗಿರಿ ದಾಸ್ ಹೇಳಿದರು.                     ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ದಾಸರ ತವರೂರು, ದಾಸರ ತೊಟ್ಠಿಲು ಎಂದು ಕರೆಸಿಕೊಳ್ಳುವ ರಾಯಚೂರು ಜಿಲ್ಲೆಯಲ್ಲಿ ಅನೇಕ ದಾಸರು ಜನ್ಮ ತಾಳಿದ್ದಾರೆ ಅಂತಹವರಲ್ಲಿ ಅಸ್ಕಿಹಾಳ ಗೋವಿಂದ ದಾಸರು ಸಹ ಒಬ್ಬರು ಅವರು ಕೇವಲ ಬ್ರಾಹ್ಮಣ ಸಮುದಾಯಕ್ಕೆ ಮಾತ್ರ ಸೀಮಿತವಾಗದೆ ಇಡಿ ಮನುಕುಲಕ್ಕೆ ಮೀಸಲಿದ್ದವರು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ದಾಸ ದೀಕ್ಷೆ ನೀಡಿ ಉದ್ಧರಿಸಿದವರು ಎಂದರು. ಅಸ್ಕಿಹಾಳ ಗೋವಿಂದ ದಾಸರ ಸಂಸ್ಮರಣೆ ಗೋವಿಂದ ಗಾನ ಕಳೆದ ಹತ್ತು ವರ್ಷದಿಂದ ನಡೆಯುತ್ತಿದ್ದು ಕಳೆದ ಎರೆಡು ವರ್ಷ ಕೋವಿಡ್ ಮತ್ತು ಇನ್ನಿತರ ಕಾರಣಕ್ಕೆ ಗೋವಿಂದ ಗಾನ ಆಯೋಜಿಸರಲಿಲ್ಲ ಇದೀಗ ದಶಮಾನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆಂದರು.       ಸೆ.21 ರಂದು ಸಂಜೆ 5.30ಕ್ಕೆ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ನಡೆಯುವ ಕಾರ್ಯಕ
Image
  ಮಧ್ಯಾಹ್ನದವರೆಗೂ ಮುಂದುವರೆದ ಗಣೇಶ ವಿಸರ್ಜನೆ:                                         ಖಾಸ ಬಾವಿಯಲ್ಲಿ ಗಣಪತಿಗೆ ಬೀಳ್ಕೊಡುಗೆ.            ರಾಯಚೂರು,ಸೆ.16- ನಗರದಲ್ಲಿ ಪ್ರತಿಷ್ಟಾಪನೆ ಮಾಡಿರುವ ಸಾರ್ವಜನಿಕ ಗಣೇಶೋತ್ಸವದ ವಿಸರ್ಜನಾ ಮೆರವಣಿಗೆ  ಭವ್ಯ ರೀತಿಯಲ್ಲಿ ಭಾರಿ ಸಂಭ್ರಮ ಸಡಗರದಿಂದ ನೆರವೇರಿತು. ನಿನ್ನೆ ತಡರಾತ್ರಿಯಿಂದ ಆರಂಭವಾದ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಮಧ್ಯಾಹ್ನದವರೆಗೂ ಮುಂದುವರೆಯಿತು. ನಗರದ ಮಾವಿನ ಕೆರೆ ಬಳಿಯ ಐತಿಹಾಸಿಕ ಖಾಸ ಬಾವಿ ಬಳಿ ಗಣೇಶ ಮೂರ್ತಿಗಳು ವಿಸರ್ಜನೆಗೆ ಸಾಲುಗಟ್ಟಿದ್ದವು. ಎರೆಡು ಬೃಹತ್ ಕ್ರೇನ್ ಗಳು ಗಣೇಶ ಮೂರ್ತಿಗಳನ್ನು ಬಾವಿಯಲ್ಲಿ ವಿಸರ್ಜನೆ ಮಾಡಲು ನಿಯೋಜನೆಗೊಂಡಿದ್ದವು. ಜಿಲ್ಲಾಡಳಿತ ಮತ್ತು ನಗರಸಭೆಯಿಂದ ಗಣೇಶ ವಿಸರ್ಜನೆಗೆ ಸಕಲ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಲಾಗಿತ್ತು .ಸ್ಥಳದಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಅಗ್ನಿ ಶಾಮಕ ದಳ ಸಿಬ್ಬಂದಿಗಳು ಬಾವಿ ಬಳಿ ಸುರಕ್ಷಾ ಕ್ರಮಗಳನ್ನು ಕೈಗೊಂಡಿದ್ದರು. ನಗರದ ಪ್ರಮುಖ  ಬೀದಿಗಳು ಕೇಸರಿ ಬಣ್ಣ ಮತ್ತು  ಗುಲಾಲುಗಳಿಂದ ವರ್ಣಮಯವಾಗಿತ್ತು. ಖಾಸ ಬಾವಿ ಬಳಿ ಅಪಾರ ಸಂಖ್ಯೆಯಲ್ಲಿ ಜನರು ನೆರೆದು ಗಣೇಶನಿಗೆ ವಿದಾಯ ಹೇಳಿ ಮುಂದಿನ ವರ್ಷ ಮರಳಿ ಬರುವಂತೆ ಭಕ್ತಿಯಿಂದ ಪ್ರಾರ್ಥಿಸಿದರು. ಒಟ್ಟಾರೆ ಗಣೇಶ ವಿಸರ್ಜನೆ ಶಾಂತಿಯುತವಾಗಿ ನೆರವೇರಿತು.
Image
  ಒಂಬತ್ತನೆ ದಿನದ ಗಣೇಶ ವಿಸರ್ಜನೆಗೆ ಅಣಿಯಾಗುತ್ತಿರುವ ನಗರ : ಕಿವಿ ಗಡಚಿಕ್ಕುವ ಸಂಗೀತದಲ್ಲಿ ಯುವಕರ ಕುಣಿತ.                  ರಾಯಚೂರು,ಸೆ.15- ನಗರದೆಲ್ಲೆಡೆ ಒಂಬತ್ತನೆ ದಿನದ ಸಾರ್ವಜನಿಕ ಗಣೇಶೋತ್ಸವ ವಿಸರ್ಜನೆಗೆ ಅಣಿಯಾಗುತ್ತಿದೆ. ನಗರದಲ್ಲಿ ಗಣೇಶ ವಿಸರ್ಜನಾ ಮೆರವಣಿಗೆಗೆ ಕ್ಷಣಗಣನೆ ಪ್ರಾರಂಭವಾಗಿದೆ ತೀನ್ ಕಂದೀಲ್, ಮಹಾಬಳೇಶ್ವರ ವೃತ್ತದಲ್ಲಿ ಕೇಂದ್ರೀಯ ಗಜಾನನ ಸಮಿತಿಗಳು ಗಣೇಶ ಸಮಿತಿಗಳ ಪದಾಧಿಕಾರಿಗಳಿಗೆ ಸನ್ಮಾನಿಸಿ ಗಣೇಶನಿಗೆ ಬೀಳ್ಕೊಡುತ್ತಿದ್ದಾರೆ. ಬೃಹತ್ ಹೂವಿನ ಹಾರ ಕ್ರೇನ್ ಮೂಲಕ ಗಣೇಶನಿಗೆ ಸಮರ್ಪಣೆ ಮಾಡಲಾಯಿತು. ಬಾಣ ಬಿರಿಸು, ಕಿವಿಗಡಚಿಕ್ಕುವ ಸಂಗೀತದಲ್ಲಿ ಯುವಕರು ಕುಣಿತ ಸಂಭ್ರಮ ಸಡಗರಕ್ಕೆ ಸಾಕ್ಷಿಯಾಗಿದೆ. ವಿಸರ್ಜನಾ ಮೆರವಣಿಗೆ ವೀಕ್ಷಿಸಲು ಮಹಿಳೆಯರು, ಮಕ್ಕಳು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸಶಸ್ತ್ರ ಮೀಸಲು ಪಡೆ ತುಕಡಿ ನಿಯೋಜಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟ ಮಾದಯ್ಯ ನಗರದೆಲ್ಲಡೆ ಸಂಚರಿಸಿ ಕಾನೂನು ಸುವ್ಯವಸ್ಥೆ ಹದಗೆಡದಂತೆ ನಿಗವಹಿಸಿದ್ದಾರೆ.
Image
ನಗರದಲ್ಲಿ ‌ವಿಜೃಂಭಣೆಯಿಂದ ಕೋಳಂಕಿ ಪರ್ವ:                        ಧರ್ಮ‌ ರಕ್ಷಣೆ ಮಾಡಿದವರು ಕೋಳಂಕಿ ಶ್ರೀ  ಗುರು ಪಾದೇಶ್ವರರು- ದದ್ದಲ್.                                                        ರಾಯಚೂರು ಸೆ.೧೫.   ಸಮಾಜದಲ್ಲಿ ದರ್ಮ‌ ರಕ್ಷಣೆ ಮಾಡಿದ ಕೋಳಂಕಿ ಗುರು ಪಾದೇಶ್ವರರು ಎಂದು ಗ್ರಾಮೀಣ         ಶಾಸಕರಾದ ಬಸನ ಗೌಡ ದದ್ದಲ್ ಮತ್ತು ಕಿಲ್ಲೆ ಬ್ರಹನ್ಠದ ಮಠಾಧೀಶರಾದ ಶಾಂತ ಮಲ್ಲ ಶಿವಾ ಚಾರ್ಯ ಮಹಾಸ್ವಾ ಮಿಗಳು ಮಾತಾನಾಡಿದರು. ಇಂದು ೧೦೮ ಸಾವಿರ ದೇವರು ಜೀವೈಕ್ಯ ಕೋಳಂಕಿ ಗು ರುಪಾದ ಶಿವಯೋಗಿ ಶಿವಾಚಾರ್ಯ ಮಹ ಸ್ವಾಮಿಗಳವರ ೯೭೩ ವರ್ಷದ ಜಯಂತಿ ಪರ್ವ ಮತ್ತು ೧೮ ನೆ ವರ್ಷದ ಸದ್ಬಾವನ       ಪಾದಯಾತ್ರೆಯನ್ನು ಗ್ರಾಮೀಣ ಶಾಸಕರ ಬಸನ ಗೌಡ ದದ್ದಲ್ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ  ಮಾತನಾಡಿದರು. ಮಾಜಿ ವಿದಾನ ಪರಿಷತ್ತು ಸದಸ್ಯ ಶಂಕರಪ್ಪ ಮಾತಾ ನಾಡಿ ದಾರ್ಮಿಕ ವಿಧಿ ಗಳಿಗೆ ಭಕ್ತರ ಅಕ ರ್ಷ ಣೀಯ ಕೇಂದ್ರ ಕಿಲ್ಲೆ ಬ್ರಹ್ಮನಠ ಎಂದು ಕರೆಯಲ್ಪಡುವ ಕ್ಷೇತ್ರ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು. ಸೋಮವಾರ ಪೇಟೆ ಹಿರೆಮಠ ಫೀಠಾದಿಪತಿ ಅಬಿನವ ರಾಚೋಟಿ  ಶಿವಾಚಾರ್ಯ ಮಹಾಸ್ವಾಮಿಗ ಳು ಅಶೀ ರ್ವಚನ ನೀಡಿದರು. ಭಾವೈಕ್ಯತ ಯಿಂದ ಕಿಲ್ಲೆ ಬ್ರಹನ್ಮಠ,ಮತ್ತು ಸೋಮವಾರ ಹಿರೆಮ ಠಗಳು ನಗರಕ್ಕೆ ಧರ್ಮದ‌ ಎರಡು ಕಣ್ಣುಗ ಳು ಇದ್ದಂತೆ ರಂಬಾ ಪುರ ಜಗದ್ಗುರುಗುಳ ಸಂದೇಶವನ್ನು ಸಾರಿದರು . .ಅನಂತರ ಜೀವೈಕ್ಯ ಕೋಳಂಕಿ ಗುರುಪಾದ ಶಿವ
Image
  ನಾಳೆ ಗೋವಿಂದ ಗಾನ ಪೂರ್ವಭಾವಿ ಸಭೆ ರಾಯಚೂರು,ಸೆ.15-  ನಗರದ ಜವಾಹರ್ ನಗರ ಶ್ರೀ ಬಯಲು ಆಂಜನೇಯ ದೇವಸ್ಥಾನದಲ್ಲಿ ಸೆ.16 ರಂದು  ಶ್ರೀ ಅಸ್ಕಿಹಾಳ ಗೋವಿಂದ ದಾಸರ ಸ್ಮರಣೋತ್ಸವದ ಅಂಗವಾಗಿ ಹಮ್ಮಿಕೊಂಡ ಗೋವಿಂದ ಗಾನ ಕಾರ್ಯಕ್ರಮದ ಬಗ್ಗೆ  ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿದೆ.               ಸಂಜೆ 5:30ಕ್ಕೆ ಸಭೆ ಹಮ್ಮಿಕೊಳ್ಳಲಾಗಿದ್ದು ದಯವಿಟ್ಟು ಸಭೆಗೆ ಎಲ್ಲಾ ಭಜನಾ ಮಂಡಳಿಗಳು, ದಾಸಸಾಹಿತ್ಯದ ಬಂಧುಗಳು, ಭಗವಧ್ಭಕ್ತರು  ಭಾಗವಹಿಸಬೇಕಾಗಿ ವಿನಂತಿಸಿಕೊಳ್ಳಲಾಗಿದೆ. ಪೂರ್ವಭಾವಿ ಸಭೆಯಲ್ಲಿ  ಖ್ಯಾತಗಾಯಕ   ರಾಯಚೂರು ಶೇಷಗಿರಿ ದಾಸ್ ಅವರು ಭಾಗವಹಿಸಲಿದ್ದಾರೆ ಎಂದು ಆಯೋಜಕರಾದ ಮುರಳಿಧರ ಕುಲಕರ್ಣಿ ತಿಳಿಸಿದ್ದಾರೆ.       
Image
ಯರಗೇರಾ ತಾಲೂಕಾ ರಚನೆ ಪೂರ್ವಭಾವಿ ಸಭೆ : ಹೋರಾಟ ರೂಪುರೇಷೆ  ನಿರ್ಣಯಗಳ ಅಂಗೀಕಾರ     ರಾಯಚೂರು,ಸೆ.15- ತಾಲೂಕಿನ ಯರಗೇರಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾಯಾ೯ಲಯದಲ್ಲಿ  ಯರಗೇರಾ  ತಾಲೂಕ ಕೇಂದ್ರವನ್ನಾಗಿ ಘೋಷಣೆ ಮಾಡುವುದರ ಸಲುವಾಗಿ ಮುಂದಿನ ಹೋರಾಟದ ರೂಪುರೇಷೆ ತಯಾರಿಸಲು ಪೂರ್ವಭಾವಿ ಸಿದ್ಧತೆ ವಿಶೇಷ ಸಭೆ ನಡೆದು ಈ ಕೆಳಗಿನ ನಿಣ೯ಯಗಳು ಸವಾ೯ನುಮತದಿಂದ ಕೈಗೊಳ್ಳಲಾಯಿತು.  ಬಸನಗೌಡ ದದ್ದಲ್ ಶಾಸಕರು ರಾಯಚೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ಇವರ ನೇತೃತ್ವದಲ್ಲಿ ಮಾನ್ಯ  ಮುಖ್ಯಮಂತ್ರಿಯವರಿಗೆ  ಯರಗೇರಾ ಗ್ರಾಮವನ್ನು ತಾಲೂಕ ಕೇಂದ್ರವನ್ನಾಗಿ ಘೋಷಣೆ ಮಾಡಲು ಜಿಲ್ಲೆಯ ಉಭಯ  ಸಚಿವರು, ಮಾಜಿ ಶಾಸಕರು,  ಹಾಲಿ ಹಾಗೂ ಮಾಜಿ ಲೋಕಸಭಾ ಸದಸ್ಯರು,  ಹಾಲಿ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರು, ಹಾಗೂ ಗಿಲೇಸೂಗೂರ್, ತಲಮಾರಿ, ಯರಗೇರಾ ಜಿಲ್ಲಾ ಪಂಚಾಯತ್ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳ ಮತ್ತು ಕಲಮಲಾ ಜಿಲ್ಲಾ ಪಂಚಾಯತ್ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕೆಲ ಗ್ರಾಮಗಳ  ಸವ೯ ಪಕ್ಷಗಳ ಮುಖಂಡರ ನಿಯೋಗದೊಂದಿಗೆ ಖುದ್ದಾಗಿ ಭೇಟಿ ನೀಡಿ ಒತ್ತಾಯ ಪಡಿಸುವುದು. ಅಂದಾಜು ೩೨೬ ಎಕರೆ ಸರಕಾರಿ ಜಮೀನು ಅಭಿವೃದ್ಧಿ ಪಡಿಸಲು ಲಭ್ಯವಿರುತ್ತದೆ. ಮುಂದಿನ ವಾರದಿಂದ ಹಂತ ಹಂತವಾಗಿ ವಿವಿಧ ರೀತಿಯ ಹೋರಾಟ ಅಂದರೆ  ಬೃಹತ್ ರಸ್ತೆ ತಡೆ ಚಳವಳಿ,  ನಿರಂತರ ಅನಿಧಿ೯ಷ್ಟ  ಉಗ್ರ  ಪ್ರತಿಭಟನೆ, ಇನ್ನಿತರ  ಹೋರಾಟಕ್ಕೆ ಅಣಿಗೊಳ್ಳಲು ನಿಣ೯ಯಿಸ
Image
ಮನೆಗೆ ಕನ್ನ ಹಾಕಿದ ಖದೀಮರು:     ಲಕ್ಷಾಂತರ  ಮೌಲ್ಯದ ನಗದು ಚಿನ್ನಾಭರಣ ಲೂಟಿ- ಪೂರ್ವ ನಿಯೋಜಿತ ಕೃತ್ಯ ಶಂಕೆ          ರಾಯಚೂರು,ಸೆ.15- ನಗರದ ಹೊರವಲಯದ ಆಶಾಪುರ ರಸ್ತೆಯ ಲಕ್ಷ್ಮೀ ನರಸಿಂಹ ಲೇಔಟ್ ಮನೆಯಲ್ಲಿ ದರೋಡೆ ನಡೆದಿದೆ. ನಿನ್ನೆ ರಾತ್ರಿ ಬಸನಗೌಡ ಮಟಮಾರಿ ಎಂಬುವವರ  ಮನೆಗೆ ನುಗ್ಗಿದ ಆಗುಂತಕರು ಚಿನ್ನಾಭರಣ,ನಗದು ದೋಚಿ ಪರಾರಿಯಾಗಿದ್ದಾರೆ.  ಮುಸುಕು ಧರಿಸಿ ಮನೆಗೆ  ನುಗ್ಗಿದ ಮೂವರು ಕಳ್ಳರು ಮಾರಕಾಸ್ತ್ರ ತೋರಿಸಿ ದರೋಡೆ ಮಾಡಿದ್ದಾರೆ. ಮನೆಯಲ್ಲಿದ್ದ 22 ತೊಲೆ ಚಿನ್ನ,2 ಲಕ್ಷ ನಗದು ಹಣ ಮತ್ತು 2 ಕೆಜಿ ಬೆಳ್ಳಿ ಪೂಜಾ ಸಾಮಾನು ಕಳ್ಳತನವಾಗಿದೆ ಎನ್ನಲಾಗಿದೆ . ಸ್ಥಳಕ್ಕೆ ಪಶ್ಚಿಮ ಠಾಣೆ ಸಿಪಿಐ , ಪಿಎಸ್ಐ , ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರು ತೆರಳಿ ಕಳ್ಳತನ ನಡೆದ ಬಗ್ಗೆ ಮನೆಯ ಮಾಲೀಕರಿಂದ ಮಾಹಿತಿ ಪಡೆದಿದ್ದಾರೆ ಜಿಲ್ಲಾಪೊಲೀಸ ವರಿಷ್ಟಾಧಿಕಾರಿ ಪುಟ್ಟಮಾದಯ್ಯ ಅಧಿಕಾರಿಗಳ ತಂಡ ರಚಿಸಿ ಕಳ್ಳರ ಪತ್ತೆಗೆ ಜಾಲ ಬೀಸಿದ್ದಾರೆ. ಅಪರಾಧ ಪ್ರಕರಣಕ್ಕೆ ಇಲ್ಲ ಕಡಿವಾಣ : ದಿನೆ ದಿನೆ ಕೊಲೆ, ಸುಲಿಗೆ, ದರೋಡೆ ಪ್ರಕರಣಗಳು ಹೆಚ್ಚಾಗುತ್ತಿದ್ದು ಪೊಲೀಸರು ಅಪರಾಧ ತಡೆಗೆ ಮುಂದಾಗಬೇಕೆನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.